

ಸಿದ್ಧಾಪುರ ಸೇರಿದಂತೆ ಉತ್ತರಕನ್ನಡ ಜಿಲ್ಲೆ ಈ ವರ್ಷ ಅನುಭವಿಸಿದ ಮಳೆ, ಪ್ರವಾಹದ ರಗಳೆ ನೆನಪಿಸಿಕೊಂಡರೆ ಸಾರ್ವಜನಿಕರಿಗೆ ಭೀತಿ ಆವರಿಸುತ್ತದೆ. ಈ ಪ್ರವಾಹದ ಸಂತೃಸ್ತರಿಗಂತೂ ಮಳೆ, ನೆರೆ ತೊಳ್ಳೆ ನಡುಗಿಸುತ್ತವೆ.
ಸಿದ್ಧಾಪುರ ತಾಲೂಕಿನ 42 ಕುಟುಂಬಗಳು, ಜಿಲ್ಲೆಯ 500 ಕ್ಕೂ ಹೆಚ್ಚು ಕುಟುಂಬಗಳು ಮಳೆ, ಚಳಿ, ಪ್ರವಾಹದಲ್ಲಿ ನಲುಗಿದವಲ್ಲ, ಆ ಜನರಿಗೆ ಸರ್ಕಾರ ಏನಾದರೂ ಅನುಕೂಲ ಮಾಡಿದೆಯಾ ಎಂದರೆ… ಉತ್ತರ ನಿರಾಶಾದಾಯಕ.
ಉತ್ತರಕನ್ನಡದ ಜನ ನೆರೆ, ಮಳೆಯಲ್ಲಿ ಕೊಚ್ಚಿ ಹೋಗುತ್ತಾ ಬವಣೆ ಪಡುತಿದ್ದಾಗ ಮರುಗಿದವರೆಷ್ಟು, ಪಕ್ಷ, ಸಂಘಟನೆ, ಜನಪ್ರತಿನಿಧಿತ್ವ ಇವುಗಳ ಸೋಗಿನಲ್ಲಿ ಬಂದು ಹೋದವರೆಷ್ಟು?
ಪ್ರತಿದಿನ ಪತ್ರಿಕೆ,ಮಾಧ್ಯಮಗಳಲ್ಲಿ ದಾನಿಗಳು, ಅಧಿಕಾರಸ್ಥರು ಮಿಂಚಿದ್ದೇ ಮಿಂಚಿದ್ದು. ಜಿಲ್ಲಾಡಳಿತ ತನ್ನ ಅಂದಿನ ಕರ್ತವ್ಯವನ್ನು ಮುತುವರ್ಜಿಯಿಂದ ಮಾಡಿದ್ದು ಬಿಟ್ಟರೆ ಉಳಿದೆಲ್ಲವೂ ಲೊಳಲೊಟ್ಟೆ. ಸರ್ಕಾರ ತಾತ್ಕಾಲಿಕ, ಶೀಘ್ರ ಪರಿಹಾರವೆಂದು ಪ್ರತಿಕುಟುಂಬಕ್ಕೆ ತಲಾ ಹತ್ತು ಸಾವಿರ ನೆರವು ನೀಡಿದ್ದು ಬಿಟ್ಟರೆ ನೆರೆ ಇಳಿದು ಹೋದಂತೆ ದಾನಿಗಳು, ಅಧಿಕಾರಿಗಳು, ಅಧಿಕಾರಸ್ಥರು ಇಳಿದು ಹೋಗೇ ಬಿಟ್ಟರು.
ಸಂತೃಸ್ತರನ್ನು ಕೇಳಿದವರು ಯಾರೂ ಇಲ್ಲ. ಯಲ್ಲಾಪುರ ಕ್ಷೇತ್ರದಲ್ಲಿ ಚುನಾವಣೆ ನಡೆದಿದ್ದರಿಂದ ನೆರೆ ಸಂತ್ರಸ್ತರ ಊರಲ್ಲಿ ಪ್ರವಾಹ ಇಳಿದು ಮಳೆ ನಿಂತು ಹೋದಮೇಲೆ ಮೊಸಳೆ ಕಣ್ಣೀರು ಬಿದ್ದದ್ದೇ ಪುಣ್ಯ.
ಅನರ್ಹರೂ ಇಲ್ಲ, ಅವರ ಸರ್ಕಾರವೂ ಇಲ್ಲ, ಅವರನ್ನು ಎಚ್ಚರಿಸುವ ವಿರೋಧಿಗಳು, ವಿರೋಧಿ ಪಕ್ಷಗಳೂ ಇಲ್ಲ. ನಾಳೆ ಉಪಚುನಾವಣೆ ಮತದಾನ ಮತ್ತೆ ಚುನಾವಣೆ ನಡೆಯುವ ವರೆಗೆ ಈ ರಾಜಕಾರಣಿಗಳು, ಜನಪ್ರತಿನಿಧಿಗಳು ಇತ್ತ ಮುಖಮಾಡಿ ಮಲಗುವುದೂ ದುಸ್ತರ.
ಇಂಥ ಸತ್ಯ ದರ್ಶನಕ್ಕೆ ಸಿದ್ಧಾಪುರದ ನೆರೆ ಸಂತೃಸ್ತರ ಗ್ರಾಮಗಳಾದ ಕಲ್ಯಾಣಪುರ,ಸೋವಿನಕೊಪ್ಪಗಳನ್ನು ನೋಡಬೇಕು.
ಸೋವಿನಕೊಪ್ಪದಲ್ಲಿ ನೆರೆ ಸಂತೃಸ್ತರು ಈಗಲೂ ಹಳ್ಳಿಬೈಲ್ ಸರ್ಕಾರಿ ಪ್ರೌಢ ಶಾಲೆಯಲ್ಲೇ ಇದ್ದಾರೆ. ಅಕ್ಕುಂಜಿ, ಕಲ್ಯಾಣಪುರಗಳಲ್ಲಿ ಸಂತೃಸ್ತರ ಕೇಂದ್ರಗಳಲ್ಲಿದ್ದವರು ಅವರವರ ಮನೆ ಸೇರಿದ್ದಾರೆ.
ಸರ್ಕಾರ ಹತ್ತು ಸಾವಿರ ಕೊಟ್ಟಿದ್ದು ಬಿಟ್ಟರೆ ನಮ್ಮ ಮನೆಗಳಿಗೆ ಆದ ಹಾನಿ, ದವಸ,ಧಾನ್ಯ, ಕೋಳಿ, ಎಮ್ಮೆ ಸತ್ತದ್ದಕ್ಕೆಲ್ಲಾ ಏನೂ ಪರಿಹಾರವಿಲ್ಲ ಎಂದು ದುಖಿ:ಸುತ್ತಾರೆ ಕಲ್ಯಾಣಪುರದ ಜನ.
ಪ್ರವಾಹ ಬಂದಾಗ ತಮ್ಮ ಕ್ಷೇತ್ರಕ್ಕೆ ಓಡೋಡಿ ಬಂದಿದ್ದ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ ಭರವಸೆ ನೀಡಿದ್ದರು. ಆದರೆ ಅವರು ಮುಖ್ಯಮಂತ್ರಿಗಳಿಗೆ ಬರೆದ ಪತ್ರದ ಪ್ರತಿ ನಮಗೆ ಮುಟ್ಟಿದ್ದು ಬಿಟ್ಟರೆ ನಮ್ಮನ್ನ್ಯಾರೂ ಹೇಳುವವರು, ಕೇಳುವವರು ಇಲ್ಲ ಎನ್ನುವ ಕೊರಗು ಅಲ್ಲಿಯ ಸಂತೃಸ್ತರದ್ದು.
ಸೋವಿನಕೊಪ್ಪ, ಹೆಮ್ಮನಬೈಲ್ ಗಳಲ್ಲಿ ಹೊಳೆ ನುಗ್ಗಿದ್ದು, ಕಲ್ಯಾಣಪುರದಲ್ಲಿ ನೀರು, ಮಣ್ಣು ಮನೆ ತುಂಬಿದ್ದು ಈಗಲೂ ದುಸ್ವಪ್ನ.
ಆದರೆ ಅಂದಿನ ಮಳೆ,ಪ್ರವಾಹವನ್ನು ಮರೆತ ಆಡಳಿತ, ಸರ್ಕಾರ ಚುನಾವಣೆ, ಭರವಸೆ, ಘೋಷಣೆಗಳಲ್ಲಿ ಮುಂದುವರಿದಿದೆ. ಅನರ್ಹರು ಸರ್ಕಾರದಿಂದ ಕೋಟಿ, ಕೋಟಿ ತಂದ ಕತೆ ಕಟ್ಟಿ, ಮತ ಕೇಳಿದ್ದಾರೆ.
ಅವರ್ಯಾರಿಗೂ ಮಳೆ, ಪ್ರವಾಹ ಸಂತೃಸ್ತರ ನೆನಪಿಲ್ಲ. ಭಾರತದ ನೀರೋ ವಿದೇಶಿ ಪ್ರವಾಸ ಬಿಟ್ಟರೆ, ಚುನಾವಣೆಗಳ ಪ್ರಚಾರ ಮಾಡುತಿದ್ದಾನೆ. ಸತ್ಯ ಹೇಳಿದರೆ ದೇಶದ್ರೋಹಿ ಪಟ್ಟ. ಮೇರಾ ಭಾರತ ಮಹಾನ್ ಭಾರತದ ದುಖ:ತಪ್ತರನ್ನು ರಕ್ಷಿಸು ಎನ್ನುವುದೊಂದೇ ದಾರಿ.
ವಿರೋಧ ಪಕ್ಷಗಳೂ ಚುನಾವಣೆ ವೇಳೆಗೆ ಏಳುವುದನ್ನು ಬಿಡುವಂತಾಗಲಿ.ಚುನಾವಣೆ ಮುಗಿದ ಮೇಲಾದರೂ ಈ ಗ್ರಾಮಗಳತ್ತ ನೋಡಿ ಎನ್ನುವ ಬೇಡಿಕೆ ಆ ಅಸಹಾಯಕರದ್ದು.
ಕಣ್ಣಿನ ದೋಷದಿಂದ ಎಳೆಯರ ಬೆಳವಣಿಗೆ ಮತ್ತು ಶಿಕ್ಷಣಕ್ಕೆ ಅಡ್ಡಿ
ಆರೋಗ್ಯಕರ ಮಕ್ಕಳು, ಆರೋಗ್ಯಕರ ಮನಸು ನಿರ್ಮಾಣಗಳಿಂದ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯ
-ತಮ್ಮಣ್ಣ ಬೀಗಾರ್
ಕಣ್ಣಿನ ದೋಷದಿಂದ ಎಳೆಯರ ಬೆಳವಣಿಗೆ ಮತ್ತು ಶಿಕ್ಷಣಕ್ಕೆ ಅಡ್ಡಿಯಾಗಿದ್ದು ಈ ತೊಂದರೆ ನಿವಾರಿಸುವ ಮೂಲಕ ಮಕ್ಕಳ ಬೆಳವಣಿಗೆ ಮತ್ತು ಶಿಕ್ಷಣದ ಪ್ರಗತಿಗೆ ಲಯನ್ಸ್ ಸಂಸ್ಥೆ ಅಪಾರ ಕೊಡುಗೆ ನೀಡಿದೆ ಎಂದು ಲಯನ್ಸ್ ಡಿಸ್ಟಿಕ್ಟ್ ಮಾಜಿ ಗೌರ್ನರ್ ರವಿ ಹೆಗಡೆ ಹೂವಿನ ಮನೆ ಹೇಳಿದ್ದಾರೆ.
ಇಲ್ಲಿಯ ಹೊಸೂರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಲಯನ್ಸ್ ಪ್ರಾಯೋಜಿತ ಕಣ್ಣಿನ ಉಚಿತ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಎಳೆವಯಸ್ಸಿನಲ್ಲಿ ಕಣ್ಣಿನ ತಪಾಸಣೆ ಮತ್ತು ಚಿಕಿತ್ಸೆ ಮಾಡಿಸುವ ಮೂಲಕ ಸಂಭಾವ್ಯತೊಂದರೆ ತಪ್ಪಿಸಬಹುದು ಎಂದು ಸಲಹೆ ನೀಡಿದ ಮುಖ್ಯ ಅತಿಥಿ ಜಿ.ಎ.ಹೆಗಡೆ, ಲಯನ್ಸ್ ಈ ಕೆಲಸಮಾಡುವ ಮೂಲಕ ಅನೇಕರಿಗೆ ದಾರಿದೀಪವಾಗಿದೆ ಎಂದರು.
ಪ್ರಾಸ್ಥಾವಿಕವಾಗಿ ಮಾತನಾಡಿದ ಲಯನ್ಸ್ ಅಧ್ಯಕ್ಷ ಸಿ.ಎಸ್.ಗೌಡರ್ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಮೊದಲು ಈ ಶಿಬಿರಗಳನ್ನು ಮಾಡುವುದಾಗಿ ತಿಳಿಸಿದರು. ಮುಖ್ಯಾಧ್ಯಾಪಕ ಜಿ.ಎಂ.ಗೊಂಡ ವಂದಿಸಿದರು.

