

ಯಲ್ಲಾಪುರ ಉಪಚುನಾವಣೆಯ ಪ್ರಚಾರ ಕಾರ್ಯದಲ್ಲಿದ್ದ ಮಾಜಿ ಸಚಿವ, ಕಾಂಗ್ರೆಸ್ ನಾಯಕ ಆರ್.ವಿ.ದೇಶಪಾಂಡೆ ವಿರುದ್ಧ ಬಿ.ಜೆ.ಪಿ. ಕಾರ್ಯಕರ್ತರು ಘೋಷಣೆ ಕೂಗಿ ಗಲಾಟೆಗೆ ಕಾರಣರಾದ ಪ್ರಸಂಗ ಶಿರಸಿ ದಾಸನಕೊಪ್ಪ ಬಳಿಯ ರಾಮಾಪುರದಲ್ಲಿ ಇಂದು ನಡೆದಿದೆ.
ಶಿವರಾಮ ಹೆಬ್ಬಾರ್ ಸೋಲಿಸಿ,ಭೀಮಣ್ಣ ನಾಯ್ಕರನ್ನು ಗೆಲ್ಲಿಸಲು ಪಣ ತೊಟ್ಟಿರುವ ಮಾಜಿ ಸಚಿವ ಆರ್.ವಿ.ದೇಶಪಾಂಡೆ ದಿನನಿತ್ಯ ಯಲ್ಲಾಪುರ, ಮುಂಡಗೋಡು ತಾಲೂಕುಗಳಲ್ಲಿ ಪ್ರಚಾರ ನಡೆಸುತಿದ್ದಾರೆ. ದೇಶಪಾಂಡೆಯವರ ನಿರಂತರ ಪ್ರಚಾರ, ಹೆಬ್ಬಾರ್ ವಿರುದ್ಧ ಜನಾಕ್ರೋಶದ ಹಿನ್ನೆಲೆಯಲ್ಲಿ ಇಂದು ರಾಮಾಪುರದಲ್ಲಿ ಖ್ಯಾತೆ ತೆಗೆದ ಬಿ.ಜೆ.ಪಿ. ಕಾರ್ಯಕರ್ತರು ಮಾಜಿ ಸಚಿವ ಆರ್.ವಿ.ದೇಶಪಾಂಡೆ ವಿರುದ್ಧ ಘೋಷಣೆ ಕೂಗಿ ಗಲಾಟೆಗೆ ಪ್ರಯತ್ನಿಸಿದರು.
ಆಗ ಅಲ್ಲಿ ಸೇರಿದ ಕಾಂಗ್ರೆಸ್ ಕಾರ್ಯಕರ್ತರಿಗೂ, ಬಿ.ಜೆ.ಪಿ. ಕಾರ್ಯಕರ್ತರಿಗೂ ಘರ್ಷಣೆ ಪ್ರಾರಂಭವಾಯಿತು. ಪೊಲೀಸರ ಸಕಾಲಿಕ ಪ್ರವೇಶದಿಂದ ಗುಂಪು ಘರ್ಷಣೆ ನಿಲ್ಲಿಸಿ, ಪರಿಸ್ಥಿತಿಯನ್ನು ಹತೋಟಿಗೆ ತರಲಾಯಿತು.
