21 ವರ್ಷಕ್ಕೆ ಸಮಾಜದಿಂದ ಗೌರವ ಬಯಸಿದ್ದ ವ್ಯಕ್ತಿ ಮಾದಕ ವ್ಯಸನಿಯಾಗಿದ್ದನೆ?

ಸರ್ಕಾರಿ ಕೃಪಾಪೋಷಿತ ಅಕ್ರಮ ವ್ಯವಹಾರಕ್ಕೆ ಅಮಾಯಕರ ಬಲಿ?
21 ವರ್ಷಕ್ಕೆ ಸಮಾಜದಿಂದ ಗೌರವ ಬಯಸಿದ್ದ ವ್ಯಕ್ತಿ ಮಾದಕ ವ್ಯಸನಿಯಾಗಿದ್ದನೆ?
ಸಿದ್ಧಾಪುರ ತಾಲೂಕಿನ ಕ್ಯಾದಗಿಯ ಆದರ್ಶ ನಾಯ್ಕ ಎನ್ನುವ ಯುವಕ ಬುಧವಾರ ಆತ್ಮಹತ್ಯೆಗೆ ಶರಣಾದ ವಿಷಯ ಅನೇಕರ ಬೇಸರ, ಆಶ್ಚರ್ಯಕ್ಕೆ ಕಾರಣವಾಗಿದೆ.
ಮನೆಯಲ್ಲಿ ಸ್ಥಿತಿವಂತನಾಗಿದ್ದ,ಓದಿನಲ್ಲಿ ಹಿಂದಿರಲಿಲ್ಲ. ಉಳಿದಂತೆ ಆರೋಗ್ಯ ಇತ್ಯಾದಿ ಯಾವುದೇ ತೊಂದರೆ ಇರಲಿಲ್ಲ. ಆತನ ಅಪ್ಪನಿಗೆ ಇರುವ ಎರಡು ಮಕ್ಕಳಲ್ಲಿ ಏಕೈಕ ಗಂಡುಮಗ ಈತ.
ಹೀಗೆ ಸಾಯಲು ಪ್ರಬಲ ಕಾರಣಗಳೇ ಇಲ್ಲದ, ಪ್ರಬಲ ಕಾರಣಗಳ ಹೊರತಾಗಿ ಬೇರೆ ವಿಶೇಶ ಕಾರಣಗಳೂ ಇಲ್ಲದ ಈ ಯುವಕನ ಆತ್ಮಹತ್ಯೆ ತಾಲೂಕಿನ ಜನರಲ್ಲಿ ವಿಶೇಶ ಕುತೂಹಲಕ್ಕೆ ಕಾರಣವಾಗಿದೆ. ಆದರ್ಶ ರಾಮಕೃಷ್ಣ ನಾಯ್ಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬೇಡ್ಕಣಿಯ ಅಂತಿಮ ವರ್ಷದ ಪದವಿ ವಿದ್ಯಾರ್ಥಿ, ಮಾಹಿತಿಗಳ ಪ್ರಕಾರ ಪ್ರೇಮ ಪ್ರಕರಣ, ಪ್ರೇಮ ವೈಫಲ್ಯಗಳ ಬಾಧಿತನಾಗಿರಲಿಲ್ಲ. ಮನೆಯಲ್ಲಿ, ವೈಯಕ್ತಿಕ ಎನ್ನಬಹುದಾದ ಯಾವುದೇ ತೊಂದರೆಗಳಿರಲಿಲ್ಲ. ಆದರೆ ಆತ ಬರೆದಿಟ್ಟಿದ್ದ ಎನ್ನಲಾದ ಡೆತ್‍ನೋಟ್ ನಲ್ಲಿ ತನಗೆ ಸಮಾಜದಿಂದ ಗೌರವ ದೊರೆಯಲಿಲ್ಲ ಹಾಗಾಗಿ ತಾನು ಸಾಯುವ ಬಗ್ಗೆ ಬರೆದಿಟ್ಟಿದ್ದಾನೆ ಎನ್ನಲಾಗುತ್ತಿದೆ.
ಇನ್ನೂ ಪದವಿಯನ್ನೇ ಪೂರೈಸದ ಈ ವ್ಯಕ್ತಿ ಸಮಾಜದಿಂದ ಅದೆಂಥ ಗೌರವ,ಪುರಸ್ಕಾರ ಬಯಸಿದ್ದ ಎನ್ನುವುದಕ್ಕೆ ಯಾವುದೇ ಮಾಹಿತಿ ಇಲ್ಲ.
ಮಾದಕ ವ್ಯಸನಿಯೇ?
ಬೆಳೆಯಬೇಕಾದ ವಯಸ್ಸಿನಲ್ಲಿ ಸಾವಿಗೆ ಕೊರಳೊಡ್ಡಿದ ಆದರ್ಶ ಮಾದಕ ವ್ಯಸನಿಯಾಗಿದ್ದನೆ? ಎನ್ನುವ ಬಗ್ಗೆ ಸಂಶಯಗಳಿವೆ. ಕೆಲವು ಕಾಲೇಜು ವಿದ್ಯಾರ್ಥಿಗಳು ಪಿಸುಗುಟ್ಟುವ ಪ್ರಕಾರ ಆದರ್ಶ ಆದರ್ಶ ಸಮಾಜದ ಕನಸು ಕಾಣುವ ಬದಲು ಮಾದಕ ವ್ಯಸನಕ್ಕೆ ತುತ್ತಾಗಿರುವ ಸಾಧ್ಯತೆ ಇದೆ ಹಾಗಾಗಿ ಸಮಾಜದಿಂದ ತನಗೆ ಗೌರವ ದೊರೆಯಲಿಲ್ಲ ಎಂದು ಡೆತ್‍ನೋಟ್ ಬರೆದಿಟ್ಟಿರಬಹುದು ಎಂದು ಶಂಕಿಸಿದ್ದಾರೆ.
ಜೂಜು,ಅಕ್ರಮ ಸರದಾರರ ಸಂರಕ್ಷಕ ಹೊಸ ಸರ್ಕಾರ-
ಸಿದ್ಧಾಪುರ ಶಿರಸಿ ಸೇರಿದಂತೆ ಉತ್ತರ ಕನ್ನಡ, ಶಿವಮೊಗ್ಗ ಜಿಲ್ಲೆಯೂ ಸೇರಿ ರಾಜ್ಯದ ಬಹುತೇಕ ಕಡೆ ಅಕ್ರಮ, ಜೂಜು, ಮಾದಕ ವಸ್ತುಗಳ ಮಾರಾಟ ಹೊಸ ಸರ್ಕಾರ ಪ್ರಾರಂಭವಾದಾಗಿನಿಂದ ಮಿತಿಮೀರಿದೆ ಎನ್ನಲಾಗುತ್ತಿದೆ. ಇದೇವರ್ಷ ಅಧಿಕಾರದ ಚುಕ್ಕಾಣಿ ಹಿಡಿದ ವ್ಯಕ್ತಿ ಇಡೀ ವ್ಯವಸ್ಥೆಯನ್ನು ಕಪಿಮುಷ್ಟಿಯಲ್ಲಿಟ್ಟುಕೊಂಡು ತಮ್ಮ ಮಕ್ಕಳ ಮೂಲಕ ವಸೂಲಿ ಕಾರ್ಯ ಮಾಡುತಿದ್ದಾರೆ ಎನ್ನುವ ಗುರುತರ ಆರೋಪ ಒಂದೆಡೆಯಾದರೆ, ಶಿರಸಿ ಸಿದ್ದಾಪುರಗಳಲ್ಲಿ ಅಕ್ರಮ ವ್ಯವಹಾರಿಗಳು, ಜೂಜುಕೋರರು, ಸಮಾಜ ಕಂಟಕರ ಸ್ನೇಹ ಮಾಡುವ ಜಿಲ್ಲೆಯ ಹಿರಿಯ ರಾಜಕಾರಣಿಗಳು ಮತ್ತು ಅವರ ಆಪ್ತರು ಜಿಲ್ಲೆಯಲ್ಲಿ ಅಂಧಾದರ್ಬಾರ್ ಗೆ ಅವಕಾಶ ನೀಡಿ ದುಂಡಗಾಗುತ್ತಿರುವ ಬಗ್ಗೆ ಗುರುತರ ಆರೋಪಗಳೊಂದಿಗೆ ಪ್ರಬಲ ಸಾಕ್ಷಿಗಳಿವೆ.
ರಾಜ್ಯ ವಿಧಾನಸಭಾ ಅಧ್ಯಕ್ಷರು ಹಿಂದೆ ಶಾಸಕರಾಗಿದ್ದಾಗ ಶಿರಸಿ ಕ್ಷೇತ್ರ ಜಿಲ್ಲೆಯಲ್ಲಿ ಅಕ್ರಮ ಸಾರಾಯಿ, ಮಾದಕ ವಸ್ತುಗಳ ಸರಬರಾಜು, ಮಾರಾಟದ ಮೇಲೆ ನಿಯಂತ್ರಣ ಹೇರಲು ಅಧಿಕಾರಿಗಳಿಗೆ ಸೂಚನೆ ನೀಡಿ, ಸಾರ್ವಜನಿಕ ಪ್ರತಿಭಟನೆಗೆ ಕರೆ ನೀಡಿದ್ದರು.
ಆದರೆ ಅವರ ಸರ್ಕಾರದ ಆಡಳಿತದ ಅವಧಿಯಲ್ಲಿ ಅಕ್ರಮ ಮದ್ಯಮಾರಾಟ ಮಿತಿಮೀರಿದೆ. ಈ ಅಕ್ರಮ, ಕಲಬೆರಕೆ ಮದ್ಯ ಸೇವನೆಯಿಂದ ಕ್ಯಾದಗಿಯಲ್ಲೇ ಕಳೆದ ವಾರ ಒಂದು ಸಾವು ಸಂಭವಿಸಿದೆ.
ಈ ಸಾವಿನ ಹಿಂದೆ, ಈಗ ಆತ್ಮಹತ್ಯೆಗೆ ಶರಣಾದ ಯುವಕ ಆದರ್ಶ ಸಾವಿನ ಹಿಂದೆ ಸರ್ಕಾರಿ ಕೃಪಾಪೋಶಿತ ಅಕ್ರಮ ಜೂಜು, ಕಳಪೆ ಮದ್ಯ, ಜುಗಾರಿ ನಡೆಸುವ ಕೆಲವು ಕುಳಗಳ ಕೈಚಳಕವಿದೆ ಎನ್ನುವ ಆರೋಪ ಈಗ ಸಾರ್ವಜನಿಕ ಚರ್ಚೆಯ ಸ್ವರೂಪ ಪಡೆದಿದೆ.
ಸ್ಥಳಿಯ ಶಾಸಕರ ಕಡೆಯವರು ಶಿರಸಿ-ಸಿದ್ದಾಪುರಗಳಲ್ಲಿ ಆಡಳಿತ ಯಂತ್ರ ದುರುಪಯೋಗ ಮಾಡಿಕೊಂಡು ಮಾದಕ ವ್ಯಸನ ವ್ಯಾಪಾರ, ಅಕ್ರಮ ಮದ್ಯಮಾರಾಟ, ಕ್ಲಬ್, ಇಸ್ಪೀಟ್ ಜುಗಾರಿಗಳ ಅಡ್ಡೆಗಳಿಗೆ ಪರೋಕ್ಷ ಸಹಕಾರ ನೀಡುತ್ತಿರುವ ಬಗ್ಗೆ ಸಾರ್ವಜನಿಕರೇ ದೂರುತಿದ್ದಾರೆ.
ದೇಶಪ್ರೇಮ, ಹಿಂದುತ್ವದ ಹೆಸರಲ್ಲಿ ಜನರನ್ನು ಮೋಸಗೊಳಿಸುವ ಲಾಭಬಡುಕ ರಾಜಕೀಯ ಮುಖಂಡರು ಅಕ್ರಮ ವ್ಯವಹಾರಗಳಿಗೆ ಸಹಕರಿಸುವ ಮೂಲಕ ಜಲ್ಲೆ, ರಾಜ್ಯವನ್ನು ಜಂಗಲ್‍ರಾಜ್ ಮಾಡಹೊರಟಿರುವ ಬಗ್ಗೆ ಸಾರ್ವಜನಿಕ ವಿರೋಧವೂ ಪ್ರಾರಂಭವಾಗಿದೆ.
ಕಲಬೆರಕೆ ಅಕ್ರಮ ಮದ್ಯ, ಡ್ರಕ್ಸ್ ಹೆರೈನ್ ನಂಥ ಅಫೀಮುಗಳು, ಇಸ್ಪೀಟ್, ಜುಗಾರಿ ಸೇರಿದ ಅನೇಕ ಸರ್ಕಾರಿ ಕೃಪಾಪೋಶಿತ ಜನರ ಅವ್ಯವಹಾರಗಳಿಂದಾಗಿ ಕ್ಯಾದಗಿಯ ಯುವಕ ಆದರ್ಶ ಸಾವು. ಈ ಸಾವಿಗಿಂತ ಒಂದೆರಡು ವಾರ ಮೊದಲು ದಲಿತ ಯುವಕನೊಬ್ಬನ ಕಳಪೆ ಮದ್ಯಪಾನ ಸೇವನೆಯ ಸಾವು ಹೀಗೆ ಸಾರ್ವಜನಿಕವಾಗಿ ಮತಾಂಧತೆಯ ಅಫೀಮು ಕುಡಿಸುವ ಲಾಭಬಡುಕ ನಕಲಿ ದೇಶಭಕ್ತರು ಅವರ ಆಪ್ತ ಉದ್ಯಮಿಗಳು ನೇರವಾಗಿ ಯುವಕರಿಗೆ ಕಲಬೆರಕೆ ಮದ್ಯ, ಮಾದಕ ವಸ್ತುಗಳನ್ನು ಬಳಸಲು ಪ್ರೇರೇಪಿಸುವ ಮೂಲಕ ಸಮಾಜದ ಸ್ವಾಸ್ಥ್ಯ ಹಾಳುಗೆಡುವುತ್ತಿರುವುದಕ್ಕೆ ಈ ಎರಡು ಸಾವುಗಳು ಜೊತೆಗೆ ದಾಖಲೆಗೆ ಸಿಗದ ಕೆಲವು ಸಾವುಗಳೂ ಸಾಕ್ಷಿ.
ಶಿರಸಿ ಕ್ಷೇತ್ರ ಉತ್ತರಕನ್ನಡದಲ್ಲಿ ಈ ಅಕ್ರಮ ಅವ್ಯವಹಾರಗಳೊಂದಿಗೆ ಕಳಪೆ ಕಾಮಗಾರಿಗಳ ಬ್ರಹ್ಮಾಂಡ ನರ್ತನವೇ ನಡೆಯುತ್ತಿದೆ. ಮೇಲ್ನೊಟಕ್ಕೆ ರಾಷ್ಟ್ರೀಯತೆ, ದೇಶಪ್ರೇಮದ ಬೋಂಗುಬಿಡುವ ಮುಖವಾಡದ ಸಮಾಜಕಂಟಕರು ಸರ್ಕಾರಿ ವ್ಯವಸ್ಥೆಯ ಮೂಲಕವೇ ಸಮಾಜವನ್ನು ಹಾಳುಮಾಡುತ್ತಿರುವ ಬಗ್ಗೆ ಸಾರ್ವಜನಿಕರು ಎಚ್ಚೆತ್ತುಕೊಳ್ಳದಿದ್ದರೆ ಮನೆಯೊಳಗಣ ಕಿಚ್ಚು ನಮ್ಮನ್ನಲ್ಲದೆ ಮತ್ಯಾರನ್ನು ಸುಡಬಲ್ಲುದು?
ಈ ಅವ್ಯವಸ್ಥೆಯ ಪೊಷಕರಾದ ಮತಾಂಧ ಆಶಾಢಭೂತಿಗಳನ್ನು ಬಹಿಷ್ಕರಿಸುವ ಮೂಲಕ ಸಾರ್ವಜನಿಕರು ಈ ದುಷ್ಟ ದೇಶಪ್ರೇಮಿಸೋಗಿನ ಸಮಾಜಕಂಟಕರನ್ನು ಶಿಕ್ಷಿಸಬೇಕಿದೆ. ಪ್ರಾರಂಭಿಕವಾಗಿ ಕ್ಯಾದಗಿ ಭಾಗದ ಸಾರ್ವಜನಿಕರು ನಾಟಕದ ಜನಪ್ರತಿನಿಧಿಗಳ ಕೊರಳಪಟ್ಟಿಹಿಡಿದು ಪ್ರಶ್ನಿಸಿ, ಪ್ರತಿಭಟಿಸುವ ಮೂಲಕ ಪ್ರತಿರೋಧ ಒಡ್ಡದಿದ್ದರೆ ಮತಾಂಧರು ಅದನ್ನು ದೇಶಪ್ರೇಮ, ಹಿಂದುತ್ವಕ್ಕಾಗಿ ಎಂದು ಸಮರ್ಥಿಸಿಕೊಳ್ಳುವ ಕಾಲ ಬಹುದೂರವಿಲ್ಲ.

ನಿರೀಕ್ಷೆ ಮೀರಿ ಅನುದಾನದ ಹೊಳೆ
ಕೋಟಿ-ಕೋಟಿ ಅನುದಾನ ಸದ್ಭಳಕೆಗೆ ಸೂಚನೆ
ಉತ್ತರ ಕನ್ನಡ ಜಿಲ್ಲೆಗೆ ಬೆಳೆವಿಮೆ ಪರಿಹಾರ 14.92 ಕೋಟಿ, ಶಿರಸಿ ಕ್ಷೇತ್ರಕ್ಕೆ ಗ್ರಾಮೀಣ ರಸ್ತೆಗಳಿಗೆ 12 ಕೋಟಿ ಅನುದಾನ, ಅತಿವೃಷ್ಟಿ ಪರಿಹಾರ ಸಿದ್ಧಾಪುರ ತಾಲೂಕಿಗೆ 12.68 ಕೋಟಿ ಹೀಗೆ ಈ ವರ್ಷ ತಾಲೂಕು, ಕ್ಷೇತ್ರ, ಜಿಲ್ಲೆಗೆ ಹೆಚ್ಚಿನ ಅನುದಾನ ಬಂದಿದ್ದು ಆ ಅನುದಾನದ ಸದ್ಭಳಕೆಗೆ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸೂಚಿಸಿದರು.
ತಾ,ಪಂ. ಸಭಾಭವನದಲ್ಲಿ ನಡೆದ ಪ್ರಗತಿಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು ಈ ವರ್ಷ ಹೆಚ್ಚು ಅನುದಾನ ಬಂದಿದೆ. ಮುಂದಿನ ಆರ್ಥಿಕ ವರ್ಷದಲ್ಲೂ ಹೆಚ್ಚಿನ ಅನುದಾನ ಬರಲಿದೆ. ಈ ಅವಕಾಶದಲ್ಲಿ ಅನುದಾನ ಸದ್ಭಳಕೆ ಮಾಡುವ ಮೂಲಕ ತಾಲೂಕು ಕ್ಷೇತ್ರದ ಅಭಿವೃದ್ಧಿ ಮಾಡಬೇಕಿದೆ ಎಂದು ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಸೂಚನೆ ನೀಡಿದ ವಿಶ್ವೇಶ್ವರ ಹೆಗಡೆ ಕಾಡು ಪ್ರಾಣಿ ಹಾವಳಿ, ಕಾಡುಪ್ರಾಣಿಗಳಿಂದ ಬೆಳೆನಾಶ ಸೇರಿದ ಕೆಲವು ಅವಶ್ಯ ಕೆಲಸಗಳನ್ನು ಮಾಡಿಸುವುದಾಗಿ ಭರವಸೆ ನೀಡಿದರು.
ಪ್ರಗತಿಪರಿಶೀಲನಾ ಸಭೆಯ ಪ್ರಾರಂಭದಲ್ಲಿ ಮಾತನಾಡಿದ ಹೆಗಡೆ ಈ ಆರ್ಥಿಕ ವರ್ಷ ಕೊನೆಯಾಗುತ್ತಿದೆ.ವಿಳಂಬ, ನಿರ್ಲಕ್ಷದಿಂದ ಅಭಿವೃದ್ಧಿ ಅನುದಾನ ಮರಳಬಾರದು. ಈಗಿನಿಂದಲೇ ತಾಲೂಕಿಗೆ ನಿರೀಕ್ಷೆ ಮೀರಿ ಹಣ ಬರಲಿದೆ ಅದರ ಸದ್ಭಳಕೆ ಆಗಬೇಕು ಎಂದು ಆದೇಶಿಸಿದ ಅವರು ಜನಪ್ರತಿನಿಧಿಗಳು, ಅಧಿಕಾರಿಗಳು ಅವಶ್ಯ ಕೆಲಸಗಳ ಬಗ್ಗೆ ತಿಳಿಸಿ ಸಹಕರಿಸಿದರೆ ಈ ಸರ್ಕಾರದಿಂದ ಗರಿಷ್ಟ ಅನುದಾನದ ಜೊತೆಗೆ ಹೆಚ್ಚಿನ ಅನುಕೂಲ ಆಗಲಿದೆ ಎಂದರು.
ಸಭೆಗೆ ಮಾಹಿತಿ ನೀಡಿದ ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಬೆಳೆವಿಮೆ, ಬೆಳೆಹಾನಿ ಅನುದಾನದ ತಾಲೂಕುವಾರು ದಾಖಲೆಗಳು ಲಭ್ಯವಿಲ್ಲದಿದ್ದುದರಿಂದ ಕರಾರುವಕ್ಕಾಗಿ ತಾಲೂಕಿಗೆ ಇಷ್ಟು ಅನುದಾನ ಬಂದಿದೆ. ಇಷ್ಟು ಫಲಾನುಭವಿಗಳಿಗೆ ದೊರೆತಿದೆ ಎನ್ನುವುದು ತಿಳಿಯುವುದಿಲ್ಲ ಎಂದು ತೊಂದರೆಯನ್ನು ವಿಧಾನಸಭಾಅಧ್ಯಕ್ಷರ ಗಮನಕ್ಕೆ ತಂದರು.
ಇದಕ್ಕೆ ಪ್ರತಿಕ್ರೀಯಿಸಿದ ಅವರು ಸಂಬಂಧಿಸಿದ ಸಚಿವರು, ಅಧಿಕಾರಿಗಳಿಗೆ ತಿಳಿಸಿ ಈ ತೊಂದರೆ ಬಗೆಹರಿಸುವುದಾಗಿ ಭರವಸೆ ನೀಡಿದರು. ಆರೋಗ್ಯ ಮತ್ತು ಇತರ ಇಲಾಖೆಗಳ ವರದಿ ಕೇಳಿದ ಸಚಿವರು ಅಗತ್ಯ ಅನುಕೂಲ ಕೇಳಿ ಮುಂಜಾಗ್ರತೆಯಿಂದ ತೊಂದರೆ ಬಗೆಹರಿಸಲು ಸೂಚಿಸಿದರು.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಅಕಾಲಿಕ ಮಳೆ, ಜಾತ್ರೆ, ವಾರ್ಷಿಕೋತ್ಸವಗಳಿಗೆ ಅಡ್ಡಿ… ಶಾಸಕರ ಮಿಂಚಿನ ಸಂಚಾರ!

ಮಲೆನಾಡು ಕರಾವಳಿಯ ಅಕಾಲಿಕ ಮಳೆ ಬೇಸಿಗೆಯ ಉಷ್ಣವನ್ನು ಶಮನ ಮಾಡಿದ್ದರೆ… ಪೂರ್ವನಿಶ್ಚಿತ ಧಾರ್ಮಿಕ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಅಡ್ಡಿ ಮಾಡಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ...

ಶನಿವಾರ…ಶಾಸಕರು,ಸಂಸದರ ಕಾರ್ಯಕ್ರಮಗಳು

ಇಟಗಿ ರಾಮೇಶ್ವರ ಮತ್ತು ಪರಿವಾರ ದೇವಾಲಯಗಳ ಅಷ್ಟಬಂಧ ಕಾರ್ಯಕ್ರಮದಲ್ಲಿ ಏ.೫ ರ ಶನಿವಾರ ಸಾಯಂಕಾಲ ಸಂಜೆ ನಾಲ್ಕರಿಂದ ಭರತನಾಟ್ಯ ರಕ್ಷಾ & ದೀಕ್ಷಾ ರಾವ್‌...

ಸಿದ್ಧಾಪುರದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಜಾತ್ರೆ! ನಮ್ಮೂರು ಇಂದು ನಾಳೆ…..

* ಸಿದ್ಧಾಪುರ ಇಟಗಿಯ ರಾಮೇಶ್ವರ ದೇವರ ದಿವ್ಯಾಷ್ಟಬಂಧ ಕಾರ್ಯಕ್ರಮ ಪ್ರಾರಂಭವಾಗಿದೆ. ಈ ಕಾರ್ಯಕ್ರಮದ ಅಂಗವಾಗಿ ಪ್ರತಿದಿನ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ.

senaa sevaa-ಸೈನಿಕನಿಗೆ ಹುಟ್ಟೂರಿನ ಗೌರವ

ಸಿದ್ದಾಪುರ: ಭಾರತೀಯ ಸೈನ್ಯದಲ್ಲಿ ಹದಿನೇಳು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಪಡೆದು ತಾಯ್ನಾಡಿಗೆ ಮರಳಿದ ಸಿದ್ದಾಪುರ ತಾಲೂಕಿನ ಸಂಪೇಕೇರಿಯ(ಮುಗದೂರ) ವಿನಯಕುಮಾರ ನಾಯ್ಕ ರಿಗೆ...

ಕದಂಬಜಿಲ್ಲೆಗಾಗಿ ಸಹಿಸಂಗ್ರಹಣೆ, ಕಾನಳ್ಳಿಯಲ್ಲಿ ಹಸ್ಲರ್‌ ಸಂಘಕ್ಕೆ ಚಾಲನೆ,ಸೋಮುವಾರ ಮಹಿಳಾ ಸಂವೇದನೆ ಕವಿಗೋಷ್ಠಿ‌

ನಿರಂತರ ಹೋರಾಟದಲ್ಲಿರುವ ಶಿರಸಿ ಕೇಂದ್ರಿತ ಪ್ರತ್ಯೇಕ ಕದಂಬ ಜಿಲ್ಲೆ ಹೋರಾಟ ಸಮೀತಿ ಈ ತಿಂಗಳಿಂದ ಸಿದ್ಧಾಪುರದ ಗ್ರಾಮೀಣ ಪ್ರದೇಶಗಳಲ್ಲಿ ಪ್ರತ್ಯೇಕ ಜಿಲ್ಲೆಗಾಗಿ ಸಹಿ ಸಂಗ್ರಹಣೆ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *