ರಾಷ್ಟ್ರೀಯ ಮಟ್ಟಕ್ಕೆ ವಿಸ್ತರಿಸಿದ ಚಿತ್ತಾರ ಚಾವಡಿಯ ಹಿರಿಮೆ

ಈಶ್ವರ ನಾಯ್ಕ ಹಸವಂತೆ ಸಿದ್ದಾಪುರದ ಬಡ ರೈತಕುಟುಂಬದ ಸಾಮಾನ್ಯ ವಿದ್ಯಾರ್ಥಿ
ಸಂಬಂಧಿಯೊಬ್ಬರು ಇವರ ಕಾಲೇಜಿನ ಶುಲ್ಕ ಎಗರಿಸಿ ಇವರು ಪದವಿ ಕಲಿಯುವ ಅವಕಾಶ ತಪ್ಪಿಸಿದರು. ಈ ರಗಳೆಯಿಂದ ಪಾರಾಗಲು ಈಶ್ವರ ನಾಯ್ಕ ನೀನಾಸಂ ಪ್ರವೇಶಿಸಿದರು.
ನೀನಾಸಂ ನಲ್ಲಿ ಕೂಡಾ ಇವರಂದುಕೊಂಡಂತೆ ಎಲ್ಲವೂ ಸರಿಇರಲಿಲ್ಲ ಅಲ್ಲಿಯೂ ನಿರ್ಲಕ್ಷ, ಜಾತೀಯತೆಯ ಸೋಂಕು ಇವರನ್ನು ಕಾಡದೆ ಇರಲಿಲ್ಲ.
ಆದರೆ ನೀನಾಸಂ ಕಲಿಸಿದ ಸಂಸ್ಕಾರದಿಂದ ಅವರು ತಮ್ಮ ಪರಿಸರದ ಕಲೆಗೆ ಹೊಸಸ್ಫರ್ಶ ನೀಡಿದರು. ಮಲೆನಾಡಿನಲ್ಲಿ ಭೂಮಣಿಬುಟ್ಟಿ ಚಿತ್ತಾರ,ಚಿತ್ತಾರ ಕಲೆ, ಹಸೆಗೋಡೆ ಚಿತ್ರ ಎಂದು ಕರೆಯಲಾಗುತಿದ್ದ ಬುಡಕಟ್ಟು ಕಲೆಯನ್ನು ಅಭ್ಯಸಿಸಿದರು.
ತಾಯಿ,ಅಕ್ಕನಿಂದ ಬಂದ ಕಲಾಸಂಸ್ಕಾರ ಅಜ್ಜನಮನೆಯ ಅವಿಭಕ್ತಕುಟುಂಬದ ಸಹಜ ಪರಿಸರ ಎಲ್ಲವೂ ಈಶ್ವರ ನಾಯ್ಕ ರನ್ನು ಕಲಾವಿದನನ್ನಾಗಿ ಮಾಡಲು ಸಹಕರಿಸಿದವು.
1998 ರ ವರೆಗೆ ಈ ಈಶ್ವರ ನಾಯ್ಕ ಚಿತ್ತಾರವನ್ನು ಎದೆ,ತಲೆ,ಕೈಯಲ್ಲಿ ಹಿಡಿದು ಸುತ್ತದ ಊರುಗಳಿಲ್ಲ 1998 ರಲ್ಲಿ ಕ್ರಾಫ್ಟ್ಸಮನ್ ಎಂದು ಕೇಂದ್ರ ಸರ್ಕಾರ ಗುರುತಿಸಿದ ಮೇಲೆ ಈಶ್ವರ ನಾಯ್ಕ ಭವಿಷ್ಯ ಬದಲಾಯಿತು. ಸಾಂಪ್ರದಾಯಿಕ ಕೃಷಿ ಬಿಡದ ಈಶ್ವರ ನಾಯ್ಕರ ಚಿತ್ರ ರಾಷ್ಟ್ರಪತಿ ಭವನ ಸೇರಿತು,ಮಹಿಳೆಯರ ಸೀರೆಯಲ್ಲಿ ವಿನ್ಯಾಸ ಚಿತ್ರವಾಗಿ ಸ್ಥಾನ ಪಡೆಯಿತು.
ಈ ಗೌರವ ಪುರಸ್ಕಾರ ಪಡೆಯುವ ಮೊದಲು, ನಂತರ ಈಶ್ವರ ನಾಯ್ಕರ ಕನಸೊಂದೇ ತಮ್ಮ ನೆಲಮೂಲದ ಕಲೆಯನ್ನು ಜಗದಗಲಮುಗಿಲಗಲ ಬಿತ್ತರಿಸಬೇಕೆಂಬುದು.
ಈ ಕನಸಿನ ಸವಾರಿಯಲ್ಲಿ ಈಶ್ವರ ನಾಯ್ಕರಿಗೆ ನೆರವಾದವರು,ನೋವುಣಿಸಿದವರು ಅನೇಕರು.
ಅವರೆಲ್ಲರೂ ನಿಬ್ಬೆರಗಾಗುವಂತೆ ಈಶ್ವರ ನಾಯ್ಕ ಸಾಧಿಸಿದ್ದು ಮಾತ್ರ ಅವರ ಶ್ರಮ,ಪ್ರಯತ್ನ,ಸಾಧನೆಯಿಂದ.
ಪ್ರತಿವರ್ಷ ಈಶ್ವರ ನಾಯ್ಕರ ಹಸವಂತೆ ಮನೆಗೆ ದೇಶ,ವಿದೇಶಗಳ ಜನರು ಹುಡುಕಿಕೊಂಡು ಬರುತ್ತಾರೆ, ಕೆಲವರು ವಸ್ತುಗಳನ್ನು ಖರೀದಿಸುತ್ತಾರೆ.ಅನೇಕರು ತರಬೇತಿ ಪಡೆಯುತ್ತಾರೆ. ಅವರೆಲ್ಲರಿಗೂ ಈಶ್ವರ ನಾಯ್ಕರ ಉತ್ತರ ಒಂದೇ ಹಸೆಚಿತ್ತಾರ ಹೇಳುವ ಅನೇಕ ಕತೆಗಳ ಶಿಸ್ತಿಗೆ ಬದ್ಧರಾಗಿ ಕಲೆ ಕಲಿಯಿರಿ, ಕಲೆ ಗೌರವಿಸಿ ಎಂದು

ಆರಾಧನಾ ಕಲೆ- ಮಲೆನಾಡಿನ ದೀವರು, ಒಕ್ಕಲಿಗರು ಸೇರಿದಂತೆ ಕೆಳವರ್ಗದ ಬಹುಸಂಖ್ಯಾತರ ರೂಢಿ, ಸಂಪ್ರದಾಯವಾಗಿ ಹವ್ಯಾಸವಾಗಿ ರಚಿಸುವ ಈ ಚಿತ್ತಾರದ ಕಲೆ ಹಿಂದೆ ಬುಡಕಟ್ಟು ಜನಜೀವನದ ಆರಾಧನೆ ಇದೆ.
ಹಸೆ ಚಿತ್ತಾರದಲ್ಲಿ, ಭೂಮಣಿಬುಟ್ಟಿ ಚಿತ್ತಾರದಲ್ಲಿ ಎಲ್ಲಾ ಕಡೆ ತಮ್ಮ ಜನಜೀವನದ ಆರಾಧನೆ ಪ್ರತಿಬಿಂಬವಾಗುತ್ತದೆ. ವಿಶಾಲಾರ್ಥದಲ್ಲಿ ಈ ಕಲೆಯನ್ನು ಚಿತ್ತಾರ ಎಂದು ಕರೆದರೂ ನನ್ನ ಚಿತ್ರ ರಚನೆಯನ್ನು ನಾನು ಆರಾಧನಾ ಕಲೆಯೆಂದೇ ಕರೆದುಕೊಂಡಿದ್ದೇನೆ ಎನ್ನುವ ಈಶ್ವರ ನಾಯ್ಕ ಈ ಕಲಾಕ್ಷೇತ್ರದ ಸಾಧನೆಗೆ ರಾಷ್ಟ್ರಮಟ್ಟದ ಗೌರವ,ಹೆಸರು ಸಂಪಾದಿಸಿದ್ದಾರೆ.
ಅಸಲಿಗೆ ಈ ಕಲೆಯೇ ಸಾಮೂಹಿಕ, ಸಾಮೂದಾಯಿಕ ಕಲೆ ಇರುವುದರಿಂದ ನಾನು ನಿಮಿತ್ತ ಮಾತ್ರ. ಜನಪದರ ಮಾದರಿಯಲ್ಲಿ ಎಲ್ಲರೊಳು ಸೇರಿ ಈ ಕಲೆ ಚಿತ್ತಾರವಾಗಿದೆ ಹಾಗಾಗಿ ನಮ್ಮ ಪೂರ್ವಜರ ಬಳುವಳಿ ಚಿತ್ತಾರವನ್ನು ನಮ್ಮ ಕುಟುಂಬವೂ ಮುಂದುವರಿಸುತ್ತಿದೆ ಎನ್ನುತ್ತಾರೆ.
ಕೃಷಿ ಜೀವನೋಪಾಯವಾದರೆ ಚಿತ್ತಾರ ಅಭ್ಯಾಸ ಮತ್ತು ಹವ್ಯಾಸ ಎನ್ನುವ ಈಶ್ವರ ನಾಯ್ಕ ಮನೆಯೇ ಚಿತ್ತಾರ ಚಾವಡಿ. ಕೆಲವು ವರ್ಷಗಳ ವರೆಗೆ ಸಾಗರದ ತಾಳಗುಪ್ಪಾದಲ್ಲಿ ಎಳೆಯರಿಗೆ ಚಿತ್ತಾರದ ತರಭೇತಿ ನೀಡಿರುವ ಇವರು ಈ ಹಸೆಚಿತ್ತಾರದಿಂದ ಸಂಪಾದಿಸಿದ್ದೆಂದರೆ ರಾಷ್ಟ್ರಮಟ್ಟದವರೆಗಿನ ಶಿಷ್ಯ ವೃಂದವನ್ನು.
ಮಲೆನಾಡಿನ ವಿಶಿಷ್ಟ ಚಿತ್ತಾರ ಕಲಾಪ್ರಕಾರವನ್ನು ಜಗದಗಲಕ್ಕೆ ಮುಟ್ಟಿಸಿರುವ ಈಶ್ವರ ನಾಯ್ಕರ ಶೃದ್ಧೆ, ಸಾಧನೆ ಶ್ರಮಕ್ಕೆ ರಾಷ್ಟ್ರೀಯ ಕ್ರಾಫ್ಟ್ಸ್ಮನ್ ಪುರಸ್ಕಾರ ಬಿಟ್ಟರೆ ರಾಜ್ಯಮಟ್ಟದಲ್ಲಿ ಅವರಿಗೆ ಸಿಕ್ಕ ಗೌರವ, ಪುರಸ್ಕಾರ ಕಡಿಮೆ.ರಾಷ್ಟ್ರದ ಪದ್ಮಶ್ರೀ ದೊರೆಯುವ ಮೊದಲು
ಮಲೆನಾಡಿನ ದೇಶಿ ಕಲೆ ಚಿತ್ತಾರವನ್ನು ಮಲೆನಾಡಿನಿಂದ ಮಲೆಯಾಚೆ ದಾಟಿಸಿರುವ ಕೀರ್ತಿಗೆ ಭಾಜನರಾಗಿರುವ ಇವರ ಕಲಾ ಸಾಧನೆ,ಸೇವೆಗೆ ರಾಜ್ಯ ಸರ್ಕಾರ ಸೂಕ್ತ ಗೌರವ ನೀಡಬೇಕಿದೆ.

ತಂಡಾಗುಂಡಿ ಗಂಡಾಗುಂಡಿ ಸ್ಟೋರಿ- ಭಾಗ-01
ಅಧಿಕಾರಿಗಳು,ಜನಪ್ರತಿನಿಧಿಗಳು,ಗುತ್ತಿಗೆದಾರರ ಹೊಂದಾಣಿಕೆಯಿಂದ ಅವ್ಯವಹಾರ ತನಿಖೆಗೆ ಸ್ಥಳಿಯರ ಆಗ್ರಹ
ಸಿದ್ಧಾಪುರ ತಾಲೂಕಿನ ತಂಡಾಗುಂಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಳೆದ ಕೆಲವು ವರ್ಷಗಳಿಂದ ಸರ್ಕಾರಿ ಅನುದಾನದ ಕಾಮಗಾರಿಗಳನ್ನು ನಿರ್ವಹಿಸದೆ ಜನಪ್ರತಿನಿಧಿಗಳು, ಗುತ್ತಿಗೆದಾರರು, ಅಧಿಕಾರಿಗಳು ಸೇರಿ ಅನುದಾನ ದುರ್ಬಳಿಕೆ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.
ತಂಡಾಗುಂಡಿ ಪಂಚಾಯತ್ ವ್ಯಾಪ್ತಿಯ ಸ್ಥಳಿಯರ ಕೋರಿಕೆ ಮೇರೆಗೆ ತೆರಳಿದ ಮಾಧ್ಯಮ ಪ್ರತಿನಿಧಿಗಳಿಗೆ ಈ ಅವ್ಯವಹಾರದ ವಿಷಯತಿಳಿಸಿ,ಮಾಹಿತಿಯ ದಾಖಲೆ ಪ್ರದರ್ಶಿಸಿದ ಸ್ಥಳಿಯರು 2019ರಮಾರ್ಚ್,ಏಫ್ರಿಲ್,ಮೇ ಜೂನ್, ಜುಲೈವರೆಗೆ ಕೆಲವು ಗುತ್ತಿಗೆದಾರರಿಗೆ ಪಾವತಿಸಿದ ಕಾಮಗಾರಿ ನಿರ್ವಹಣೆಯ ಅನುದಾನದ ಮೊತ್ತಕ್ಕೆ ಸರಿಯಾಗಿ ಕಾಮಗಾರಿಗಳು ನಡೆದಿಲ್ಲ. ಈ ಬಗ್ಗೆ ಮಾಹಿತಿ ಹಕ್ಕು ಅಧಿನಿಯಮದ ಅನುಕೂಲದಿಂದ ಮಾಹಿತಿ ಪಡೆದ ಸ್ಥಳಿಯರಿಗೆ ಮಾಹಿತಿ ನೀಡಿದ ಮೇಲೆ ತರಾತುರಿಯಲ್ಲಿ ಈ ಹಣ ಪಾವತಿಸಿದ ಕಾಮಗಾರಿಗಳನ್ನು ನಿರ್ವಹಿಸಿರುವುದು ಬೆಳಕಿಗೆ ಬಂದಿದೆ ಎನ್ನುವ ಆರೋಪ ಸತ್ಯವಾಗುವಂತೆ ವಾಸ್ತವ ಅಲ್ಲಿತ್ತು.
ಹುಲಿಗುಂಡಿ ಬಳಿ ಇದೇವಾರದ ಮೊದಲು ನಿರ್ಮಿಸಿದ 50 ಸಾವಿರ ರೂಪಾಯಿ ವೆಚ್ಚದ ಕಾಲುಸಂಕದ ಕಾಮಗಾರಿಗೆ ಏಫ್ರಿಲ್12,2019 ರಂದೇ ಬಿಲ್ ಪಾವತಿಸಲಾಗಿದೆ. ಅದೇ ಮಾರ್ಗದಲ್ಲಿ ಮುಂದುವರಿದು ಕುಳ್ಳೆ ಕಿ.ಪ್ರಾ.ಶಾಲೆಗೆ ಈ ತಿಂಗಳು ನಿರ್ಮಿಸಿದ ಆಟದ ಮೈದಾನ ಮತ್ತು ಪೈಪ್ ಅಳವಡಿಕೆ ಕಾಮಗಾರಿಯ48450ರೂಪಾಯಿಗಳನ್ನು2019ಮಾರ್ಚ್6 ರಂದೇ ಬಿಲ್ ಮಾಡಲಾಗಿದೆ.
ಅತ್ಯಧಿಕ ಮಳೆ ಬಿದ್ದ 2019 ರ ಆಗಸ್ಟ್26,2019 ರಂದು ಕಂಚಿಮಡಿಕೆ ಕುಡಿಯುವ ನೀರಿನ ಬಾವಿಮತ್ತು ನೀರು ಸಂಗ್ರಹಾರಕ್ಕೆ 2 ಬಿಲ್ ಗಳಲ್ಲಿ ಪ್ರತ್ಯೇಕ ತಲಾ ಲಕ್ಷಕ್ಕೂ ಅಧಿಕ ಬಿಲ್ ಪಾವತಿಸಲಾಗಿದೆ.
ಹೀಗೆ ಕಾಮಗಾರಿ ನಿರ್ವಹಣೆ ಮಾಡುವ ಮೊದಲೇ ಬಿಲ್ ಪಾವತಿಸಲಾದ ಅನೇಕ ಕಾಮಗಾರಿಗಳ ಕೆಲಸಗಳನ್ನು ಸಾರ್ವಜನಿಕರು ಮಾಹಿತಿ ಕೇಳಿದ ಮೇಲೆ ತೇಪೆ ಹಚ್ಚಿ ಕಳಪೆ ಮಾಡಲಾಗಿದೆ ಎಂದು ಆರೋಪಿಸಿರುವ ಸ್ಥಳಿಯರು ಈ ಬಗ್ಗೆ ಕೂಲಂಕುಶ ತನಿಖೆ ಮಾಡಿ ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತ್ತು ಮಾಡಬೇಕು. ಈ ಕಾಮಗಾರಿಗಳನ್ನು ನಿರ್ವಹಿಸಿದ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕು ಮತ್ತು ಈ ಅವ್ಯವಹಾರಕ್ಕೆ ಸಹಕರಿಸಿದ ಜನಪ್ರತಿನಿಧಿಗಳ ಸದಸ್ಯತ್ವವನ್ನು ರದ್ದು ಮಾಡಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿನಡೆದ ಸ್ಥಳ ಪರಿಶೀಲನೆ ಮತ್ತು ಮಾಧ್ಯಮಗೋಷ್ಠಿಯಲ್ಲಿ ಶಶಾಂಕಮಡಿವಾಳ,ಅಣ್ಣಪ್ಪ ಗೌಡ ತಂಡಾಗುಂಡಿ, ಗಣಪತಿ ನಾ.ಹೆಗಡೆ, ಎನ್.ಕೆ.ಭಟ್ ಹಂದ್ಯಾನೆ, ಮಹಾಬಲೇಶ್ವರ ಮಾ ಗೌಡ, ಸೀತಾರಾಮ ಹು.ಗೌಡ, ನಾಗಪತಿ ಬಿ.ಗೌಡ ಹುತ್ಗಾರ, ಈಶ್ವರ ಮಾಳು ಗೌಡ,ಈಶ್ವರ ರಾಮುಗೌಡ, ಸೋಮಶೇಖರ್ ನಾಯ್ಕ ಜೋಗನಮನೆ, ಎ.ಪಿ.ಎಂ.ಸಿ.ಸದಸ್ಯ ಸೀತಾರಾಮ ಗೌಡ ಉಪಸ್ಥಿತರಿದ್ದರು.
ಧರಣಿ ಸತ್ಯಾಗ್ರಹ-
ಈಗ ಲಭ್ಯವಿರುವ ಮಾಹಿತಿ,ದಾಖಲೆಗಳ ಆಧಾರದಲ್ಲಿ ಸಂಬಂಧಿಸಿದವರಿಗೆ ತನಿಖೆಗೆ ಕೋರಿದ್ದೇವೆ.ಈ ತಿಂಗಳ ಕೊನೆ ಒಳಗೆ ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಜರುಗಿಸದಿದ್ದರೆ ಜನೇವರಿ 1 ರಿಂದ ಗ್ರಾ.ಪಂ. ಮತ್ತು ತಾ.ಪಂ. ಆವಾರಗಳಲ್ಲಿ ಧರಣಿ ನಡೆಸಿ ಪ್ರತಿಭಟಿಸುವುದಾಗಿ ಎಚ್ಚರಿಸಿರುವ ಸ್ಥಳಿಯರು ಈ ಬಗ್ಗೆ ತಾ.ಪಂ. ಮು.ಕಾ.ನಿ.ಅ. ಜಿಲ್ಲಾ ಪಂಚಾಯತ್ ಗೆ ಮಾಹಿತಿ ನೀಡಿರುವುದಾಗಿ ತಿಳಿಸಿದ್ದಾರೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್,...

atm ಗೆ ನುಗ್ಗಿದ ಖಾಸಗಿ ಬಸ್…..‌ ಬಚಾವಾದ ಅಂಗಡಿಕಾರರು!

ಸಿದ್ಧಾಪುರ,ಮೇ ೧೭- ಈ ವರ್ಷದ ಸಂಭವನೀಯ ಇನ್ನೊಂದು ಅಪಘಾತದಿಂದ ಸಿದ್ಧಾಪುರ ಪಾರಾಗಿದೆ. ಇದೇ ವರ್ಷದ ಇಲ್ಲಿಯ ಅಯ್ಯಪ್ಪ ಜಾತ್ರೆಯಲ್ಲಿ ಅನಾಹುತವಾದ ಮೇಲೆ ಇಂದು ಕೂಡಾ...

ನೌಕರರು ಗಮನಿಸಲೇಬೇಕಾದ ಮಾಹಿತಿ ಇದು… ( only for employees)

*In..come Tax Act 1961 ಸೆಕ್ಷನ್ 80CCD ಅಡಿಯಲ್ಲಿ ಉದ್ಯೋಗದಾತರ NPS ಕೊಡುಗೆಯ ಕಡಿತದ ಕುರಿತು..* *(Clarification of deductions available for NPS...

ಮಳೆ ಬಂತು… ಸಿದ್ಧರಾಗಿ… ಶಾಸಕರ ಸೂಚನೆ

ಸರ್‌, ನಾವು ಮುಗದೂರಿನ ಜನ ಸಿದ್ಧಾಪುರದಿಂದ ಕೂಗಳತೆ ದೂರದಲ್ಲಿದ್ದೇವೆ ಕಳೆದ ೧೫-೨೦ ವರ್ಷಗಳಿಂದ ಈ ಗ್ರಾಮದಲ್ಲಿ ಯಾವ ಅಭಿವೃದ್ಧಿ ಕೆಲಸಗಳೂ ಆಗಿಲ್ಲ, ಚರಂಡಿ ಸ್ವಚ್ಛತೆ,...

ಅಭಿವೃದ್ಧಿಯೇ ಉತ್ತರ ಎಂದ ಭೀಮಣ್ಣ…ಯಾರ ಹೆಸರನ್ನೂ ಹೇಳದೆ ರಾಜಕೀಯ ವಿರೋಧಿಸಿದ ಶಾಸಕ!

ಪಕ್ಷ, ರಾಜಕೀಯ ಚುನಾವಣೆಯ ಭಾಗ ಅಭಿವೃದ್ಧಿಗೆ ಪಕ್ಷ, ರಾಜಕೀಯ ಅಡ್ಡಿ ಆಗಬಾರದು ಎಂದು ಶಿರಸಿ-ಸಿದ್ಧಾಪುರ ಶಾಸಕ ಭೀಮಣ್ಣ ನಾಯ್ಕ ಹೇಳಿದರು. ಸಿದ್ಧಾಪುರದಲ್ಲಿ ಪ.ಪಂ. ನ...

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್, ಅಕ್ಷಯ್ ಆನಂದ್ ಮತ್ತು ಹೇಮಾ ಪಂಚಮುಖಿ ನಟಿಸಿದ್ದರು. ಈ ಚಿತ್ರವು ಸೂಪರ್ ಹಿಟ್ ಚಿತ್ರವಾಗಿ ಹೊರಹೊಮ್ಮಿತ್ತು. ನಾಗತಿಹಳ್ಳಿ ಚಂದ್ರಶೇಖರ್ – ರಮೇಶ್ ಅರವಿಂದ್ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸದ್ಯ...

Recommended For You

About the Author: Kanneshwar Naik

Leave a Reply

Your email address will not be published. Required fields are marked *