

ಅಧಿಕಾರಿಗಳಿಗೂ ಸಾರ್ವಜನಿಕರಿಗೂ ಸಂಪರ್ಕ ಕಲ್ಪಿಸಿ ಅವರ ಕುಂದು-ಕೊರತೆಗಳನ್ನು ಆಲಿಸಿ ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ಯಾವ ಅಧಿಕಾರಿಗಳು ಬಾರದೇ ತಾಲೂಕಿನ ಬೇಡ್ಕಣಿಯಲ್ಲಿ ಕಾಟಾಚಾರಕ್ಕೆ ಗ್ರಾಮ ಸಭೆ ನಡೆಯಿತು.
ಸರಕಾರದ ಆದೇಶದಂತೆ ಮಿಷನ್ ಅಂತ್ಯೋದಯ ಹಾಗೂ 2020-21ರ ನಮ್ಮ ಗ್ರಾಮ ನಮ್ಮ ಯೋಜನೆ ತಯಾರಿಕೆಯ ಗ್ರಾಮ ಸಭೆಯನ್ನುತಾಲೂಕಿನ ಬೇಡ್ಕಣಿಯ ಗ್ರಾಮ ಪಂಚಾಯತ ಸಭಾಭವನದಲ್ಲಿ ಆಯೋಜಿಸಲಾಗಿತ್ತು.
ಬೆಳಿಗ್ಗೆ 10-30ಕ್ಕೆ ಕರೆಯಲಾದ ಸಭೆ 12-30ಕ್ಕೆ ಪ್ರಾರಂಭವಾಯಿತು. ಆದರೂ ನೋಡಲ್ ಆಫೀಸರ್ ಶಿಶು ಅಭಿವೃಧ್ಧಿ ಯೋಜನಾಧಿಕಾರಿ, ಶಿಕ್ಷಣ, ಪಶುಸಂಗೋಪನೆ, ಅರಣ್ಯ, ತೋಟಗಾರಿಕೆ ಅಧಿಕಾರಿಗಳನ್ನು ಹೊರತುಪಡಿಸಿ ಇನ್ನುಳಿದ ಯಾವ ಇಲಾಖೆಯ ಅಧಿಕಾರಿಗಳೂ ಗ್ರಾಮಸಭೆ ಕಡೆ ಸುಳಿಯಲಿಲ್ಲ.
ಬೆರಳೆಣಿಕೆ ಜನರು ಸಭೆಯಲ್ಲಿದ್ದರೂ ಬಹುತೇಕರು ಪಂಚಾಯತ ಸಿಬ್ಬಂದಿಗಳೇ ಆಗಿದ್ದರು. ಅಧಿಕಾರಿಗಳು ಬರುವುದಿ¯ ್ಲ. ಸಮಸ್ಯೆಗಳಿಗೆ ಪರಿಹಾರ ಸಿಗುವುದಿಲ್ಲ. ಇಲಾಖೆಗಳಿಗೆ ಹೋದರಾಯಿತು ಎಂದು ಸಾರ್ವಜನಿಕರು ಗ್ರಾಮ ಸಭೆಯಲ್ಲಿ ಭಾಗವಹಿಸಲು ಹಿಂದೇಟು ಹಾಕುತ್ತಿದ್ದಾರೆ.
ಸಭೆಯಲ್ಲಿ ಪ್ರಭಾರೆ ಪಿಡಿಓ ನಾಗೇಶ.ಎಚ್.ಪಿ ಮಾತನಾಡಿ ಮಿಷನ್ ಅಂತ್ಯೋದಯದ ಕುರಿತು ಮಾಹಿತಿ ನೀಡಿ, ಸರ್ಕಾರ ಕೂಡಲೇ ಕ್ರಿಯಾ ಯೋಜನೆ ತಯಾರಿಸುವಂತೆ ಆದೇಶಿಸಿದೆ. ಆಧ್ದರಿಂದ ಕ್ರೀಯಾ ಯೋಜನೆ ತಯಾರಿಸುವುದು ಅನಿವಾರ್ಯ. ಸಭೆಯಲ್ಲಿ ನಮ್ಮ ಸಮಸ್ಯೆಗಳನ್ನು ಅಧಿಕಾರಿಗಳಿಗೆ ತಿಳಿಸಬೇಕು. ಯೋಜನೆಗಳನ್ನು ಜನರಿಗೆ ತಿಳಿಸಬೇಕು. ನೀವು ಸಹಕರಿಸಬೇಕು ಎಂದರು.
ಇದರಿಂದ ಸಮಾಧಾನವಾಗದ ಸಾರ್ವಜನಿಕರು ಹಾಗಾದರೆ ಎಲ್ಲಾ ಇಲಾಖೆಯಲ್ಲಿ ಸಿಗುವ ಸೌಲಭ್ಯಗಳ ಕುರಿತು ಮಾಹಿತಿ ನೀವು ನೀಡುವಿರಾ? ನಮ್ಮಲ್ಲಿರುವ ಕೆಲವು ಪ್ರಶ್ನೆಗಳಿಗೆ ನಿಮ್ಮಲ್ಲಿ ಉತ್ತರ ಇದೆಯಾ?ಎಂದು ಪ್ರಶ್ನಿಸಿದರು.
