
ದಿಢೀರನೆ ಶಾಸನವಾದ ನಾಗರಿಕ ಪೌರತ್ವ ನೋಂದಣಿ ಕಾಯಿದೆ ಜಾರಿ ಬಗ್ಗೆ ದೇಶದಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗಿದೆ.
ಬೆಂಗಳೂರು ಸೇರಿದಂತೆ ದೇಶದ ನಾನಾ ಭಾಗಗಳಲ್ಲಿ ಈ ಕಾಯಿದೆ ವಿರೋಧಿಸಿ ಪ್ರತಿಭಟನೆಗಳು ನಡೆದಿವೆ. ಆಸ್ಸಾಂ ನಲ್ಲಿ ಬಿ.ಜೆ.ಪಿ. ಮತ್ತು ಆರ್. ಎಸ್. ಎಸ್. ಕಛೇರಿಗಳ ಮೇಲೆ ದಾಳಿ ನಡೆಸಿದ ಪ್ರತಿಭಟನಾಕಾರರು ಈ ಕಾಯಿದೆ ಜಾರಿ ತಡೆಯದಿದ್ದರೆ ಪರಿಣಾಮ ಭೀಕರವಾಗುವ ಬಗ್ಗೆ ಎಚ್ಚರಿಸಿದ್ದಾರೆ.
ಹಿಂದಿ ಪರೀಕ್ಷೆಗಳಿಗೆ ಅರ್ಜಿ ಆಹ್ವಾನ
ಸಿದ್ದಾಪುರ,ಡಿ. 12: ಕರ್ನಾಟಕ ಹಿಂದೀ ಪ್ರಚಾರ ಸಮಿತಿ ಬೆಂಗಳೂರು ದಿಂದ ನಡೆಸಲ್ಪಡುವ ವಿವಿಧ, ಹಿಂದೀ ಪರೀಕ್ಷೆಗಳಾದ ಭೋದ, ಪ್ರಥಮ, ಮಧ್ಯಮ, ರಾಜಭಾಷಾ ಪ್ರಕಾಶ, ಹಾಗೂ ರಾಜಭಾಷಾ ವಿದ್ವಾನ್ (ಪದವಿತತ್ಸಮ) ಪರೀಕ್ಷೆಗಳು ಬರಲಿರುವ ಫೆಬ್ರವರಿ ಕೊನೆಯಲ್ಲಿ ಸಿದ್ದಾಪುರ ಪರೀಕ್ಷಾ ಕೇಂದ್ರದಲ್ಲಿ ನಡೆಯಲಿವೆ.
ಎಸ್.ಎಸ್.ಎಲ್.ಸಿ, ಪಿ.ಯು.ಸಿ ಪದವಿಯಲ್ಲಿ ಹಿಂದೀ ವಿಷಯದೊಂದಿಗೆ ಉತ್ತೀರ್ಣರಾದವರು ರಾಜಭಾಷಾ ಪ್ರವೇಶ್, ರಾಜಭಾಷಾ ಪ್ರಕಾಶ್ ಹಾಗೂ ರಾಜಭಾಷಾ ವಿದ್ವಾನ್ ಪರೀಕ್ಷಗೆ ನೇರವಾಗಿ ಕೂಡ್ರಬಹುದು.
ಪರೀಕ್ಷಾ ವಿವರ ಹಾಗೂ ಫಾರ್ಮಗಳಿಗಾಗಿ ಸಮಿತಿಯ ಉತ್ತರಕನ್ನಡ ಜಿಲ್ಲಾ ಸಂಘಟಕ ಜಿ.ಜಿ ಹೆಗಡೆ ಬಾಳಗೋಡ ಶ್ರೀನಿಕೇತನ ಎ.ಪಿ.ಎಂ.ಸಿ ಹತ್ತಿರ ಅಂಚೆ, ಹಾಗೂ ತಾಲೂಕು ಸಿದ್ದಾಪುರ (ಉ.ಕ) 581355, 9845793204 ಸಂಖ್ಯೆಯೊಂದಿಗೆ ಸ್ವವಿಳಾಸದ ದಿನಾಂಕ: 05-01-2020ರೊಳಗೆ ಸಂಪರ್ಕಿಸಲು ಕೋರಲಾಗಿದೆ.
