ಆರೋಗ್ಯಕರ ಮಕ್ಕಳು, ಆರೋಗ್ಯಕರ ಮನಸು ನಿರ್ಮಾಣಗಳಿಂದ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯ
-ತಮ್ಮಣ್ಣ ಬೀಗಾರ್
ಕಣ್ಣಿನ ದೋಷದಿಂದ ಎಳೆಯರ ಬೆಳವಣಿಗೆ ಮತ್ತು ಶಿಕ್ಷಣಕ್ಕೆ ಅಡ್ಡಿಯಾಗಿದ್ದು ಈ ತೊಂದರೆ ನಿವಾರಿಸುವ ಮೂಲಕ ಮಕ್ಕಳ ಬೆಳವಣಿಗೆ ಮತ್ತು ಶಿಕ್ಷಣದ ಪ್ರಗತಿಗೆ ಲಯನ್ಸ್ ಸಂಸ್ಥೆ ಅಪಾರ ಕೊಡುಗೆ ನೀಡಿದೆ ಎಂದು ಲಯನ್ಸ್ ಡಿಸ್ಟಿಕ್ಟ್ ಮಾಜಿ ಗೌರ್ನರ್ ರವಿ ಹೆಗಡೆ ಹೂವಿನ ಮನೆ ಹೇಳಿದ್ದಾರೆ.
ಇಲ್ಲಿಯ ಹೊಸೂರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಲಯನ್ಸ್ ಪ್ರಾಯೋಜಿತ ಕಣ್ಣಿನ ಉಚಿತ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಎಳೆವಯಸ್ಸಿನಲ್ಲಿ ಕಣ್ಣಿನ ತಪಾಸಣೆ ಮತ್ತು ಚಿಕಿತ್ಸೆ ಮಾಡಿಸುವ ಮೂಲಕ ಸಂಭಾವ್ಯತೊಂದರೆ ತಪ್ಪಿಸಬಹುದು ಎಂದು ಸಲಹೆ ನೀಡಿದ ಮುಖ್ಯ ಅತಿಥಿ ಜಿ.ಎ.ಹೆಗಡೆ, ಲಯನ್ಸ್ ಈ ಕೆಲಸಮಾಡುವ ಮೂಲಕ ಅನೇಕರಿಗೆ ದಾರಿದೀಪವಾಗಿದೆ ಎಂದರು.
ಪ್ರಾಸ್ಥಾವಿಕವಾಗಿ ಮಾತನಾಡಿದ ಲಯನ್ಸ್ ಅಧ್ಯಕ್ಷ ಸಿ.ಎಸ್.ಗೌಡರ್ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಮೊದಲು ಈ ಶಿಬಿರಗಳನ್ನು ಮಾಡುವುದಾಗಿ ತಿಳಿಸಿದರು. ಮುಖ್ಯಾಧ್ಯಾಪಕ ಜಿ.ಎಂ.ಗೊಂಡ ವಂದಿಸಿದರು.