ಯಲ್ಲಾಪುರ ಕ್ಷೇತ್ರದ ಉಪ ಚುನಾವಣೆ ರಾಜಕೀಯ ವ್ಯಭಿಚಾರದ ದಿಗ್ಧರ್ಶನ ಮಾಡುತ್ತಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆಗಳಾಗುತ್ತಿವೆ.
01- ವಿಧಾನಸಭಾ ಅಧ್ಯಕ್ಷರಾಗಿರುವ ವಿಶ್ವೇಶ್ವರ ಹೆಗಡೆವರಿಗೆ ರಾಜಕೀಯ ಅವಕಾಶ
02- ವಿ.ಎಸ್.ಪಾಟೀಲ್ ದ್ವಿಪಾತ್ರ
03- ಅನಂತನ ಅವಾಂತರದ ಹಿಂದಿದೆ ಲೆಕ್ಕಾಚಾರ
04-ಆಳ್ವ ಬಣಕ್ಕೆ ಬೇರೆದಾರಿ ಇಲ್ಲ.
ವಿ.ಎಸ್. ಪಾಟೀಲ್ ದ್ವಿಪಾತ್ರ-
ಇತ್ತೀಚಿನ ರಾಜಕೀಯ ಬೆಳವಣಿಗೆಗಳಿಂದ ಬೇಸತ್ತ ಮುಂಡಗೋಡಿನ ಮಾಜಿ ಶಾಸಕ ವಿ.ಎಸ್. ಪಾಟೀಲ್ ಕಾಂಗ್ರೆಸ್ ಕಡೆ ಮೊದಲ ಹೆಜ್ಜೆ ಇರಿಸಿದ್ದರು.
ತಕ್ಷಣ ಕಾರ್ಯಪ್ರವೃತ್ತರಾದ ಮುಖ್ಯಮಂತ್ರಿ ಯಡಿಯೂರಪ್ಪ ಗೂಟದ ಕಾರಿಗೆ ಪಾಟೀಲ್ ರನ್ನು ಕಟ್ಟಿಹಾಕದಿದ್ದಿದ್ದರೆ ಪಾಟೀಲ್ ಯಲ್ಲಾಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗುತ್ತಿದ್ದರು.
ಒಂದು ಸುತ್ತಿನ ಮಾತುಕತೆ ನಂತರ ಹಿಂದೆ ಸರಿದ ಪಾಟೀಲ್ ಈಗ ಪುತ್ರ ಬಾಬುಗೌಡ ಪಾಟೀಲರನ್ನು ಕಾಂಗ್ರೆಸ್ ಅಂಗಳಕ್ಕೆ ನೂಕುವ ಮೂಲಕ ಬಿ.ಜೆ.ಪಿ. ಮತ್ತು ಹೆಬ್ಬಾರ್ ರಿಗೆ ಕೈಕೊಡಲು ನಿರ್ಧರಿಸಿದ್ದಾರೆ.
ಈ ವಿಚಾರ ಬಿ.ಜೆ.ಪಿ.,ಯಡಿಯೂರಪ್ಪನವರಿಗೆ ತಿಳಿದಿದ್ದರೂ ಪಾಟೀಲ್ ಮಾಡುವ ಹಾನಿ ತುಂಬಲು ಅವರ ಬಳಿ ಅಸ್ತ್ರಗಳಿಲ್ಲ, ಹಾಗಾಗಿ ವಿಧಾನಸಭಾಧ್ಯಕ್ಷ ಕಾಗೇರಿ ಮತ್ತು ವಿ.ಎಸ್. ಪಾಟೀಲ್ ಶತ್ರುವಿನ ಶತ್ರು ಮಿತ್ರ ಎಂದು ಪರೋಕ್ಷವಾಗಿ ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ಪರವಾಗಿ ಕೆಲಸಕ್ಕೆ ಅನುಕೂಲಮಾಡಿಕೊಡುತ್ತಿದ್ದಾರೆ ಎನ್ನಲಾಗುತ್ತಿದೆ….
ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ವಿ.ಎಸ್.ಪಾಟೀಲ್ ಪುತ್ರ ಬಾಪುಗೌಡ ಪಾಟೀಲ್ ಇದೇ ವಾರ ಅಧೀಕೃತವಾಗಿ ಕಾಂಗ್ರೆಸ್ ಸೇರುವುದಾಗಿ ಪ್ರಕಟಿಸಿದ್ದಾರೆ. ಬಾಪುಗೌಡ ಪಾಟೀಲ್ ಬಿ.ಜೆ.ಪಿ. ಮತ್ತು ಶಿವರಾಮಹೆಬ್ಬಾರ್ ವಿರುದ್ಧ ಮಾತನಾಡಿರುವುದು ಬಿಟ್ಟರೆ ತಂದೆ ಪಾಟೀಲರ ಬಗ್ಗೆ ಉಸಿರು ಒಡೆದಿಲ್ಲ. ಆದರೆ ವಿ.ಎಸ್ ಪಾಟೀಲ್ ತಮ್ಮ ಮಗ ಈಗಲ್ಲ ಈ ಹಿಂದೇ ದಾರಿ ತಪ್ಪಿದ್ದಾರೆ. ಇಲ್ಲದಿದ್ದರೆ ಹಿಂದಿನ ಚುನಾವಣೆಗಳಲ್ಲಿ ತಾನು ಸೋಲುತ್ತಿರಲಿಲ್ಲ ಎಂದಿದ್ದಾರೆ. ಸತ್ಯವಂತೂ ಈ ವಾಕ್ಯಗಳ ಅಕ್ಷರಗಳ ನಡುವೆ ಸಿಕ್ಕಿ ಒದ್ದಾಡುತ್ತಿರುವುದು ದಿಟ.
ಅನಂತನ ಅವಾಂತರದ ಹಿಂದಿದೆ ಲೆಕ್ಕಾಚಾರ-
ಹಿಂದುತ್ವದ ಹೆಸರಲ್ಲಿ ಮೂರ್ಖರನ್ನು ಶತಮೂರ್ಖರನ್ನಾಗಿಸುತ್ತಿರುವ ಬೆರಕೆ ಮತಾಂಧ ಅನಂತಕುಮಾರ ಹೆಗಡೆ ಮಾತಿನಿಂದಲೇ ಮಾನ ಕಳೆದುಕೊಂಡ ಅತಿರೇಕಿ.
ಸ್ವಜಾತಿ-ಉನ್ನತ ಜಾತಿ ಕುಟುಂಬಗಳ ಮನೆ ಒಳಗೆ ಆರ್ಥಿಕ ಉನ್ನತಿ,ಶಿಕ್ಷಣ,ಅಭಿವೃದ್ಧಿ ಬಗ್ಗೆ ಮಾತನಾಡುವ ಸಂಸದ ಅನಂತಕುಮಾರ ಉಚ್ಛಜಾತಿಯವರ ಮನೆ ಹೊರಗೆ,ಮೂರ್ಖ ಶೂದ್ರರ ಎದುರು ಹಿಂದುತ್ವದ ಬೊಗಳೆ ಬಿಟ್ಟು ಅನ್ಯ ಧರ್ಮದವರೊಂದಿಗೆ ಲಾಭದ ವ್ಯವಹಾರ ಮಾಡುವ ವಲಸೆ ಆರ್ಯ ಕುತಂತ್ರಿ.
ಇವರ ನಾಟಕ,ಸೋಗುಗಳೇ ಇವರನ್ನು ನಿರಂತರ ಸಂಸದರನ್ನಾಗಿಸುವುದರಿಂದ ಅನಂತಕುಮಾರ ಹೆಗಡೆ ತನ್ನ ಯೋಗ್ಯತೆ,ಅವಿವೇಕಕ್ಕೆ ತಕ್ಕಂತೆ ಬೊಗಳುತ್ತಾ ರಾಜಕೀಯ ಲಾಭಮಾಡಿಕೊಂಡಿದ್ದೇ ಹೆಚ್ಚು.
ಈಗ ಯಲ್ಲಾಪುರ ಉಪಚುನಾವಣೆಯಲ್ಲಿ ಶಿವರಾಮಹೆಬ್ಬಾರ್ ನಾಮಪತ್ರ ಸಲ್ಲಿಕೆ ವೇಳೆ ಕಾಂಗ್ರೆಸ್ ನವರ ಮನೆಗೆ ನುಗ್ಗಿ ಹೊಡೆಯಿರಿ ಎಂದು ಹೇಳಿ ಪ್ರಚಾರ ಪಡೆಯಲು ಹೋಗಿ ಸಾಮಾಜಿಕ ಜಾಲತಾಣದಲ್ಲಿ ಬೊ.. ಸೂ… ಎಂದು ಬೈಸಿಕೊಂಡ ಅವಿವೇಕಿ ಈ ಅನಂತ.
ಈ ಹಿರಿಯ ಸಂಸದ ಇಂಥ ಅವಿವೇಕದ ಮಾತುಗಳನ್ನಾಡಲು ಇವನ ಹಿಂದಿರುವ ಅವಿವೇಕಿ ಶೂದ್ರ ಗುಲಾಮರ ತಂಡದ ಮತಾಂಧ ದುಷ್ಟಕೂಟದ ಬಹುಪರಾಕ್ ಕಾರಣ. ಆದರೆ ಇಂಥ ಅವಿವೇಕಿಗಳ ಪುಂಡ ಮುಖಂಡನಾಗಿರುವ ಈತನಿಗೆ ಮೂರ್ಖ ಜನರು ಕಂಡೊಡನೆ ಹುಚ್ಚು ಹಿಡಿಯುತ್ತದೆ. ಮೊನ್ನೆ ಯಲ್ಲಾಪುರದಲ್ಲಿ ಕೂಡಾ ಇಂಥ ಹುಚ್ಚುಬೊಗಳೆಯಿಂದ ಶೂದ್ರರು ಮತಹಾಕುತ್ತಾರೆ ಎಂದು ಬಲವಾಗಿ ನಂಬಲು ಕಾರಣ ಇವನ ಶೂನ್ಯಸಾಧನೆ.
ಹೀಗೆ ಅವಕಾಶ ಸಿಕ್ಕಾಗ ಅನುಕೂಲಕ್ಕಾಗಿ ಮೂರ್ಖ ಶೂದ್ರರನ್ನು ಉತ್ತೇಜಿಸಿ ರಾಜಕೀಯ ಲಾಭಮಾಡಿಕೊಳ್ಳುವ ಈತನ ಹೀನತನಕ್ಕೆ ಯಲ್ಲಾಪುರದಲ್ಲಿ ಮತಗಳ ಮೂಲಕ ಹುಚ್ಚುನಾಯಿ ಪರಿವಾರದ ಮನೆ ಒಳಗೆ ನುಗ್ಗಿ ಹೊಡೆಯಲು ಪ್ರಜ್ಞಾವಂತರು ಕಾಯುತಿದ್ದಾರೆ. ಆದರೆ ನಾಜೂಕಯ್ಯರ ನೇತೃತ್ವದ ಕಾಂಗ್ರೆಸ್ ಸಾಮಾಜಿಕ ಜಾಲತಾಣ ಮಾತ್ರ ತನ್ನ ಲಾಗಾಯ್ತಿನ ನಯವಂಚನೆಯ ಬುಡಬುಡುಕೆತನ ಪ್ರದರ್ಶಿಸಿದೆ.
ಹೀಗೆ ಅನಂತನ ಮಾತು, ಅವಿವೇಕಕ್ಕೆ ಕೈಲಾಗದವರಂತೆ ವರ್ತಿಸಿ ಅವರಿಗೇ ನೆರವು ನೀಡುತ್ತಿರುವ ಕಾಂಗ್ರೆಸ್ ನ ಸೌಮ್ಯ ಹಿಂದುತ್ವವಾದಿಗಳು ಈ ಹಿಂದಿನಂತೆ ಭೀಮಣ್ಣರ ದುಡ್ಡು ಜೇಬಿಗಿಳಿಸಿ,ಸುಳ್ಳು ಮಾಹಿತಿ,ದಿಕ್ಕುತಪ್ಪಿಸುವ ಕುತಂತ್ರ ಮಾಡುತ್ತಿರುವುದಕ್ಕೆ ಅವರ ಸಮರೋತ್ಸಾಹದ ಚಟುವಟಿಕೆಗಳೇ ಉತ್ತರ.
ಅನಂತ ಕುಮಾರ ಹೆಗಡೆ ಹುಚ್ಚನಂತೆ ಯಲ್ಲಾಪುರದಲ್ಲಿ ಬೊಗಳಿದರೂ ಕಾಂಗ್ರೆಸ್ ಅಂಧರ್‍ಕಿಮಚ್ಚುವಾಳ್ಳಿಗಳಿಗೆ ಅದು ಕಾಂಗ್ರೆಸ್ ವಿರೋಧ, ಜನವಿರೋಧ ಎನಿಸಲೇ ಇಲ್ಲ. ಇಂಥ ಒಳವ್ಯವಹಾರದ ಕೆಲವು ಕಾಂಗ್ರೆಸ್ಸಿಗರು ಹಿಂದಿನಂತೆ ಈ ಬಾರಿ ಕೂಡಾ ತಮ್ಮ ಸನಾತನ ಶೂದ್ರವಿರೋಧಿ ಮತಾಂಧ ಬಳಗಕ್ಕೆ ಸಾಥ್ ನೀಡುವುದನ್ನು ತಡೆಯುವಲ್ಲಿ ಭೀಮಣ್ಣ ಮತ್ತುಅವರ ಹಿತೈಶಿಗಳು ವಿಫಲರಾದರೆ ಸೌಮ್ಯ ಹಿಂದುತ್ವದ ಫಲಿತಾಂಶ ಕಾಂಗ್ರೆಸ್ ಗೆ ವಿರೋಧಿಯಾಗಿರುವುದರಲ್ಲಿ ಸಂಶಯವಿಲ್ಲ.
ಇಂಥವರನ್ನೇ ನಂಬಿಕೊಂಡಿರುವ ಭೀಮಣ್ಣ ಹೊಂಡಕ್ಕೆ ಬೀಳಲಿ ಎಂದೆ ಕಾಂಗ್ರೆಸ್ ಸೌಮ್ಯ ಹಿಂದುತ್ವವಾದಿಗಳು ಅನಂತಕುಮಾರರಂಥ ಮೂರನೇ ದರ್ಜೆಯ ರಾಜಕಾರಣಿಗಳಿಂದ ಬೀದಿಯಲ್ಲಿ ಬೈಸಿಕೊಂಡು ಅಂತರಂಗದಲ್ಲಿ ಖುಷಿಪಡುತಿದ್ದಾರೆ.
ಹೀಗೆ ಅವಿವೇಕ, ಅತಿರೇಕಗಳಿಂದಲೇ ಕಟ್ಟರ್ ಮತಾಂಧರು,ಸೌಮ್ಯ ಹಿಂದುತ್ವವಾದಿ ಕಾಂಗ್ರೆಸ್ ದಗಾಕೋರರ ಅಚ್ಚುಮೆಚ್ಚಿನ ನಾಯಕರಾಗಿರುವ ಅನಂತಕುಮಾರ ಹೆಗಡೆ,ಯತ್ನಾಳ್, ಕಟೀಲ್ ರಂಥ ಹೊಣೆಗೇಡಿ ಅಡ್ಡಕಸುಬುಬಿಗಳು ನಾಯಕರಾಗಿ ಮಿಂಚುತ್ತಿರುವುದು ಎನ್ನುವ ಸತ್ಯ ಅರ್ಥವಾದರೆ ಕಾಂಗ್ರೆಸ್ ನಲ್ಲಿ ಉಗ್ರಪ್ಪ,ಸಿದ್ಧರಾಮಯ್ಯನಂಥವರಿಗೆ ಆಂತರಿಕ ವಿರೋಧಗಳೇ ಇರುತ್ತಿರಲಿಲ್ಲ.
04-ಆಳ್ವ ಬಣಕ್ಕೆ ಬೇರೆದಾರಿ ಇಲ್ಲ-
ಒಂದೆಡೆ ಕಾಂಗ್ರೆಸ್ ನಲ್ಲಿರುವ ದೇಶಪಾಂಡೆ ನೇತೃತ್ವದ ಸೌಮ್ಯ ಹಿಂದುತ್ವವಾದಿಗಳು ಹಗಲು ಕಾಂಗ್ರೆಸ್ ಎಂದುಕೊಂಡು ರಾತ್ರಿ ಕೇಸರಿಸ್ವಾಮಿಗಳೊಂದಿಗೆ ಕೇಸರಿ ತಿಂದು,ಕೇಸರಿ ಉಟ್ಟು ಸನಾತನ ಧರ್ಮ ಕಾಪಾಡುತ್ತಿರುವುದರಿಂದ ಕಾಂಗ್ರೆಸ್ ಒಳಗೂ ವಿರೋಧಿಗಳು, ಹೊರಗೂ ವಿರೋಧಿಗಳಿಂದ ಬಸವಳಿಯುತ್ತಿದೆ. ದೇಶಪಾಂಡೆ,ಭೀಮಣ್ಣರೊಂದಿಗಿರುವ ಕೆಲವು ಅನಂತಕುಮಾರ ಹೆಗಡೆ ಮನಸ್ಥಿತಿಯ ನಾಜೂಕಯ್ಯರು ಸಾಮಾಜಿಕ ಜಾಲತಾಣ,ರಾಜಕಾರಣ,ಚುನಾವಣೆಗಳಲ್ಲಿ ಸೌಮ್ಯ ನಯವಂಚನೆ,ಸೌಮ್ಯ ಹಿಂದುತ್ವ,ಸೌಮ್ಯ ತಲೆಹಿಡುಕುತನ ಮಾಡುತ್ತಿರುವುದರಿಂದ ಅಂಥವರಿಗೆ ಮತಾಂಧ ದುಷ್ಟರಿಂದಲೂ ಕಾಣಿಕೆ,ಕಾಂಗ್ರೆಸ್ ನಿಂದಲೂ ನಿರಂತರ ಅವಕಾಶ,ಅಧಿಕಾರ,ಅನುಕೂಲಗಳು ಸಿಗುತ್ತಿವೆ. ಈ ನಯವಂಚಕ
ಗುಂಪು ಭೀಮಣ್ಣರ ದೇಶಪಾಂಡೆ ಬಣದಿಂದ ಅವಕಾಶ,ಅನುಕೂಲ,ಅಧಿಕಾರ ಅನುಭವಿಸಿ ಬೆಳಿಗ್ಗೆ ಕಾಂಗ್ರೆಸ್ ಕಛೇರಿಯಲ್ಲಿ,ಸಂಜೆ ಹಂಗಾಮಿನ ರಾಜಕಾರಣಿಗಳಾದ ಆಳ್ವಬಣ,ರಾತ್ರಿ ಮತಾಂಧರ ದುಷ್ಟಕೂಟದಲ್ಲಿ ಹಾಜರಿಹಾಕುತ್ತಿರುವುದರಿಂದ ಅವರನ್ನು ಬಿ.ಜೆ.ಪಿ.,ಕಾಂಗ್ರೆಸ್ ಪ್ರಮುಖರೆಲ್ಲಾ ಸರಿಯಾಗಿ ನೋಡಿಕೊಳ್ಳುತಿದ್ದಾರೆ. ಇದರ ಪರಿಣಾಮವೆಂದರೆ………