

ಉತ್ತರ ಕನ್ನಡ ಜಿಲ್ಲೆಯನ್ನು ಮಲೆನಾಡು, ಕರಾವಳಿ ಜಿಲ್ಲೆಗಳನ್ನಾಗಿ ವಿಭಾಗಿಸಬೇಕು.
ಕರಾವಳಿ ಜಿಲ್ಲೆಗಳನ್ನು ಸೇರಿಸಿ ಕರಾವಳಿ ರಾಜ್ಯ ಮಾಡಬೇಕು.
ಕನ್ನಡದ ಮೊದಲ ರಾಜಧಾನಿ ಬನವಾಸಿಯನ್ನು ಮಲೆನಾಡು ಜಿಲ್ಲೆ ಮಾಡಬೇಕು.
ಉತ್ತರ ಕನ್ನಡದ ಬನವಾಸಿ, ಸಿದ್ಧಾಪುರಗಳನ್ನು ಸೇರಿಸಿ ಶಿಕಾರಿಪುರ ಜಿಲ್ಲೆ ಮಾಡಬೇಕು.
ಹೀಗೆ ಜಿಲ್ಲೆ, ಜಿಲ್ಲಾ ಕೇಂದ್ರ.ಪ್ರತ್ಯೇಕ ಜಿಲ್ಲೆಗಳ ಅಸ್ಥಿತ್ವದ ವಿಚಾರ ಮೇಲಿಂದ ಮೇಲೆ ಚರ್ಚೆಯಾಗುತ್ತಿವೆ.
ಈಗಿನ ಸರದಿ ಸಾಗರ ಜಿಲ್ಲೆಯದು.
ಸಾಗರ ಉಪವಿಭಾಗವನ್ನು ಸೇರಿಸಿ ಶಿಕಾರಿಪುರ ಜಿಲ್ಲೆ ಮಾಡುವ ಕನಸು ಈಗಿನ ಮುಖ್ಯಮಂತ್ರಿ ಯಡಿಯೂರಪ್ಪನವರದು. ಈ ಅಭಿಪ್ರಾಯವನ್ನು ಖುದ್ದು ಯಡಿಯೂರಪ್ಪ ವ್ಯಕ್ತಪಡಿಸಿದ್ದಾರೋ? ಅಥವಾ ಅವರ ಆಪ್ತರೊ ತಿಳಿದಿಲ್ಲ. ಆದರೆ ರಾಜ್ಯದ ಪ್ರಮುಖ ಮುಖಂಡರಲ್ಲೊಬ್ಬರಾದ ಯಡಿಯೂರಪ್ಪ ಮನಸ್ಸು ಮಾಡಿದರೆ ಆನವಟ್ಟಿ, ಬನವಾಸಿ, ತಾಳಗುಪ್ಪಾ ಗಳಂಥ ಹೋಬಳಿ ಕೇಂದ್ರಗಳನ್ನು ತಾಲೂಕು ಕೇಂದ್ರ ಮಾಡಬಲ್ಲರು.
ಶಿರಸಿ, ಸಾಗರ ಉಪವಿಭಾಗಗಳನ್ನು ಪ್ರತ್ಯೇಕ ಜಿಲ್ಲೆ ಮಾಡಬಲ್ಲ ಸಾಮಥ್ರ್ಯ ಇರುವವರು.
ಯಡಿಯೂರಪ್ಪ ಶಿಕಾರಿಪುರ ಜಿಲ್ಲೆ ಮಾಡಲು ಯೋಜಿಸಿದ್ದಾರೆ ಎನ್ನುವ ಮಾಹಿತಿ ವರ್ತಮಾನವಾಗಿ ಸುದ್ದಿಯಾಗುತ್ತಲೇ ಸಾಗರದ ಜನರು ಶಿವಮೊಗ್ಗವನ್ನು ಪ್ರತ್ಯೇಕಿಸಿ ಮತ್ತೊಂದು ಜಿಲ್ಲೆ ಮಾಡುವುದಾದರೆ ಸಾಗರ ಜಿಲ್ಲೆಯಾಗಲು ಸೂಕ್ತ ಪ್ರದೇಶ ಎನ್ನುವ ಅಭಿಪ್ರಾಯ ಮುಂದಿಟ್ಟಿದ್ದಾರೆ.
ಸಣ್ಣ ರಾಜ್ಯ, ಜಿಲ್ಲೆ, ರಾಜ್ಯದ ಮಧ್ಯವರ್ತಿ ಪ್ರದೇಶ ರಾಜ್ಯದ ಕೇಂದ್ರ, ಜಿಲ್ಲೆಯ ಮಧ್ಯವರ್ತಿ ಪ್ರದೇಶ ಜಿಲ್ಲಾ ಕೇಂದ್ರ ಆದರೆ ಆಯಾ ರಾಜ್ಯ, ಜಿಲ್ಲೆಗಳಿಗೆ ಉತ್ತಮ ಈ ಯೋಚನೆ, ವಾಸ್ತವದ ಹಿನ್ನೆಲೆಯಲ್ಲಿ ಸಣ್ಣ ರಾಜ್ಯದ ಕಲ್ಫನೆಯಲ್ಲಿ ಕರಾವಳಿ ಪ್ರತ್ಯೇಕ ರಾಜ್ಯವಾಗಲಿ ಎನ್ನುವ ಅಭಿಪ್ರಾಯವಿದೆ.
ಇದಕ್ಕೆ ಸಂವಾದಿಯಾಗಿ ಸಾಗರ, ಶಿರಸಿಯಂಥ ದೊಡ್ಡ ಉಪವಿಭಾಗೀಯ ಕೇಂದ್ರಗಳು ಜಿಲ್ಲಾ ಕೇಂದ್ರ, ಪ್ರತ್ಯೇಕ ಜಿಲ್ಲೆಯ ಕೇಂದ್ರಸ್ಥಳವಾದರೆ ಸ್ಥಳಿಯರಿಗೆ ಅನುಕೂಲ ಈ ಹಿನ್ನೆಲೆಯಲ್ಲಿ ಚರ್ಚೆ, ಸಂವಾದಗಳಾಗಿ ಪ್ರತ್ಯೇಕ ಜಿಲ್ಲೆ ಹೋರಾಟಕ್ಕೆ ಸಂಘಟನೆಗಳೂ ಸ್ಥಾಪನೆಯಾಗಿವೆ.
ಈ ಚರಿತ್ರೆ, ವರ್ತಮಾನಗಳ ಹಿನ್ನೆಲೆಯಲ್ಲಿ ಸಾಗರವನ್ನು ಜಿಲ್ಲಾ ಕೇಂದ್ರಮಾಡಿ ಭಟ್ಕಳ, ಸಿದ್ದಾಪುರಗಳನ್ನು ಉತ್ತರ ಕನ್ನಡದಿಂದ ಪ್ರತ್ಯೇಕಿಸಿ ಸಾಗರ ಜಿಲ್ಲೆಗೆ ಸೇರಿಸಿದರೆ ಅನೇಕ ಅನುಕೂಲಗಳ ಹಿನ್ನೆಲೆಯಲ್ಲಿ ಜನರು ಒಪ್ಪುತ್ತಾರೆ.
ಹಾಗೆಯೇ ಬನವಾಸಿ ಅಥವಾ ಶಿರಸಿ ಜಿಲ್ಲಾ ಕೇಂದ್ರಮಾಡಿ ಸಿದ್ದಾಪುರ,ಯಲ್ಲಾಪುರ, ಮುಂಡಗೋಡುಗಳ ಜೊತೆಗೆ ಮತ್ತೆರಡು ತಾಲೂಕುಗಳನ್ನು ಸೇರಿಸಿ ಶಿರಸಿ ಪ್ರತ್ಯೇಕ ಜಿಲ್ಲೆ ಮಾಡುವುದೂ ಪೂರಕವೇ.
ಆದರೆ ಕಳೆದ ಕಾಲು ಶತಮಾನಗಳಿಂದ ಮುಂಡಗೋಡು, ಸಿದ್ಧಾಪುರ ತಾಲೂಕುಗಳ ಜನರ ಬೇಡಿಕೆ ಶಿರಸಿ ಜಿಲ್ಲೆ ನೆನೆಗುದಿಗೆ ಬಿದ್ದಿದೆ. ದೇವರು, ಜಾತಿ-ಧರ್ಮಗಳ ನೆರವು ಬಹುಸಂಖ್ಯಾತರ ವಿರೋಧಿ ಕಾರ್ಯಾಚರಣೆಗಳಿಂದ ಉತ್ತರ ಕನ್ನಡ ಜಿಲ್ಲೆಯ ಶಾಸಕರು, ಸಂಸದರು ಆಗಿ ಕಾಲಹರಣ ಮಾಡುತ್ತಿರುವವರಿಗೆ ಶಿರಸಿ ಪ್ರತ್ಯೇಕ ಜಿಲ್ಲೆ ಮಾಡಿ ಶಿರಸಿ, ಮುಂಡಗೋಡು, ಸಿದ್ದಾಪುರ,ಯಲ್ಲಾಪುರ ಜನತೆಗೆ ನ್ಯಾಯ ಒದಗಿಸಿ, ಅನುಕೂಲ ಮಾಡುವ ಶಕ್ತಿ, ಇಚ್ಚಾಶಕ್ತಿಗಳೂ ಇಲ್ಲ.
ಈ ಹಿನ್ನೆಲೆಯಲ್ಲಿ ಶಿಕಾರಿಪುರವನ್ನೋ, ಸಾಗರವನ್ನೋ ಪ್ರತ್ಯೇಕ ಜಿಲ್ಲೆ, ಜಿಲ್ಲಾಕೇಂದ್ರವನ್ನಾಗಿಸಿ ಸಿದ್ಧಾಪುರವನ್ನು ಈ ಉದ್ದೇಶಿತ ಜಿಲ್ಲೆಯ ವ್ಯಾಪ್ತಿಗೆ ಸೇರಿಸಿದರೆ ಸಿದ್ಧಾಪುರದ ಜನರ ಅರ್ಧ ಶತಮಾನದ ಬೇಡಿಕೆ ಈಡೇರಿದಂತೆ.
ಈ ಹಿನ್ನೆಲೆಯಲ್ಲಿ ಆಸಕ್ತರು ನುಡಿ ತಂತ್ರಾಂಶದಲ್ಲಿ ಚುಟುಕಾದ ತಮ್ಮ ಅಭಿಪ್ರಾಯ ಟೈಪಿಸಿ
sa*********@********il.com ಗೆ ಕಳುಹಿಸಿದರೆ ಅವರ ಅಭಿಪ್ರಾಯ ಸಮಾಜಮುಖಿ ಪತ್ರಿಕೆ ಮತ್ತು ನ್ಯೂಸ್‍ಪೋರ್ಟಲ್ (samajamukhi.net ) ಗಳಲ್ಲಿ ಪ್ರಕಟವಾಗಲಿವೆ.
ನೆನಪಿರಲಿ 25 ವರ್ಷಗಳಿಂದ ಉತ್ತರಕನ್ನಡ ಜಿಲ್ಲೆ, ಅಸ್ಮಿತೆಗಳ ಒಣ ಭಾಷಣ ಕೇಳುತ್ತಿರುವ ಸಂದರ್ಭದಲ್ಲೆ ನೆರೆಹೊರೆಯ 2-3 ತಾಲೂಕುಗಳಿಗೆಲ್ಲಾ ಪ್ರತ್ಯೇಕ ಜಿಲ್ಲೆಗಳಾಗಿವೆ. ಅಂದಹಾಗೆ 150-170 ಕಿ.ಮೀ.ದೂರದ ಜಿಲ್ಲಾ ಕೇಂದ್ರ ಉತ್ತರಕನ್ನಡ ವಿರಲಿ, ಶಿವಮೊಗ್ಗವಿರಲಿ ಆಯಾ ಜಿಲ್ಲೆಗಳ ದೂರದ ತಾಲೂಕುಗಳಿಗೆ ಶಾಪವೆ.

_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________







ಉತ್ತಮ ಆಲೋಚನೆ.