

ಡಿ.5 ರಂದು ರಾಜ್ಯದಲ್ಲಿ ನಡೆಯುತ್ತಿರುವ ಉಪಚುನಾವಣೆಯಲ್ಲಿ ಅರ್ಧಕ್ಕಿಂತ ಹೆಚ್ಚು ಅನರ್ಹ ಶಾಸಕರು ಸೋಲುವ ಆತಂಕದ ಹಿನ್ನೆಲೆಯಲ್ಲಿ ಅನರ್ಹರು ಸೋತರೆ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿಸಿ ಸಚಿವರನ್ನಾಗಿ ಮಾಡಲು ಬಿ.ಜೆ.ಪಿ. ತೀರ್ಮಾನಿಸಿದೆಯಂತೆ. ಚುನಾವಣಾ ಪೂರ್ವ ಸಮೀಕ್ಷೆಗಳ ಹಿನ್ನೆಯಲ್ಲಿ ಬಿ.ಜೆ.ಪಿ.ಯಿಂದ ಸ್ಫರ್ಧಿಸಿರುವ ಅನರ್ಹ ಶಾಸಕರಲ್ಲಿ ಅರ್ಧಕ್ಕಿಂತ ಹೆಚ್ಚು ಜನ ಸೋಲುವ ಹಿನ್ನೆಲೆಯಲ್ಲಿ ಅವರನ್ನು ವಿಧಾನಪರಿಷತ್ ಸದಸ್ಯರನ್ನಾಗಿಸಿ ಸಚಿವರನ್ನಾಗಿಸಲು ಅಮಿತ್ ಶಾ ಸಲಹೆ ನೀಡಿದ್ದಾರಂತೆ.
ಈ ಬಗ್ಗೆ ಚರ್ಚೆ ಸಂವಾದಗಳು ನಡೆಯುತ್ತಿದ್ದು ಕಾಂಗ್ರೆಸ್, ಜೆ.ಡಿ.ಎಸ್.ಪಕ್ಷಗಳು ಅನರ್ಹರ ಸೋಲಿಗೆ ಶತಾಯ ಗತಾಯ ಪ್ರಯತ್ನಿಸುತ್ತಿರುವಂತೆ ಅನರ್ಹರಲ್ಲಿ ಅರ್ಧಕ್ಕಿಂತ ಹೆಚ್ಚು ಜನರು ಸೋಲುವುದು ಖಚಿತ ಎನ್ನಲಾಗಿದೆ.
ಬಿ.ಜೆ.ಪಿ.ಯಿಂದ ಸ್ಫರ್ಧಿಸಿರುವ ಅನರ್ಹರ ಸೋಲು ಮನಗಂಡಿರುವ ಬಿ.ಜೆ.ಪಿ. ಸೋತ ಅನರ್ಹರನ್ನು ವಿಧಾನಪರಿಷತ್ ಸದಸ್ಯರನ್ನಾಗಿಸಲು 7 ಜನ ವಿ.ಪ.ಸದಸ್ಯರಿಗೆ ರಾಜೀನಾಮೆ ಕೊಡಿಸಿ ಅವರ ಜಾಗಕ್ಕೆ ಅನರ್ಹ ಶಾಸಕರನ್ನು ಕೂರಿಸಿ, ಅವರನ್ನು ಸಚಿವರನ್ನಾಗಿಸಲು ಬಿ.ಜೆ.ಪಿ. ಯೋಜಿಸಿದೆಯಂತೆ. ಇದಕ್ಕೆ ಪ್ರತಿತಂತ್ರ ಹೂಡಿರುವ ಜೆ.ಡಿ.ಎಸ್., ಕಾಂಗ್ರೆಸ್ ಗಳು ಬಿ.ಜೆ.ಪಿ. ಸರ್ಕಾರವನ್ನೇ ಕೆಡವಿ ತಾವು ಅಧಿಕಾರಕ್ಕೆ ಬರುವ ಸಾಧ್ಯತೆಗಳ ಬಗ್ಗೆ ಪ್ರಯತ್ನಿಸುತ್ತಿವೆಯಂತೆ!
ಈ ನಡುವೆ ಅನರ್ಹರಂತೂ ಸೋಲಲಿ,ಗೆಲ್ಲಲಿ ಅವರಿಗೆ ಅಧಿಕಾರ ನೀಡುತ್ತೇವೆ ಎಂದು ಬಿ.ಜೆ.ಪಿ. ಪ್ರಕಟಿಸಿದ ಸುದ್ದಿ ತಿಳಿದ ರಾಜ್ಯದ ಪ್ರಗತಿಪರರು ಅನರ್ಹರಂತೂ ಹ್ಯಾಗಿದ್ದರೂ ಅಧಿಕಾರ ಪಡೆಯುತ್ತಾರೆ ಹಾಗಾಗಿ ಅವರ ವಿರುದ್ಧ ಸ್ಫರ್ಧಿಸಿದವರಿಗೆ ಆಯ್ಕೆ ಮಾಡಿ ಹೀಗೆ ಅರ್ಹರನ್ನು ಗೆಲ್ಲಿಸುವ ಮೂಲಕ ನಿಮ್ಮ ಕ್ಷೇತ್ರದ ಅಭಿವೃದ್ಧಿಗೆ ಮತ್ತೊಬ್ಬರನ್ನು ಆಯ್ಕೆಮಾಡಿದಂತಾಗುತ್ತದೆ ಎಂದಿದ್ದಾರಂತೆ.
