

ತಾಳಮದ್ದಲೆಗೆ ಜನಸ್ಫಂದನದ ಕೊರತೆ,ವಿಷಾದ
ಇಂದು ಎಲ್ಲ ಕಡೆ ಯಕ್ಷಗಾನ ಹಾಗೂ ತಾಳಮದ್ದಳೆ ಜನಪ್ರಿಯಗೊಳ್ಳುತ್ತಿದ್ದರೂ ಪ್ರೇಕ್ಷಕರ ಸಂಖ್ಯೆ ಕಡಿಮೆ ಆಗುತ್ತಿದೆ. ಅದರಲ್ಲಿಯೂ ತಾಳಮದ್ದಳೆಯಲ್ಲಿ ಜನರ ಆಸಕಿ ಕಡಿಮೆ ಆಗುತ್ತಿರುವುದು ವಿಶಾಧನೀಯ ಎಂದು ಸವ್ಯಸಾಚಿ ಯಕ್ಷಗಾನ ಕಲಾವಿದ ಅಶೋಕ ಭಟ್ಟ ಸಿದ್ದಾಪುರ ಹೇಳಿದರು.
ತಾಲೂಕಿನ ಗುಂಜಗೋಡ ಗಣಪತಿ ಹೆಗಡೆ ಅವರ ಮನೆಯಲ್ಲಿ ಭುವನಗಿರಿ ಭುವನೇಶ್ವರಿ ತಾಳಮದ್ದಳೆ ಕೂಟದವರಿಂದ ಮೋಹಿನಿ ಏಕಾದಶಿ ಪ್ರಯುಕ್ತ ಆಯೋಜಿಸಿದ್ದ ಯಕ್ಷಗಾನ ತಾಳಮದ್ದಳೆಯಲ್ಲಿ ಹಿರಿಯ ಯಕ್ಷಗಾನ ಕಲಾವಿದ ದಿ.ಅಳಗೋಡ ತಿಮ್ಮಣ್ಣ ಹೆಗಡೆ ಅವರ ಸಂಸ್ಮರಣೆ ಅಂಗವಾಗಿ ಆಯೋಜಿಸಿದ್ದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ತಾಳಮದ್ದಳೆಯಲ್ಲಿ ಅರ್ಥಧಾರಿಗಳು ಕಥೆಯನ್ನು ಹೇಳುವುದಕ್ಕಿಂತ ಪದ್ಯಕ್ಕೆ ಸಂಬಂಧ ಪಟ್ಟು ಅರ್ಥ ಹೇಳಿದರೆ ಹಾಗೂ ಚಿಕ್ಕ ಮತ್ತು ಚೊಕ್ಕದಾಗಿ ಅರ್ಥಹೇಳಿದರೆ ಪ್ರೇಕ್ಷಕರನ್ನು ಹೆಚ್ಚು ಆಕರ್ಷಿಸಬಹುದಾಗಿದೆ. ಯಕ್ಷಗಾನ ರಂಗದಿಂದ ನಾನು ಬಹಳಷ್ಟು ಕಲಿತುಕೊಂಡಿದ್ದೇನೆ ಎಂದು ಹೇಳಿದರು.
ಟಿಎಸ್‍ಎಸ್ ನಿರ್ದೇಶಕ ಆರ್.ಟಿ. ಹೆಗಡೆ ಅಳಗೋಡ, ತಾಲೂಕು ಪತ್ರಕರ್ತರ ಸಂಘದ ಕಾರ್ಯದರ್ಶಿ ರಮೇಶ ಹಾರ್ಸಿಮನೆ ಮಾತನಾಡಿದರು.ಭಾಗವತ ಕೇಶವ ಹೆಗಡೆ ಕೊಳಗಿ ಉಪಸ್ಥಿತರಿದ್ದರು.
ಗೋಡೆ ನಾರಾಯಣ ಹೆಗಡೆಯವರಿಗೆ ಸನ್ಮಾನ
ಇಂದಿನ ಸನ್ನಿವೇಶದಲ್ಲಿ ಯಕ್ಷಗಾನ ಕೇವಲ ಕುಣಿತದ ಕಲೆಯಾಗಿದೆ. ನೃತ್ಯವೇ ಪ್ರಧಾನ್ಯ ಪಡೆದುಕೊಂಡಿದೆ. ಮಾತುಗಾರಿಕೆ, ಹಾವ,ಭಾವ, ವೇಷಭೂಷಣವೂ ಯಕ್ಷಗಾನಕ್ಕೆ ಅಗತ್ಯ. ಇವೆಲ್ಲವೂ ಸಂಗ್ರಹವಾಗಿ ಪಾತ್ರವಾದಾಗ ಅದು ಇತಿಹಾಸ ಸೃಷ್ಟಿಸುತ್ತದೆ. ಆ ಕಾರಣದಿಂದಲೇ ಶಿವರಾಮ ಹೆಗಡೆ, ರಾಮಚಂದ್ರ ಹೆಗಡೆ ಚಿಟ್ಟಾಣಿ, ಶಂಭು ಹೆಗಡೆ ಅವರಂಥ ಹಲವು ಕಲಾವಿದರು ಜನಮಾನಸದಲ್ಲಿ ಉಳಿದಿದ್ದಾರೆ ಎಂದು ಪ್ರಸಿದ್ಧ ಯಕ್ಷಗಾನ ಕಲಾವಿದ ಗೋಡೆ ನಾರಾಯಣ ಹೆಗಡೆ ಹೇಳಿದರು.
ಅವರು ಕಶಿಗೆ-ಹೇಮಗಾರಿನಲ್ಲಿ ಕೇಶವನಾರಾಯಣ ಟ್ರಸ್ಟ, ಭುವನೇಶ್ವರಿ ತಾಳಮದ್ದಳೆ ಕೂಟ, ಅನಂತ ಯಕ್ಷಪ್ರತಿಷ್ಠಾನ ಇವುಗಳ ಸಹಯೋಗದಲ್ಲಿ ನಡೆದ ಹಿರಿಯರ ಸಂಸ್ಮರಣೆ, ಸಭಾಮಂದಿರ ಉದ್ಘಾಟನಾ ಸಮಾರಂಭದ ಸಂದರ್ಭದಲ್ಲಿ ತಮಗೆ ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿದರು
ಧಾರವಾಡದಲ್ಲಿ ನಡೆದ ತಮ್ಮಣ್ಣರ ಸಾಹಿತ್ಯಾವಲೋಕನ
ಸಂಧ್ಯಾ ವೇದಿಕೆ ಮತ್ತು ಗೆಳೆಯರ ಬಳಗಗಳು ಧಾರವಾ
ಡದಲ್ಲಿ ಆಯೋಜಿಸಿದ್ದ ತಮ್ಮಣ್ಣ ಬೀಗಾರ್ ಸಾಹಿತ್ಯಾವಲೋಕನ ಕಾರ್ಯಕ್ರಮ ಯಶಸ್ವಿಯಾಗಿದೆ.
ನಾಡಿನ ಗಣ್ಯರು ತಮ್ಮಣ್ಣ ಬೀಗಾರ್ ರ ಸಾಹಿತ್ಯದ ಕುರಿತು ಚರ್ಚಿಸಿ,ಅವರನ್ನು ಸನ್ಮಾನಿಸಿ ಶುಭ ಹಾರೈಸಿದ್ದಾರೆ. ವಿಶೇಶವೆಂದರೆ…. ಇದೇ ತಿಂಗಳು ಶಿಕ್ಷಕ ತಮ್ಮಣ್ಣ ನಿವೃತ್ತರಾಗಲಿದ್ದಾರೆ.
