

ಎರಡು ತಿಂಗಳಲ್ಲಿ ಬಸ್ ಅವ್ಯವಸ್ಥೆ ಪರಿಹಾರ, ಆರುತಿಂಗಳ ಒಳಗಾಗಿ ಡಿಪೋಕ್ಕೆ ಶಂಕು ಸ್ಥಾಪನೆ
2 ತಿಂಗಳಲ್ಲಿ ಸಾರಿಗೆ ಸಂಸ್ಥೆಯ ಬಸ್ ಅವ್ಯವಸ್ಥೆ ಸರಿಪಡಿಸುವುದು,ಸ್ಥಳದ ಸಮಸ್ಯೆ ಬಗೆಹರಿದರೆ ಮುಂದಿನ ಆರು ತಿಂಗಳ ಮೊದಲು ಸಿದ್ದಾಪುರದ ಬಸ್ ಡಿಪೋ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸುವುದು ಸೇರಿದಂತೆ ಸಾರ್ವಜನಿಕರ ಬೇಡಿಕೆಗಳನ್ನು ಆದ್ಯತೆಗೆ ಅನುಗುಣವಾಗಿ ಪರಿಹರಿಸುವುದಾಗಿ ವಾಯವ್ಯಕರ್ನಾಟಕ
ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಮಾಜಿ ಶಾಸಕ ವಿ.ಎಸ್. ಪಾಟೀಲ್ ಭರವಸೆ ನೀಡಿದ್ದಾರೆ.
ಸಿದ್ಧಾಪುರ ತಾ.ಪಂ. ಸಭಾಭವನದಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು ಸಿದ್ಧಾಪುರ, ಶಿರಸಿ ಸೇರಿದಂತೆ ಉತ್ತರಕನ್ನಡ ಜಿಲ್ಲೆಯ ಸಾರಿಗೆ ತೊಂದರೆಗಳ ಬಗ್ಗೆ ಸಂಸ್ಥೆಯ ಗಮನಕ್ಕಿದೆ.
ಈಗ ಇರುವ ಬಸ್‍ಗಳಲ್ಲೇ ಮಾರ್ಗಗಳನ್ನು ಹೊಂದಿಸಬೇಕು. ಮುಂದಿನ ಎರಡು ತಿಂಗಳುಗಳಲ್ಲಿ ಹೆಚ್ಚುವರಿ ವಾಹನಗಳ ಪೂರೈಕೆ ಆಗುವುದರಿಂದ ಆಗ ತೊಂದರೆ ಆಗಲ್ಲ. ಸ್ಥಳದ ದ್ವಂದ್ವ ಬಗೆಹರಿದರೆ ಮುಂದಿನ ಆರು ತಿಂಗಳೊಳಗಾಗಿ ಸಿದ್ಧಾಪುರ ಬಸ್ ಡಿಪೋ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದೇವೆ. ಸಿದ್ಧಾಪುರ ಮತ್ತು ಉತ್ತರಕನ್ನಡ ಜಿಲ್ಲೆಯ ಸಾರಿಗೆ ಸಮಸ್ಯೆಗಳನ್ನು ಆದ್ಯತೆಯ ಆಧಾರದಲ್ಲಿ ಬಗೆಹರಿಸುತ್ತೇವೆ ಎಂದರು.
ಸಭೆಯಲ್ಲಿ ಕೇಳಿಬಂದ ಮಾತುಗಳು (ಅಹವಾಲುಗಳು) ಈಗಿರುವ ಶೆಡ್ಯೂಲ್ ಗಳಲ್ಲಿ ತೊಂದರೆ ಬಗೆಹರಿಸಲು ಸಾಧ್ಯವಿಲ್ಲ.
-ಶ್ರೀಧರ ಹೆಗಡೆ,ಬೈಲಳ್ಳಿ
ವಿಶ್ವವಿಖ್ಯಾತ ಜೋಗ ಜಲಪಾತಕ್ಕೆ ಶಿರಸಿಯಿಂದ, ನಮ್ಮ ತಾಲೂಕು ಕೇಂದ್ರದಿಂದ ವಾಹನ ಅನುಕೂಲ ಇಲ್ಲ. ಸಾಗರ-ಶಿರಸಿ ಮಾರ್ಗದ ಒಂದೆರಡು ಬಸ್ ಗಳನ್ನು ಜೋಗಕ್ಕೆ ಬಿಡಿ, ಇದರಿಂದ ಪ್ರವಾಸಿಗರು,ಸ್ಥಳಿಯರಿಗೆ ಅನುಕೂಲವಾಗುತ್ತದೆ.
-ಶ್ರೀಧರ ನಾಯ್ಕ, ಬಸವನಬೈಲ್
ಹಬ್ಬ-ಉತ್ಸವಗಳ ಅವಧಿಯಲ್ಲಿ ಗ್ರಾಮೀಣ ಸಾರಿಗೆ ವ್ಯವಸ್ಥೆ ನಿಲ್ಲಿಸುವುದರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತದೆ.
-ಕೃಷ್ಣಮೂರ್ತಿ ಐಸೂರು.
ಸಿದ್ಧಾಪುರ ಬೀರಲಮಕ್ಕಿಗೆ ಸಿಟಿಬಸ್ ಮತ್ತು ಬುರುಡೆ ಜಲಪಾತಕ್ಕೆ ಬಸ್ ವ್ಯವಸ್ಥೆ ಮಾಡಿ ಇದರಿಂದ ಸ್ಥಳಿಯರೊಂದಿಗೆ ಪ್ರವಾಸಿಗರಿಗೂ ಅನುಕೂಲ -ಶ್ರೀಧರ ನಾಯ್ಕ ,ಹೆಗ್ಗೇರಿ
ಬಸ್ ನಿಲ್ದಾಣದ ಕಾಮಗಾರಿ ವಿಳಂಬವಾಗುತ್ತಿದೆ. ಡಿಪೋ ನಿರ್ಮಾಣಕ್ಕೆ ಅವಶ್ಯ ತಾಂತ್ರಿಕ ಕೆಲಸ ನಡೆಯುತ್ತಿಲ್ಲ. ಆಗಿರುವ ಕೆಲಸ ದೇಶಪಾಂಡೆ ಮಾಡಿದ್ದಾರೆ ಎಂದು ಕಾಂಗ್ರೆಸ್ ನವರು ಹೇಳುತ್ತಾರೆ. ಬಿ.ಜೆ.ಪಿ.ಯವರು ನೀವೇನು ಮಾಡುತಿದ್ದೀರಿ? ತಾಳಗುಪ್ಪಾ ರೇಲ್ವೇ ಲಿಂಕ್ ಬಸ್‍ಬೇಕು. ಬನವಾಸಿ ಬಸ್ ಅದೇ ಮಾರ್ಗದಲ್ಲಿ ಹುಬ್ಬಳ್ಳಿಯವರೆಗೆ ಹೋಗುವಂತಾದರೆ ಅನುಕೂಲ.
- ವಾಸುದೇವ ಬಿಳಗಿ
ಹಲೋ ಗ್ರಾ.ಪಂ……….. ನ ಪಿ.ಡಿ.ಓ.ಅವರಾ? ಎನ್ನುವಂತಿಲ್ಲ ಅದಕ್ಕೂ ಮೊದಲೇ ಉತ್ತರ
ನೀವು ಕರೆಮಾಡಿದ ಚಂದಾದಾರರು ವ್ಯಾಪ್ತಿ ಪ್ರದೇಶದ ಹೊರಗಿದ್ದಾರೆ. ಅಥವಾ ಸ್ವಿಚ್ ಆಫ್ ಮಾಡಿದ್ದಾರೆ.
ಇದು ಬರೀ ಸಿದ್ಧಾಪುರದ ಕತೆಯಲ್ಲ, ಉತ್ತರಕನ್ನಡದ ವ್ಯಥೆ ಮಾತ್ರವಲ್ಲ,ಬಹುಶ: ಇಡೀರಾಜ್ಯದವ್ಯಥೆಯ ಕತೆ.
ರಾಜ್ಯದ ಮೊದಲ ಬಿ.ಜೆ.ಪಿ. ಸರ್ಕಾರದ ಅವಧಿಯಲ್ಲಿ ಸೃಜಿಸಲ್ಫಟ್ಟ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕತೆ. ಈ ವ್ಯಥೆಯ ಅನುಭವವಾಗಬೇಕೆಂದರೆ…..
ನೀವು ಮಾಡಬೇಕಿರುವುದಿಷ್ಟೇ,
ನಿಮ್ಮ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಯ ಸರ್ಕಾರಿ ಚರದೂರವಾಣಿಗೆ ಕರೆಮಾಡಿ, ಉತ್ತರ ‘ನೀವು ಕರೆ ಮಾಡಿದ ಚಂದಾದಾರರು ವ್ಯಾಪ್ತಿ ಪ್ರದೇಶದ ಹೊರಗಿದ್ದಾರೆ. ಅಥವಾ ನೀವು ಕರೆಮಾಡಿದ ಚಂದಾದಾರರು ಸ್ವೀಚ್‍ಆಫ್ ಮಾಡಿದ್ದಾರೆ. ಹೀಗೆ ಪಿ.ಡಿ.ಓ.ಗಳ ಮೊಬೈಲ್ ಉಸುರತೊಡಗಿ ಸರಿಸುಮಾರು ಒಂದು ವರ್ಷಗಳೇ ಕಳೆದಿದೆ. ಜನತೆ ಪಾಪ, ಪಿ.ಡಿ.ಓ.ಗಳು ಸೈಟ್ ನಲ್ಲಿ ಕಾಮಗಾರಿ ವೀಕ್ಷಿಸುತ್ತಿರಬೇಕು ಎಂದು ಸುಮ್ಮನಾದವರೇ ಹೆಚ್ಚು. ಆದರೆ ಈಗ ತಡವಾಗಿ ಬೆಳಕಿಗೆ ಬಂದ ವಿದ್ಯಮಾನವೆಂದರೆ…..
ಸಿದ್ದಾಪುರ,ಉತ್ತರಕನ್ನಡ ಸೇರಿದಂತೆ ರಾಜ್ಯದ ಗ್ರಾಮೀಣ ಅಭಿವೃದ್ಧಿಗಾಗಿ ಬಂದ ಅಧಿಕಾರಿಗಳ ಮೊಬೈಲ್ ಗೆ ಹೊಟ್ಟಿಗೆ ಹಿಟ್ಟಿಲ್ಲ. ಹೌದು ನೀವು ಪಿ.ಡಿ.ಓ.ಗಳನ್ನು ಸಂಪರ್ಕಿಸಲು ಪ್ರಯತ್ನಿಸಿ ವಿಫಲರಾಗಿ ಅವರಿಗೆ ಶಾಪ ಹಾಕಿದರೆ ಪ್ರಯೋಜನವಿಲ್ಲ.ಸರ್ಕಾರ ಇವರ ಮೊಬೈಲ್‍ಗಳನ್ನು ರೀಚಾರ್ಜ್ ಮಾಡಿಸಿಲ್ಲ ಹಾಗಾಗಿ ಇವರ ಮೊಬೈಲ್‍ಗಳು ಶಾಶ್ವತವಾಗಿ ಸ್ವಿಚ್ ಆಫ್ ಆಗಿವೆ, ಅಥವಾ ನಾಟ್ ರಿಚೇಬಲ್.
ಪಿ.ಡಿ.ಓ.ಗಳ ಮೊಬೈಲ್‍ಸಂಪರ್ಕ ಸಾಧ್ಯವಾಗದಿರಲು ತಾಂತ್ರಿಕ ತೊಂದರೆ ಕಾರಣವಾಗಿರಬಹುದು. ಈ ವಾರ ಸ್ವಯಂ ನನ್ನ ಮೊಬೈಲ್ ಗೆ ಕರೆಗಳು ಬರುತ್ತಿಲ್ಲ, ಈ ಬಗ್ಗೆ ಅನ್ಯರು ಹೇಳಿದ ಮೇಲೇ ನನಗೆ ತಿಳಿದದ್ದು, ಈ ಬಗ್ಗೆ ವಿಚಾರಿಸಿ,ಸೂಕ್ತ ಏರ್ಪಾಡಿಗೆ ಪ್ರಯತ್ನಿಸುತ್ತೇನೆ.
-ಪ್ರಕಾಶ್ ರಾವ್, ಕಾ.ನಿ.ಅ.ತಾ.ಪಂ.ಸಿದ್ಧಾಪುರ.


