

ಸಿರಿಗನ್ನಡ ವೇದಿಕೆ, ಪ್ರಯೋಗ ಸ್ವಯಂಸೇವಾ ಸಂಸ್ಥೆ ಇವುಗಳ ಸಹಯೋಗದಲ್ಲಿ ನ.16ರ ಸಂಜೆ 4.30ಕ್ಕೆ ರಾಜ್ಯೋತ್ಸವ ಕವಿಗೋಷ್ಠಿಯನ್ನು ಪಟ್ಟಣದ ಲಯನ್ಸ ಬಾಲಭವನದಲ್ಲಿ ಆಯೋಜಿಸಲಾಗಿದೆ.
ಸುಬ್ರಾಯ ಮತ್ತಿಹಳ್ಳಿ, ತಮ್ಮಣ್ಣ ಬೀಗಾರ, ಕಾಶ್ಯಪ ಪರ್ಣಕುಟಿ, ಗಂಗಾಧರ ಕೊಳಗಿ ಉಪಸ್ಥಿತರಿರುತ್ತಿದ್ದು ಕವಿಗಳಾದ ಗೋಪಾಲ ನಾಯ್ಕ ಭಾಶಿ, ಮಂಜುನಾಥ ಹೆಗಡೆ ಹೊಸ್ಕೊಪ್ಪ, ರವೀಂದ್ರಭಟ್ ಬಳಗುಳಿ, ಸುಧಾರಾಣಿ ನಾಯ್ಕ, ಮಾರುತಿ ಆಚಾರಿ,ನೂತನಾ ನಾಯ್ಕ, ಬಸವರಾಜ ಬಿಸ್ನಾಳ, ನಾಗರಾಜಪ್ಪ ಎಚ್., ನಾಗಶ್ರೀ ಹೆಗಡೆ, ಮನೋಜಕುಮಾರ ಪಿ.ಎಚ್.ಕವನ ವಾಚನ ಮಾಡಲಿದ್ದಾರೆ. ಆಸಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂದು ಸಂಘಟಕರು ಕೋರಿದ್ದಾರೆ.
ದಾಸತತ್ವ ಪಾಲನೆಯಿಂದ ಸುಖ,ಶಾಂತಿ
ಸಕಲ ಜೀವಿಗಳಿಗೆ ಲೇಸು ಬಯಸುವ ದಾಸತತ್ವ ಪಾಲನೆಯಿಂದ ಸಮಾಜದ ಸುಖ,ಶಾಂತಿ,ಅಭಿವೃದ್ಧಿ ಸಾಧ್ಯ ಎಂದು ಪ್ರತಿಪಾದಿಸಿರುವ ತಹಸಿಲ್ಧಾರ ಮಂಜುಳಾ ಭಜಂತ್ರಿ ಜಾತಿವಿನಾಶದಿಂದ ಸಮಾನತೆ ಸಾಧ್ಯ ಜಾತಿ ವಿನಾಶಕ್ಕೆ ಪ್ರಯತ್ನಿಸುವ ಮೂಲಕ ಕನಕದಾಸರು ಸಮಾಜಪರಿವರ್ತನೆಯ ಕೆಲಸ ಮಾಡಿದ್ದಾರೆ ಎಂದರು.
ಅವರು ತಹಸಿಲ್ಧಾರ ಕಛೇರಿಯಲ್ಲಿ ನಡೆದ ಸಂತ ಕನಕದಾಸ ಜಯಂತಿ ಆಚರಣೆಯ ದೀಪ ಬೆಳಗಿಸಿ ಮಾತನಾಡಿದರು. ಉಪಸ್ಥಿತರಿದ್ದ ಅಧಿಕಾರಿಗಳು ಕನಕದಾಸರ ಭಾವಚಿತ್ರಕ್ಕೆ ಪುಷ್ಫಾರ್ಚನೆ ಮಾಡಿದರು.
