

ಸಿದ್ದಾಪುರ ಪಟ್ಟಣದ ಸಿದ್ಧಿವಿನಾಯಕ ಪ್ರಾಥಮಿಕ ಶಾಲೆಯ ಐದನೇ ತರಗತಿಯ ವಿದ್ಯಾರ್ಥಿ ಕೋಲಶಿರ್ಸಿಯ ಸುಹಾಸ್ ಎನ್.ನಾಯ್ಕ, ಮಾಳ್ಕೋಡ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯ ಚಿತ್ರಕಲಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾನೆ.
ಜಿಲ್ಲಾಡಳಿತ,ಜಿಲ್ಲಾ ಪಂಚಾಯತ ಉತ್ತರ ಕನ್ನಡ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ,ಉಪನಿರ್ದೇಶಕರ ಕಾರ್ಯಾಲಯ ಶಿರ್ಸಿ ಶೈಕ್ಷಣಿಕ ಜಿಲ್ಲೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಜೋಯಿಡಾ ಗಳ ಆಶ್ರಯದಲ್ಲಿ ಜೋಯಿಡಾದಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ-2019-20 ರ ಹಿರಿಯರ ವಿಭಾಗದ ಚಿತ್ರಕಲೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಆಯ್ಕೆಯಾಗಿದ್ದಾನೆ.
ಗೋಡೆ ನಾರಾಯಣ ಹೆಗಡೆಯವರಿಗೆ ಸನ್ಮಾನ
ಇಂದಿನ ಸನ್ನಿವೇಶದಲ್ಲಿ ಯಕ್ಷಗಾನ ಕೇವಲ ಕುಣಿತದ ಕಲೆಯಾಗಿದೆ. ನೃತ್ಯವೇ ಪ್ರಧಾನ್ಯ ಪಡೆದುಕೊಂಡಿದೆ. ಮಾತುಗಾರಿಕೆ, ಹಾವ,ಭಾವ, ವೇಷಭೂಷಣವೂ ಯಕ್ಷಗಾನಕ್ಕೆ ಅಗತ್ಯ. ಇವೆಲ್ಲವೂ ಸಂಗ್ರಹವಾಗಿ ಪಾತ್ರವಾದಾಗ ಅದು ಇತಿಹಾಸ ಸೃಷ್ಟಿಸುತ್ತದೆ. ಆ ಕಾರಣದಿಂದಲೇ ಶಿವರಾಮ ಹೆಗಡೆ, ರಾಮಚಂದ್ರ ಹೆಗಡೆ ಚಿಟ್ಟಾಣಿ, ಶಂಭು ಹೆಗಡೆ ಅವರಂಥ ಹಲವು ಕಲಾವಿದರು ಜನಮಾನಸದಲ್ಲಿ ಉಳಿದಿದ್ದಾರೆ ಎಂದು ಪ್ರಸಿದ್ಧ ಯಕ್ಷಗಾನ ಕಲಾವಿದ ಗೋಡೆ ನಾರಾಯಣ ಹೆಗಡೆ ಹೇಳಿದರು.

