
ಸಿದ್ದಾಪುರ ತಾಲೂಕಿನ ನಾಣಿಕಟ್ಟಾ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಶಶಾಂಕ ಜೆ ಗೌಡರ್ 2019-20ನೇ ಸಾಲಿನ ಜಿಲ್ಲಾ ಮಟ್ಟದ ಯುವ ಸಂಸತ್ ಸ್ಪರ್ಧೆಯಲ್ಲಿ ಭಾಗವಹಿಸಿ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾನೆ.
ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಕುಮಟಾದ ನೆಲ್ಲಿಕೇರಿ ಪ.ಪೂ.ಕಾಲೇಜಿನಲ್ಲಿ ಈ ಸ್ಪರ್ಧೆಯನ್ನು ನಡೆಸಲಾಗಿತ್ತು.
ಜಿಲ್ಲೆಯ ಸುಮಾರು 60ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಶಶಾಂಕ ಜೆ ಗೌಡರ್ ಆಡಳಿತ ಪಕ್ಷದ ಗೃಹ ಮಂತ್ರಿಯಾಗಿ ಸಂಸತ್ ಕಲಾಪದಲ್ಲಿ ಪಾಲ್ಗೊಂಡಿದ್ದನು. ಇವನಿಗೆ ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕ ಓಂಕಾರಪ್ಪ ಸಿ.ವಿ. ಮಾರ್ಗದರ್ಶನ ನೀಡಿದ್ದರು.
ಗೋಆಧಾರಿತ ಕೃಷಿಯಿಂದಲೇ ಕೃಷಿ ಪುನರುತ್ಥಾನ
ಗೋ ಆಧಾರಿತ ಸಾವಯವ ಕೃಷಿಯಿಂದ ಕೃಷಿ ಮತ್ತು ಮಾನವರ ಪುನರುತ್ಥಾನ ಸಾಧ್ಯ ಎಂದಿರುವ ರಾಷ್ಟ್ರೀಯ ಕೃಷಿ ಸಂಶೋಧನಾ ಸಂಸ್ಥೆಯ ಮಾಜಿ ಮುಖ್ಯಸ್ಥ ಎಸ್.ಎ.ಪಾಟೀಲ್ ಕಾಡು, ನಾಡಿನಲ್ಲಿ ಬೆಳೆಯುವ ಗಡ್ಡೆ-ಗೆಣಸು ಆರೋಗ್ಯ ವೃದ್ಧಿಸುತ್ತಿರುವಾಗ ಮಣ್ಣಿನಲ್ಲೇ ಬೆಳೆದ ಧವಸ-ಧಾನ್ಯಗಳು ನಮ್ಮ ಆಯುಷ್ಯಕ್ಕೆ ಮಾರಕವಾಗಿರುವ ಹಿಂದೆ ಸಾಂಪ್ರದಾಯಿಕ ಸಹಜ ಕೃಷಿಯ ಮಹತ್ವ ಅಡಗಿದೆ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.
