

ಸಮಸ್ಯೆ ಬಗೆಹರಿಸಲಾಗದಿದ್ದರೆ ದನ ಕಾಯಲು ಹೋಗಿ,
ತೊಂದರೆ ಪರಿಹರಿಸಲಾಗದಿದ್ದರೆ ಜಾಗ ಬಿಟ್ಟು ಹೋಗಿ
ವರ್ಷವಿಡೀ ಸಮಸ್ಯೆ ಹೇಳುತಿದ್ದರೂ ಪರಿಹಾರ ದೊರೆಯುತ್ತಿಲ್ಲ, ಜನಪ್ರತಿನಿಧಿಗಳು,
ಅಧಿಕಾರಸ್ಥರಾಗಿ ಸಮಸ್ಯೆ ಬಗೆಹರಿಸಲಾಗದಿದ್ದರೆ ಆ ಸ್ಥಾನಬಿಟ್ಟುಹೋಗಿ ಎಂದು ಆಕ್ರೋಶದಿಂದ ಪ್ರಶ್ನಿಸಿದ ಸಂದರ್ಭ ಎದುರಾದದ್ದು ಗುರುವಾರ ಇಲ್ಲಿನ ತಾ.ಪಂ.ಸಭಾಭವನದಲ್ಲಿ ನಡೆದ ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಂಸ್ಥೆಯ ಅಧ್ಯಕ್ಷ ವಿ.ಎಸ್.ಪಾಟೀಲರ ಸಾರ್ವಜನಿಕ ಸ್ಫಂದನ ಸಭೆಯಲ್ಲಿ.
ಇಲ್ಲಿನ ತಾಲೂಕಾ ಪಂಚಾಯತ್ ನಲ್ಲಿ ವಾ.ಕ.ರಾ.ರ.ಸಂಸ್ಥೆಯ ಅಧ್ಯಕ್ಷ ವಿ.ಎಸ್. ಪಾಟೀಲರ ಅಧ್ಯಕ್ಷತೆಯಲ್ಲಿ ಕುಂದು ಕೊರತೆ ಸಮಾಲೋಚನಾ ಸಭೆ ನಡೆಯಿತು.
ಸಭೆಯಲ್ಲಿ ಸ್ಥಳಿಯರು ತಮ್ಮ ಸಮಸ್ಯೆ, ಬೇಡಿಕೆಗಳನ್ನು ಮುಂದಿಟ್ಟರು. ಕೋಡ್ಸರ,ಹೇರೂರು, ಹೆಗ್ಗರಣೆ ರಸ್ತೆಯಲ್ಲಿ ವಾಹನ ವ್ಯವಸ್ಥೆ ಸರಿಯಾಗಿಲ್ಲ ಎಂದು ಸಭೆಯ ಗಮನಕ್ಕೆ ತಂದ ಕೆಲವು ಜನರು.ಸ್ಥಳೀಯರ ತಕರಾರು,
ಅಸಮಾಧಾನಕ್ಕೆ ಸರಿಯಾದ ಉತ್ತರ, ಸ್ಫಂದನ ದೊರೆಯದ ಹಿನ್ನೆಲೆಯಲ್ಲಿ ಹೆಗ್ಗರಣೆ,ಹೇರೂರು, ಕಾನಸೂರು ಭಾಗದ ಜನರು ವಾ.ಕ.ರ.ಸಾ.ಸ. ಅಧ್ಯಕ್ಷ ವಿ.ಎಸ್. ಪಾಟೀಲ ಜೊತೆ ಸ್ಥಳಿಯ ಜನಪ್ರತಿನಿಧಿಗಳಾದ ಶಾಸಕರು,ಸಂಸದರನ್ನೂ ತರಾಟೆಗೆ ತೆಗೆದುಕೊಂಡರು.
ಈ ಸಾರ್ವಜನಿಕರು, ಒಮ್ಮೆ ಅಧಿಕಾರಿಗಳು ಮತ್ತೊಮ್ಮೆ ಜನಪ್ರತಿನಿಧಿಗಳು ಈಗ ನೀವು ಇಡೀವರ್ಷ ಸಮಸ್ಯೆ ಕೇಳಿ ಮತ್ತೂ ಅದೇ ಸಮಸ್ಯೆ ಮುಂದುವರಿಯುವುದಾದರೆ ನೀವ್ಯಾಕೆ ಆ ಸ್ಥಾನದಲ್ಲಿರಬೇಕು. ನಮ್ಮ ಸಂಸದರು,ಶಾಸಕರೂ ನಮ್ಮ ಅಹವಾಲು, ಸಮಸ್ಯೆಗಳು ತೊಂದರೆಗಳನ್ನು ಕೇಳುತ್ತಿಲ್ಲ.
ಸಾರ್ವಜನಿಕರ ಸಮಸ್ಯೆ ಬಗೆಹರಿಸಲು ಸಾಧ್ಯವಿಲ್ಲವಾದರೆ ನೀವೆಲ್ಲಾ ಯಾಕೆ ಆ ಸ್ಥಾನಗಳ ಲ್ಲಿರಬೇಕು ಎಂದು ಪ್ರಶ್ನಿಸುವ ಮೂಲಕ ಅಧ್ಯಕ್ಷರು ಅವರೊಂದಿಗಿದ್ದ ಸಭಾಸದರಿಗೂ ಮುಜುಗರ ವಾಗುವಂತೆ ತಕರಾರು ದಾಖಲಿಸಿದರು.
ಎಸ್.ಎಸ್.ಎಲ್.ಸಿ.ಯಲ್ಲಿ ರಾಜ್ಯಕ್ಕೇ ನಂ1, ಆದರೆ ಕೆಲವು ಶಾಲೆಗಳಲ್ಲಿ ಶಿಕ್ಷಕರೇ ಇಲ್ಲ!
ಕೆ.ಡಿ.ಪಿ.,ಸಾಮಾನ್ಯ ಸಭೆಗಳ ಬಗ್ಗೆ ಅಧಿಕಾರಿಗಳ ಅಸಡ್ಡೆ,ಕ್ರಮಕ್ಕೆ ಶಿಫಾರಸ್ಸು
ಸಿದ್ಧಾಪುರ ತಾ.ಪಂ.ನಪ್ರತಿ ಕೆ.ಡಿ.ಪಿ.ಸಭೆಗಳಲ್ಲಿ ಕಾಟಾಚಾರಕ್ಕೆ ಬರುವುದು,ವರದಿ ಓದುವುದು ಮಾಡುತ್ತಿದ್ದ ಅಧಿಕಾರಿಗಳು ಇತ್ತೀಚೆಗೆ ಸಭೆಗಳಿಗೆ ಬರುವುದನ್ನೇ ನಿಲ್ಲಿಸಿದ ದುರ್ವರ್ತನೆಯ ಹಿನ್ನೆಲೆಯಲ್ಲಿ ತಾಲೂಕಿನ ಕೆಲವು ಇಲಾಖೆಗಳ ಅಧಿಕಾರಿಗಳ ಮೇಲೆ ಕ್ರಮಕ್ಕೆ ಜಿ.ಪಂ. ಮುಖ್ಯಕಾರ್ಯದರ್ಶಿ ಗಳಿಗೆ ಬರೆದು ತಿಳಿಸಲು ಇಂದಿನ ತಾ.ಪಂ. ಮಾಸಿಕ ಕೆ.ಡಿ.ಪಿ.ಸಭೆ ಆಗ್ರಹಿಸಿದೆ.

