

ಸಿದ್ಧಾಪುರ ತಾಲೂಕಾ ಬಿ.ಜೆ.ಪಿ.ಘಟಕದ ಅಧ್ಯಕ್ಷರಾಗಿ ಜಿ.ಪಂ. ಸದಸ್ಯ ನಾಗರಾಜ್ ನಾಯ್ಕ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಇಲ್ಲಿನ ಬಾಲಭವನದಲ್ಲಿ ಸಿದ್ದಾಪುರ ಮಂಡಲದ ಬಿಜೆಪಿಯ ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಿತು. ನಿಕಟಪೂರ್ವ ಮಂಡಲ ಅಧ್ಯಕ್ಷ ಎಮ್ ವಿ ಭಟ್ಟ ತಟ್ಟಿಕೈ ನೂತನ ಅಧ್ಯಕ್ಷರಾದ ನಾಗರಾಜ ನಾಯ್ಕ ಬೇಡ್ಕಣಿ ಯವರಿಗೆ ಧ್ವಜವನ್ನು ಹಸ್ತಾಂತರಿಸುವ ಮೂಲಕ ಅಧಿಕಾರವನ್ನು ಹಸ್ತಾಂತರಿಸಿದರು.
ಆಯ್ಕೆ ಪ್ರಕ್ರಿಯೆಯ ಚುನಾವಣಾಧಿಕಾರಿಗಳಾಗಿ ಜಿಲ್ಲೆಯಿಂದ ನಂದನ ಸಾಗರ ಹಾಗೂ ಸಿದ್ದಾಪುರ ತಾಲೂಕಿನಿಂದ ಮಾರುತಿ ನಾಯ್ಕ ಹೊಸೂರು ಭಾಗವಹಿಸಿ ಚುನಾವಣಾ ಪ್ರಕ್ರಿಯೆಯನ್ನು ನಡೆಯಿಸಿ ಕೊಟ್ಟರು.
ಮಂಡಲ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ನಾಗರಾಜ ನಾಯ್ಕ ಮಾತನಾಡುತ್ತ ಎಲ್ಲ ಕಾರ್ಯಕರ್ತರ ಸಹಕಾರದೊಂದಿಗೆ ಹಿರಿಯರ ಮಾರ್ಗದರ್ಶನದೊಂದಿಗೆ ಪಕ್ಷವನ್ನು ಮುನ್ನಡೆಸುತ್ತೇನೆ ಎಂದು ಹೇಳಿದರು.
ಅಧಿಕಾರ ಹಸ್ತಾಂತರ ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಕೆ ಜಿ ನಾಯ್ಕ ಹಣಜೀಬೈಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್ ಡಿ ಹೆಗಡೆ ಜಾನ್ಮನೆ. ಜಿಲ್ಲಾ ಪಂಚಾಯತ ಸದಸ್ಯÀ ಎಮ್. ಜಿ. ಹೆಗಡೆ ಗೆಜ್ಜೆ ಭಾಗವಹಿಸಿದ್ದರು.ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಗುರುರಾಜ ಶಾನಭಾಗ ಮತ್ತು ವಿನಯ ಹೊನ್ನೆಗುಂಡಿ ನಿರ್ವಹಿಸಿದರು.
ಎತ್ತ ಸಾಗುತ್ತಿದೆ ಭಾರತ?
ನಿನ್ನೆ ಮಂಗಳವಾರ ಸಿದ್ಧಾಪುರ ತಾಲೂಕಿನ ವಾಹನ ಚಾಲಕ ಮತ್ತು ಮಾಲಕರ ಸಂಘದ ಸದಸ್ಯರು ಸಿದ್ಧಾಪುರ-ಕುಮಟಾ ರಸ್ತೆಯನ್ನು ದುರಸ್ಥಿ ಮಾಡುವ ಮೂಲಕ ಪ್ರತಿಭಟನೆ ಮಾಡಿದರು.
ಇವರ ಪ್ರತಿಭಟನೆಗೆ ಕಾರಣ ಕಳೆದ ಒಂದು ವರ್ಷದಿಂದ ಈ ರಸ್ತೆ ದುರಸ್ಥಿ ಬಗ್ಗೆ ಹೇಳಿ, ದೂರು ನೀಡಿದರೂ ಅಧಿಕಾರಿಗಳು ದುರಸ್ಥಿ ಮಾಡಿಲ್ಲ, ಜನಪ್ರತಿನಿಧಿಗಳು ಯಾಕೆ ಎಂದು ಕೇಳಿಲ್ಲ. ಇಂಥ ಅವ್ಯವಸ್ಥೆ ಮತ್ತು ಜನಪ್ರತಿನಿಧಿಗಳ ಸೋಗಲಾಡಿತನ,ಅವಿವೇಕಕ್ಕೆ ಒದೆಯುವಂತೆ ಈ ಸಂಘದ ಸದಸ್ಯರು ರಸ್ತೆ ರಿಪೇರಿಗೆ ಪ್ರತಿಭಟನೆ ಎಂದು ಕರೆದು ತಮ್ಮ ಕರ್ತವ್ಯ ಮಾಡಿದರು.

