ಯಾರೂ ನೆಡದ ಮರ, ಹರಿದು ಕೂಡುವ ಕಡಲು ಸೇರಿ ಸೃಷ್ಟಿಸಿದ ಬ್ರೆಕ್ಟ್ ಈ ಹೊಸ್ಮನೆ ಗಣೇಶ

ಎಲ್ಲಿ ನನ್ನ ಕಂಬನಿಗಳು ಚೆಲ್ಲಿವೆಯೆಂದು ತಿಳಿದೆ,ಅಲ್ಲಿಯೇ ನನ್ನ ಖುಷಿಯಿದೆಯೆಂದು ತಿಳಿದೆ.
ಗಣೇಶ್ ಹೊಸ್ಮನೆ ಗಜಲ್ ನ ಈ ಸಾಲು ಅವರು ಅವರಿಗೇ ಹೇಳಿಕೊಂಡಂತೆ, ಅವರು ಬೇರೆಯವರಿಗೂ ಹೇಳಿದಂತೆ ಭಾಸವಾಗುತ್ತದೆಯಲ್ಲವೆ?
ಇದು ಗಣೇಶ್ ಹೊಸ್ಮನೆಯವರ ಕಾವ್ಯದ ಚೆಲುವು ಕೂಡಾ.
ಈ ಹೊಸ್ಮನೆ ಗಣೇಶರ ಕಾವ್ಯದ ಅಭಿಮಾನಿಯಾದ ನನಗೆ ಅವರ ವರ್ತಮಾನವನ್ನು ತಲುಪಿಸುವುದು ಅವರ ಮುಖಪುಟ.
ಇತ್ತೀಚೆಗೆ ಅವರು ತಮ್ಮ ಮೇಲೆ ಪ್ರಯೋಗಿಸಿರಬಹುದಾದ ಮಾಟ ದ ಲಿಂಬು ಚಿತ್ರ ಹಾಕಿ, ಅದನ್ನು ಕೊಯ್ದಿರದಿದ್ದರೆ…,ಅದಕ್ಕೆ ಕುಂಕುಮ ಲೇಪಿಸಿರದಿದ್ದರೆ ಎಂಬರ್ಥದಲ್ಲಿ ಬರೆದು ಪಾನಕ ಮಾಡಿ ಕುಡಿಯುತಿದ್ದೆ ಎನ್ನುತ್ತಾರೆ.
ಇಲ್ಲಿಯವರೆಗೆ ಅವರ ಫೇಸ್‍ಬುಕ್ ನಲ್ಲಿ ಆಗಾಗ, ಅಲ್ಲಲ್ಲಿ ಕಾವ್ಯ,ಗದ್ಯ ಸೃಷ್ಟಿ ಕಂಡದ್ದಿದೆ.
ಆದರೆ ನಾನು ನನ್ನ ನಿಜವಾದ ಮನೆಗೆ ಬಂದೆ ಎಂದು ಪೋಸ್ಟಿಸಿದಾಗ ಏನಾಯ್ತು ಎನಿಸಿತ್ತು.
ಕೆಲವನ್ನು ಬಹಿರಂಗವಾಗಿ ಕೇಳಬಾರದೆಂಬ ಸತ್ ಸಂಪ್ರದಾಯವೊಂದಿದೆಯಲ್ಲ, ಹಾಗಾಗಿ ಒಂದೊಳ್ಳೆ ದಿನ ಹೊಸ್ಮನೆಯ ಹೊಸಮನೆ ಹುಡುಕುತ್ತಾ ಹೋದೆ. ಅದೇ ದೇಶಿ ನಗು, ಸಹಜತೆ, ಸಂಪನ್ನತೆಗಳಿಂದ ಗಣೇಶ್ ನಮ್ಮನ್ನು ಸ್ವಾಗತಿಸಿದರು.
ಅದೆಂಥದ್ದೋ ಬಿಟ್ಟೋಗದ ಧಾರ್ಮಿಕ ಕೆಲಸದ ಗಡಬಿಡಿಯಲ್ಲಿದ್ದವರು ನಮ್ಮನ್ನು ಉಪಚರಿಸುತ್ತಾ ಕತೆ ಹೇಳಿದರು.
ಅವರಿಗೂ ನಮಗೂ ಅಂಟಿದ ನಂಟಿನ ಸೊಗಸೆ ಇಂಥದ್ದು.
ಯಾರೂ ನೆಡದ ಮರ ಕವನ ಸಂಕಲನದಿಂದ ಆಪ್ತರಾಗಿದ್ದ ಗಣೇಶ್ ಅವರ ಕತೆ ಹೇಳುತಿದ್ದಾಗ ಇದೆಲ್ಲಾ ಅಸಹಜ ಎನಿಸಲಿಲ್ಲ.
ಆದರೆ ಬರೀ ನಾಲ್ಕನೇ ತರಗತಿ ಓದಿ ಕವನ, ಗಜಲ್ ಬರೆಯುವಂಥ ಕವಿ, ಸಾಹಿತಿಯಾದ ಗಣೇಶ್ ರ ಹುಡುಕಾಟದ ಕಣ್ ಗಳಲ್ಲೇ ಕಾವ್ಯ, ಗದ್ಯ, ಪದ್ಯಗಳ ಒಸರುವಿಕೆ ಗುರುತಿಸಬಹುದು.
ಇಂತಿಪ್ಪ ಕವಿ ,ಎಲ್ಲಿ ನನ್ನನ್ನು ಕೊಲ್ಲಲಾಗಿದೆಯೋ ಗೆಳೆಯ ಅಲ್ಲಿಯೇ ನನ್ನ ಜೀವವಿದೆಯೆಂದು ತಿಳಿದೆ ಎಂದು ಗೀಚುತ್ತಾರೆ.
ದೊಡ್ಡಪ್ಪ, ಮಲತಾಯಿಯರ ಸ್ವಂತ: ಪುತ್ರನಂತೆ ಬೆಳೆದ ಈ ಕವಿ ಕನಸು ಕಂಡಿದ್ದು ಕೊಟ್ಟಿಗೆಯ ಗಂಜಲದ ವಾಸನೆಯ ಮಧ್ಯೆ, ಅಕ್ಷರವೆಂಬ ವಿದ್ಯೆ ಕಲಿತದ್ದು ಬೆಟ್ಟಗುಡ್ಡಗಳ ನಡುವೆ, ಸರ್ವಸ್ವವೇ ಆಗಿದ್ದ ಮನೆ ಬಿಟ್ಟು ಬಂದು ಕುಳಿತದ್ದು ಆಲಯವೆಂಬ ಬಯಲೊಳಗೆ ಯಾಕೆಂದರೆ ಅವರೇ ಬರೆಯುತ್ತಾರೆ…
ಎಲ್ಲಿ ನನ್ನನ್ನು ದ್ವೇಶಿಸಲಾಗುತ್ತಿದೆಯೆಂದು ತಿಳಿದೆ, ಅಲ್ಲಿಯೇ ನನ್ನ ಪ್ರೀತಿಯಿದೆ ಎಂದು ತಿಳಿದೆ ಎಂದು.
ಎಲ್ಲಿ ನನ್ನ ಕಷ್ಟಗಳಿವೆ ಎಂದು ತಿಳಿದೆ, ಅಲ್ಲಿಯೇ ನನ್ನ ಸುಖವಿದೆ ಎಂದು ತಿಳಿದೆ. ಎಂದು,
ಅಷ್ಟಲ್ಲದೆ, ಮುಂದುವರಿಯುತ್ತಾರೆ…
ಎಲ್ಲಿ ನನ್ನನ್ನು ದೂರಲಾಯಿತೋ ಗೆಳೆಯಾ ಅಲ್ಲಿಯೇ ನನ್ನ ಸಾಮಿಪ್ಯ ಇದೆ ಎಂದು ತಿಳಿದೆ. ಎಲ್ಲಿ ನನ್ನ ಕತ್ತಲಿದೆಯೋ ಗೆಳೆಯಾ ಅಲ್ಲಿಯೇ ನನ್ನ ಕನಸುಗಳಿವೆ ಎಂದು ತಿಳಿದೆ!
ಹೀಗೆ ಬರೆದ ಗಜಲ್ ಕವಿ ಶಿರಸಿ ತಾಲೂಕಿನ ಗಡಿ ಪ್ರದೇಶ ರೇವಣಕಟ್ಟಾ ಬಳಿಯ ಹೊಸ್ಮನೆಯವರು.
ಸಾಂಪ್ರದಾಯಿಕ ಕುಟುಂಬದ ಎಲ್ಲಾ ರೋಗಗೃಸ್ಥತೆಗೆ ಸಿಕ್ಕು ಸವಕಲಾದರೂ ಕಾವ್ಯ ಅವರನ್ನು ಬದುಕಿಸಿದೆ, ಬದುಕಿಸುತ್ತಿದೆ. ಮನಸುಗಳನ್ನು ಬೆಸೆಯುವುದು ಕವಿ,ಕಾವ್ಯದ ಕೆಲಸ ಎಂದು ಸುಬ್ರಾಯ ಮತ್ತೀಹಳ್ಳಿ ಹೇಳಿರುವ ಸಾಲುಗಳ ಧ್ವನ್ಯಾರ್ಥದಂತೆ ಕಾವ್ಯಮಯ ಬದುಕು ಬದುಕುತ್ತಿರುವ ಗಣೇಶ್ ಬದುಕಿನಲ್ಲಿ ಅದೆಷ್ಟೋ ಅನಿರೀಕ್ಷಿತಗಳು, ಆಕಸ್ಮಿಕಗಳು ಬಂದು ಹೋಗಿವೆ. ಅವುಗಳ ಅನುಭವವನ್ನು ಭಟ್ಟಿಇಳಿಸಿ ಪ್ರೇಮದ ಗಂಧವನ್ನು ತಯಾರಿಸಿ, ಅಕ್ಷರಗಳಿಗೆ ಲೇಪಿಸಿರುವ ಗಣೇಶರ ಕಾವ್ಯದಲ್ಲಿ ಗಂಧದಂಥ ಜೇನು ಒಸರುತ್ತದೆ ಅಂದರೆ ಉತ್ಫ್ರೇಕ್ಷೆಯಲ್ಲ.
ಕಡೆಗಣಿಸಿದವರನ್ನು ನಿರ್ಲಕ್ಷಿಸಿ ನಡೆ ಆದರೆ ನೀನು ತಲೆ ಎತ್ತಿ ನಿಂತಾಗ ಅವರೂ ಗಮನಿಸುತ್ತಾರೆ ಎಂಬುದನ್ನು ಅರಿ ಎನ್ನುವಂತೆ ಬದುಕುತ್ತಿರುವ ಗಣೇಶ್ ಉತ್ತರ ಕನ್ನಡ ಜೊತೆಗೆ ಕನ್ನಡಕ್ಕೆ ಸಿಕ್ಕ ಬ್ರೆಕ್ಟ್ ನಂಥ ಕೊಡುಗೆ.
ಅವರ ಹರಿದು ಕೂಡುವ ಕಡಲು ಗಜಲ್ ಮತ್ತು ಯಾರೂ ನೆಡದ ಮರ ಓದಿದವರಿಗೆ ಅವರ ಕಾವ್ಯದ ಧೀಶಕ್ತಿ ಅರ್ಥವಾಗುತ್ತದೆ.
ನನ್ನ ಪ್ರೀತಿಯ ಶತ್ರುಗಳ ಕೈಯಲ್ಲಿ ಶಸ್ತ್ರಗಳಿವೆ,ನನ್ನಲ್ಲಿಲ್ಲ ಕವಿತೆಗಳಿವೆ ಎನ್ನುವ ಗಣೇಶ್ ಪ್ರೀತಿಸಿದವರೆಲ್ಲಾ ಮಿಡಿಯುತ್ತಾರೆ ಕಂಬನಿಯನ್ನು ಕಂಬನಿಯನ್ನೇ ನಾನು ಪ್ರೀತಿಸುವೆನು ಎಂದು ದ್ವೇಶ,ಕಂಬನಿಗಳಿಗೆ ತಣ್ಣೀರೆರಚುತ್ತಾರೆ.
ಬುದ್ಧಿವಂತರ ಒಡನಾಟದಲೇ ನಾ ಮೂರ್ಖನಾಗಿರುವೆ ಕಳೆದುಕೊಂಡವರ ಎದೆಯಲ್ಲಿ ಒಲವ ಹುಡುಕುತ್ತಿರುವೆ ನನಗೆಂಥ ಮರುಳು ಎಂದು ಬರೆಯುತ್ತಾ ಮರುಳನಾಗಿ ಸುಖ ಕಾಣುತ್ತಿರುವ ಗಣೇಶ್ ಕನ್ನಡದ ಬ್ರೆಕ್ಟ್ ಆಗಲಿ ಎನ್ನುವ ಶುಭ ಹಾರೈಕೆಗೆ ಈ ಒಲವು ಅರ್ಪಿತ.

ಜನಪ್ರತಿನಿಧಿಗಳೇ ಇದು ನಿಮಗೆ ಗೊತ್ತೆ?
ಗೋಸ್ವರ್ಗದ ರಸ್ತೆ ನರಕಸದೃಶ,
ವಡ್ನಗದ್ದೆ ಸುಂದರರಸ್ತೆಗೆ ತ್ಯಾಜ್ಯದ ನಾಕ
ಸಿದ್ಧಾಪುರ ತಾಲೂಕಿನ ಬೇಡ್ಕಣಿ ಪಂಚಾಯತ್ ವ್ಯಾಪ್ತಿಯ ಬಾನ್ಕುಳಿಮಠದ ಗೋಸ್ವರ್ಗದ ರಸ್ತೆ ಅವ್ಯವಸ್ಥೆಯ ಬಗ್ಗೆ ಸಾರ್ವಜನಿಕರು ಬೇಸರಿಸುವುದು ನಿತ್ಯದ ವರ್ತಮಾನವಾಗಿದೆ. ಇಲ್ಲಿಯ ಭಾನ್ಕುಳಿ ಮಠಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಈ ಮಠದ ತೊಂದರೆಯ ಸಂದರ್ಭದಲ್ಲಿ ಹೊಸನಗರದ ಶ್ರೀರಾಮಚಂದ್ರಪುರ ಮಠಕ್ಕೆ ವರ್ಗಾವಣೆಯಾದ ಇಲ್ಲಿಯ ಆಡಳಿತಾತ್ಮಕ ಜವಾಬ್ಧಾರಿಯ ನಂತರ ಭಾನ್ಕುಳಿಮಠದ ಹೆಸರು ಜನರಿಗೆ ತಿಳಿಯತೊಡಗಿತಾದರೂ ಗೋಸ್ವರ್ಗ ನಿರ್ಮಾಣದ ನಂತರ ಈ ಮಠಕ್ಕೆ ಬರುವ ಸಾರ್ವಜನಿಕರು, ಪ್ರವಾಸಿಗರ ಸಂಖ್ಯೆ ಹೆಚ್ಚಿದೆ.
ಪ್ರತಿನಿತ್ಯ, ಕಾರ್ಯಕ್ರಮಗಳ ದಿನಗಳಲ್ಲಿ ಕ್ರಮವಾಗಿ ನೂರಾರು, ಸಾವಿರಾರು ಜನರು ಭೇಟಿನೀಡುವ ಈ ಮಠಕ್ಕೆ ಹೋಗುವ ರಸ್ತೆ ವ್ಯವಸ್ಥಿತವಾಗಿರದಿರುವುದು ಇಲ್ಲಿಯ ಮುಖ್ಯ ಕೊರತೆಯಾಗಿದೆ. ಕುಮಟಾ ಮುಖ್ಯ ರಸ್ತೆಯಿಂದ ಒಂದೂವರೆ ಕಿ.ಮೀ ಅಂತರದ ಮಣ್ಣು ರಸ್ತೆಯನ್ನು ಸರ್ವಋತು ರಸ್ತೆ ಮಾಡಲು ಇಲ್ಲಿಯ ಮಠದ ಆಡಳಿತಮಂಡಳಿ ಪ್ರಯತ್ನಿಸಿದರೂ ಅಧಿಕಾರಿಗಳು, ರಾಜಕಾರಣಿಗಳ ಇಚ್ಛಾಶಕ್ತಿಯ ಕೊರತೆ ಸೋಸ್ವರ್ಗದ ರಸ್ತೆಯನ್ನು ನರಕಸದೃಶವಾಗಿಸಿದೆ.
ಸಾವಿರಾರು ಪ್ರವಾಸಿಗರು, ನೂರಾರು ಪ್ರಮುಖರು ನಿತ್ಯ ಭೇಟಿ ನೀಡುವ ಈ ರಸ್ತೆ ಸುವ್ಯವಸ್ಥಿತವಾಗಿರದ ಹಿಂದೆ ಮಠಗಳ ನಡುವಿನ ಮೇಲಾಟ ಕಾರಣವಾಗಿರಬಹುದೆ ಎನ್ನುವ ಶಂಕೆ ಮೂಡಿದ್ದು 25 ವರ್ಷಗಳ ನಿರಂತರ ಜನಪ್ರತಿನಿಧಿತ್ವ, ಅಧಿಕಾರ ಅನುಭವಿಸಿದ ಸಂಸದ, ಶಾಸಕರು ಈ ಕೆಲಸ ಮಾಡದವರು ಸಾರ್ವಜನಿಕ ಒಳತಿನ ಇತರ ಕೆಲಸಮಾಡಬಲ್ಲರೆ? ಎಂದು ಜನರು ಪ್ರಶ್ನಿಸುವಂತಾಗಿದೆ.
ಮಠದ ಆಡಳಿತ ವ್ಯವಸ್ಥೆ ಸ್ಥಳಿಯ ಗ್ರಾಮ ಪಂಚಾಯತ್ ಜೊತೆಗೆ ಉತ್ತಮ ಸಂಪರ್ಕ, ಸಂಬಂಧ ಹೊಂದಿರದಿರುವುದು,ಈ ಮಠ ಸಾರ್ವಜನಿಕ ಮಠವಾಗದೆ ಏಕಜಾತಿಯ ಮಠವಾಗಿರುವುದು ಈ ರಸ್ತೆ ಅವ್ಯವಸ್ಥೆ,ಸ್ಥಳಿಯರು, ಸ್ಥಳಿಯ ಆಡಳಿತದ ಅಸಹಕಾರದ ಹಿಂದಿನ ಅಸಲೀ ಕಾರಣ ಎನ್ನುವ ದೂರುಗಳಿರುವ ಬಗ್ಗೆಯೂ ಸಾರ್ವಜನಿಕರ ಅಸಮಧಾನವಿದೆ ಎನ್ನಲಾಗಿದೆ.
ತ್ಯಾಜ್ಯದ ನರಕವಾಗಿರುವ ವಡ್ನಗದ್ದೆ ರಸ್ತೆ-
ನಗರದ ಪಟ್ಟಣ ಪಂಚಾಯತ್ ವ್ಯಾಪ್ತಿಯ ವಡ್ನಗದ್ದೆಯ ಬಾಲಿಕೊಪ್ಪ-ಬಳ್ಳಟ್ಟೆ ರಸ್ತೆಯ ಒಂದೆರಡು ಕಡೆ ತ್ಯಾಜ್ಯ ಎಸೆದು ಕಸದ ದುರ್ಗಂಧ ಸೃಷ್ಟಿಸಿರುವ ಅವ್ಯವಸ್ಥೆ ಬೆಳಕಿಗೆ ಬಂದಿದೆ. ಬಳಕೆಗೆ ನಿರ್ಬಂಧವಿರುವ ಪ್ಲಾಸ್ಟಿಕ್, ಮದ್ಯದ ಬಾಟಲಿಗಳು, ವೈದ್ಯಕೀಯ ತ್ಯಾಜ್ಯ ಸೇರಿದ ಕಸದ ರಾಶಿ ಈ ರಸ್ತೆಯ ಇಕ್ಕೆಲಗಳನ್ನು ಕಸದ ಗುಡ್ಡೆಯಾಗಿಸಿವೆ. ಈ ಬಗ್ಗೆ ಸಾರ್ವಜನಿಕರು ಬೇಸರಿಸುತಿದ್ದು ಈ ಅವ್ಯವಸ್ಥೆಯ ಬಗ್ಗೆ ಹೇಳುವುದ್ಯಾರಿಗೆ ಎನ್ನುವ ಸಂದಿಗ್ಧ ಎದುರಾಗಿದೆ. ಮುಸ್ಸಂಜೆ, ರಾತ್ರಿ ವೇಳೆ ತ್ಯಾಜ್ಯ ಎಸೆಯುವವರು, ಮದ್ಯಪಾನ ಮಾಡುವ ಜನರಿಂದಾಗಿ ಈ ರಸ್ತೆಯಲ್ಲಿ ಸಂಚರಿಸುವುದೇ ದುಸ್ಥರವಾಗಿದ್ದರೆ, ಇಲ್ಲಿಯ ತ್ಯಾಜ್ಯ ಈ ರಸ್ತೆಯನ್ನು ನಗರದ ದುರ್ಗಂಧದ ರಸ್ತೆಯನ್ನಾಗಿಸಿದೆ. ಈ ಬಗ್ಗೆ ಸ್ಥಳಿಯ ಪ.ಪಂ. ಸದಸ್ಯರು ಮತ್ತು ಪ.ಪಂ. ಆಡಳಿತ ನಿಗಾ ವಹಿಸಬೇಕೆಂಬ ಸಾರ್ವಜನಿಕರ ಬೇಡಿಕೆಯೂ ವ್ಯಕ್ತವಾಗಿದೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಮನುಷ್ಯನ ಒಳಿತನ್ನೇ ಧ್ಯಾನಿಸುತ್ತಾ……‌

ಒಂದು ಅಪರೂಪದ ಡೊಳ್ಳಿನ ಸ್ಫರ್ಧೆ ನೋಡಿದೆ. ನಮ್ಮದೇ ತಾಲೂಕಿನ ಅರೆಹಳ್ಳದ ತಂಡ ಎಷ್ಟು ಸೊಗಸಾಗಿ ಡೊಳ್ಳು ನೃತ್ಯ ಕುಣಿಯಿತು! ಕೊಡಗಿಬೈಲ್‌ ಎಂಬ ಹಳ್ಳಿಯ ಒಕ್ಕಲಿಗ...

ಶಿಕಾರಿಪುರ ಪ್ರಥಮ, ಸಿದ್ಧಾಪುರ ದ್ವಿತೀಯ, ಸಾಗರ ತೃತೀಯ

ಸಿದ್ದಾಪುರದಲ್ಲಿ ನಡೆದ ರಾಜ್ಯ ಮಟ್ಟದ ಹೊನಲು ಬೆಳಕಿನ ಮುಕ್ತ ರಾಜ್ಯ ಮಟ್ಟದ ಡೊಳ್ಳು ಕುಣಿತ ಸ್ಪರ್ಧೆಯಲ್ಲಿ ಬೀರಲಿಂಗೇಶ್ವರ ಡೊಳ್ಳಿನ ಸಂಘ ಅಂಬಾರಗೊಪ್ಪ ಶಿಕಾರಿಪುರ ಪ್ರಥಮ,ಸಿದ್ದಿವಿನಾಯಕ...

ಮಕ್ಕಳಿಗೆ ಆಸ್ತಿಮಾಡುವ ಬದಲು ಮಕ್ಕಳನ್ನೇ ಆಸ್ತಿಯನ್ನಾಗಿಸಿ

ಮಕ್ಕಳಿಗೆ ಆಸ್ತಿ,ಆಭರಣ ಮಾಡುವ ಬದಲು ಮಕ್ಕಳನ್ನೇ ಆಸ್ತಿಯನ್ನಾ ಗಿಸಿ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದ್ದಾರೆ. ಸಿದ್ಧಾಪುರ ಹಾಳದಕಟ್ಟಾ ಮತ್ತು ಕೊಳಗಿ ಪ್ರಾಥಮಿಕ ಶಾಲೆಗಳಲ್ಲಿ...

ಮಾಧ್ಯಮ ಪ್ರತಿನಿಧಿಗಳ ಸಂಘದ ಪದಾಧಿಕಾರಿಗಳ ಅಯ್ಕೆ

ಸಿದ್ದಾಪುರ: ತಾಲೂಕಿನಲ್ಲಿ ನೂತನವಾಗಿ ಅಸ್ಥಿತ್ವಕ್ಕೆ ಬಂದ ಮಾಧ್ಯಮ ಪ್ರತಿನಿಧಿಗಳ ಸಂಘ (ರಿ) ಸಿದ್ದಾಪುರ ದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಸಂಘದ ಅಧ್ಯಕ್ಷರಾಗಿ ಸಮಾಜಮುಖಿ...

ಮೂತ್ರ ವಿಸರ್ಜನೆಗೆ ತೆರಳಿದ್ದಾಗ ವಿದ್ಯುತ್ ಸ್ಪರ್ಶ; ಶಾಲಾ ಆವರಣದಲ್ಲೇ ಬಾಲಕಿ ಸಾವು

ಉತ್ತರ ಕನ್ನಡ: ಮೂತ್ರ ವಿಸರ್ಜನೆಗೆ ತೆರಳಿದ್ದಾಗ ವಿದ್ಯುತ್ ಸ್ಪರ್ಶ; ಶಾಲಾ ಆವರಣದಲ್ಲೇ ಬಾಲಕಿ ಸಾವು ಶಾಲೆಯ ಶೌಚಾಲಯದ ಬಳಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *