

ಇಂದಿನ ಸನ್ನಿವೇಶದಲ್ಲಿ ಯಕ್ಷಗಾನ ಕೇವಲ ಕುಣಿತದ ಕಲೆಯಾಗಿದೆ. ನೃತ್ಯವೇ ಪ್ರಧಾನ್ಯ ಪಡೆದುಕೊಂಡಿದೆ. ಮಾತುಗಾರಿಕೆ, ಹಾವ,ಭಾವ, ವೇಷಭೂಷಣವೂ ಯಕ್ಷಗಾನಕ್ಕೆ ಅಗತ್ಯ. ಇವೆಲ್ಲವೂ ಸಂಗ್ರಹವಾಗಿ ಪಾತ್ರವಾದಾಗ ಅದು ಇತಿಹಾಸ ಸೃಷ್ಟಿಸುತ್ತದೆ. ಆ ಕಾರಣದಿಂದಲೇ ಶಿವರಾಮ ಹೆಗಡೆ, ರಾಮಚಂದ್ರ ಹೆಗಡೆ ಚಿಟ್ಟಾಣಿ, ಶಂಭು ಹೆಗಡೆ ಅವರಂಥ ಹಲವು ಕಲಾವಿದರು ಜನಮಾನಸದಲ್ಲಿ ಉಳಿದಿದ್ದಾರೆ ಎಂದು ಪ್ರಸಿದ್ಧ ಯಕ್ಷಗಾನ ಕಲಾವಿದ ಗೋಡೆ ನಾರಾಯಣ ಹೆಗಡೆ ಹೇಳಿದರು.
ಅವರು ಕಶಿಗೆ-ಹೇಮಗಾರಿನಲ್ಲಿ ಕೇಶವನಾರಾಯಣ ಟ್ರಸ್ಟ, ಭುವನೇಶ್ವರಿ ತಾಳಮದ್ದಳೆ ಕೂಟ, ಅನಂತ ಯಕ್ಷಪ್ರತಿಷ್ಠಾನ ಇವುಗಳ ಸಹಯೋಗದಲ್ಲಿ ನಡೆದ ಹಿರಿಯರ ಸಂಸ್ಮರಣೆ, ಸಭಾಮಂದಿರ ಉದ್ಘಾಟನಾ ಸಮಾರಂಭದ ಸಂದರ್ಭದಲ್ಲಿ ತಮಗೆ ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿದರು
ಧಾರವಾಡದಲ್ಲಿ ನಡೆದ ತಮ್ಮಣ್ಣರ ಸಾಹಿತ್ಯಾವಲೋಕನ
ಸಂಧ್ಯಾ ವೇದಿಕೆ ಮತ್ತು ಗೆಳೆಯರ ಬಳಗಗಳು ಧಾರವಾ
ಡದಲ್ಲಿ ಆಯೋಜಿಸಿದ್ದ ತಮ್ಮಣ್ಣ ಬೀಗಾರ್ ಸಾಹಿತ್ಯಾವಲೋಕನ ಕಾರ್ಯಕ್ರಮ ಯಶಸ್ವಿಯಾಗಿದೆ.
ನಾಡಿನ ಗಣ್ಯರು ತಮ್ಮಣ್ಣ ಬೀಗಾರ್ ರ ಸಾಹಿತ್ಯದ ಕುರಿತು ಚರ್ಚಿಸಿ,ಅವರನ್ನು ಸನ್ಮಾನಿಸಿ ಶುಭ ಹಾರೈಸಿದ್ದಾರೆ. ವಿಶೇಶವೆಂದರೆ…. ಇದೇ ತಿಂಗಳು ಶಿಕ್ಷಕ ತಮ್ಮಣ್ಣ ನಿವೃತ್ತರಾಗಲಿದ್ದಾರೆ.
ನಿರಂತರ ಮೂರನೇ ವರ್ಷ ರಾಜ್ಯಮಟ್ಟಕ್ಕೆ ಆಯ್ಕೆಯಾದ ಹಳ್ಳಿಬೈಲ್ ನಾಟಕ ತಂಡ
ಸಿದ್ಧಾಪುರ ತಾಲೂಕಿನ ಹಳ್ಳಿಬೈಲ್ ಸರ್ಕಾರಿ ಪ್ರೌಢಶಾಲೆಯ ಮಕ್ಕಳು ಈ ವರ್ಷಕೂಡಾ ಜಿಲ್ಲಾ ಮಟ್ಟದಲ್ಲಿ ಪ್ರತಿಭಾಕಾರಂಜಿ ನಾಟಕ ಸ್ಫರ್ಧೆಯಲ್ಲಿ ಮೊದಲಸ್ಥಾನ ಗಳಿಸುವ ಮೂಲಕ ನಿರಂತರ ಮೂರನೇ ಬಾರಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
