

ಸಂಧ್ಯಾ ವೇದಿಕೆ ಮತ್ತು ಗೆಳೆಯರ ಬಳಗಗಳು ಧಾರವಾ
ಡದಲ್ಲಿ ಆಯೋಜಿಸಿದ್ದ ತಮ್ಮಣ್ಣ ಬೀಗಾರ್ ಸಾಹಿತ್ಯಾವಲೋಕನ ಕಾರ್ಯಕ್ರಮ ಯಶಸ್ವಿಯಾಗಿದೆ.
ನಾಡಿನ ಗಣ್ಯರು ತಮ್ಮಣ್ಣ ಬೀಗಾರ್ ರ ಸಾಹಿತ್ಯದ ಕುರಿತು ಚರ್ಚಿಸಿ,ಅವರನ್ನು ಸನ್ಮಾನಿಸಿ ಶುಭ ಹಾರೈಸಿದ್ದಾರೆ. ವಿಶೇಶವೆಂದರೆ…. ಇದೇ ತಿಂಗಳು ಶಿಕ್ಷಕ ತಮ್ಮಣ್ಣ ನಿವೃತ್ತರಾಗಲಿದ್ದಾರೆ.
ನಿರಂತರ ಮೂರನೇ ವರ್ಷ ರಾಜ್ಯಮಟ್ಟಕ್ಕೆ ಆಯ್ಕೆಯಾದ ಹಳ್ಳಿಬೈಲ್ ನಾಟಕ ತಂಡ
ಸಿದ್ಧಾಪುರ ತಾಲೂಕಿನ ಹಳ್ಳಿಬೈಲ್ ಸರ್ಕಾರಿ ಪ್ರೌಢಶಾಲೆಯ ಮಕ್ಕಳು ಈ ವರ್ಷಕೂಡಾ ಜಿಲ್ಲಾ ಮಟ್ಟದಲ್ಲಿ ಪ್ರತಿಭಾಕಾರಂಜಿ ನಾಟಕ ಸ್ಫರ್ಧೆಯಲ್ಲಿ ಮೊದಲಸ್ಥಾನ ಗಳಿಸುವ ಮೂಲಕ ನಿರಂತರ ಮೂರನೇ ಬಾರಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಶಿಕ್ಷಕ ಗೋಪಾಲನಾಯ್ಕ ಭಾಶಿ ವಿರಚಿತ ವೀರಮಯೂರ ನಾಟಕಕ್ಕೆ ಉತ್ತರಕನ್ನಡದ ಹಾಲಕ್ಕಿ ಬುಡಕಟ್ಟಿನ ವಸ್ತ್ರವಿನ್ಯಾಸದ ಮೂಲಕ ವಿಶಿಷ್ಟವಾಗಿ ನಿರೂಪಿಸಿದ ಈ ನಾಟಕ ರಾಜ್ಯಮಟ್ಟಕ್ಕೆ ಆಯ್ಕೆಯಾಗುವ ಮೂಲಕ ಗ್ರಾಮೀಣ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಎಲ್ಲಾ ವಿದ್ಯಾರ್ಥಿಗಳನ್ನು ಮೀರಿಸಿ ಗೆದ್ದಂತಾಗಿದೆ.
ಇದೇ ಪ್ರೌಢಶಾಲೆಯ ತಂಡ ಕಳೆದ ವರ್ಷ ಶಾಂತಲಾ ದೇವಿ ನಾಟಕವನ್ನೂ ಇದೇ ವೈಶಿಷ್ಟ್ಯತೆಯೊಂದಿಗೆ ಪ್ರದರ್ಶಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿತ್ತು.



