

ತುಂಬು ಕುಟುಂಬವನ್ನೇ ಕೊಂದ 4 ಜನರ ಮತ್ತೊಂದು ಕುಟುಂಬಕ್ಕೆ ಜೀವಾವಧಿ ಶಿಕ್ಷೆ,ಬಾಧಿತರಿಗೆ 50ಸಾ.ಪರಿಹಾರ
ಸಿದ್ಧಾಪುರ ತಾಲೂಕಿನ ಕಾನಗೋಡಿನಲ್ಲಿ ಕಳೆದ ವರ್ಷ ಜೋಡಿಕೊಲೆಮತ್ತು ಒಬ್ಬರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಹತ್ಯೆಗೆ ಪ್ರಯತ್ನಿಸಿದ್ದ ಒಂದೇ ಕುಟುಂಬದ ನಾಲ್ವರಿಗೆ ಜೀವಾವಧಿ ಶಿಕ್ಷೆ ವಿಧಿಸಿರುವ ಜಿಲ್ಲಾ ಸತ್ರ ನ್ಯಾಯಾಲಯ ಇದೇ ನಾಲ್ವರಿಗೆ ತಲಾ 25 ಸಾವಿರ ದಂಡ ವಿಧಿಸಿದೆ.
ಈ ದಂಡದಲ್ಲಿ ಬಾಧಿತ ಕುಟುಂಬಕ್ಕೆ 50 ಸಾವಿರ ಪರಿಹಾರ ಘೋಶಿಸಿದ ನ್ಯಾಯಾಲಯ 25 ಸಾವಿರ ರೂಪಾಯಿ ತುಂಬದಿದ್ದರೆ(ದಂಡಪಾವತಿ) 14 ವರ್ಷಗಳ ನಂತರ ಮತ್ತೆ 3 ತಿಂಗಳ ಹೆಚ್ಚುವರಿ ಸಾದಾ ಶಿಕ್ಷೆಯ ತೀರ್ಪು ನೀಡಿದೆ.
2018ರ ಫೆಬ್ರುವರಿಯಲ್ಲಿ ಕಾನಗೋಡಿನ ಕನ್ನಾ ನಾಯ್ಕ ಮತ್ತವರ ಕುಟುಂಬದ ರವಿ ಮತ್ತು ರೇಣುಕಾರನ್ನು ಹತ್ಯೆ ಮಾಡುವ ಪ್ರಯತ್ನದಲ್ಲಿ ಕನ್ನಾ ನಾಯ್ಕ ಕೂದಲೆಳೆ ಅಂತರದಲ್ಲಿ ಕೊಲೆಯಿಂದ ಬಚಾವಾಗಿದ್ದರು.
ಈ ಪ್ರಕರಣದ ವಿಚಾರಣೆ ನಡೆಸಿ ತೀರ್ಪು ಪ್ರಕಟಿಸಿದ ನ್ಯಾಯಾಲಯ ಆರೋಪಿಗಳಾದ ಗಣಪತಿ,ಪವನ್,ಪ್ರಸಾದ್,ಪ್ರಥ್ವಿ ಎನ್ನುವ ಕೊಲೆಗಾರರಿಗೆ ಜೀವಾವಧಿ ಶಿಕ್ಷೆ ವಿಧಿಸಿ,ತಲಾ 25 ಸಾವಿರ ದಂಡ ಹಾಕಿದೆ. ಈ ದಂಡದ ಮೊತ್ತದಲ್ಲಿ 50 ಸಾವಿರರೂಪಾಯಿಗಳನ್ನು ಬಾಧಿತರ ಕುಟುಂಬಕ್ಕೆ ನೀಡಲು ಆದೇಶಿಸಿದೆ.
2018 ಫೆ.14 ತಡರಾತ್ರಿ ಆರೋಪಿಗಳಾದ ತಂದೆ ಮಕ್ಕಳು ಮೃತ ರವಿ,ರೇಣುಕಾರನ್ನು ಕೊಚ್ಚಿ ಕೊಂದಿದ್ದರೆ,ಇವರ ತಂದೆ ಕನ್ನ ನಾಯ್ಕ ಜೀವನ್ಮರಣದ ಹೋರಾಟದಲ್ಲಿ ಬದುಕಿ ಉಳಿದಿದ್ದರು. ಇಂಥ ಭೀಕರ ಕೊಲೆಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದೇ ಕಾರಣ ಎಂದು ವರದಿಯಾಗಿತ್ತು.



