

ಸಹ್ಯಾದ್ರಿ ಶಿಕ್ಷಣ ಸಂಸ್ಥೆಯ ಅಂಗ ಸಂಸ್ಥೆಯಾದ ಸಹ್ಯಾದ್ರಿ ಲಲಿತ ಕಲಾ ಕೇಂದ್ರದ ವಾರ್ಷಿಕೋತ್ಸವ ಸಮಾರಂಭ ‘ಸ್ವರ ಸಹ್ಯಾದ್ರಿ’ ಕಾರ್ಯಕ್ರಮ ಡಿಸೆಂಬರ 15 ರಂದು ಸಂಜೆ 5 ಗಂಟೆಯಿಂದ ಕರ್ನಾಟಕ ಸಂಘದ ಸಭಾಭವನ ಪಂಚಗಾನ ಭವನದಲ್ಲಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ಸಹ್ಯಾದ್ರಿ ಲಲಿತ ಕಲಾ ಕೇಂದ್ರದ ದಾಂಡೇಲಿ-ಜೋಯಿಡಾದ ವಿದ್ಯಾರ್ಥಿಗಳಿಂದ ಸ್ವರ-ಸಮಾಗಮ ಹಾಗೂ ತರಗತಿಯ ಗುರುಗಳಾದ ಸುಧಾಮ ದಾನಗೇರಿಯವರಿಂದ ಸುಮಧುರ ಸ್ವರಾಲಾಪ ನಡೆಯಲಿದೆ.
ಜೊತೆಗೆ ಯಲ್ಲಾಪುರದ ಖ್ಯಾತ ಹಿದೂಸ್ಥಾನಿ ಗಾಯಕರಾದ ಗಣಪತಿ ಹೆಗಡೆಯವರಿಂದ ಗಾಯನಕ್ಕೆ ಸತೀಶ ಭಟ್ಟ ಹೆಗ್ಗಾರವರಿಂದ ಹಾರ್ಮೋನಿಯಂ, ಗಣೇಶ ಭಾಗ್ವತ ಗುಂಡಕಲರವರಿಂದ ತಬಾಲಾ ವಾದನವಿದೆ.
ಕಾರ್ಯಕ್ರಮದಲ್ಲಿ ಸಂಗೀತಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಹ್ಯಾದ್ರಿ ಲಲಿತ ಕಲಾ ಕೇಂದ್ರದ ಸಂಯೋಜಕರಾದ ಜಲಜಾ ಬಿ. ವಾಸರೆ ಹಾಗೂ ವಿದ್ಯಾರ್ಥಿ ಪಾಲಕರು ಮನವಿ ಮಾಡಿದ್ದಾರೆ.

ಸಮಾಜಮುಖಿ ವರದಿ ಫಲಶೃತಿ-
ಗವಿನಗುಡ್ಡ-ಹಕ್ಕಲಮನೆ ರಸ್ತೆ ದುರಸ್ತಿ ಸ್ಥಳಿಯರ ಹರ್ಷ
ಸಿದ್ಧಾಪುರ ತಾಲೂಕಿನ ಕಾನಸೂರು ಪಂಚಾಯತ್ ಗವಿನಗುಡ್ಡ-ಹಕ್ಕಲಮನೆ ಸಂಪರ್ಕ ರಸ್ತೆ ದುರಸ್ಥಿಯಾಗಿದ್ದು ಈ ಸಂಪರ್ಕ ರಸ್ತೆಯ ದುರಸ್ಥಿ ಕಾಮಗಾರಿ ಮಾಡಿರುವ ಸ್ಥಳಿಯ ಆಡಳಿತವನ್ನು ಆ ಭಾಗದ ಜನರು ಅಭಿನಂದಿಸಿದ್ದಾರೆ. ಈ ವರ್ಷ ಆಗಷ್ಟ್ ನಲ್ಲಿ ಬಿದ್ದ ವಿಪರೀತ ಮಳೆ ತಾಲೂಕಿನ ಅನೇಕ ರಸ್ತೆ,ಆಸ್ತಿ, ಪಾಸ್ತಿಗಳನ್ನು ಹಾಳು ಮಾಡಿತ್ತು.
ಕಾನಸೂರು ಪಂಚಾಯತ್ ಗವಿನಗುಡ್ಡ-ಹಕ್ಕಲಮನೆ ಸಂಪರ್ಕ ರಸ್ತೆ ಕೊಚ್ಚಿ ಹೋದ ತೊಂದರೆ ಸೇರಿದಂತೆ ತಾಲೂಕಿನ ಕೆಲವು ಕಡೆ ಆದ ಮಳೆ-ಪ್ರವಾಹ ಹಾನಿಗಳ ಬಗ್ಗೆ ಸಮಾಜಮುಖಿ ವಿಸ್ತøತ ವರದಿ ಮಾಡಿತ್ತು.
ಸಮಾಜಮುಖಿ ಪ್ರತಿನಿಧಿ ಸ್ಥಳಭೇಟಿ ವೇಳೆ ಮಾತನಾಡಿದ್ದ ಕಾನಸೂರು ಗ್ರಾಮ ಪಂಚಾಯತ್ ಅಧ್ಯಕ್ಷ ತಿಮ್ಮಪ್ಪ ನಾಯ್ಕ ಈ ರಸ್ತೆ ದುರಸ್ಥಿ ಬಗ್ಗೆ ಪ್ರಯತ್ನಿಸುವ ಭರವಸೆ ನೀಡಿದ್ದರು. ಇದಕ್ಕೂ ಮೊದಲು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದ ರವಿನಾಯ್ಕ ಗವಿನಗುಡ್ಡ ಈ ತೊಂದರೆ ಬಗ್ಗೆ ಗಮನ ಸೆಳೆದಿದ್ದರು.
ಹಕ್ಕಲಮನೆ-ಗವಿನಗುಡ್ಡ ರಸ್ತೆ ಶೀಘ್ರ ದುರಸ್ಥಿ ಮತ್ತು ಶೀಘ್ರ ಕ್ರಮಕ್ಕೆ ಆಗ ರಾಜೀವ್ ನಾಯ್ಕ ಮತ್ತು ರವಿ ನಾಯ್ಕ ಗವಿನಗುಡ್ಡ ಆಗ್ರಹಿಸಿದ್ದರು. ಹೀಗೆ ಸ್ಥಳಿಯರ ಒತ್ತಾಸೆ, ಆಗ್ರಹ, ಸಮಾಜಮುಖಿ ಪ್ರಯತ್ನ, ಸುದ್ದಿಗಳ ಹಿನ್ನೆಲೆಯಲ್ಲಿ ಈಗ ರಸ್ತೆ ದುರಸ್ಥಿಯಾಗಿದೆ. ಈ ಸಂಘಟಿತ ಪ್ರಯತ್ನಕ್ಕೆ ಸ್ಥಳಿಯರು ಅಭಿನಂದಿಸಿದ್ದು ಈ ರಸ್ತೆ ದುರಸ್ಥಿ ಕೆಲಸಕ್ಕೆ ಸಹಕರಿಸಿದ ಎಲ್ಲರಿಗೆ ಸ್ಥಳಿಯ ಸಾರ್ವಜನಿಕರು ಧನ್ಯವಾದ ಹೇಳಿದ್ದಾರೆ.
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
