ಸಿದ್ಧಾಪುರದ ತಾ.ಪಂ.ಸಭೆಯಲ್ಲಿ ನಡೆದ ಸಾರಿಗೆ ಸಂಸ್ಥೆ ಅಧ್ಯಕ್ಷರ ಸಮಾಲೋಚನೆ ಸಭೆಯಲ್ಲಿ ಹೊಸ ಪೀಳಿಗೆಯ ಬಗ್ಗೆ ವಿಶೇಶ ಕಾಳಜಿ ವ್ಯಕ್ತವಾದದ್ದು ವಿಶೇಶವಾಗಿತ್ತು.
ಸಭೆಯ ಪ್ರಾರಂಭದಲ್ಲೇ ಮಾತನಾಡಿದ ಅಧ್ಯಕ್ಷ ವಿ.ಎಸ್. ಪಾಟೀಲ್ ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ವಾಹನ ಚಾಲಕರು,ನಿರ್ವಾಹಕರು ಬಹುತೇಕ ಉತ್ತರಕರ್ನಾಟಕದವರು. ಅವರು ಸೇವೆಗೆ ಇಲ್ಲಿ ಸೇರಿ ನಂತರ ವರ್ಗಾವಣೆಯಾಗುತ್ತಾರೆ. ಹಾಗಾಗಿ ಇಲ್ಲಿ ಸದಾ ಸಿಬ್ಬಂದಿಗಳ ಕೊರತೆ ಇರುತ್ತದೆ. ಇದು ಕೂಡಾ ಸಾರಿಗೆ ಅವ್ಯವಸ್ಥೆಗೆ ಕಾರಣ ಹಾಗಾಗಿ ಈಗ ಸಾರಿಗೆ ಸಂಸ್ಥೆ ಚಾಲಕರು ನಿರ್ವಾಹಕರಿಗೆ ತರಬೇತಿ ನೀಡುವ ವ್ಯವಸ್ಥೆ ಮಾಡಿ ಈ ಭಾಗದವರೂ ಸಂಸ್ಥೆ ಸೇರುವಂತೆ ಮಾಡುತ್ತೇವೆ ಅದಕ್ಕಾಗಿ ತರಬೇತಿ ಸಂಸ್ಥೆ ಪ್ರಾರಂಭಿಸುತ್ತೇವೆ ಎಂದರು.
ನಂತರ ಪ್ರಾರಂಭವಾದ ಸಭೆಗೆ ಅಹವಾಲು,ತಕರಾರು ತಿಳಿಸಿದ ಅನೇಕರು ತಾಲೂಕಿನ ವಿದ್ಯಾಸಂಸ್ಥೆಗಳಿಗೆ ವಾಹನ ವ್ಯವಸ್ಥೆ ಸಮರ್ಪಕವಾಗಿಲ್ಲ. ಕಾಲೇಜು,ಶಾಲೆ ಸೇರಿದ ಬಹುತೇಕ ವಿದ್ಯಾರ್ಥಿಗಳು ಸಾರಿಗೆ ಅವ್ಯವಸ್ಥೆಯಿಂದ ನಲುಗುವಂತಾಗಿದೆ. ಈ ತೊಂದರೆಯಿಂದ ವಿದ್ಯಾರ್ಥಿಗಳಿಗೆ ಮಾನಸಿಕ ಒತ್ತಡ, ಅನಾರೋಗ್ಯ ಸೇರಿದಂತೆ ಅನೇಕ ಸಮಸ್ಯೆಗಳಾಗುತ್ತಿವೆ ಎಂದು ಅಧ್ಯಕ್ಷರ ಗಮನ ಸೆಳೆದರು.
ಬಿಳಗಿ,ಶಿರಗುಣಿ,ಹೆಗ್ಗರಣಿ,ಅವರಗುಪ್ಪಾ,ಹೇರೂರು ಸೇರಿದಂತೆ ತಾಲೂಕಿನ ಅನೇಕ ವಿದ್ಯಾ ಸಂಸ್ಥೆಗಳ ಪ್ರತಿನಿಧಿಗಳು ಸಾರಿಗೆ ಅವ್ಯವಸ್ಥೆಯಿಂದ ಹೊಸಪೀಳಿಗೆಗೆ ಆಗುತ್ತಿರುವ ತೊಂದರೆ ಹೇಳಿದರು. ಈ ಸಮಸ್ಯೆಗಳಿಗೆ ಪ್ರತಿಕ್ರೀಯಿಸಿದ ವಿ.ಎಸ್.ಪಾಟೀಲ್ ಮುಂದಿನ ಎರಡು ತಿಂಗಳಲ್ಲಿ ಈ ಅವ್ಯವಸ್ಥೆ ಸರಿಪಡಿಸುವ ಭರವಸೆ ನೀಡಿದರು.
ಸಭೆಯಲ್ಲಿ ಕೇಳಿಬಂದ ಮಾತುಗಳು (ಅಹವಾಲುಗಳು)
ಈಗಿರುವ ಶೆಡ್ಯೂಲ್‍ಗಳಲ್ಲಿ ತೊಂದರೆ ಬಗೆಹರಿಸಲು ಸಾಧ್ಯವಿಲ್ಲ.
-ಶ್ರೀಧರ ಹೆಗಡೆ,ಬೈಲಳ್ಳಿ
ವಿಶ್ವವಿಖ್ಯಾತ ಜೋಗ ಜಲಪಾತಕ್ಕೆ ಶಿರಸಿಯಿಂದ, ನಮ್ಮ ತಾಲೂಕು ಕೇಂದ್ರದಿಂದ ವಾಹನ ಅನುಕೂಲ ಇಲ್ಲ. ಸಾಗರ-ಶಿರಸಿ ಮಾರ್ಗದ ಒಂದೆರಡು ಬಸ್ ಗಳನ್ನು ಜೋಗಕ್ಕೆ ಬಿಡಿ, ಇದರಿಂದ ಪ್ರವಾಸಿಗರು,ಸ್ಥಳಿಯರಿಗೆ ಅನುಕೂಲವಾಗುತ್ತದೆ.-ಶ್ರೀಧರ ನಾಯ್ಕ, ಬಸವನಬೈಲ್
ಹಬ್ಬ-ಉತ್ಸವಗಳ ಅವಧಿಯಲ್ಲಿ ಗ್ರಾಮೀಣ ಸಾರಿಗೆ ವ್ಯವಸ್ಥೆ ನಿಲ್ಲಿಸುವುದರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತದೆ.
-ಕೃಷ್ಣಮೂರ್ತಿ ಐಸೂರು.
ಸಿದ್ಧಾಪುರ ಬೀರಲಮಕ್ಕಿಗೆ ಸಿಟಿಬಸ್ ಮತ್ತು ಬುರುಡೆ ಜಲಪಾತಕ್ಕೆ ಬಸ್ ವ್ಯವಸ್ಥೆ ಮಾಡಿ ಇದರಿಂದ ಸ್ಥಳಿಯರೊಂದಿಗೆ ಪ್ರವಾಸಿಗರಿಗೂ ಅನುಕೂಲ -ಶ್ರೀಧರ ನಾಯ್ಕ ,ಹೆಗ್ಗೇರಿ
ಬಸ್ ನಿಲ್ದಾಣದ ಕಾಮಗಾರಿ ವಿಳಂಬವಾಗುತ್ತಿದೆ. ಡಿಪೋ ನಿರ್ಮಾಣಕ್ಕೆ ಅವಶ್ಯ ತಾಂತ್ರಿಕ ಕೆಲಸ ನಡೆಯುತ್ತಿಲ್ಲ. ಆಗಿರುವ ಕೆಲಸ ದೇಶಪಾಂಡೆ ಮಾಡಿದ್ದಾರೆ ಎಂದು ಕಾಂಗ್ರೆಸ್ ನವರು ಹೇಳುತ್ತಾರೆ. ಬಿ.ಜೆ.ಪಿ.ಯವರು ನೀವೇನು ಮಾಡುತಿದ್ದೀರಿ? ತಾಳಗುಪ್ಪಾ ರೇಲ್ವೆ ಲಿಂಕ್ ಬಸ್‍ಬೇಕು. ಬನವಾಸಿ ಬಸ್ ಅದೇ ಮಾರ್ಗದಲ್ಲಿ ಹುಬ್ಬಳ್ಳಿಯವರೆಗೆ ಹೋಗುವಂತಾದರೆ ಅನುಕೂಲ.- ವಾಸುದೇವ ಬಿಳಗಿ
¨ಹಿರಿಯರ ಸಂಸ್ಮರಣೆ. ಸಭಾಮಂದಿರ ಉದ್ಘಾಟನೆ
ಶ್ರೀ ಭುವನೇಶÀ್ವರಿ ತಾಳಮದ್ದಳೆ ಕೂಟ, ಕೇಶವನಾರಾಯಣ ಟ್ರಸ್ಟ್, ಅನಂತ ಯಕ್ಷಕಲಾ ಪ್ರತಿಷ್ಠಾನ ಇವುಗಳ ಸಹಯೋಗದಲ್ಲಿ ಕೇಶವನಾರಾಯಣ ದೇವಾಲಯದ ನೂತನ ಸಭಾಮಂದಿರ ಉದ್ಘಾಟನೆ ಹಾಗೂ ಹಿರಿಯರ ಸಂಸ್ಮರಣೆ ಕಾರ್ಯಕ್ರಮ ನ.10ರಂದು ಕಶಿಗೆ-ಹೇಮಗಾರಿನಲ್ಲಿ ನಡೆಯಲಿದೆ ಎಂದು ದೇವಾಲಯ ಆಡಳಿತ ಸಮಿತಿ ಕಾರ್ಯದರ್ಶಿ ಜಿ.ಕೆ.ಭಟ್ಟ ಕಶಿಗೆ ತಿಳಿಸಿದರು.
ಅವರು ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮದ ವಿವರಗಳನ್ನು ನೀಡಿ ನ.10ರ ಬೆಳಿಗ್ಗೆ 10.30ಕ್ಕೆ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸಭಾಮಂದಿರ ಉದ್ಘಾಟಿಸುವರು. ನಂತರ ನಡೆಯುವ ಹಿರಿಯರ ಸಂಸ್ಮರಣೆ ಕಾರ್ಯಕ್ರಮವನ್ನು ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊ|ಎಂ.ಎ.ಹೆಗಡೆ ಉದ್ಘಾಟಿಸುವರು.