ಪದವಿಧರ ಪ್ರಾಥಮಿಕ ಶಿಕ್ಷಕರ ಕೊರತೆಯಿಂದಾಗಿ ಅವಶ್ಯವಿದ್ದ ಶಾಲೆಗಳಲ್ಲಿ ಶಿಕ್ಷಕರನ್ನು ದೊರಕಿಸಲು ಸಾಧ್ಯವಾಗಿಲ್ಲ ಎಂದು ರಾಜ್ಯ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ ಹೇಳಿದ್ದಾರೆ.
ಹೂಡಲಮನೆ ಪ್ರಾಥಮಿಕ ಶಾಲೆ ಭೇಟಿಯ ವೇಳೆ ಮಾಧ್ಯಮಪ್ರತಿನಿಧಿಗಳಿಗೆ ಈ ವಿಷಯ ತಿಳಿಸಿದ ಅವರು ಸರ್ಕಾರ ಗುಣಾತ್ಮಕ ಶಿಕ್ಷಣ ದೊರಕಿಸುವ ಹಿನ್ನೆಲೆಯಲ್ಲಿ ನೂತನ ಯೋಜನೆಗಳನ್ನು ತಯಾರಿಸುತ್ತಿದೆ. ಆದರೆ ಪದವಿಧರ ಶಿಕ್ಷಕರ ಮೇಮಕಾತಿಗೆ ಅರ್ಜಿ ಕರೆದರೆ 10 ಸಾವಿರ ಹುದ್ದೆಗಳಿಗೆ 2500 ಜನ ಮಾತ್ರ ಅರ್ಜಿ ಹಾಕಿದ್ದಾರೆ. ಹಾಗಾಗಿ ಕೆಲವು ಶಾಲೆಗಳಲ್ಲಿ ಶಿಕ್ಷಕರ ಹುದ್ದೆಗಳು ಖಾಲಿ ಉಳಿದಿವೆ. ಈ ಬಗ್ಗೆ ಸರ್ಕಾರ ಸೂಕ್ತ ನಿರ್ಧಾರ ಮಾಡಿ ತೊಂದರೆ ಬಗೆಹರಿಸುವ ವ್ಯವಸ್ಥೆ ಮಾಡುತ್ತೇವೆ ಎಂದರು.
ಶಾಲಾಚೀಲ ರಹಿತ ದಿನ, ವಾಟರ್ ಬೆಲ್ ಸೇರಿದಂತೆ ಚಟುವಟಿಕೆ ಆಧರಿತ ಗುಣಾತ್ಮಕ ಶಿಕ್ಷಣದಿಂದ ಶಿಕ್ಷಣದ ವ್ಯವಸ್ಥೆ ಸುಧಾರಿಸಲಿದ್ದೇವೆ. ಪ್ರಾಯೋಗಿಕ ಪರೀಕ್ಷೆ, ಉಪನಿರ್ಧೇಶಕರಿಗೆ ತರಬೇತಿ, ಕಾರ್ಯಾಗಾರ ಮಾಡುವ ಮೂಲಕ ವಿದ್ಯಾರ್ಥಿಸ್ನೇಹಿ ಶಿಕ್ಷಣಕ್ಕೆ ಒತ್ತು ಕೊಡುತ್ತೇವೆ.
-ಸುರೇಶ್‍ಕುಮಾರ,ಶಿಕ್ಷಣ ಸಚಿವ.
ಅರಳು ಹುರಿದಂತೆ ಪಟಪಟನೆ ಇಂಗ್ಲೀಷ್ ಮಾತನಾಡಿದ ಮಕ್ಕಳು, ಸಚಿವರ ಪ್ರಶಂಸೆ
ಎಲ್ಲಾ ವ್ಯವಸ್ಥೆಗಳೂ ಅಚ್ಚುಕಟ್ಟು, ಶಾಲೆಯೆಂದರೆ ದೇವಾಲಯಕ್ಕಿಂತ ಹೆಚ್ಚೆನ್ನುವ ಭಾವ. ಪಟಪಟನೆ ಅರಳು ಹುರಿದಂತೆ ಇಂಗ್ಲೀಷ್ ನಲ್ಲಿ ಮಾತನಾಡುವ ಕನ್ನಡದಮಕ್ಕಳು ಇದು ತಾಲೂಕಿನ ಹೂಡ್ಲಮನೆ ಶಾಲೆಯಲ್ಲಿ ಇಂದು ಕಂಡ ದೃಶ್ಯ.
ರಾಜ್ಯ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆಯವರ ಮಗಳ ಮದುವೆ ಆರತಕ್ಷತೆಗೆ ಬಂದ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಇಂದು ಅಣಲೇಬೈಲ್ ಪಂಚಾಯತ್ ಹೂಡ್ಲಮನೆ ಶಾಲೆಯನ್ನು ಭೇಟಿ ಮಾಡಿದರು.
ಸಚಿವರು ಅವರೊಂದಿಗೆ ಬಂದಿದ್ದ ಅಧಿಕಾರಿಗಳಿಗೆ ಈ ಶಾಲೆಯ ಆವರಣ ಪ್ರವೇಶಿಸುತಿದ್ದಂತೆ ಹೊಸ ಅನುಭವ ಆದಂತಾಯಿತು. ಗಣ್ಯರನ್ನು ಸ್ವಾಗತಿಸಿದ ವಿದ್ಯಾರ್ಥಿಗಳು ಸಚಿವರನ್ನು ಕರೆದೊಯ್ದು ಇಡೀ ಶಾಲೆ, ಶಾಲೆಯ ವ್ಯವಸ್ಥೆ, ವಿಶೇಶಗಳನ್ನು ಒಬ್ಬೊಬ್ಬರಾಗಿ ಇಂಗ್ಲೀಷ್ ನಲ್ಲಿ ಪರಿಚಯಿಸುತಿದ್ದರೆ…