ಬಣ್ಣದ ಬೆರಗಿಗೆ ಕೈಒಡ್ಡಿದ ಈ ಕಲಾವಿದನ ಚಿತ್ರ ಚಿತ್ತಾಕರ್ಷಕ

ನಮ್ಮೂರು ನಮ್‍ಜನ-
ಬಣ್ಣದ ಬೆರಗಿಗೆ ಕೈಒಡ್ಡಿದ ಈ ಕಲಾವಿದನ ಚಿತ್ರ ಚಿತ್ತಾಕರ್ಷಕ
25 ಕ್ಕೂ ಹೆಚ್ಚು ವರ್ಷಗಳ ಹಿಂದಿನ ಘಟನೆ ನಾನೂ ವಿದ್ಯಾರ್ಥಿ, ಆತ ಹೈಸ್ಕೂಲು ಓದುತ್ತಿದ್ದ. ನನಗೂ ಅವನಿಗೂ ಅಂಟಿದ ನಂಟೆಂದರೆ ಆತ ಕೂಡ ನನ್ನಂತೆ ಕನ್ನಡ ಶಾಲೆ ಮುಗಿಸಿ ಕಡಲತಡಿಯ ಕಾರವಾರಕ್ಕೆ ಬಂದಿದ್ದ.
ಅಷ್ಟೇ ನನಗೂ ಅವನಿಗೂ ಸಾಮ್ಯತೆ. ಮತ್ತೊಂದು ಬಾದರಾಯಣ ಸಂಬಂಧವೆಂದರೆ ಆತ ನಮ್ಮೂರಿನ ಹುಡುಗ. ಅವನ ಕುಳ್ಳಗಿನ ದೇಹ, ಸಣಕಲು ಶರೀರ, ಥೂ ಈ ಹುಡುಗನಿಗೂ ನನ್ನಂತಂಧ್ದೇ ಪ್ರಾರಂಬ್ಧ ಎಂದುಕೊಂಡು ಮುಗುಳ್ನಗುತ್ತಿದ್ದೆ,ಮಾತನಾಡಿಸುತ್ತಿದ್ದೆ.
ಅವನ ತೃಷೆ,ಅಭಿಮಾನ, ಹಸಿವು, ಕನಸು,ಬೆರಗು ಅವುಗಳನ್ನು ಕೇಳುವ ಸಮಯ,ವ್ಯವಧಾನ ನನಗಾದರೂ ಎಲ್ಲಿತ್ತು ಆಗ.
ಒಂದೆರಡು ದಶಕಗಳೇ ಕಳೆದಿದ್ದವು,
ಎದುರಿಗೆ ಬಂದ ಹುಡುಗ ತನ್ನ ಎಂದಿನ ಟಿಪಿಕಲ್ ಶೈಲಿಯ ನಗು,ನಮ್ಮವರ ಖಾಸಾ ಮುಲಾಜುಗಳೊಂದಿಗೆ ಕೈಕುಲುಕಿದ್ದ. ಸರ್ ನಾನು ಶಿವಕುಮಾರ್ ಎಂದು
ಪರಿಚಯಿಸಿಕೊಂಡಾಗ ಅವನ ಸುರದ್ರೂಪಿ ಭೌತದೆದುರು ಅವನ ವರ್ತಮಾನದ
ಮಾಸದ ಅದೇ ಮಾಸಿದ ಸಣಕಲನ ಚಿತ್ರವೇ ಎದುರಾಗಿತ್ತು.
ಈಗ ಹುಡುಗ ಬೆಳೆದಿದ್ದ.ಕಣ್ಣಿನಲ್ಲಿ ಕನಸಿನ ಸಾಗರವೇ ಕಾಣುತ್ತಿತ್ತು.
ಉಭಯ ಕುಶಲೋಪರಿ ಸಾಂಪ್ರದ.
ಹುಡುಗ ಕಲಾವಿದನಾಗಬೇಕು ಅಂದ.
ಅದಷ್ಟೇ ಇಹದ ಲಾಭ,ಲೋಭಗಳನ್ನು ಧಿಕ್ಕರಿಸಿ,ವಾಸ್ತವ ಅರ್ಥವಾಗುತಿದ್ದ ನನಗೆ ಈತ ಕಲಾವಿದನಾಗುತ್ತೇನಿ ಎಂದಾಗ ಅನುಮಾನ, ಭಯ, ಸಂಕಟ ಎಲ್ಲಾ ಒಟ್ಟೊಟ್ಟಿಗೇ ಹುಟ್ಟಿ ವ್ಯಾಕಲಗೊಳಿಸಿದ್ದವು.
ಗೊತ್ತಿಲ್ಲ ಇವನೊಳಗೆ ಎಂಥಾ ಕಲಾವಿದನಿದ್ದಾನೋ ಹೊಟ್ಟೆಪಾಡಿಗೆ ನೌಕರಿ ಒಳ್ಳೆಯದು ಎನ್ನಬೇಕಿದ್ದ ಉಪದೇಶ, ಮಾರ್ಗದರ್ಶನ ಮೊಳಕೆಯೊಡೆದಿತ್ತು. ತುಸು ತಡೆದು ಫೈನ್ ಎಂದಿದ್ದೆ. ಅಷ್ಟೇ,
ಅಷ್ಟೊತ್ತಿಗೆ ನಾನೂ ಸಾಹಿತ್ಯ ಪರಿಷತ್ ಚುಕ್ಕಾಣಿ ಹಿಡಿದೆ. ಸಾಮಾಜಿಕ ಜಾಲತಾಣದಲ್ಲಿ ಕಾಣುತಿದ್ದ ಇವನ ಚಿತ್ರಗಳನ್ನು ನೋಡಿ ಸನ್ಮಾನಿಸಲು ನಿರ್ಣಯಿಸಿ, ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನಿಸಿದ್ದೆವು.
ಆತ ನಮಗೆ ಕೊಟ್ಟ ಸ್ಮರಣಿಕೆಗಳು ಅವನ ಪ್ರತಿಭೆಗೆ ಶರಾ ಬರೆದಿದ್ದವು. ಯಥಾ ಪ್ರಕಾರ ಕಲಾವಿದ ಮತ್ತೆ ಸಂಬಂಧ ತಪ್ಪಿದ. ಆಗೀಗ ದೂರವಾಣಿಯ ಮಾತುಕತೆ, ಮೊಬೈಲ್ ನಲ್ಲೇ ಅವನ ಚಿತ್ರಗಳ ದರ್ಶನ.
ಈಗ ಅವನ ಫೇಸ್‍ಬುಕ್ ವಾಲ್ ನೋಡಿದರೆ ಯಾರೂ ನಿಬ್ಬೆರಗಾಗಬೇಕು ಅಂಥಾ ಚಿತ್ರಗಳನ್ನು ರಚಿಸಿದ್ದಾನೆ,
ನಮ್ಮ ಹಳೆ ಚಡ್ಡಿದೊಸ್ತ್ ಶಿವಕುಮಾರ.
ರಾಜ್ಯ ರಾಷ್ಟ್ರಮಟ್ಟದ ಚಿತ್ರ ಪ್ರದರ್ಶನ, ಸ್ಫರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಬಾಚುವ ಈ ಹುಡುಗ ಕೆರೆಮನೆಯ ರೈತ ಕುಟುಂಬದ ಕುಡಿ. ಸಿದ್ಧಾಪುರ ಕೆರೆಮನೆಯ ರೈತನ ಮಗನಾದ ಶಿವಕುಮಾರ ಗ್ಲಾಸ್‍ಪೇಂಟ್, ಆಯ್ಲ್ ಪೇಂಟ್ ಸೇರಿದ ಅನೇಕ ಮಾದರಿಗಳ ಮೂಲಕ ಹೆಸರುಮಾಡಿದ್ದಾನೆ.
ಚಿತ್ರಕಲೆಯಲ್ಲಿ ಪದವಿಧರನಾಗಿರುವ ಶಿವಕುಮಾರ ಪೇಂಟಿಂಗ್ ಗಳು ಯಾರಿಗಾದರೂ ಇಷ್ಟವಾಗದಿದ್ದರೆ ಅದು ಅವರದೇ ದೋಷ. ಯಾಕೆಂದರೆ ಕಲೆ,ಕಲಾವಿದ ಯಾರಿಗೂ ಅರ್ಥವಾದಿರಬಹುದು. ಆದರೆ, ಈ ಕಲಾಸೃಷ್ಟಿಗಳನ್ನು ಮೆಚ್ಚಲು ಯಾವ ವಿಶೇಶ ಅರ್ಹತೆಗಳೂ ಬೇಡ.
ಕಾರವಾರದ ಕಡಲು,ಸಿದ್ಧಾಪುರದ ಹೊಳೆ,ಮಲೆನಾಡು ಇವುಗಳನ್ನೆಲ್ಲಾ ಬೆಂಗಳೂರಿನಿಂದ ರಾಜ್ಯ, ರಾಷ್ಟ್ರಮಟ್ಟಕ್ಕೆ ಕೊಡೊಯ್ದಿರುವ ಈ ಕಲಾವಿದ ನಮ್ಮವ ಇವರ ಚಿತ್ರಗಳು ಆಗಾಗ ಸಮಾಜಮುಖಿ, ಸಮಾಜಮುಖಿ ಆನ್‍ಲೈನ್ ನ್ಯೂಸ್‍ಪೋರ್ಟಲ್ ಗಳಲ್ಲಿ ಕಾಣಬಹುದು. ಒಬ್ಬ ಸಣಕಲ ಹುಡುಗ ಸಮೃದ್ಧಿಯ ಕಲಾವಿದನಾಗಿ ಸಿದ್ದಾಪುರಕ್ಕೆ,ಉತ್ತರಕನ್ನಡಕ್ಕೆ ಹಾಗೆಯೇ ರಾಜ್ಯಕ್ಕೆ ಹೆಸರು ತಂದಿದ್ದಾನೆ. ಈ ಶಿವಕುಮಾರ ತನ್ನ ಕುಂಚಸೃಷ್ಟಿಗೆ ರಾಜ್ಯ,ರಾಷ್ಟ್ರಮಟ್ಟದ ಪ್ರಶಂಸೆ,ಪಾರಿತೋಷಕಗಳನ್ನು ಪಡೆದಿದ್ದಾನೆ. ನಿಜ ಕಲಾವಿದನಾದ ಈತ ಈ ನಾಡಿಗೆ ಹೆಮ್ಮೆ ತಂದ ಹಮ್ಮೀರ ಸಿದ್ಧಾಪುರದವನೆಂಬುದು ಬರೀ ನಮಗೆ ಮಾತ್ರ ಅಭಿಮಾನದ ಸಂಗತಿಯಲ್ಲ.

ಅನರ್ಹರು,ಬಿ.ಜೆ.ಪಿ. ಅಭ್ಯರ್ಥಿಗಳಿಗೆ ಮತದಾರರ ಛೀಮಾರಿ
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಸೇರಿದಂತೆ ಡಿ.5 ರಂದು ನಡೆಯುತ್ತಿರುವ ರಾಜ್ಯದ 15 ಕ್ಷೇತ್ರಗಳ ಉಪಚುನಾವಣೆ ಯಲ್ಲಿ ಅನರ್ಹರು,ಬಿ.ಜೆ.ಪಿ. ಅಭ್ಯರ್ಥಿಗಳು,ಬಿ.ಜೆ.ಪಿ.ಪರವಾಗಿ ಮತಯಾಚಿಸುತ್ತಿರುವವರ ವಿರುದ್ಧ ಸಾರ್ವಜನಿಕರ ಆಕ್ರೋಶ ವ್ಯಕ್ತವಾಗುತ್ತಿದೆ. ಇದೇ ವಾರ ಮೊದಲು ಎಚ್.ವಿಶ್ವನಾಥರಿಗೆ ಹುಣಸೂರು ಕ್ಷೇತ್ರದಲ್ಲಿ ತರಾಟೆಗೆ ತೆಗೆದುಕೊಂಡ ಮತದಾರರು. 2 ವರ್ಷಗಳಲ್ಲಿ ಎರಡೆರಡು,ಪಕ್ಷ ಚಿನ್ಹೆಗಳೊಂದಿಗೆ ಮತಬಿಕ್ಷೆಗೆ ಬಂದಿದ್ದೀರಿ ನಾಚಿಕೆಯಾಗುವುದಿಲ್ಲವೇ ಎಂದು ಮೂದಲಿಸಿದ ಪ್ರಸಂಗ ನಡೆದಿದ್ದರೆ,
ಮಂಗಳವಾರ ಯಲ್ಲಾಪುರ ಕ್ಷೇತ್ರದ ಬನವಾಸಿಭಾಗದಲ್ಲಿ ಪ್ರಚಾರಕ್ಕೆ ತೆರಳಿದ್ದ ಅನರ್ಹ ಶಾಸಕ ಶಿವರಾಮ ಹೆಬ್ಬಾರ್ ರಿಗೆ ಹಿಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪರವಾಗಿ ಬಂದಿದ್ದೀರಿ, ಹಿಂದೆ ಒಂದು ಪಕ್ಷ ಈ ಬಾರಿ ಅವರ ವಿರುದ್ಧ. ಮತದಾರರಾದ ನಾವೇನು ನಿಮ್ಮ ಗುಲಾಮರೆ ಎಂದು ಪ್ರಶ್ನಿಸಿ ಮತಕೇಳಲೂ ಅವಕಾಶ ಕೊಡದೆ ಕಾರು ಹತ್ತಿಸಿ ಕೈ ಬಿಟ್ಟ ಪ್ರಸಂಗ ನಡೆದಿದೆ.
ಇಂದು ಅಥಣಿಯಲ್ಲಿ ಬಿ.ಜೆ.ಪಿ.ಯ ಅನರ್ಹ ಶಾಸಕನ ಪರ ಮತ ಯಾಚನೆಗೆ ಹೋದ ಜಿ.ಪಂ. ಸದಸ್ಯನನ್ನು ಕೂಡಿಹಾಕಿ ಪಕ್ಷಾಂತರ, ಲಾಭಕ್ಕಾಗಿ ಸ್ಥಾನಮಾನ ಮಾರಿಕೊಂಡ ಅಭ್ಯರ್ಥಿಗಳು ಮತ್ತು ಅವರ ಪರವಾಗಿ ಹೋಗಿ ನಿರ್ಲಜ್ಜತನದಿಂದ ಮತ ಕೇಳುತ್ತಿರುವ ಅವರ ಅನುಯಾಯಿಗಳು, ಬಿ.ಜೆ.ಪಿ. ಬೆಂಬಲಿಗರಿಗೆ ತಕ್ಕ ಉತ್ತರ ನೀಡಿದ್ದು ವರದಿಯಾಗಿದೆ.
ಹೀಗೆ ಕೆಲವು ಕಡೆ ಮತದಾರರು ನೇರವಾಗಿ ಅನರ್ಹ ಶಾಸಕರು ಮತ್ತು ಅವರ ಬೆಂಬಲಿಗರಿಗೆ ಬೆವರು ತರಿಸುತ್ತಿದ್ದರೆ, ಬಹುತೇಕ ಮತದಾರರು ಜನಮತ ಖರೀದಿಸುವ ಬಿ.ಜೆ.ಪಿ. ಮತ್ತವರ ಬೆಂಬಲಿಗರು, ಅನರ್ಹ ಶಾಸಕರಿಗೆ ಶಪಿಸುತ್ತಾ ಮತದಾನದ ಮೂಲಕ ಪ್ರತಿಕ್ರೀಯಿಸಲು ಕಾಯುತಿದ್ದಾರೆ. ಆದರೆ ಯಲ್ಲಾಪುರ ಸೇರಿದಂತೆ ಬಹುತೇಕ ಪ್ರದೇಶಗಳಲ್ಲಿ ಈ ಬಗ್ಗೆ ವರದಿಮಾಡದ ಮಾಧ್ಯಮಗಳು ಬಿ.ಜೆ.ಪಿ. ಮತ್ತು ಅನರ್ಹ ಶಾಸಕರ ಪರವಾಗಿ ಸಮೀಕ್ಷೆ ಬರೆದು ಋಣ ತೀರಿಸುತಿದ್ದಾರೆ. ಹೀಗೆ ಅನರ್ಹರು, ಬಿ.ಜೆ.ಪಿ. ಪರವಾಗಿ ಜನಾಭಿಪ್ರಾಯ ಸೃಷ್ಟಿಯಾಗುವಂತೆ ಬರೆದು, ಅವರ ಪರ ಜನಾಭಿಪ್ರಾಯ ಬಂದ ಮೇಲೆ ತಾವು ಬರೆದಂತೇ ಆಗಿದೆ ಎಂದುಕೊಳ್ಳುತ್ತಿರುವ ಮಾಧ್ಯಮಗಳುಜನವಿರೋಧಿಯಾಗಿ ವರ್ತಿಸುತ್ತಿರುವ ಬಗ್ಗೆಯೂ ಸಾರ್ವಜನಿಕರ ವಿರೋಧ ವ್ಯಕ್ತವಾಗುತ್ತಿದೆ.

ದೇಶಪಾಂಡೆ ವಿರುದ್ಧ ಘೋಷಣೆ ಕೂಗಿ ಸಂಘರ್ಷಕ್ಕೆ ಕಾರಣರಾದ ಬಿ.ಜೆ.ಪಿ.ಕಾರ್ಯಕರ್ತರು
ಯಲ್ಲಾಪುರ ಉಪಚುನಾವಣೆಯ ಪ್ರಚಾರ ಕಾರ್ಯದಲ್ಲಿದ್ದ ಮಾಜಿ ಸಚಿವ, ಕಾಂಗ್ರೆಸ್ ನಾಯಕ ಆರ್.ವಿ.ದೇಶಪಾಂಡೆ ವಿರುದ್ಧ ಬಿ.ಜೆ.ಪಿ. ಕಾರ್ಯಕರ್ತರು ಘೋಷಣೆ ಕೂಗಿ ಗಲಾಟೆಗೆ ಕಾರಣರಾದ ಪ್ರಸಂಗ ಶಿರಸಿ ದಾಸನಕೊಪ್ಪ ಬಳಿಯ ರಾಮಾಪುರದಲ್ಲಿ ಇಂದು ನಡೆದಿದೆ.
ಶಿವರಾಮ ಹೆಬ್ಬಾರ್ ಸೋಲಿಸಿ,ಭೀಮಣ್ಣ ನಾಯ್ಕರನ್ನು ಗೆಲ್ಲಿಸಲು ಪಣ ತೊಟ್ಟಿರುವ ಮಾಜಿ ಸಚಿವ ಆರ್.ವಿ.ದೇಶಪಾಂಡೆ ದಿನನಿತ್ಯ ಯಲ್ಲಾಪುರ, ಮುಂಡಗೋಡು ತಾಲೂಕುಗಳಲ್ಲಿ ಪ್ರಚಾರ ನಡೆಸುತಿದ್ದಾರೆ. ದೇಶಪಾಂಡೆಯವರ ನಿರಂತರ ಪ್ರಚಾರ, ಹೆಬ್ಬಾರ್ ವಿರುದ್ಧ ಜನಾಕ್ರೋಶದ ಹಿನ್ನೆಲೆಯಲ್ಲಿ ಇಂದು ರಾಮಾಪುರದಲ್ಲಿ ಖ್ಯಾತೆ ತೆಗೆದ ಬಿ.ಜೆ.ಪಿ. ಕಾರ್ಯಕರ್ತರು ಮಾಜಿ ಸಚಿವ ಆರ್.ವಿ.ದೇಶಪಾಂಡೆ ವಿರುದ್ಧ ಘೋಷಣೆ ಕೂಗಿ ಗಲಾಟೆಗೆ ಪ್ರಯತ್ನಿಸಿದರು.
ಆಗ ಅಲ್ಲಿ ಸೇರಿದ ಕಾಂಗ್ರೆಸ್ ಕಾರ್ಯಕರ್ತರಿಗೂ, ಬಿ.ಜೆ.ಪಿ. ಕಾರ್ಯಕರ್ತರಿಗೂ ಘರ್ಷಣೆ ಪ್ರಾರಂಭವಾಯಿತು. ಪೊಲೀಸರ ಸಕಾಲಿಕ ಪ್ರವೇಶದಿಂದ ಗುಂಪು ಘರ್ಷಣೆ ನಿಲ್ಲಿಸಿ, ಪರಿಸ್ಥಿತಿಯನ್ನು ಹತೋಟಿಗೆ ತರಲಾಯಿತು.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಶನಿವಾರ…ಶಾಸಕರು,ಸಂಸದರ ಕಾರ್ಯಕ್ರಮಗಳು

ಇಟಗಿ ರಾಮೇಶ್ವರ ಮತ್ತು ಪರಿವಾರ ದೇವಾಲಯಗಳ ಅಷ್ಟಬಂಧ ಕಾರ್ಯಕ್ರಮದಲ್ಲಿ ಏ.೫ ರ ಶನಿವಾರ ಸಾಯಂಕಾಲ ಸಂಜೆ ನಾಲ್ಕರಿಂದ ಭರತನಾಟ್ಯ ರಕ್ಷಾ & ದೀಕ್ಷಾ ರಾವ್‌...

ಸಿದ್ಧಾಪುರದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಜಾತ್ರೆ! ನಮ್ಮೂರು ಇಂದು ನಾಳೆ…..

* ಸಿದ್ಧಾಪುರ ಇಟಗಿಯ ರಾಮೇಶ್ವರ ದೇವರ ದಿವ್ಯಾಷ್ಟಬಂಧ ಕಾರ್ಯಕ್ರಮ ಪ್ರಾರಂಭವಾಗಿದೆ. ಈ ಕಾರ್ಯಕ್ರಮದ ಅಂಗವಾಗಿ ಪ್ರತಿದಿನ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ.

senaa sevaa-ಸೈನಿಕನಿಗೆ ಹುಟ್ಟೂರಿನ ಗೌರವ

ಸಿದ್ದಾಪುರ: ಭಾರತೀಯ ಸೈನ್ಯದಲ್ಲಿ ಹದಿನೇಳು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಪಡೆದು ತಾಯ್ನಾಡಿಗೆ ಮರಳಿದ ಸಿದ್ದಾಪುರ ತಾಲೂಕಿನ ಸಂಪೇಕೇರಿಯ(ಮುಗದೂರ) ವಿನಯಕುಮಾರ ನಾಯ್ಕ ರಿಗೆ...

ಕದಂಬಜಿಲ್ಲೆಗಾಗಿ ಸಹಿಸಂಗ್ರಹಣೆ, ಕಾನಳ್ಳಿಯಲ್ಲಿ ಹಸ್ಲರ್‌ ಸಂಘಕ್ಕೆ ಚಾಲನೆ,ಸೋಮುವಾರ ಮಹಿಳಾ ಸಂವೇದನೆ ಕವಿಗೋಷ್ಠಿ‌

ನಿರಂತರ ಹೋರಾಟದಲ್ಲಿರುವ ಶಿರಸಿ ಕೇಂದ್ರಿತ ಪ್ರತ್ಯೇಕ ಕದಂಬ ಜಿಲ್ಲೆ ಹೋರಾಟ ಸಮೀತಿ ಈ ತಿಂಗಳಿಂದ ಸಿದ್ಧಾಪುರದ ಗ್ರಾಮೀಣ ಪ್ರದೇಶಗಳಲ್ಲಿ ಪ್ರತ್ಯೇಕ ಜಿಲ್ಲೆಗಾಗಿ ಸಹಿ ಸಂಗ್ರಹಣೆ...

ಧಾರ್ಮಿಕ, ಆರ್ಥಿಕ, ಶೈಕ್ಷಣಿಕ ಕೆಲಸಗಳಿಂದ ಸುಸ್ಥಿರ ಅಭಿವೃದ್ಧಿ… ಅರಶಿನಗೋಡು ಅಷ್ಟಬಂಧ ಹಾಗೂ ಬ್ರಹ್ಮಕಲಶೋತ್ಸವ ಸಂಪನ್ನ

ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶಿಕ್ಷಣ ಮತ್ತು ಉದ್ಯೋಗ ಗಳಿಗೆ ಹೆಚ್ಚಿನ ಮಹತ್ವ ನೀಡಿದರೆ ಹೊಸ ಪೀಳಿಗೆ ಮಹತ್ವದ್ದನ್ನು ಸಾಧಿಸಲು ಸಾಧ್ಯ ಎಂದಿರುವ ಶಾಸಕ ಭೀಮಣ್ಣ ನಾಯ್ಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *