

ಎಸ್.ಎಸ್.ಎಲ್.ಸಿ.ಯಲ್ಲಿ ರಾಜ್ಯಕ್ಕೇ ನಂ1, ಆದರೆ ಕೆಲವು ಶಾಲೆಗಳಲ್ಲಿ ಶಿಕ್ಷಕರೇ ಇಲ್ಲ!
ಕೆ.ಡಿ.ಪಿ.,ಸಾಮಾನ್ಯ ಸಭೆಗಳ ಬಗ್ಗೆ ಅಧಿಕಾರಿಗಳ ಅಸಡ್ಡೆ,ಕ್ರಮಕ್ಕೆ ಶಿಫಾರಸ್ಸು
ಸಿದ್ಧಾಪುರ ತಾ.ಪಂ.ನಪ್ರತಿ ಕೆ.ಡಿ.ಪಿ.ಸಭೆಗಳಲ್ಲಿ ಕಾಟಾಚಾರಕ್ಕೆ ಬರುವುದು,ವರದಿ ಓದುವುದು ಮಾಡುತ್ತಿದ್ದ ಅಧಿಕಾರಿಗಳು ಇತ್ತೀಚೆಗೆ ಸಭೆಗಳಿಗೆ ಬರುವುದನ್ನೇ ನಿಲ್ಲಿಸಿದ ದುರ್ವರ್ತನೆಯ ಹಿನ್ನೆಲೆಯಲ್ಲಿ ತಾಲೂಕಿನ ಕೆಲವು ಇಲಾಖೆಗಳ ಅಧಿಕಾರಿಗಳ ಮೇಲೆ ಕ್ರಮಕ್ಕೆ ಜಿ.ಪಂ. ಮುಖ್ಯಕಾರ್ಯದರ್ಶಿ ಗಳಿಗೆ ಬರೆದು ತಿಳಿಸಲು ಇಂದಿನ ತಾ.ಪಂ. ಮಾಸಿಕ ಕೆ.ಡಿ.ಪಿ.ಸಭೆ ಆಗ್ರಹಿಸಿದೆ.
ಇಂದು ತಾ.ಪಂ. ಸಭಾಭವನದಲ್ಲಿ ನಡೆದ ಮಾಸಿಕ ಕೆ.ಡಿ.ಪಿ. ಸಭೆಗೆ ಬಾರದ ಸಾರಿಗೆ, ಗ್ರಾಮೀಣಕುಡಿಯುವ ನೀರಿನ ಸರಬರಾಜುಇಲಾಖೆ,ಅಬಕಾರಿ, ಮೀನುಗಾರಿಕೆ ಸೇರಿದ ಕೆಲವು ಇಲಾಖೆಗಳ ತಾಲೂಕು ಮುಖ್ಯಸ್ಥರ ಮೇಲೆ ಸೂಕ್ತ ಕ್ರಮಕ್ಕೆ ಶಿಫಾರಸ್ಸು ಮಾಡಲು ಸಭೆ ನಿರ್ಣಯಿಸಿತು.
ತಾಲೂಕಾಪಂಚಾಯತ್ ಮಾಸಿಕ ಸಭೆಗಳಲ್ಲಿ ಕೆ.ಡಿ.ಪಿ. ಸಭೆಗಳಿಗೆ ಅಧಿಕಾರಿಗಳು ಚೆಕ್ಕರ್ ಹೊಡೆದರೆ, ತಾಲೂಕಾ ಪಂಚಾಯತ್ ಸದಸ್ಯರಾದ ಜನಪ್ರತಿನಿಧಿಗಳು ಕೆ.ಡಿ.ಪಿ. ಮತ್ತು ಸಾಮಾನ್ಯ ಸಭೆಗಳಿಗೂ ಚಕ್ಕರ್ ಹೊಡೆಯುವುದು ಮಾಮೂಲು.
ಇಂದು ಕೂಡಾ ತಾ.ಪಂ. ಸದಸ್ಯರಲ್ಲಿ ಅಧ್ಯಕ್ಷ ಸುಧೀರ್ ಗೌಡರ್,ಉಪಾಧ್ಯಕ್ಷೆ ದಾಕ್ಷಾಯಿಣಿ ಗೌಡ,ಸ್ಥಾಯಿ ಸಮೀತಿ ಅಧ್ಯಕ್ಷ ಮಹಾಬಲೇಶ್ವರ ಹೆಗಡೆ,ರಘುಪತಿ ಹೆಗಡೆ ಮತ್ತು ವಿವೇಕ ಭಟ್ ರನ್ನು ಹೊರತು ಪಡಿಸಿದರೆ,ನಿರಂತರ ಹಾಜರಿಯ ನಾಶಿರ್‍ಖಾನ್ ರೊಂದಿಗೆ ಅಪರೂಪದ ಮಹಿಳಾ ಸದಸ್ಯೆಯರು ಗೈರು ಹಾಜರಿದ್ದರು.
ಈ ಗೌರವಾನ್ವಿತ ಜನಪ್ರತಿನಿಧಿಗಳಿಗೆ ಸ್ಫರ್ಧೆ ಒಡ್ಡುವಂತೆ ಕೆಲವು ಇಲಾಖೆಗಳ ಅಧಿಕಾರಿಗಳೂ ಚಕ್ಕರ್ ಹೊಡೆದಿದ್ದರು. ಸಭೆ 11ಗಂಟೆಗೆ ಪ್ರಾರಂಭವಾದಾಗ ಕೆಲವೇ ಸದಸ್ಯರು, ಕೆಲವು ಅಧಿಕಾರಿಗಳು ಹಾಜರಿರಲಿಲ್ಲ.ಕೆಲವು ಸಮಯದ ನಂತರ ಕಂದಾಯ ಇಲಾಖೆಯ ಪರವಾಗಿ ತಹಸಿಲ್ದಾರ ಬಂದರೆ, ಲೋಕೋಪಯೋಗಿ ಇಲಾಖೆಯ ಹಿರಿಯ ಅಧಿಕಾರಿಗಳ ಪರವಾಗಿ ಅನ್ಯ ಅಧಿಕಾರಿ ಹಾಜರಾದರು. ಸಭೆಗೆ ಬಾರದ ಅಧಿಕಾರಿಗಳ ಮೇಲೆ ಕ್ರಮ ಜರುಗಿಸುವುದು ಸೇರಿದಂತೆ ಪಾಲನಾ ವರದಿ, ಇಲಾಖೆಯ ಪ್ರಗತಿ, ಹಿನ್ನೋಟಗಳ ವರದಿ ನೀಡದ ಬಗ್ಗೆ ಸ್ಥಾಯೀ ಸಮೀತಿ ಅಧ್ಯಕ್ಷ ಮಹಾಬಲೇಶ್ವರ ಹೆಗಡೆ ಅಧಿಕಾರಿಗಳನ್ನು ದೂಷಿಸಿದರು.
ವ್ಯವಸ್ಥೆ, ಅಧಿಕಾರಿಗಳ ನಿರ್ಲಕ್ಷ ಪ್ರಸ್ತಾಪಿಸಿದ ಹೆಗಡೆ ಅಧ್ಯಕ್ಷರು ಈ ಬಗ್ಗೆ ಗಮನ ಹರಿಸಬೇಕು. ಅಧಿಕಾರಿಗಳೂ ಬರುವುದಿಲ್ಲ. ವರದಿಯನ್ನೂ ಸಲ್ಲಿಸುವುದಿಲ್ಲ ಎಂದರೆ ಇಂಥ ವ್ಯವಸ್ಥೆಯಿಂದ ಅಭಿವೃದ್ಧಿ ಸಾಧ್ಯವೆ? ಎಂದು ಅಧ್ಯಕ್ಷರ ಉದಾರತೆಯನ್ನು ಲೇವಡಿ ಮಾಡಿದರು.
ಇದಕ್ಕೆ ಮೌನಂ ಸಮ್ಮತಿ ಲಕ್ಷಣಂ ಎನ್ನುವಂತಿದ್ದ ಅಧ್ಯಕ್ಷ ಸುಧೀರ್ ಗೌಡರ್ ಸಭೆ ಈ ಅಧಿಕಾರಿಗಳ ಮೇಲೆ ಕ್ರಮಜರುಗಿಸಲು ಒತ್ತಾಯಿಸುತ್ತದೆ ಎಂದು ಕೆಲವರು ಹೇಳಿದಾಗ ಅಧ್ಯಕ್ಷರು ಸಮ್ಮತಿ ಸೂಚಿಸಿದರು.
ಶಿಕ್ಷಣ ಇಲಾಖೆಯ ವರದಿ ಓದಿದ ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಆಯ್.ನಾಯ್ಕ ಹಿಂದಿನ ಕ್ಷೇತ್ರಶಿಕ್ಷಣಾಧಿಕಾರಿ ವಿ.ಆರ್.ನಾಯ್ಕ ವರ್ಗಾವಣೆಯಾಗಿದ್ದಾರೆ.ತಾಲೂಕಿನ ಕೆಲವು ಶಾಲೆಗಳಲ್ಲಿ ಒಬ್ಬ ಶಿಕ್ಷಕರೂ ಇಲ್ಲ. ಅತಿಥಿಶಿಕ್ಷಕರಿಂದ ಶಾಲೆ ನಡೆಸುತಿದ್ದೇವೆ. ಪ್ರೌಢಶಾಲಾ ವಿಭಾಗದಲ್ಲಿ ಸರ್ಕಾರಿ ಶಾಲೆಗಳ ನಡುವೆ ಸ್ಫರ್ಧೆ ಏರ್ಪಟ್ಟಿದೆ ಎಂದರು.
ಲೋಕೋಪಯೋಗಿ ಇಲಾಖೆ ಸೇರಿದಂತೆ ಕೆಲಸಮಾಡದ ಕೆಲವು ಇಲಾಖೆಗಳಿಂದಾಗಿ ನಾವು ತಲೆಮರೆಸಿಕೊಂಡು ತಿರುಗುವ ದುಸ್ಥಿತಿ ಬಂದಿದೆ- ವಿವೇಕ ಭಟ್,
ಗ್ರಾ.ಪಂ.ಗ್ರಾಮ ಸಭೆಗಳಿಗೆ ಅಧಿಕಾರಿಗಳು ಬರುತ್ತಿಲ್ಲ, ಕೆಲವು ಕಡೆ ನಾವು ಹೋಗಿ ಅಧಿಕಾರಿಗಳನ್ನು ಕಾದು, ಸಭೆ ನಡೆಸದ ಪರಿಸ್ಥಿತಿ ನಮಗೆ ಎದುರಾಗಿದೆ.ಗ್ರಾ.ಪಂ., ತಾ.ಪಂ. ಸಭೆಗಳಿಗೆ ಅಧಿಕಾರಿಗಳು ಬರದಿದ್ದರೆ ಸಭೆ ನಡೆಸುವುದ್ಹ್ಯಾಗೆ?
-ಸುಮಂಗಲಾ ವಸಂತ ನಾಯ್ಕ ಜಿ.ಪಂ. ಸದಸ್ಯೆ
ಎರಡು ತಿಂಗಳಲ್ಲಿ ಬಸ್ ಅವ್ಯವಸ್ಥೆ ಪರಿಹಾರ, ಆರುತಿಂಗಳ ಒಳಗಾಗಿ ಡಿಪೋಕ್ಕೆ ಶಂಕು ಸ್ಥಾಪನೆ
2 ತಿಂಗಳಲ್ಲಿ ಸಾರಿಗೆ ಸಂಸ್ಥೆಯ ಬಸ್ ಅವ್ಯವಸ್ಥೆ ಸರಿಪಡಿಸುವುದು,ಸ್ಥಳದ ಸಮಸ್ಯೆ ಬಗೆಹರಿದರೆ ಮುಂದಿನ ಆರು ತಿಂಗಳ ಮೊದಲು ಸಿದ್ದಾಪುರದ ಬಸ್ ಡಿಪೋ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸುವುದು ಸೇರಿದಂತೆ ಸಾರ್ವಜನಿಕರ ಬೇಡಿಕೆಗಳನ್ನು ಆದ್ಯತೆಗೆ ಅನುಗುಣವಾಗಿ ಪರಿಹರಿಸುವುದಾಗಿ ವಾಯವ್ಯಕರ್ನಾಟಕ
ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಮಾಜಿ ಶಾಸಕ ವಿ.ಎಸ್. ಪಾಟೀಲ್ ಭರವಸೆ ನೀಡಿದ್ದಾರೆ.

