

ಸಮಾಜಮುಖಿ ವರದಿ ಫಲಶೃತಿ-
ಗವಿನಗುಡ್ಡ-ಹಕ್ಕಲಮನೆ ರಸ್ತೆ ದುರಸ್ತಿ ಸ್ಥಳಿಯರ ಹರ್ಷ
ಸಿದ್ಧಾಪುರ ತಾಲೂಕಿನ ಕಾನಸೂರು ಪಂಚಾಯತ್ ಗವಿನಗುಡ್ಡ-ಹಕ್ಕಲಮನೆ ಸಂಪರ್ಕ ರಸ್ತೆ ದುರಸ್ಥಿಯಾಗಿದ್ದು ಈ ಸಂಪರ್ಕ ರಸ್ತೆಯ ದುರಸ್ಥಿ ಕಾಮಗಾರಿ ಮಾಡಿರುವ ಸ್ಥಳಿಯ ಆಡಳಿತವನ್ನು ಆ ಭಾಗದ ಜನರು ಅಭಿನಂದಿಸಿದ್ದಾರೆ. ಈ ವರ್ಷ ಆಗಷ್ಟ್ ನಲ್ಲಿ ಬಿದ್ದ ವಿಪರೀತ ಮಳೆ ತಾಲೂಕಿನ ಅನೇಕ ರಸ್ತೆ,ಆಸ್ತಿ, ಪಾಸ್ತಿಗಳನ್ನು ಹಾಳು ಮಾಡಿತ್ತು.
ಕಾನಸೂರು ಪಂಚಾಯತ್ ಗವಿನಗುಡ್ಡ-ಹಕ್ಕಲಮನೆ ಸಂಪರ್ಕ ರಸ್ತೆ ಕೊಚ್ಚಿ ಹೋದ ತೊಂದರೆ ಸೇರಿದಂತೆ ತಾಲೂಕಿನ ಕೆಲವು ಕಡೆ ಆದ ಮಳೆ-ಪ್ರವಾಹ ಹಾನಿಗಳ ಬಗ್ಗೆ ಸಮಾಜಮುಖಿ ವಿಸ್ತøತ ವರದಿ ಮಾಡಿತ್ತು.
ಸಮಾಜಮುಖಿ ಪ್ರತಿನಿಧಿ ಸ್ಥಳಭೇಟಿ ವೇಳೆ ಮಾತನಾಡಿದ್ದ ಕಾನಸೂರು ಗ್ರಾಮ ಪಂಚಾಯತ್ ಅಧ್ಯಕ್ಷ ತಿಮ್ಮಪ್ಪ ನಾಯ್ಕ ಈ ರಸ್ತೆ ದುರಸ್ಥಿ ಬಗ್ಗೆ ಪ್ರಯತ್ನಿಸುವ ಭರವಸೆ ನೀಡಿದ್ದರು. ಇದಕ್ಕೂ ಮೊದಲು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದ ರವಿನಾಯ್ಕ ಗವಿನಗುಡ್ಡ ಈ ತೊಂದರೆ ಬಗ್ಗೆ ಗಮನ ಸೆಳೆದಿದ್ದರು.
ಹಕ್ಕಲಮನೆ-ಗವಿನಗುಡ್ಡ ರಸ್ತೆ ಶೀಘ್ರ ದುರಸ್ಥಿ ಮತ್ತು ಶೀಘ್ರ ಕ್ರಮಕ್ಕೆ ಆಗ ರಾಜೀವ್ ನಾಯ್ಕ ಮತ್ತು ರವಿ ನಾಯ್ಕ ಗವಿನಗುಡ್ಡ ಆಗ್ರಹಿಸಿದ್ದರು. ಹೀಗೆ ಸ್ಥಳಿಯರ ಒತ್ತಾಸೆ, ಆಗ್ರಹ, ಸಮಾಜಮುಖಿ ಪ್ರಯತ್ನ, ಸುದ್ದಿಗಳ ಹಿನ್ನೆಲೆಯಲ್ಲಿ ಈಗ ರಸ್ತೆ ದುರಸ್ಥಿಯಾಗಿದೆ. ಈ ಸಂಘಟಿತ ಪ್ರಯತ್ನಕ್ಕೆ ಸ್ಥಳಿಯರು ಅಭಿನಂದಿಸಿದ್ದು ಈ ರಸ್ತೆ ದುರಸ್ಥಿ ಕೆಲಸಕ್ಕೆ ಸಹಕರಿಸಿದ ಎಲ್ಲರಿಗೆ ಸ್ಥಳಿಯ ಸಾರ್ವಜನಿಕರು ಧನ್ಯವಾದ ಹೇಳಿದ್ದಾರೆ.


