

ಪ್ರತಿಭಾ ಪುರಸ್ಕಾರ, ಸನ್ಮಾನಗಳಿಂದ ಕಳೆಕಟ್ಟಿದ್ದ ಸ್ನೇಹಸಮ್ಮೇಳನ
ದೀವರ ಸಮಾಜಕ್ಕೆ ಸ್ವಾಭಿಮಾನ,ಸಮಾಜವಾದ, ಜೀವನಪ್ರೀತಿಯೇ ತಳಹದಿ
-ಡಾ.ಎಚ್.ಎಸ್ ಮೋಹನ
ವೈಯಕ್ತಿಯ,ಸಾಮೂಹಿಕ ಅಭಿವೃದ್ಧಿಯಿಂದಲೇ ಸಮಾಜದ ಅಭಿವೃದ್ಧಿ ಎಂದು ವ್ಯಾಖ್ಯಾನಿಸಿರುವ ಚಿಕ್ಕಬಳ್ಳಾಪುರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಬಸವರಾಜ್ ವಿ. ಸಮಾಜದ ಏಳ್ಗೆ,ದುರ್ಬಲರ ನೆರವಿಗೆ ಸಂಘಟನೆ ಅವಶ್ಯ ಎಂದು ಪ್ರತಿಪಾದಿಸಿದರು.
ಅವರು ಇಲ್ಲಿಯ ರಾಘವೇಂದ್ರಮಠ ಸಭಾಭವನದಲ್ಲಿ ನಡೆದ ನಾಮಧಾರಿ ಕೆ.ಎಸ್.ಆರ್.ಟಿ.ಸಿ. ನೌಕರರ ಸಂಘದ 4 ನೇ ಸ್ನೇಹ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು. ಯಾವುದೇ ವ್ಯಕ್ತಿಯನ್ನು ಅವರ ಕೆಲಸ, ಶ್ರಮ ಗಳಿಂದ ಗುರುತಿಸಬೇಕು. ನಾಮಧಾರಿಗಳಲ್ಲಿ ಒಗ್ಗಟ್ಟಿನ ಕೊರತೆಯಿದೆ. ಪ್ರತಿಭೆ,ಜ್ಞಾನ,ಶ್ರಮಕ್ಕೆ ಗೌರವ ದೊರೆಯದಿದ್ದರೆ ಆ ಸಮಾಜಕ್ಕೆ ಗೌರವಾದರಗಳೂ ದೊರೆಯುವುದು ಕಷ್ಟ ಎಂದು ಮಾರ್ಮಿಕವಾಗಿ ನುಡಿದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಉಪನ್ಯಾಸಕ ಡಾ.ಎಚ್.ಎಸ್.ಮೋಹನ ಚಂದ್ರಗುತ್ತಿ ದೀವರು ಮತ್ತು ಈಡಿಗ ಉಪಜಾತಿಗಳು ಮಾತೃಪ್ರಧಾನ ಸಂಸ್ಕøತಿ ಮತ್ತು ಸಮಾಜವಾದದ ತಳಹದಿಯ ಮೇಲೆ ನಿಂತಿವೆ. ಹಾಗಾಗಿ ನಾವು ಸುಲಭವಾಗಿ ಮಠ,ಮಠಾಧಿಪತಿಗಳನ್ನು ಒಪ್ಪುತ್ತಿಲ್ಲ. ದೀವರ ಸಮಾಜ ಮಾನವೀಯತೆ,ಸ್ವಾಭಿಮಾನ, ಜೀವನಪ್ರೀತಿಗೆ ಉತ್ತಮ ಮಾದರಿ ಎಂದರು.
ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳು,ಸಾಧಕರು, ನಿವೃತ್ತ ನೌಕರರನ್ನು ಸನ್ಮಾನಿಸಿ, ಅಭಿನಂದಿಸಲಾಯಿತು.


