

ಯಲ್ಲಾಪುರ ಕ್ಷೇತ್ರದ ಉಪ ಚುನಾವಣೆ ರಾಜಕೀಯ ವ್ಯಭಿಚಾರದ ದಿಗ್ಧರ್ಶನ ಮಾಡುತ್ತಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆಗಳಾಗುತ್ತಿವೆ.
01- ವಿಧಾನಸಭಾ ಅಧ್ಯಕ್ಷರಾಗಿರುವ ವಿಶ್ವೇಶ್ವರ ಹೆಗಡೆವರಿಗೆ ರಾಜಕೀಯ ಅವಕಾಶ
02- ವಿ.ಎಸ್.ಪಾಟೀಲ್ ದ್ವಿಪಾತ್ರ
03- ಅನಂತನ ಅವಾಂತರದ ಹಿಂದಿದೆ ಲೆಕ್ಕಾಚಾರ
04-ಆಳ್ವ ಬಣಕ್ಕೆ ಬೇರೆದಾರಿ ಇಲ್ಲ.
ವಿಧಾನಸಭಾ ಅಧ್ಯಕ್ಷರಾಗಿರುವ
ವಿಶ್ವೇಶ್ವರ ಹೆಗಡೆಯವರಿಗೆ ರಾಜಕೀಯ ಅವಕಾಶ-
ಸತತ ಆರು ಬಾರಿ ಆಯ್ಕೆಯಾಗಿ ಈಗ ವಿಧಾನಸಭಾ ಅಧ್ಯಕ್ಷರಾಗಿರುವ ವಿಶ್ವೇಶ್ವರ ಹೆಗಡೆ ಕಾಗೇರಿ ಸಜ್ಜನತ್ವದ ಸೋಗಿನಲ್ಲಿ ಎಲ್ಲವನ್ನೂ ಮಾಡುವ ಚಾಣಾಕ್ಷ.
ಚುನಾವಣೆ ಗೆಲುವಿರಲಿ,ಇತರ ಕೆಲಸಗಳಿರಲಿ,ಬೆಣ್ಣೆಯಲ್ಲಿ ಕೂದಲು ತೆಗೆದಂತೆ ನಯವಾಗಿ ತನ್ನ ಕೆಲಸ ಸಾಧಿಸಿಕೊಳ್ಳುವ ಚಾಣಾಕ್ಷ ಕಾಗೇರಿ ಅನಾಯಾಸವಾಗಿ ಸಚಿವನಾಗುವ ಅವಕಾಶವನ್ನು ಕಳೆದುಕೊಂಡಿದ್ದುಶಿವರಾಮ ಹೆಬ್ಬಾರ್ ಕಾರಣಕ್ಕೆ.
ಶಿವರಾಮ್ ಹೆಬ್ಬಾರ್ ಎಲ್ಲೂ ಸಲ್ಲಬಲ್ಲ ನಾಯಕ. ಆದರೆ ಕಾಗೇರಿ ಶಿವರಾಮ ಹೆಬ್ಬಾರರಂತೆ ಯಾವ ಆಳಕ್ಕೂ ಇಳಿಯಬಲ್ಲ ಸಮರ್ಥರಲ್ಲ.
ಈ ವರ್ಷದ ಈ ಉಪಚುನಾವಣೆಯ ವಿಶೇಶವೆಂದರೆ……….
ಕಾಗೇರಿ ತೆರೆಮರೆಯಲ್ಲಿ ಮಾಡುತ್ತಿದ್ದ ಆಟವನ್ನು ಈ ಬಾರಿ ಇನ್ನಷ್ಟು ಬುದ್ಧಿವಂತಿಕೆಯಿಂದ ಮಾಡಲು ಅವಕಾಶ ದೊರೆತಿರುವುದು. ಸಂಘದ ವಲಯದಲ್ಲಿ ಮತ್ತು ಜಾತಿ ವ್ಯವಹಾರಗಳಲ್ಲಿ ಶಾಸಕ ಕಾಗೇರಿ ಚತುರ. ಹಿಂದುಳಿದವರು,ದಲಿತರನ್ನು ಸಮಾಧಾನಮಾಡಿದಂತೆ ನಟಿಸಿ, ಗರ್ಭಗುಡಿಯಲ್ಲಿ ಮತ್ತದೇ ವ್ಯವಹಾರ ಮಾಡುವ ನಿಪುಣ. ಇಂಥ ಕಾಗೇರಿ ಈ ಬಾರಿ ವಿಧಾನಸಭಾ ಅಧ್ಯಕ್ಷರಾಗಿರುವ ಸಂಕಟ ಅವರ ರಾಜಕೀಯ ವ್ಯವಹಾರಗಳಿಗೆ ಪೂರಕವಾಗಿದೆ.
ಪಕ್ಷದ ವಲಯ, ರಾಜಕೀಯ, ಚುನಾವಣೆ ಹೀಗೆ ಎಲ್ಲೆಂದರಲ್ಲಿ ಮೂಗು ತೂರಿಸುವ ಕಾಗೇರಿ ವಿಧಾನಸಭಾ ಅಧ್ಯಕ್ಷರಾಗಿರುವುದು ಅವರ ತೆರೆಹಿಂದಿನ ಚಟುವಟಿಕೆಗಳಿಗೆ ಇನ್ನಷ್ಟು ಪೂರಕವಾಗಿದೆ. ವಾಸ್ತವದಲ್ಲಿ ಶಿವರಾಮ ಹೆಬ್ಬಾರ್ ಹವ್ಯಕರು ಮತ್ತು ಕಠ್ಠರ್ ಬ್ರಾಹ್ಮಣರಿಗೆ ಬೇಡದ ಸರಕು. ಈ ಅವಕಾಶವನ್ನು ಬಳಸಿಕೊಳ್ಳುತ್ತಿರುವ ಕಾಗೇರಿ ತಮ್ಮ ಆತ್ಮೀಯರಿಂದ ಶಿವರಾಮ ಹೆಬ್ಬಾರ್ ಗೆಲುವು ಯಾರಿಗೂ ಶೋಭೆ ತರಲ್ಲ, ಹಾಗಾಗಿ ಅವರನ್ನು ಸೋಲಿಸುವ ಮೂಲಕ ತನಗೆ ಮಂತ್ರಿ ಭಾಗ್ಯ ಕರುಣಿಸಿ ಎಂದು ತಮ್ಮ ಆಪ್ತವಲಯದಿಂದ ಹೇಳಿಸತೊಡಗಿದ್ದಾರಂತೆ!
ಹೀಗೆ ಹೆಬ್ಬಾರರ ಗೆಲುವಿಗೆ ಮೊದಲ ಕಂಟಕವಾಗಿರುವ ಕಾಗೇರಿ ವಿ.ಎಸ್. ಪಾಟೀಲರ ಪುತ್ರನನ್ನು ಕಾಂಗ್ರೆಸ್ ಗೆ ಕಳಿಸಿ ತೆರೆಮರೆಯಲ್ಲಿ ತನ್ನ ಸ್ಥಾನ ಭದ್ರಪಡಿಸಿಕೊಳ್ಳುವ ಪ್ರಯತ್ನ ಪ್ರಾರಂಭಿಸಿದ್ದಾರಂತೆ! ಇದರ ಅಂಗವಾಗಿ ಪ್ರಾರಂಭವಾಗಿರುವ ಶಿವರಾಮ್ ಹೆಬ್ಬಾರ್ ಹಠಾವೋ ಪ್ರಯತ್ನ ಅವರದೇ ಪಕ್ಷ,ಅವರದೇ ಜಾತಿಯ ಅಂಗಳದಲ್ಲಿ ಪ್ರಾರಂಭವಾಗಿರುವುದು ಶಿವರಾಮ್ ಹೆಬ್ಬಾರ್ ರಿಗೆ ತಲೆಬಿಸಿ ಮಾಡುತ್ತಿರುವ ವಿದ್ಯಮಾನದ ಪ್ರಾರಂಭ ಎನ್ನಲಾಗುತ್ತಿದೆ.
ಒಂದು ವೇಳೆ ಶಿವರಾಮ್ ಹೆಬ್ಬಾರ್ ಸೋತರೆ ಬಿ.ಜೆ.ಪಿ.ಸರ್ಕಾರದಲ್ಲಿ ಕಾಗೇರಿ ಮತ್ತೆ ಸಚಿವರಾಗಿ ಜಿಲ್ಲಾ ಉಸ್ತುವಾರಿ ನಿರ್ವಹಿಸುತ್ತಾರೆ. ಈ ಉದ್ಧೇಶಕ್ಕೆ ಅಡ್ಡಿಯಾಗಿರುವ ಹೆಬ್ಬಾರ್ ರಿಗೆ ಹವ್ಯಕ ವಲಯದಲ್ಲಿ ವಿರೋಧ ಪ್ರಾರಂಭವಾಗಿರುವುದು ಹವ್ಯಕರ ರಕ್ಷಣಾತ್ಮಕ ಆಟದ ಮುನ್ನುಡಿ ಎನ್ನಲಾಗುತ್ತಿದೆ.
ವಿ.ಎಸ್. ಪಾಟೀಲ್ ದ್ವಿಪಾತ್ರ-
ಇತ್ತೀಚಿನ ರಾಜಕೀಯ ಬೆಳವಣಿಗೆಗಳಿಂದ ಬೇಸತ್ತ ಮುಂಡಗೋಡಿನ ಮಾಜಿ ಶಾಸಕ ವಿ.ಎಸ್. ಪಾಟೀಲ್ ಕಾಂಗ್ರೆಸ್ ಕಡೆ ಮೊದಲ ಹೆಜ್ಜೆ ಇರಿಸಿದ್ದರು. ತಕ್ಷಣ ಕಾರ್ಯಪ್ರವೃತ್ತರಾದ ಮುಖ್ಯಮಂತ್ರಿ ಯಡಿಯೂರಪ್ಪ ಗೂಟದ ಕಾರಿಗೆ ಪಾಟೀಲ್ ರನ್ನು ಕಟ್ಟಿಹಾಕದಿದ್ದಿದ್ದರೆ ಪಾಟೀಲ್ ಯಲ್ಲಾಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗುತ್ತಿದ್ದರು.
ಒಂದು ಸುತ್ತಿನ ಮಾತುಕತೆ ನಂತರ ಹಿಂದೆ ಸರಿದ ಪಾಟೀಲ್ ಈಗ ಪುತ್ರ ಬಾಬುಗೌಡ ಪಾಟೀಲರನ್ನು ಕಾಂಗ್ರೆಸ್ ಅಂಗಳಕ್ಕೆ ನೂಕುವ ಮೂಲಕ ಬಿ.ಜೆ.ಪಿ. ಮತ್ತು ಹೆಬ್ಬಾರ್ ರಿಗೆ ಕೈಕೊಡಲು ನಿರ್ಧರಿಸಿದ್ದಾರೆ. ಈ ವಿಚಾರ ಬಿ.ಜೆ.ಪಿ.,ಯಡಿಯೂರಪ್ಪನವರಿಗೆ ತಿಳಿದಿದ್ದರೂ ಪಾಟೀಲ್ ಮಾಡುವ ಹಾನಿ ತುಂಬಲು ಅವರ ಬಳಿ ಅಸ್ತ್ರಗಳಿಲ್ಲ, ಹಾಗಾಗಿ ವಿಧಾನಸಭಾಧ್ಯಕ್ಷ ಕಾಗೇರಿ ಮತ್ತು ವಿ.ಎಸ್. ಪಾಟೀಲ್ ಶತ್ರುವಿನ ಶತ್ರು ಮಿತ್ರ ಎಂದು ಪರೋಕ್ಷವಾಗಿ ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ಪರವಾಗಿ ಕೆಲಸಕ್ಕೆ ಅನುಕೂಲಮಾಡಿಕೊಡುತ್ತಿದ್ದಾರೆ ಎನ್ನಲಾಗುತ್ತಿದೆ….(ಮುಂದುವರಿದಿದೆ) ಗುತ್ತಿಮನೆ ಕುಂಬಾರಿಕೆ &ಕುಶಲ ಕೈಗಾರಿಕಾ ಸಂಘಕ್ಕೆ ಬೇಕು ಹೊಸರೂಪ
ಸಿದ್ಧಾಪುರ ತಾಲೂಕಿನ ಏಕೈಕ ಕರಕುಶಲ ಕೈಗಾರಿಕಾ ಕೆಲಸಗಾರರ ಸಂಘ ಪುನಶ್ಚೇತನಕ್ಕೆ ಕಾಯುತ್ತಾ ಉಸಿರು ಹಿಡಿದುಕೊಂಡಿದೆ. ಸಹಕಾರಿ ಜಿಲ್ಲೆಯೆಂದೇ ಪ್ರಖ್ಯಾತವಾಗಿರುವ ಉತ್ತರಕನ್ನಡದಲ್ಲಿ ತೋಟಗಾರಿಕೆ,ಕೃಷಿ, ಕೈಗಾರಿಕೆಗಳನ್ನೊಳಗೊಂಡ ವಿವಿದೋದ್ಧೇಶ ಸಹಕಾರಿ ಸಂಘಗಳು ಉತ್ತಮ ಕೆಲಸಗಳ ಮೂಲಕ ಸಾಧನೆ ಮಾಡಿವೆ.
ಇಂಥ ಘನ ಉದ್ದೇಶದಿಂದ ಸಿದ್ದಾಪುರದ ಪ್ರಮುಖರಿಂದ ಪ್ರಾರಂಭವಾದ ಕಾನಗೋಡು ಗ್ರಾ.ಪಂ. ಐಗೋಡಿನ ಗುತ್ತಿಮನೆ ಕುಂಬಾರ ಕರಕುಶಲ ಕೈಗಾರಿಕಾ ಕೆಲಸಗಾರರ ಸಹಕಾರಿ ಸಂಘ ತನ್ನ ನಾಲ್ಕು ದಶಕದ ಅವಧಿಯುದ್ದಕ್ಕೂ ಕುಂಟುತ್ತಾ ಸಾಗುತ್ತಿರುವುದು ಅದರ ಉದ್ಧೇಶಕ್ಕೆ ಅಪವಾದವಾದಂತಾಗಿದೆ.



_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________






