

ನಾಡದೇವಿ ಶ್ರೀ ಭುವನೇಶ್ವರಿ ಅಭಿಮಾನೋತ್ಸವ ಬಳಗವು ಕನ್ನಡ ರಾಜ್ಯೋತ್ಸವದ ಅಂಗವಾಗಿ ನ.29ರಂದು ಭುವನಗಿರಿಯ ಶ್ರೀ ಭುವನೇಶ್ವರಿ ದೇವಸ್ಥಾನದಲ್ಲಿ ನಾಡದೇವಿಯ ಅಭಿಮಾನೋತ್ಸವ ಕಾರ್ಯಕ್ರಮವನ್ನು ಆಯೋಜಿಸಿದೆ.
ನ.29ರ ಬೆಳಿಗ್ಗೆ 6ಕ್ಕೆ ಮಂಗಳವಾದ್ಯ ನಾದಸ್ವರದೊಂದಿಗೆ ಆರಂಭಗೊಂಡು ಮೂಲನಿವಾಸಿನಿ ಶ್ರೀ ಭುವನೇಶ್ವರಿ ಅಮ್ಮನವರಿಗೆ ಅಭಿಷೇಕ, ಪೂಜಾ ಕೈಂಕರ್ಯಗಳು ದೇವಸ್ಥಾನದ ಪ್ರಧಾನ ಅರ್ಚಕ ವೇ| ಶ್ರೀಧರ ಭಟ್ಟ ಮುತ್ತಿಗೆಯವರ ನೇತೃತ್ವದಲ್ಲಿ, ವೇ|ಶೇಷಗಿರಿ ಭಟ್ಟ ಗುಂಜಗೋಡ ಸಂಯೋಜಕತ್ವದಲ್ಲಿ ನಡೆಯುವದು.
9ರಿಂದ ಉದಯ ಟಿವಿ ಸಮಸ್ತೆ ಶಂಕರ ಕಾರ್ಯಕ್ರಮದ ಗುರು ವಿದ್ವಾನ್ ಡಾ| ಗೋಪಾಲಕೃಷ್ಣ ಜೋಶಿಯವರ ಮಾರ್ಗದರ್ಶನದಲ್ಲಿ ಚಂಡಿಕಾಯಾಗ ಜರುಗುವದು.10ರಿಂದ ಕುಂಕುಮಾರ್ಚನೆ, ನಂತರ ಶ್ರೀ ಶ್ರೀಧರ ಸ್ವಾಮಿಗಳ ಪಾದುಕಾಪೂಜೆ, 12.30ಕ್ಕೆ ಮಹಾಮಂಗಳಾರತಿ, ನಂತರ ಮಹಾಪ್ರಸಾದ ವಿನಿಯೋಗ ನಡೆಯುವದು.
ಸಂಜೆ 4ರಿಂದ ಸಾಂಸ್ಕøತಿಕ ಕಾರ್ಯಕ್ರಮ, ಕೇಶವ ಹೆಗಡೆ ಕೊಳಗಿ, ಗೋಪಾಲ ಆಚಾರ್ಯ, ಅಶೋಕ ಭಟ್ ಸಿದ್ದಾಪುರ ಮುಂತಾದ ಕಲಾವಿದರ ಪಾಲ್ಗೊಳ್ಳುವಿಕೆಯಲ್ಲಿ ಚಂದ್ರಾವಳಿ ವಿಲಾಸ ಯಕ್ಷಗಾನ, ನಂತರ ರಸಮಂಜರಿ ಕಾರ್ಯಕ್ರಮಗಳು ನಡೆಯುವದು. ಈ ಎಲ್ಲ ಕಾರ್ಯಕ್ರಮಗಳಲ್ಲಿ ಸಮಸ್ತರೂ ಪಾಲ್ಗೊಳ್ಳಬೇಕೆಂದು ಶ್ರೀ ಭುವನೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ವೇ| ಶ್ರೀಧರ ಭಟ್ಟ ಹಾಗೂ ಶ್ರೀ ಭುವನೇಶ್ವರಿ ದೇವಸ್ಥಾನದ ಆಡಳಿತ ಸಮಿತಿಯವರು ಕೋರಿಕೊಂಡಿದ್ದಾರೆ.
ಕರ್ನಾಟಕದ ನಾಡದೇವಿ ಶ್ರೀ ಭುವನೇಶ್ವರಿಯ ದೇವಿಯ ಕುರಿತಾಗಿ ಕನ್ನಡಿಗರು ಮಾತ್ರವಲ್ಲದೇ ಅನ್ಯಭಾಷಿಕರೂ ಅಭಿಮಾನ, ಪೂಜ್ಯ ಭಾವನೆಯನ್ನು ಹೊಂದಿದ್ದಾರೆ.ಕರ್ನಾಟಕ ಸಾಹಿತ್ಯ, ಕಲೆ, ಸಂಸ್ಕøತಿಗೆ ಹೆಸರಾದಂತೆ ಸ್ವಾಭಿಮಾನ, ಕರ್ಮಯೋಗಕ್ಕೆ ಹೆಸರಾದದ್ದು. ನಮ್ಮ ರಾಜ್ಯವು ಪ್ರಕೃತಿವಿಕೋಪ ಮುಂತಾದ ಸಮಸ್ಯೆಗಳಿಂದ ನಲುಗಿಹೋಗಿದ್ದು ಕನ್ನಡಿಗರಾದ ನಾವು ನಮ್ಮ ಬದುಕನ್ನು ನಾವೇ ಕಟ್ಟಿಕೊಳ್ಳಬೇಕಿದೆ.
ನಾಡದೇವಿ ಮುನಿದರೆ ವಿಕೋಪಗಳು ಮತ್ತೆ, ಮತ್ತೆ ಕಾಣಿಸಿಕೊಳ್ಳುತ್ತವೆ. ನಾವು ಮೊಟ್ಟಮೊದಲು ಮಾಡಬೇಕಾದ ಶುಭಕಾರ್ಯವೆಂದರೆ ನಾಡದೇವಿಯನ್ನು ಸಂತೃಪ್ತಗೊಳಿಸಬೇಕು. ಹಾಗಾದಾಗ ಮಾತ್ರ ನಾಡು ಮತ್ತಷ್ಟು ಸಮೃದ್ಧಿ ಕಾಣುತ್ತದೆ. ಈ ಕಾರಣದಿಂದ ಸಮಸ್ತ ಕನ್ನಡಿಗರ ಪರವಾಗಿ ಪ್ರಥಮ ಹೆಜ್ಜೆಯಾಗಿ ನ.29ರಂದು ಸಂಸ್ಕಾರಯುತ ಶುಭಕಾರ್ಯಕ್ಕೆ ಶ್ರೀ ಭುವನೇಶ್ವರಿ ದೇವಸ್ಥಾನದ ಆಡಳಿತ ಮಂಡಳಿ, ಪ್ರಧಾನ ಅರ್ಚಕರು, ಇನ್ನಿತರ ವಿದ್ವಾಂಸರ, ಅಸಂಖ್ಯಾತ ಭಕ್ತರ ಸಹಕಾರದೊಂದಿಗೆ ಮುಂದಾಗಿದ್ದೇವೆ.
ಎಲ್ಲ ಕನ್ನಡದ ಕಟ್ಟಾಳುಗಳು, ಶ್ರೀ ದೇವಿಯ ಭಕ್ತರು ಈ ಕಾರ್ಯದಲ್ಲಿ ಪಾಲ್ಗೊಳ್ಳಬೇಕು ಎಂದು ಅಭಿಮಾನೋತ್ಸವ ಬಳಗದ ಪರವಾಗಿ ಲೋಕೇಶ್ ಹೆಗಡೆ ಪ್ರಕಟಣೆಯಲ್ಲಿ ಕೋರಿದ್ದಾರೆ.
ಅನರ್ಹರು ಸೋತರೂ
ಮಂತ್ರಿ,ಗೆದ್ದರೆ ಸಚಿವರು
ಡಿ.5 ರಂದು ರಾಜ್ಯದಲ್ಲಿ ನಡೆಯುತ್ತಿರುವ ಉಪಚುನಾವಣೆಯಲ್ಲಿ ಅರ್ಧಕ್ಕಿಂತ ಹೆಚ್ಚು ಅನರ್ಹ ಶಾಸಕರು ಸೋಲುವ ಆತಂಕದ ಹಿನ್ನೆಲೆಯಲ್ಲಿ ಅನರ್ಹರು ಸೋತರೆ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿಸಿ ಸಚಿವರನ್ನಾಗಿ ಮಾಡಲು ಬಿ.ಜೆ.ಪಿ. ತೀರ್ಮಾನಿಸಿದೆಯಂತೆ. ಚುನಾವಣಾ ಪೂರ್ವ ಸಮೀಕ್ಷೆಗಳ ಹಿನ್ನೆಯಲ್ಲಿ ಬಿ.ಜೆ.ಪಿ.ಯಿಂದ ಸ್ಫರ್ಧಿಸಿರುವ ಅನರ್ಹ ಶಾಸಕರಲ್ಲಿ ಅರ್ಧಕ್ಕಿಂತ ಹೆಚ್ಚು ಜನ ಸೋಲುವ ಹಿನ್ನೆಲೆಯಲ್ಲಿ ಅವರನ್ನು ವಿಧಾನಪರಿಷತ್ ಸದಸ್ಯರನ್ನಾಗಿಸಿ ಸಚಿವರನ್ನಾಗಿಸಲು ಅಮಿತ್ ಶಾ ಸಲಹೆ ನೀಡಿದ್ದಾರಂತೆ.
ಈ ಬಗ್ಗೆ ಚರ್ಚೆ ಸಂವಾದಗಳು ನಡೆಯುತ್ತಿದ್ದು ಕಾಂಗ್ರೆಸ್, ಜೆ.ಡಿ.ಎಸ್.ಪಕ್ಷಗಳು ಅನರ್ಹರ ಸೋಲಿಗೆ ಶತಾಯ ಗತಾಯ ಪ್ರಯತ್ನಿಸುತ್ತಿರುವಂತೆ ಅನರ್ಹರಲ್ಲಿ ಅರ್ಧಕ್ಕಿಂತ ಹೆಚ್ಚು ಜನರು ಸೋಲುವುದು ಖಚಿತ ಎನ್ನಲಾಗಿದೆ.
