
ಹಾವೇರಿ ಭಾಗದಿಂದ ಕರಾವಳಿಗೆ ಸಾಗಿಸಲಾಗುತಿದ್ದರೆನ್ನಲಾದ ಎರಡು ವಾಹನ ಜಾನುವಾರುಗಳನ್ನು ಸಿದ್ಧಾಪುರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಬಿಳಗಿ,ಕ್ಯಾದಗಿ ಬಳಿ ಜಾನುವಾರುಗಳೊಂದಿಗೆ ಸಾಗುತ್ತಿದ್ದ ಎರಡು ಪಿಕ್‍ಅಪ್ ವಾಹನಗಳನ್ನು ತಡೆದ ಸಾರ್ವಜನಿಕರು ಪೊಲೀಸರಿಗೊಪ್ಪಿಸಿ ಸೂಕ್ತ ಕ್ರಮಕ್ಕೆ ಆಗ್ರಹಿಸಿರುವ ಮಾಹಿತಿ ಸಮಾಜಮುಖಿಗೆ ದೊರೆತಿದೆ.
ಈ ಸಂಬಂಧ ಸಿದ್ಧಾಪುರ ಮತ್ತು ಹಾವೇರಿಯ ಎರಡುಜನ ಚಾಲಕರನ್ನು ಬಂಧಿಸಿರುವ ಮಾಹಿತಿ ಗೊತ್ತಾಗಿದೆ.
ಹಸ್ವಂತೆಯಲ್ಲಿ
ನಡೆದ ಚಿತ್ತಾರ
ಕಾರ್ಯಾಗಾರ
ಕ್ರಾಫ್ಟ್ಸಮನ್ ರಾಷ್ಟ್ರಪ್ರಶಸ್ತಿ ಪುರಸ್ಕøತ ಸಿದ್ಧಾಪುರ ತಾಲೂಕು ಹಸವಂತೆಯ ಈಶ್ವರ ನಾಯ್ಕ ಮನೆಗೆ ಚಿತ್ತಾರ ಕಲೆ ಅಧ್ಯಯನ, ತರಬೇತಿಗೆ ದೂರದ ಊರುಗಳ ವ್ಯಕ್ತಿಗಳು ಬರುವುದು ಸಾಮಾನ್ಯ.
ಇಂದು ಬೆಂಗಳೂರಿನ ಪ್ರಕ್ರೀಯಾ ಶಾಲೆಯ ಮಕ್ಕಳು ಇಲ್ಲಿ ಒಂದು ದಿನದ ಚಿತ್ತಾರ ಕಾರ್ಯಾಗಾರದಲ್ಲಿ ಪಾಲ್ಗೊಂಡರು.
ರಾಷ್ಟ್ರೀಯ ಮಟ್ಟಕ್ಕೆ ವಿಸ್ತರಿಸಿದ ಚಿತ್ತಾರ ಚಾವಡಿಯ ಹಿರಿಮೆ
ಈಶ್ವರ ನಾಯ್ಕ ಹಸವಂತೆ ಸಿದ್ದಾಪುರದ ಬಡ ರೈತಕುಟುಂಬದ ಸಾಮಾನ್ಯ ವಿದ್ಯಾರ್ಥಿ.
ಸಂಬಂಧಿಯೊಬ್ಬರು ಇವರ ಕಾಲೇಜಿನ ಶುಲ್ಕ ಎಗರಿಸಿ ಇವರು ಪದವಿ ಕಲಿಯುವ ಅವಕಾಶ ತಪ್ಪಿಸಿದರು. ಈ ರಗಳೆಯಿಂದ ಪಾರಾಗಲು ಈಶ್ವರ ನಾಯ್ಕ ನೀನಾಸಂ ಪ್ರವೇಶಿಸಿದರು.
ನೀನಾಸಂ ನಲ್ಲಿ ಕೂಡಾ ಇವರಂದುಕೊಂಡಂತೆ ಎಲ್ಲವೂ ಸರಿಇರಲಿಲ್ಲ ಅಲ್ಲಿಯೂ ನಿರ್ಲಕ್ಷ, ಜಾತೀಯತೆಯ ಸೋಂಕು ಇವರನ್ನು ಕಾಡದೆ ಇರಲಿಲ್ಲ.
ಆದರೆ ನೀನಾಸಂ ಕಲಿಸಿದ ಸಂಸ್ಕಾರದಿಂದ ಅವರು ತಮ್ಮ ಪರಿಸರದ ಕಲೆಗೆ ಹೊಸಸ್ಫರ್ಶ ನೀಡಿದರು. ಮಲೆನಾಡಿನಲ್ಲಿ ಭೂಮಣಿಬುಟ್ಟಿ ಚಿತ್ತಾರ,ಚಿತ್ತಾರ ಕಲೆ, ಹಸೆಗೋಡೆ ಚಿತ್ರ ಎಂದು ಕರೆಯಲಾಗುತಿದ್ದ ಬುಡಕಟ್ಟು ಕಲೆಯನ್ನು ಅಭ್ಯಸಿಸಿದರು.
