ಗೋಆಧಾರಿತ ಕೃಷಿಯಿಂದಲೇ ಕೃಷಿ ಪುನರುತ್ಥಾನ

ಗೋ ಆಧಾರಿತ ಸಾವಯವ ಕೃಷಿಯಿಂದ ಕೃಷಿ ಮತ್ತು ಮಾನವರ ಪುನರುತ್ಥಾನ ಸಾಧ್ಯ ಎಂದಿರುವ ರಾಷ್ಟ್ರೀಯ ಕೃಷಿ ಸಂಶೋಧನಾ ಸಂಸ್ಥೆಯ ಮಾಜಿ ಮುಖ್ಯಸ್ಥ ಎಸ್.ಎ.ಪಾಟೀಲ್ ಕಾಡು, ನಾಡಿನಲ್ಲಿ ಬೆಳೆಯುವ ಗಡ್ಡೆ-ಗೆಣಸು ಆರೋಗ್ಯ ವೃದ್ಧಿಸುತ್ತಿರುವಾಗ ಮಣ್ಣಿನಲ್ಲೇ ಬೆಳೆದ ಧವಸ-ಧಾನ್ಯಗಳು ನಮ್ಮ ಆಯುಷ್ಯಕ್ಕೆ ಮಾರಕವಾಗಿರುವ ಹಿಂದೆ ಸಾಂಪ್ರದಾಯಿಕ ಸಹಜ ಕೃಷಿಯ ಮಹತ್ವ ಅಡಗಿದೆ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.
ಇಂದು ಇಲ್ಲಿಯ ಭಾನ್ಕುಳಿಮಠದಲ್ಲಿ ನಡೆದ ವಿಶ್ವ ಮಣ್ಣಿನ ದಿನಾಚರಣೆ ಅಂಗವಾಗಿ ಶಿರಸಿ ತೋಟಗಾರಿಕಾ ಮಹಾವಿದ್ಯಾಲಯ ಮತ್ತು ಬಾಗಲಕೋಟೆ ತೋಟಗಾರಿಕಾ ವಿಶ್ವ ವಿದ್ಯಾಲಯಗಳ ಸಹಯೋಗದ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು,
ಭಾರತೀಯ ಸಾಂಪ್ರದಾಯಿಕ ವಿದ್ಯೆ, ಜ್ಞಾನಗಳ ದಾಖಲೀಕರಣ ಆಗಿಲ್ಲ ಹಾಗಾಗಿ ಭಾರತೀಯರು ಪಾಶ್ಚಾತ್ಯ ಜ್ಞಾನ ದಾಖಲೆಗಳನ್ನು ಓದುವ ಅನಿವಾರ್ಯತೆಯಿದೆ. ಈ ಬಗ್ಗೆ ಸಂಶೋಧನೆ, ಕೆಲಸಗಳಾಗಬೇಕೆಂದು ಆಶಿಸಿದರು.
ಈ ಕಾರ್ಯಕ್ರಮದ ಭಾಗವಾಗಿ ಗೋಚಿಕಿತ್ಸಾ ಶಿಬಿರ ಮತ್ತು ವಸ್ತು ಪ್ರದರ್ಶನಗಳು ನಡೆದವು.
ಸಾಗರ ಜಿಲ್ಲೆ ಏನಿದು ಹೇಳಿಕೆ,ಯಾಕೀ ಬೇಡಿಕೆ?
ಉತ್ತರ ಕನ್ನಡ ಜಿಲ್ಲೆಯನ್ನು ಮಲೆನಾಡು, ಕರಾವಳಿ ಜಿಲ್ಲೆಗಳನ್ನಾಗಿ ವಿಭಾಗಿಸಬೇಕು.
ಕರಾವಳಿ ಜಿಲ್ಲೆಗಳನ್ನು ಸೇರಿಸಿ ಕರಾವಳಿ ರಾಜ್ಯ ಮಾಡಬೇಕು.
ಕನ್ನಡದ ಮೊದಲ ರಾಜಧಾನಿ ಬನವಾಸಿಯನ್ನು ಮಲೆನಾಡು ಜಿಲ್ಲೆ ಮಾಡಬೇಕು.
ಉತ್ತರ ಕನ್ನಡದ ಬನವಾಸಿ, ಸಿದ್ಧಾಪುರಗಳನ್ನು ಸೇರಿಸಿ ಶಿಕಾರಿಪುರ ಜಿಲ್ಲೆ ಮಾಡಬೇಕು.
ಹೀಗೆ ಜಿಲ್ಲೆ, ಜಿಲ್ಲಾ ಕೇಂದ್ರ.ಪ್ರತ್ಯೇಕ ಜಿಲ್ಲೆಗಳ ಅಸ್ಥಿತ್ವದ ವಿಚಾರ ಮೇಲಿಂದ ಮೇಲೆ ಚರ್ಚೆಯಾಗುತ್ತಿವೆ.
ಈಗಿನ ಸರದಿ ಸಾಗರ ಜಿಲ್ಲೆಯದು.
ಸಾಗರ ಉಪವಿಭಾಗವನ್ನು ಸೇರಿಸಿ ಶಿಕಾರಿಪುರ ಜಿಲ್ಲೆ ಮಾಡುವ ಕನಸು ಈಗಿನ ಮುಖ್ಯಮಂತ್ರಿ ಯಡಿಯೂರಪ್ಪನವರದು. ಈ ಅಭಿಪ್ರಾಯವನ್ನು ಖುದ್ದು ಯಡಿಯೂರಪ್ಪ ವ್ಯಕ್ತಪಡಿಸಿದ್ದಾರೋ? ಅಥವಾ ಅವರ ಆಪ್ತರೊ ತಿಳಿದಿಲ್ಲ. ಆದರೆ ರಾಜ್ಯದ ಪ್ರಮುಖ ಮುಖಂಡರಲ್ಲೊಬ್ಬರಾದ ಯಡಿಯೂರಪ್ಪ ಮನಸ್ಸು ಮಾಡಿದರೆ ಆನವಟ್ಟಿ, ಬನವಾಸಿ, ತಾಳಗುಪ್ಪಾ ಗಳಂಥ ಹೋಬಳಿ ಕೇಂದ್ರಗಳನ್ನು ತಾಲೂಕು ಕೇಂದ್ರ ಮಾಡಬಲ್ಲರು.
ಶಿರಸಿ, ಸಾಗರ ಉಪವಿಭಾಗಗಳನ್ನು ಪ್ರತ್ಯೇಕ ಜಿಲ್ಲೆ ಮಾಡಬಲ್ಲ ಸಾಮಥ್ರ್ಯ ಇರುವವರು.
ಯಡಿಯೂರಪ್ಪ ಶಿಕಾರಿಪುರ ಜಿಲ್ಲೆ ಮಾಡಲು ಯೋಜಿಸಿದ್ದಾರೆ ಎನ್ನುವ ಮಾಹಿತಿ ವರ್ತಮಾನವಾಗಿ ಸುದ್ದಿಯಾಗುತ್ತಲೇ ಸಾಗರದ ಜನರು ಶಿವಮೊಗ್ಗವನ್ನು ಪ್ರತ್ಯೇಕಿಸಿ ಮತ್ತೊಂದು ಜಿಲ್ಲೆ ಮಾಡುವುದಾದರೆ ಸಾಗರ ಜಿಲ್ಲೆಯಾಗಲು ಸೂಕ್ತ ಪ್ರದೇಶ ಎನ್ನುವ ಅಭಿಪ್ರಾಯ ಮುಂದಿಟ್ಟಿದ್ದಾರೆ.
ಸಣ್ಣ ರಾಜ್ಯ, ಜಿಲ್ಲೆ, ರಾಜ್ಯದ ಮಧ್ಯವರ್ತಿ ಪ್ರದೇಶ ರಾಜ್ಯದ ಕೇಂದ್ರ, ಜಿಲ್ಲೆಯ ಮಧ್ಯವರ್ತಿ ಪ್ರದೇಶ ಜಿಲ್ಲಾ ಕೇಂದ್ರ ಆದರೆ ಆಯಾ ರಾಜ್ಯ, ಜಿಲ್ಲೆಗಳಿಗೆ ಉತ್ತಮ ಈ ಯೋಚನೆ, ವಾಸ್ತವದ ಹಿನ್ನೆಲೆಯಲ್ಲಿ ಸಣ್ಣ ರಾಜ್ಯದ ಕಲ್ಫನೆಯಲ್ಲಿ ಕರಾವಳಿ ಪ್ರತ್ಯೇಕ ರಾಜ್ಯವಾಗಲಿ ಎನ್ನುವ ಅಭಿಪ್ರಾಯವಿದೆ.
ಇದಕ್ಕೆ ಸಂವಾದಿಯಾಗಿ ಸಾಗರ, ಶಿರಸಿಯಂಥ ದೊಡ್ಡ ಉಪವಿಭಾಗೀಯ ಕೇಂದ್ರಗಳು ಜಿಲ್ಲಾ ಕೇಂದ್ರ, ಪ್ರತ್ಯೇಕ ಜಿಲ್ಲೆಯ ಕೇಂದ್ರಸ್ಥಳವಾದರೆ ಸ್ಥಳಿಯರಿಗೆ ಅನುಕೂಲ ಈ ಹಿನ್ನೆಲೆಯಲ್ಲಿ ಚರ್ಚೆ, ಸಂವಾದಗಳಾಗಿ ಪ್ರತ್ಯೇಕ ಜಿಲ್ಲೆ ಹೋರಾಟಕ್ಕೆ ಸಂಘಟನೆಗಳೂ ಸ್ಥಾಪನೆಯಾಗಿವೆ.
ಈ ಚರಿತ್ರೆ, ವರ್ತಮಾನಗಳ ಹಿನ್ನೆಲೆಯಲ್ಲಿ ಸಾಗರವನ್ನು ಜಿಲ್ಲಾ ಕೇಂದ್ರಮಾಡಿ ಭಟ್ಕಳ, ಸಿದ್ದಾಪುರಗಳನ್ನು ಉತ್ತರ ಕನ್ನಡದಿಂದ ಪ್ರತ್ಯೇಕಿಸಿ ಸಾಗರ ಜಿಲ್ಲೆಗೆ ಸೇರಿಸಿದರೆ ಅನೇಕ ಅನುಕೂಲಗಳ ಹಿನ್ನೆಲೆಯಲ್ಲಿ ಜನರು ಒಪ್ಪುತ್ತಾರೆ.
ಹಾಗೆಯೇ ಬನವಾಸಿ ಅಥವಾ ಶಿರಸಿ ಜಿಲ್ಲಾ ಕೇಂದ್ರಮಾಡಿ ಸಿದ್ದಾಪುರ,ಯಲ್ಲಾಪುರ, ಮುಂಡಗೋಡುಗಳ ಜೊತೆಗೆ ಮತ್ತೆರಡು ತಾಲೂಕುಗಳನ್ನು ಸೇರಿಸಿ ಶಿರಸಿ ಪ್ರತ್ಯೇಕ ಜಿಲ್ಲೆ ಮಾಡುವುದೂ ಪೂರಕವೇ.
ಆದರೆ ಕಳೆದ ಕಾಲು ಶತಮಾನಗಳಿಂದ ಮುಂಡಗೋಡು, ಸಿದ್ಧಾಪುರ ತಾಲೂಕುಗಳ ಜನರ ಬೇಡಿಕೆ ಶಿರಸಿ ಜಿಲ್ಲೆ ನೆನೆಗುದಿಗೆ ಬಿದ್ದಿದೆ. ದೇವರು, ಜಾತಿ-ಧರ್ಮಗಳ ನೆರವು ಬಹುಸಂಖ್ಯಾತರ ವಿರೋಧಿ ಕಾರ್ಯಾಚರಣೆಗಳಿಂದ ಉತ್ತರ ಕನ್ನಡ ಜಿಲ್ಲೆಯ ಶಾಸಕರು, ಸಂಸದರು ಆಗಿ ಕಾಲಹರಣ ಮಾಡುತ್ತಿರುವವರಿಗೆ ಶಿರಸಿ ಪ್ರತ್ಯೇಕ ಜಿಲ್ಲೆ ಮಾಡಿ ಶಿರಸಿ, ಮುಂಡಗೋಡು, ಸಿದ್ದಾಪುರ,ಯಲ್ಲಾಪುರ ಜನತೆಗೆ ನ್ಯಾಯ ಒದಗಿಸಿ, ಅನುಕೂಲ ಮಾಡುವ ಶಕ್ತಿ, ಇಚ್ಚಾಶಕ್ತಿಗಳೂ ಇಲ್ಲ.
ಈ ಹಿನ್ನೆಲೆಯಲ್ಲಿ ಶಿಕಾರಿಪುರವನ್ನೋ, ಸಾಗರವನ್ನೋ ಪ್ರತ್ಯೇಕ ಜಿಲ್ಲೆ, ಜಿಲ್ಲಾಕೇಂದ್ರವನ್ನಾಗಿಸಿ ಸಿದ್ಧಾಪುರವನ್ನು ಈ ಉದ್ದೇಶಿತ ಜಿಲ್ಲೆಯ ವ್ಯಾಪ್ತಿಗೆ ಸೇರಿಸಿದರೆ ಸಿದ್ಧಾಪುರದ ಜನರ ಅರ್ಧ ಶತಮಾನದ ಬೇಡಿಕೆ ಈಡೇರಿದಂತೆ.
ಈ ಹಿನ್ನೆಲೆಯಲ್ಲಿ ಆಸಕ್ತರು ನುಡಿ ತಂತ್ರಾಂಶದಲ್ಲಿ ಚುಟುಕಾದ ತಮ್ಮ ಅಭಿಪ್ರಾಯ ಟೈಪಿಸಿ samajamukhi@rediffmail.com ಗೆ ಕಳುಹಿಸಿದರೆ ಅವರ ಅಭಿಪ್ರಾಯ ಸಮಾಜಮುಖಿ ಪತ್ರಿಕೆ ಮತ್ತು ನ್ಯೂಸ್‍ಪೋರ್ಟಲ್ (samajamukhi.net ) ಗಳಲ್ಲಿ ಪ್ರಕಟವಾಗಲಿವೆ.
ನೆನಪಿರಲಿ 25 ವರ್ಷಗಳಿಂದ ಉತ್ತರಕನ್ನಡ ಜಿಲ್ಲೆ, ಅಸ್ಮಿತೆಗಳ ಒಣ ಭಾಷಣ ಕೇಳುತ್ತಿರುವ ಸಂದರ್ಭದಲ್ಲೆ ನೆರೆಹೊರೆಯ 2-3 ತಾಲೂಕುಗಳಿಗೆಲ್ಲಾ ಪ್ರತ್ಯೇಕ ಜಿಲ್ಲೆಗಳಾಗಿವೆ. ಅಂದಹಾಗೆ 150-170 ಕಿ.ಮೀ.ದೂರದ ಜಿಲ್ಲಾ ಕೇಂದ್ರ ಉತ್ತರಕನ್ನಡ ವಿರಲಿ, ಶಿವಮೊಗ್ಗವಿರಲಿ ಆಯಾ ಜಿಲ್ಲೆಗಳ ದೂರದ ತಾಲೂಕುಗಳಿಗೆ ಶಾಪವೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಶನಿವಾರ…ಶಾಸಕರು,ಸಂಸದರ ಕಾರ್ಯಕ್ರಮಗಳು

ಇಟಗಿ ರಾಮೇಶ್ವರ ಮತ್ತು ಪರಿವಾರ ದೇವಾಲಯಗಳ ಅಷ್ಟಬಂಧ ಕಾರ್ಯಕ್ರಮದಲ್ಲಿ ಏ.೫ ರ ಶನಿವಾರ ಸಾಯಂಕಾಲ ಸಂಜೆ ನಾಲ್ಕರಿಂದ ಭರತನಾಟ್ಯ ರಕ್ಷಾ & ದೀಕ್ಷಾ ರಾವ್‌...

ಸಿದ್ಧಾಪುರದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಜಾತ್ರೆ! ನಮ್ಮೂರು ಇಂದು ನಾಳೆ…..

* ಸಿದ್ಧಾಪುರ ಇಟಗಿಯ ರಾಮೇಶ್ವರ ದೇವರ ದಿವ್ಯಾಷ್ಟಬಂಧ ಕಾರ್ಯಕ್ರಮ ಪ್ರಾರಂಭವಾಗಿದೆ. ಈ ಕಾರ್ಯಕ್ರಮದ ಅಂಗವಾಗಿ ಪ್ರತಿದಿನ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ.

senaa sevaa-ಸೈನಿಕನಿಗೆ ಹುಟ್ಟೂರಿನ ಗೌರವ

ಸಿದ್ದಾಪುರ: ಭಾರತೀಯ ಸೈನ್ಯದಲ್ಲಿ ಹದಿನೇಳು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಪಡೆದು ತಾಯ್ನಾಡಿಗೆ ಮರಳಿದ ಸಿದ್ದಾಪುರ ತಾಲೂಕಿನ ಸಂಪೇಕೇರಿಯ(ಮುಗದೂರ) ವಿನಯಕುಮಾರ ನಾಯ್ಕ ರಿಗೆ...

ಕದಂಬಜಿಲ್ಲೆಗಾಗಿ ಸಹಿಸಂಗ್ರಹಣೆ, ಕಾನಳ್ಳಿಯಲ್ಲಿ ಹಸ್ಲರ್‌ ಸಂಘಕ್ಕೆ ಚಾಲನೆ,ಸೋಮುವಾರ ಮಹಿಳಾ ಸಂವೇದನೆ ಕವಿಗೋಷ್ಠಿ‌

ನಿರಂತರ ಹೋರಾಟದಲ್ಲಿರುವ ಶಿರಸಿ ಕೇಂದ್ರಿತ ಪ್ರತ್ಯೇಕ ಕದಂಬ ಜಿಲ್ಲೆ ಹೋರಾಟ ಸಮೀತಿ ಈ ತಿಂಗಳಿಂದ ಸಿದ್ಧಾಪುರದ ಗ್ರಾಮೀಣ ಪ್ರದೇಶಗಳಲ್ಲಿ ಪ್ರತ್ಯೇಕ ಜಿಲ್ಲೆಗಾಗಿ ಸಹಿ ಸಂಗ್ರಹಣೆ...

ಧಾರ್ಮಿಕ, ಆರ್ಥಿಕ, ಶೈಕ್ಷಣಿಕ ಕೆಲಸಗಳಿಂದ ಸುಸ್ಥಿರ ಅಭಿವೃದ್ಧಿ… ಅರಶಿನಗೋಡು ಅಷ್ಟಬಂಧ ಹಾಗೂ ಬ್ರಹ್ಮಕಲಶೋತ್ಸವ ಸಂಪನ್ನ

ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶಿಕ್ಷಣ ಮತ್ತು ಉದ್ಯೋಗ ಗಳಿಗೆ ಹೆಚ್ಚಿನ ಮಹತ್ವ ನೀಡಿದರೆ ಹೊಸ ಪೀಳಿಗೆ ಮಹತ್ವದ್ದನ್ನು ಸಾಧಿಸಲು ಸಾಧ್ಯ ಎಂದಿರುವ ಶಾಸಕ ಭೀಮಣ್ಣ ನಾಯ್ಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *