

ಸಿದ್ದಾಪುರದಲ್ಲಿ ಪ್ರವಾದಿ ಮುಹಮ್ಮದ್ ಪೈಗಂಬರ ಜಯಂತಿ ಸಂಭ್ರಮ
ಇಸ್ಲಾಂ ಧರ್ಮದ ಸ್ಥಾಪಕರಾದ ವಿಶ್ವಶಾಂತಿಯ ಮಾನವತಾವಾದಿ ಪ್ರವಾದಿ ಮುಹಮ್ಮದ್ ಈ ಭೂಮಿಯಲ್ಲಿ ತಮ್ಮ ಹೆಸರು ಮತ್ತು ಉಸಿರನ್ನು ಬಿಟ್ಟುಹೋಗಿದ್ದು,ಮಾನವ ಕುಲದ ಒಳಿತೇ ಅವರ ಏಕೈಕ ಗುರಿಯಾಗಿತ್ತು ಎಂದು ಸಾಮಾಜಿಕ ಕಾರ್ಯಕರ್ತ ಶಿರಸಿಯ ಉಪೇಂದ್ರ ಪೈ ಹೇಳಿದರು.
ಅವರು ಸ್ಥಳೀಯ ಈದ್ ಮಿಲಾದ್ ಕಮಿಟಿಯವರು ಶಾದಿಮಹಲ್ನಲ್ಲಿ ಸಂಜೆ ಹಮ್ಮಿಕೊಂಡಿದ್ದ ಸಾಂಸ್ಕøತಿಕ ಕಾರ್ಯಕ್ರವನ್ನು ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿ ಸ್ಥಾನದಿಂದ ಮಾತನಾಡಿದ ತಾ.ಪಂ.ಸದಸ್ಯ ನಾಸೀರ್ ಖಾನ್ ಪ್ರವಾದಿಗಳು ಬೋಧಿಸಿದ ವಿಶ್ವಬಾಂಧವ್ಯ ಮತ್ತು ಮಾನವ ಸಮಾನತೆಯ ಸಂದೇಶವು ಮಾನವಕುಲದ ಉದ್ಧಾರಕ್ಕೆ ನೀಡಿದ ಅಮೂಲ್ಯ ಕೊಡುಗೆಗಳಾಗಿವೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ರಾಜ್ಯ ಉತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕøತರಾದ ಹೂಡ್ಲಮನೆ ಕನ್ನಡ ಶಾಲೆಯ ಶಿಕ್ಷಕಿ ಸಂಶಿಯಾ ಅವರನ್ನು ಸನ್ಮಾನಿಸಲಾಯಿತು. ಅವರು ಮಾತನಾಡಿ ಹೆಣ್ಣುಮಕ್ಕಳಿಗೆ ಶಿಕ್ಷಣ ಕಲಿಸಿ ವಿದ್ಯಾವಂತರನ್ನಾಗಿ ಮಾಡಿದರೆ ಅವರು ಕೂಡಾ ಭವಿಷ್ಯನಲ್ಲಿ ಉತ್ತಮ ನಾಗರಿಕರಾಗಲು ಸಾಧ್ಯ ಎಂದು ಹೇಳಿದರು.
ಈದ್ ಮಿಲಾದ್ ಕಮಿಟಿ ಸಂಚಾಲಕ ಪ.ಪಂ.ಮಾಜೀ ಸದಸ್ಯ ಮುನವ್ವರ್ ಗುರಕಾರ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಮಸೀದಿ ಕಮಿಟಿ ಉಪಾಧ್ಯಕ್ಷರಾದ ಖಾದರ್ಬಾಷಾ,ಸದಸ್ಯ ರಿಯಾಜ್ ಹೊಸೂರು, ನೆಜ್ಜೂರ ಜುಮ್ಮಾ ಮಸೀದಿ ಕಾರ್ಯದರ್ಶಿ ಮೊಹಮ್ಮದ್ ಅಪ್ಫಾನ್,ಯುವಮುಖಂಡ ರಫೀಕ್ ಮೈದಿನ್ ಸಾಬ ಬೇಡ್ಕಣಿ ಉಪಸ್ಥಿತರಿದ್ದರು.
ತಬ್ರೇಜ್ ಖಾನ್ ಸ್ವಾಗತಿಸಿದರು. ಟಿ.ಕೆ.ಎಂ.ಆಜಾದ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅಸ್ಲಂ ಶೇಖ್ ನಿರ್ವಹಿಸಿದರು. ಇಬ್ರಾಹಿಂ ಮೀರಾಸಾಹೇಬ ವಂದಿಸಿದರು.
ನಂತರ ಮಕ್ಕಳಿಂದ ನಾತೇ ಷರೀಫ್ ಖವ್ವಾಲಿ ಕಾರ್ಯಕ್ರಮ ಜನಮನ ಸೂರೆಗೊಂಡಿತು.
ಮಧ್ಯಾಹ್ನ ಮುಸ್ಲಿಂ ಬಾಂಧವರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆ ನಡೆಸಿ ಷರ್ಮದ್ಷಾ ವಲಿಅಲ್ಲಾಹ್ ದರ್ಗಾಗÉ ತೆರಳಿ ವಿಶ್ವಶಾಂತಿಗಾಗಿ ಪ್ರಾರ್ಥನೆ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಮಸೀದಿ ಕಮಿಟಿ ದರ್ಗಾ ಕಮಿಟಿ ಸದಸ್ಯರು, ಜೆಡಿಎಸ್ ಮೈನಾರಿಟಿ ಜಿಲ್ಲಾಧ್ಯಕ್ಷ ಇಲಿಯಾಸ್ ಇಬ್ರಾಹಿಂ ಸಾಬ್,ತಾಮೀರ್ ಸೊಸೈಟಿಯ ವ್ಯವಸ್ಥಾಪಕ ಮೊಹಮ್ಮದ್ ಅಜೀಮ್ ಶೇಖ್,ಮೊದಲಾದವರು ಉಪಸ್ಥಿತರಿದ್ದರು.
ಸುಹಾಸ್ ಮಾಳ್ಕೋಡ ಜಿಲ್ಲಾ ಮಟ್ಟದಲ್ಲಿ ಪ್ರಥಮ
ಸಿದ್ದಾಪುರ ಪಟ್ಟಣದ ಸಿದ್ಧಿವಿನಾಯಕ ಪ್ರಾಥಮಿಕ ಶಾಲೆಯ ಐದನೇ ತರಗತಿಯ ವಿದ್ಯಾರ್ಥಿ ಕೋಲಶಿರ್ಸಿಯ ಸುಹಾಸ್ ಎನ್.ನಾಯ್ಕ, ಮಾಳ್ಕೋಡ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯ ಚಿತ್ರಕಲಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾನೆ.
ಜಿಲ್ಲಾಡಳಿತ,ಜಿಲ್ಲಾ ಪಂಚಾಯತ ಉತ್ತರ ಕನ್ನಡ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ,ಉಪನಿರ್ದೇಶಕರ ಕಾರ್ಯಾಲಯ ಶಿರ್ಸಿ ಶೈಕ್ಷಣಿಕ ಜಿಲ್ಲೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಜೋಯಿಡಾ ಗಳ ಆಶ್ರಯದಲ್ಲಿ ಜೋಯಿಡಾದಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ-2019-20 ರ ಹಿರಿಯರ ವಿಭಾಗದ ಚಿತ್ರಕಲೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಆಯ್ಕೆಯಾಗಿದ್ದಾನೆ.
ತಾಳಮದ್ದಲೆಗೆ ಜನಸ್ಫಂದನದ ಕೊರತೆ,ವಿಷಾದ
ಇಂದು ಎಲ್ಲ ಕಡೆ ಯಕ್ಷಗಾನ ಹಾಗೂ ತಾಳಮದ್ದಳೆ ಜನಪ್ರಿಯಗೊಳ್ಳುತ್ತಿದ್ದರೂ ಪ್ರೇಕ್ಷಕರ ಸಂಖ್ಯೆ ಕಡಿಮೆ ಆಗುತ್ತಿದೆ. ಅದರಲ್ಲಿಯೂ ತಾಳಮದ್ದಳೆಯಲ್ಲಿ ಜನರ ಆಸಕಿ ಕಡಿಮೆ ಆಗುತ್ತಿರುವುದು ವಿಶಾಧನೀಯ ಎಂದು ಸವ್ಯಸಾಚಿ ಯಕ್ಷಗಾನ ಕಲಾವಿದ ಅಶೋಕ ಭಟ್ಟ ಸಿದ್ದಾಪುರ ಹೇಳಿದರು.
ತಾಲೂಕಿನ ಗುಂಜಗೋಡ ಗಣಪತಿ ಹೆಗಡೆ ಅವರ ಮನೆಯಲ್ಲಿ ಭುವನಗಿರಿ ಭುವನೇಶ್ವರಿ ತಾಳಮದ್ದಳೆ ಕೂಟದವರಿಂದ ಮೋಹಿನಿ ಏಕಾದಶಿ ಪ್ರಯುಕ್ತ ಆಯೋಜಿಸಿದ್ದ ಯಕ್ಷಗಾನ ತಾಳಮದ್ದಳೆಯಲ್ಲಿ ಹಿರಿಯ ಯಕ್ಷಗಾನ ಕಲಾವಿದ ದಿ.ಅಳಗೋಡ ತಿಮ್ಮಣ್ಣ ಹೆಗಡೆ ಅವರ ಸಂಸ್ಮರಣೆ ಅಂಗವಾಗಿ ಆಯೋಜಿಸಿದ್ದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ತಾಳಮದ್ದಳೆಯಲ್ಲಿ ಅರ್ಥಧಾರಿಗಳು ಕಥೆಯನ್ನು ಹೇಳುವುದಕ್ಕಿಂತ ಪದ್ಯಕ್ಕೆ ಸಂಬಂಧ ಪಟ್ಟು ಅರ್ಥ ಹೇಳಿದರೆ ಹಾಗೂ ಚಿಕ್ಕ ಮತ್ತು ಚೊಕ್ಕದಾಗಿ ಅರ್ಥಹೇಳಿದರೆ ಪ್ರೇಕ್ಷಕರನ್ನು ಹೆಚ್ಚು ಆಕರ್ಷಿಸಬಹುದಾಗಿದೆ. ಯಕ್ಷಗಾನ ರಂಗದಿಂದ ನಾನು ಬಹಳಷ್ಟು ಕಲಿತುಕೊಂಡಿದ್ದೇನೆ ಎಂದು ಹೇಳಿದರು.
ಟಿಎಸ್ಎಸ್ ನಿರ್ದೇಶಕ ಆರ್.ಟಿ. ಹೆಗಡೆ ಅಳಗೋಡ, ತಾಲೂಕು ಪತ್ರಕರ್ತರ ಸಂಘದ ಕಾರ್ಯದರ್ಶಿ ರಮೇಶ ಹಾರ್ಸಿಮನೆ ಮಾತನಾಡಿದರು.ಭಾಗವತ ಕೇಶವ ಹೆಗಡೆ ಕೊಳಗಿ ಉಪಸ್ಥಿತರಿದ್ದರು.


