

ಸಕಲ ಜೀವಿಗಳಿಗೆ ಲೇಸು ಬಯಸುವ ದಾಸತತ್ವ ಪಾಲನೆಯಿಂದ ಸಮಾಜದ ಸುಖ,ಶಾಂತಿ,ಅಭಿವೃದ್ಧಿ ಸಾಧ್ಯ ಎಂದು ಪ್ರತಿಪಾದಿಸಿರುವ ತಹಸಿಲ್ಧಾರ ಮಂಜುಳಾ ಭಜಂತ್ರಿ ಜಾತಿವಿನಾಶದಿಂದ ಸಮಾನತೆ ಸಾಧ್ಯ ಜಾತಿ ವಿನಾಶಕ್ಕೆ ಪ್ರಯತ್ನಿಸುವ ಮೂಲಕ ಕನಕದಾಸರು ಸಮಾಜಪರಿವರ್ತನೆಯ ಕೆಲಸ ಮಾಡಿದ್ದಾರೆ ಎಂದರು.
ಅವರು ತಹಸಿಲ್ಧಾರ ಕಛೇರಿಯಲ್ಲಿ ನಡೆದ ಸಂತ ಕನಕದಾಸ ಜಯಂತಿ ಆಚರಣೆಯ ದೀಪ ಬೆಳಗಿಸಿ ಮಾತನಾಡಿದರು. ಉಪಸ್ಥಿತರಿದ್ದ ಅಧಿಕಾರಿಗಳು ಕನಕದಾಸರ ಭಾವಚಿತ್ರಕ್ಕೆ ಪುಷ್ಫಾರ್ಚನೆ ಮಾಡಿದರು.
ನಾಗರಿಕರಿಗೊಂದು ಸವಾಲ್ ಪ್ರಾರಂಭ
ಆರೋಗ್ಯ ಇಲಾಖೆಯ ಅಭಿಯಾನ ನಾಗರಿಕರಿಗೊಂದು ಸವಾಲ್ ಗೆ ಇಂದು ಚಾಲನೆ ನೀಡಲಾಯಿತು. ಜಿ.ಪಂ.ಉತ್ತರಕನ್ನಡ ಮತ್ತು ತಾಲೂಕಾ ಆರೊಗ್ಯಾಧಿಕಾರಿಗಳ ಕಾರ್ಯಾಲಯಗಳ ಸಂಯುಕ್ತ ಆಶ್ರಯದ ಈ ಕಾರ್ಯಕ್ರಮಕ್ಕೆ ಇಂದು ಚಾಲನೆ ನೀಡಿದ ತಾ.ಪಂ.ಕಾ.ನಿ.ಅ. ಪ್ರಕಾಶ್ ರಾವ್ ನಗರವಾಸಿಗಳಿಗಿಂತ ಹೆಚ್ಚಾಗಿ ಗ್ರಾಮೀಣ ಜನರಿಗೆ ಮತ್ತು ಎಳೆಯರಿಗೆ ಆರೋಗ್ಯ ಜಾಗೃತಿಮಾಡುವ ಅವಶ್ಯಕತೆಯಿದ್ದು ನಾಗರಿಕರಿಗೊಂದು ಸವಾಲ್ ಈ ಕೊರತೆ ತುಂಬಲಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಹಸಿಲ್ದಾರ ಮಂಜುಳ ಭಜಂತ್ರಿ ಮಾತನಾಡಿ ವೈಯಕ್ತಿಕ ಸ್ವಚ್ಛತೆ ಜೊತೆಗೆ ನಮ್ಮ ಪರಿಸರ ಶುದ್ಧವಾಗಿದ್ದಾಗ ಮಾತ್ರ ರೋಗ ರುಜಿನಗಳಿಂದ ಮುಕ್ತಿ ಸಾಧ್ಯ ಎಂದರು.
ನಾಗರಿಕರಿಗೊಂದು ಸವಾಲ್ ಬಗ್ಗೆ ವಿವರಿಸಿದ ತಾಲೂಕಾ ಆರೋಗ್ಯಾಧಿಕಾರಿ ಡಾ. ಲಕ್ಷ್ಮೀಕಾಂತ್ ನಾಯ್ಕ ಸೊಳ್ಳೆಗಳಿಂದ ಬರುವ ರೋಗಗಳು ಮತ್ತು ಸೊಳ್ಳೆ ಉತ್ಫಾದನೆಯಾಗುವ ಸಾಧ್ಯತೆಗಳನ್ನು ಪ್ರಾತ್ಯಕ್ಷಿಕೆಗಳೊಂದಿಗೆ ವಿವರಿಸಿದರು.


