ಹಿರಿಯರ ಸಂಸ್ಮರಣೆ. ಸಭಾಮಂದಿರ ಉದ್ಘಾಟನೆ

ಶ್ರೀ ಭುವನೇಶ್ವರಿ ತಾಳಮದ್ದಳೆ ಕೂಟ, ಕೇಶವನಾರಾಯಣ ಟ್ರಸ್ಟ್, ಅನಂತ ಯಕ್ಷಕಲಾ ಪ್ರತಿಷ್ಠಾನ ಇವುಗಳ ಸಹಯೋಗದಲ್ಲಿ ಕೇಶವನಾರಾಯಣ ದೇವಾಲಯದ ನೂತನ ಸಭಾಮಂದಿರ ಉದ್ಘಾಟನೆ ಹಾಗೂ ಹಿರಿಯರ ಸಂಸ್ಮರಣೆ ಕಾರ್ಯಕ್ರಮ ನ.10ರಂದು ಕಶಿಗೆ-ಹೇಮಗಾರಿನಲ್ಲಿ ನಡೆಯಲಿದೆ ಎಂದು ದೇವಾಲಯ ಆಡಳಿತ ಸಮಿತಿ ಕಾರ್ಯದರ್ಶಿ ಜಿ.ಕೆ.ಭಟ್ಟ ಕಶಿಗೆ ತಿಳಿಸಿದರು.
ಅವರು ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮದ ವಿವರಗಳನ್ನು ನೀಡಿ ನ.10ರ ಬೆಳಿಗ್ಗೆ 10.30ಕ್ಕೆ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸಭಾಮಂದಿರ ಉದ್ಘಾಟಿಸುವರು. ನಂತರ ನಡೆಯುವ ಹಿರಿಯರ ಸಂಸ್ಮರಣೆ ಕಾರ್ಯಕ್ರಮವನ್ನು ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊ|ಎಂ.ಎ.ಹೆಗಡೆ ಉದ್ಘಾಟಿಸುವರು.
ಕೇಶವನಾರಾಯಣ ಟ್ರಸ್ಟ ಅಧ್ಯಕ್ಷ ವಿ| ಕೃಷ್ಣ ಭಟ್ಟ ಅಡವಿತೋಟ ಅಧ್ಯಕ್ಷತೆವಹಿಸಲಿದ್ದು ಅಭ್ಯಾಗತರಾಗಿ ಶಂಕರಮಠದ ಧರ್ಮಾಧಿಕಾರಿ ವಿಜಯ ಹೆಗಡೆ ದೊಡ್ಮನೆ, ಹಿರಿಯ ವಕೀಲ ಜಿ.ಎಸ್.ಹೆಗಡೆ ಬೆಳ್ಳೆಮಡಿಕೆ, ಶಿ.ಪ್ರ.ಸಮಿತಿ ಕಾರ್ಯದರ್ಶಿ ಕೆ.ಐ.ಹೆಗಡೆ ತಾರಗೋಡ ಪಾಲ್ಗೊಳ್ಳುವರು.
ಮಧ್ಯಾಹ್ನ 3ಕ್ಕೆ ಚಿಂತನಗೋಷ್ಠಿ ನಡೆಯಲಿದ್ದು ಜಿ.ಎಲ್.ಹೆಗಡೆ ಕುಮಟಾ ಅಧ್ಯಕ್ಷತೆವಹಿಸುವರು. ಪತ್ರಕರ್ತ ರವೀಂದ್ರ ಭಟ್ಟ ಐನಕೈ, ವಕೀಲ ಪ್ರಕಾಶ ಹೆಗಡೆ ಅಭ್ಯಾಗತರಾಗಿ ಪಾಲ್ಗೊಳ್ಳಲಿದ್ದು ಕಶಿಗೆ ಯಕ್ಷಗಾನ ಮೇಳ ವಿಷಯದ ಕುರಿತು ಕಾಶ್ಯಪ ಪರ್ಣಕುಟಿ, ಮರಗುಡಿ ಮೇಳ ವಿಷಯದ ಕುರಿತು ಟಿ.ಎಂ.ಸುಬ್ಬರಾಯ ಪ್ರಬಂಧ ಮಂಡಿಸುವರು.
ನಂತರ ಸನ್ಮಾನ ಮತ್ತು ಸಮಾರೋಪ ನಡೆಯಲಿದ್ದು ಉಮಾಕಾಂತ ಭಟ್ಟ ಕೆರೆಕೈ ಅಧ್ಯಕ್ಷತೆವಹಿಸುವರು. ಅಭ್ಯಾಗತರಾಗಿ ಡಾ|ಶಶಿಭೂಷಣ ಹೆಗಡೆ, ದಿವಾಕರ ಹೆಗಡೆ ಕೆರೆಹೊಂಡ ಪಾಲ್ಗೊಳ್ಳುವರು.
ಹಿರಿಯ ಯಕ್ಷಗಾನ ಕಲಾವಿದ ಗೋಡೆ ನಾರಾಯಣ ಹೆಗಡೆಯವರನ್ನು ಸನ್ಮಾನಿಸಲಾಗುವದು. ಪ್ರಮೋದ ಹೆಗಡೆ ಯಲ್ಲಾಪುರ ಸಮಾರೋಪ ಮಾತುಗಳನ್ನಾಡಲಿದ್ದು ಸೀತಾರಾಮ ಭಟ್ಟ ಅಡವಿತೋಟ,ಪ್ರಕಾಶ ಹೆಗಡೆ ತೊರಮೆ ಉಪಸ್ಥಿತರಿರುವರು. ರಾತ್ರಿ 9ರಿಂದ ಕರ್ಣಾರ್ಜುನ ತಾಳಮದ್ದಳೆ ನಡೆಯುವದು ಎಂದರು.
ಭುವನೇಶ್ವರಿ ತಾಳಮದ್ದಳೆ ಕೂಟದ 31ನೇ ಚಾರ್ತುಮಾಸ್ಯದ ವಿಶೇಷ ಕಾರ್ಯಕ್ರಮವಾಗಿ ಹಿಂದಿನ ತಲೆಮಾರಿನ ಕಲಾವಿದರ ಸಂಸ್ಮರಣೆಯನ್ನು ಹಮ್ಮಿಕೊಂಡಿದ್ದು ಕಶಿಗೆ ಯಕ್ಷಗಾನ ಮೇಳವನ್ನು 1934-35ರಲ್ಲಿ ಗಣೇಶ ರಾಮ ಭಟ್ಟ ಸ್ಥಾಪಿಸಿ ಎಂಟು ವರ್ಷ ನಡೆಸಿದರು.
ಅನಂತರ ಕೇಶವ ಭಟ್ಟ 18 ವರ್ಷ ಮೇಳ ನಡೆಸಿದರು. ನಂತರ ಅವರು ಮತ್ತು ಹೇಮಗಾರ ಮಂಜುನಾಥ ಹೆಗಡೆ ಕೊಳಗಿ ಮೇಳದ ಕಲಾವಿದರಾಗಿದ್ದರು. ಮರಗುಡಿ ಮೇಳದೊಂದಿಗೂ ಕೂಡಾಟ ನಡೆದಿತ್ತು ಎಂದು ಹಿರಿಯರು ನೆನಪಿಸಿಕೊಳ್ಳುತ್ತಾರೆ. ಅವರೆಲ್ಲರನ್ನೂ ಸ್ಮರಿಸುವ ಕಾರ್ಯಕ್ರಮ ಹಿರಿಯರ ಸಂಸ್ಮರಣೆ ಎಂದು ಜಿ.ಕೆ.ಭಟ್ಟ ಕಶಿಗೆ ಹೇಳಿದರು.
sÀತ್ತದ ಬೆಳೆ ಬಹುಪಾಲು ಜೊಳ್ಳು, ಸಂಪೂರ್ಣ ಹಾನಿಗೆ ಒಳಗಾದ ರೈತ
ಈ ಬಾರಿಯ ಮಳೆಯ ಅಬ್ಬರಕ್ಕೆ ಹಲವು ರೀತಿಯಲ್ಲಿ ಸಮಸ್ಯೆಗಳನ್ನೆದುರಿಸಿದ ಕೃಷಿಕರು ಹೇಗೋ ಕಷ್ಟಪಟ್ಟು 3-4 ಬಾರಿ ಭತ್ತದ ಸಸಿ ನಾಟಿ ಮಾಡಿ ಬೆಳೆ ಕಟಾವು ಮಾಡುವ ಸಂದರ್ಭದಲ್ಲಿ ಹಲವು ರೀತಿಯ ಸಂಕಷ್ಠಗಳನ್ನ ಎದುರಿಸಬೇಕಾಗಿ ಬಂದಿದೆ.
ಹಲವು ರೈತರ ಕಟಾವು ಮಾಡಿದ ಬೆಳೆ ಮಳೆಯಲ್ಲಿ ನೆಂದಿದೆ. ಕೆಲವರದ್ದು ಸಸಿಗಳು ಬೆಳೆದಿಲ್ಲ. ಆದರೆ ಪಟ್ಟಣದ ಹೊಸೂರು ಗ್ರಾಮದ( ಸದ್ಯ ಪಟ್ಟಣದ ಇಂದಿರಾನಗರದಲ್ಲಿ ವಾಸ್ತವ್ಯ ಹೊಂದಿರುವ) ನೆಲ್ಲಿಕೊಪ್ಪ ಎನ್ನುವಲ್ಲಿ(ಸ.ನಂ.31) ನಾರಾಯಣ ಬೊಮ್ಮ ಮಡಿವಾಳ ಎನ್ನುವ ಕೃಷಿಕರ ಭತ್ತದ ಬೆಳೆಯ ಸ್ಥಿತಿ ಗಂಭೀರವಾಗಿದೆ.
ಅವರ ಭತ್ತದ ಗದ್ದೆಯ ಬೆಳೆ ಸಂಪೂರ್ಣವಾಗಿ ಜೊಳ್ಳಾಗಿ ಒಣಗತೊಡಗಿವೆ. ಕೈಗೆ ಬಂದ ತುತ್ತು ಬಾಯಿಗಿಲ್ಲ ಎನ್ನುವ ಸ್ಥಿತಿ ಅವರದ್ದಾಗಿದೆ.
ಸುಮಾರು 1 ಎಕರೆ 31 ಗುಂಟೆ ಭತ್ತದ ಗದ್ದೆ ಹೊಂದಿರುವ ನಾರಾಯಣ ಮಡಿವಾಳರು ಮಟ್ಟಳಗ ಭತ್ತದ ಬೀಜಗಳನ್ನು ಸಸಿಮಡಿ ಮಾಡಿ ನಂತರ ನಾಟಿ ಮಾಡಿದ್ದರು. ಮಳೆಯ ನೀರಿನಿಂದ ಸಸಿಗಳು ಕೊಳೆತರೂ ಮತ್ತೆ ನಾಟಿ ಮಾಡಿದ್ದರು. ಸಮರ್ಪಕವಾಗಿ ಗೊಬ್ಬರ ನೀಡಿ ಔಷಧಿಯನ್ನೂ ಸಿಂಪರಣೆ ಮಾಡಿದ್ದರು. ಉತ್ತಮ ರೀತಿಯಲ್ಲಿ ಬೆಳೆದ ಭತ್ತದ ಸಸಿಗಳು ತೆನೆಯೊಡೆದು ಕಾಳುಗಳು ಗಟ್ಟಿಯಾಗುವಾಗ ಸಂಪೂರ್ಣ ಜೊಳ್ಳಾಗಿವೆ.
ಪ್ರತಿವರ್ಷ 40ರಿಂದ 45 ಚೀಲ ಭತ್ತ ಬೆಳೆಯುತ್ತಿದ್ದ ಜಮೀನಿನಲ್ಲಿ ಈ ಬಾರಿ ಕನಿಷ್ಠ 50 ಚೀಲ ಭತ್ತ ದೊರೆಯಬಹುದು ಎನ್ನುವಷ್ಟು ಫಸಲು ಉತ್ತಮವಾಗಿದೆ. ಆದರೆ ಭತ್ತದ ತೆನೆಗಳೆಲ್ಲ ಜೊಳ್ಳಾಗಿದ್ದು, ಇನ್ನೂ ಗಟ್ಟಿಯಾಗುತ್ತಿರುವ ಕಾಳುಗಳೂ ಜೊಳ್ಳಾಗುವ ಲಕ್ಷಣ ಕಂಡುಬರುತ್ತಿದೆ. 50 ಚೀಲವಿರಲಿ, ಕನಿಷ್ಠ ಪಕ್ಷ 10 ಚೀಲ ಒಳ್ಳೆಯ ಭತ್ತ ದೊರೆಯುವ ಸಾಧ್ಯತೆಯೂ ಕಂಡುಬರುತ್ತಿಲ್ಲ. ಅವರ ಭತ್ತದ ಆ ಪ್ರದೇಶದ ಇತರ ಹಲವರ ಭತ್ತದ ಬೆಳೆಯಲ್ಲೂ ಜೊಳ್ಳಾಗಿರುವದು ಕಂಡುಬರುತ್ತಿದೆ.
ಸಸಿನಾಟಿ, ಗೊಬ್ಬರ, ಇನ್ನಿತರ ಕೃಷಿಕಾರ್ಯಗಳ ವೆಚ್ಚವೂ ನಾರಾಯಣ ಮಡಿವಾಳರಿಗೆ ದೊರೆಯುವ ಭತ್ತದಿಂದ ಗಿಟ್ಟುವಂತಿಲ್ಲ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಮನುಷ್ಯನ ಒಳಿತನ್ನೇ ಧ್ಯಾನಿಸುತ್ತಾ……‌

ಒಂದು ಅಪರೂಪದ ಡೊಳ್ಳಿನ ಸ್ಫರ್ಧೆ ನೋಡಿದೆ. ನಮ್ಮದೇ ತಾಲೂಕಿನ ಅರೆಹಳ್ಳದ ತಂಡ ಎಷ್ಟು ಸೊಗಸಾಗಿ ಡೊಳ್ಳು ನೃತ್ಯ ಕುಣಿಯಿತು! ಕೊಡಗಿಬೈಲ್‌ ಎಂಬ ಹಳ್ಳಿಯ ಒಕ್ಕಲಿಗ...

ಶಿಕಾರಿಪುರ ಪ್ರಥಮ, ಸಿದ್ಧಾಪುರ ದ್ವಿತೀಯ, ಸಾಗರ ತೃತೀಯ

ಸಿದ್ದಾಪುರದಲ್ಲಿ ನಡೆದ ರಾಜ್ಯ ಮಟ್ಟದ ಹೊನಲು ಬೆಳಕಿನ ಮುಕ್ತ ರಾಜ್ಯ ಮಟ್ಟದ ಡೊಳ್ಳು ಕುಣಿತ ಸ್ಪರ್ಧೆಯಲ್ಲಿ ಬೀರಲಿಂಗೇಶ್ವರ ಡೊಳ್ಳಿನ ಸಂಘ ಅಂಬಾರಗೊಪ್ಪ ಶಿಕಾರಿಪುರ ಪ್ರಥಮ,ಸಿದ್ದಿವಿನಾಯಕ...

ಮಕ್ಕಳಿಗೆ ಆಸ್ತಿಮಾಡುವ ಬದಲು ಮಕ್ಕಳನ್ನೇ ಆಸ್ತಿಯನ್ನಾಗಿಸಿ

ಮಕ್ಕಳಿಗೆ ಆಸ್ತಿ,ಆಭರಣ ಮಾಡುವ ಬದಲು ಮಕ್ಕಳನ್ನೇ ಆಸ್ತಿಯನ್ನಾ ಗಿಸಿ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದ್ದಾರೆ. ಸಿದ್ಧಾಪುರ ಹಾಳದಕಟ್ಟಾ ಮತ್ತು ಕೊಳಗಿ ಪ್ರಾಥಮಿಕ ಶಾಲೆಗಳಲ್ಲಿ...

ಮಾಧ್ಯಮ ಪ್ರತಿನಿಧಿಗಳ ಸಂಘದ ಪದಾಧಿಕಾರಿಗಳ ಅಯ್ಕೆ

ಸಿದ್ದಾಪುರ: ತಾಲೂಕಿನಲ್ಲಿ ನೂತನವಾಗಿ ಅಸ್ಥಿತ್ವಕ್ಕೆ ಬಂದ ಮಾಧ್ಯಮ ಪ್ರತಿನಿಧಿಗಳ ಸಂಘ (ರಿ) ಸಿದ್ದಾಪುರ ದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಸಂಘದ ಅಧ್ಯಕ್ಷರಾಗಿ ಸಮಾಜಮುಖಿ...

ಮೂತ್ರ ವಿಸರ್ಜನೆಗೆ ತೆರಳಿದ್ದಾಗ ವಿದ್ಯುತ್ ಸ್ಪರ್ಶ; ಶಾಲಾ ಆವರಣದಲ್ಲೇ ಬಾಲಕಿ ಸಾವು

ಉತ್ತರ ಕನ್ನಡ: ಮೂತ್ರ ವಿಸರ್ಜನೆಗೆ ತೆರಳಿದ್ದಾಗ ವಿದ್ಯುತ್ ಸ್ಪರ್ಶ; ಶಾಲಾ ಆವರಣದಲ್ಲೇ ಬಾಲಕಿ ಸಾವು ಶಾಲೆಯ ಶೌಚಾಲಯದ ಬಳಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *