

ಯೋಗ ಫೆಡರೇಶನ್ ಆಫ್ ಇಂಡಿಯಾ ರಾಜಸ್ಥಾನದ ಜೈಪುರದಲ್ಲಿ ನ.9ರಿಂದ 12ವರೆಗೆ ನಡೆಸಿದ ರಾಷ್ಟ್ರಮಟ್ಟದ ಯೋಗ ಸ್ಪರ್ಧೆಯಲ್ಲಿ ಸಿದ್ದಾಪುರದ ಮಂಜುನಾಥ ಎಂ.ನಾಯ್ಕ ದ್ವಿತೀಯ ಸ್ಥಾನಪಡೆ ದುಕೊಂಡಿದ್ದಾರೆ.
ಯೋಗಸ್ಪರ್ಧೆಯಲ್ಲಿ ಸುಮಾರು 800ಕ್ಕೂ ಹೆಚ್ಚು ಸ್ಪರ್ಧಾಳುಗಳು ಪಾಲ್ಗೊಂಡಿದ್ದರು. ಉತ್ತರ ಕನ್ನಡ ಜಿಲ್ಲೆಯಿಂದ 8ಜನಪಾಲ್ಗೊಂಡಿದ್ದು ಅದರಲ್ಲಿ ನಾಲ್ಕು ಜನ ಸಿದ್ದಾಪುರದವರಾಗಿದ್ದಾರೆ.
ಶಿರಸಿಯ ಮಂಗಳಗೌರಿ ಭಟ್ಟ 5ನೇ ಸ್ಥಾನಪಡೆದುಕೊಂಡಿದ್ದಾರೆ.
ಸಿದ್ದಾಪುರದ ಮಂಜುನಾಥ ಎಂ.ನಾಯ್ಕ, ಅವರ ಪತ್ನಿ ಶಿಲ್ಪಾ ಎಂ.ನಾಯ್ಕ, ಪುಟ್ಟರಾಜು ಗೌಡ ಹಾಗೂ ಅವರ ಪತ್ನಿ ಸಾವಿತ್ರಿ ಪಿ.ಗೌಡ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.
ಈ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನಪಡೆದು ಸಿದ್ದಾಪುರಕ್ಕೆ ಆಗಮಿಸಿದ ಮಂಜುನಾಥ ಎಂ.ನಾಯ್ಕ ಹಾಗೂ ಎಲ್ಲ ಸ್ಪರ್ಧಾಳುಗಳನ್ನು ಪಟ್ಟಣದ ಹೊಸೂರು ವೃತ್ತದಲ್ಲಿ ಸ್ಥಳೀಯ ಫತಂಜಲಿ ಯೋಗ ಸಮಿತಿಯ ವಿ.ಎಂ.ಹೆಗಡೆ, ಎ.ಆರ್.ನಾಯ್ಕ, ಸುದರ್ಶನ ಪಿಳ್ಳೆ, ವೀಣಾ ಆನಂದ ಶೇಟ್, ಸಾವಿತ್ರಿ ಅವದಾನಿ, ಲಕ್ಷ್ಮಣ ಐ. ನಾಯ್ಕ, ವಾಸುದೇವ ಶೇಟ್, ಪ್ರಶಾಂತ ರೋಖಡೆ ಹಾಗೂ ಸಾರ್ವಜನಿಕರು ಮಾಲಾರ್ಪಣೆ ಮಾಡಿ ಸ್ವಾಗತಕೋರಿದರು.
2019 ನೇ ಸಾಲಿನ ‘ಮೋಹನ ಕುರುಡಗಿ ಕಾವ್ಯ ಪ್ರಶಸ್ತಿ’ಗೆ ಕವನ ಸಂಕಲನ ಆಹ್ವಾನ
ಕನ್ನಡದ ಕವಿ ಮೋಹನ ಕುರುಡಗಿಯವರ ನೆನಪಿನಲ್ಲಿ ಕೊಡಲಾಗುವ ‘ಮೋಹನ ಕುರುಡಗಿ ಕಾವ್ಯ ಪ್ರಶಸ್ತಿ-2019’ ಕ್ಕಾಗಿ ಕನ್ನಡದ ಕವಿಗಳಿಂದ 2019 ನೇ ಸಾಲಿನಲ್ಲಿ ಪ್ರಥಮ ಮುದ್ರಣವಾಗಿ ಪ್ರಕಟವಾದ ಕವನ ಸಂಕಲನಗಳನ್ನು ಆಹ್ವಾನಿಸಲಾಗಿದೆ. ಅನುವಾದಿತ ಕವನ ಸಂಕಲನಗಳು ಬೇಡ. ಈ ಪ್ರಶಸ್ತಿಯು ರೂ. 10,000 ನಗದು, ಪ್ರಶಸ್ತಿ ಫಲಕ ಮತ್ತು ಸನ್ಮಾನಗಳನ್ನೊಳಗೊಂಡಿದೆ.
ಆಸಕ್ತರು ತಮ್ಮ ಕವನ ಸಂಕಲನದ ಎರಡು ಪ್ರತಿಗಳನ್ನು ಕಳಿಸಲು ಕೋರಲಾಗಿದೆ.
ವಿ.ಸೂ: ಯಾವುದೇ ಕಾರಣಕ್ಕೂ ಕವನ ಸಂಕಲನದ ಪ್ರತಿಗಳನ್ನು ಹಿಂದಿರುಗಿಸಲಾಗುವುದಿಲ್ಲ ಮತ್ತು ನಿರ್ಣಾಯಕರ ನಿರ್ಣಯವೇ ಅಂತಿಮವಾಗಿರುತ್ತದೆ. ಕವನ ಸಂಕಲನ ಕಳಿಸಲು ಕೊನೆಯ ದಿನಾಂಕ: 10 ಜನವರಿ 2020ಕವನ ಸಂಕಲನ ಕಳಿಸಬೇಕಾದ ವಿಳಾಸ: ಶ್ರೀ ಮಂಜುನಾಥ ಟಿ. ಪಟಗಾರ, ಅಧ್ಯಕ್ಷರು, ನವಚೇತನ ಸಾಂಸ್ಕøತಿಕ ಕಲಾ ಸಾಹಿತ್ಯ ವೇದಿಕೆ, ಬಾಳಗಿಮನೆ, ಯಲ್ಲಾಪುರ-581359, ಉತ್ತರ ಕನ್ನಡ ಜಿಲ್ಲೆ; ಮೊ: 9449148467

