

ಪೌರತ್ವ ತಿದ್ದುಪಡಿ ಮಸೂದೆ ಜಾರಿಗೆ ದೇಶದಾದ್ಯಂತ ತೀವೃ ವಿರೋಧ ವ್ಯಕ್ತವಾದ ಬೆನ್ನಿಗೇ ಸಿದ್ಧಾಪುರದಿಂದಲೂ ಈ ಮಸೂದೆ ಜಾರಿ ಮತ್ತು ಇದರಿಂದಾಗಿ ಉಂಟಾದ ಸಾವು-ನೋವುಗಳಿಗೆ ಖೇದ ವ್ಯಕ್ತಪಡಿಸಿ,ಖಂಡಿಸಲಾಗಿದೆ.
ಕರ್ನಾಟಕ ರಾಷ್ಟ್ರಸಮಿತಿ ಜಿಲ್ಲಾ ಸಂಚಾಲಕ ನಾಗರಾಜ್ ನಾಯ್ಕ ಈ ಘಟನೆಯನ್ನು ಖಂಡಿಸಿ ಪೌರತ್ವ ಮಸೂದೆ ತಿದ್ದುಪಡಿ ಜಾರಿಯಿಂದಾಗಿ ದೇಶದಾದ್ಯಂತ ವಿರೋಧವ್ಯಕ್ತವಾಗಿ ಪ್ರತಿಭಟನೆಗಳು ನಡೆದಿವೆ. ರಾಜ್ಯದಲ್ಲಿ ಸಂವಿಧಾನಾತ್ಮಕ ಪ್ರತಿಭಟನೆಗಳಿಗೆ ನಿಷೇದಾಜ್ಞೆ ಜಾರಿ ಮಾಡುವ ಮೂಲಕ ರಾಜ್ಯ ಸರ್ಕಾರ ತಪ್ಪು ಮಾಡಿದೆ. ಶಾಂತಿಯುತವಾಗಿ ನಡೆಯುತಿದ್ದ ಪ್ರತಿಭಟನೆಗೆ ನಿಶೇದಾಜ್ಞೆ ಜಾರಿ ಮಾಡುವ ಮೂಲಕ ಹಿಂಸೆಗೆ ಉತ್ತೇಜಿಸಲಾಗಿದೆ. ಪೌರತ್ವ, ಪ್ರತಿಭಟನೆ,ಧರಣಿಗಳು ನಾಗರಿಕರ ಹಕ್ಕಾಗಿದ್ದು ಪ್ರಜಾಸತ್ತಾತ್ಮಕ ಸರ್ಕಾರ ಅವುಗಳನ್ನು ರಕ್ಷಿಸಬೇಕು.
ಅಸಮರ್ಪಕ ತಿದ್ದುಪಡಿ,ಪ್ರತಿಭಟನೆಗೆ ವಿರೋಧಮಾಡುವ ವ್ಯವಸ್ಥೆ ಜನದ್ರೋಹಿಯಾಗಿದೆ. ಈ ಬಗ್ಗೆ ರಾಜ್ಯ ಸರ್ಕಾರ ವಿವೇಚನೆಯಿಂದ ವರ್ತಿಸದಿದ್ದರೆ ಜನರಿಗೆ ಅನ್ಯಾಯ ಮಾಡಿದಂತಾಗುತ್ತದೆ ಎಂದು ಈ ಘಟನೆಯನ್ನು ಖಂಡಿಸಿರುವ ಅವರು ಪ್ರಜಾಪ್ರಭುತ್ವದ ಮೌಲ್ಯಗಳ ರಕ್ಷಣೆಗೆ ಮುಂದಾಗಲು ಕೇಂದ್ರ,ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
ನಾಗರಿಕ ಪೌರತ್ವ ತಿದ್ದುಪಡಿ ಮಸೂದೆ ಹಿಂದೆ ಪಡೆಯಬೇಕು ಎಂದು ಒತ್ತಾಯಿಸಿರುವ ಜಾದಳದ ಅಲ್ಫಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಇಲಿಯಾಸ್ ಶೇಖ್ ರಾಜ್ಯದಲ್ಲಿ ಶಾಂತಿಯುತ ಪ್ರತಿಭಟನೆಗೆ ಅವಕಾಶ ನೀಡಿ ಹಿಂಸೆಗೆ ಉತ್ತೇಜಿಸುವ ಕ್ರಮದಿಂದ ಹಿಂದೆ ಸರಿಯಬೇಕು ಎಂದು ರಾಜ್ಯದ ಮುಖ್ಯಮಂತ್ರಿಗಳನ್ನು ಆಗ್ರಹಿಸಿದ್ದಾರೆ.
ತಹಸಿಲ್ದಾರರ ಮೂಲಕ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಲಿಖಿತ ಮನವಿ ರವಾನಿಸಿರುವ ಅವರು ನಾಗರಿಕ ಪೌರತ್ವ ಮಸೂದೆ ಅನೇಕರ ವಿರೋಧದ ನಡುವೆ ಸಂಸತ್ ನಲ್ಲಿ ಅಂಗೀಕರಿಸಲಾಗಿದೆ.ಜಾತ್ಯಾತೀತತೆ, ಮಾನವೀಯತೆಗೆ ವಿರೋಧವಾಗಿರುವ ನಾಗರಿಕ ತಿದ್ದುಪಡಿ ಮಸೂದೆಯನ್ನು ರಾಜ್ಯದಲ್ಲಿ ಜಾರಿ ಮಾಡದಿರಲು ಅವರು ಮುಖ್ಯಮಂತ್ರಿಗಳನ್ನು ಕೋರಿದ್ದಾರೆ.
ಗುತ್ತಿಗೆದಾರರ ರಕ್ಷಣೆಗೆ ಅಧಿಕಾರಿಗಳು ಕೆಲಸಮಾಡಬೇಕಿಲ್ಲ -ಮಾ.ಹೆಗಡೆ
ಇಂದು ತಾ.ಪಂ.ಸಭಾಭವನದಲ್ಲಿ ನಡೆದ ಮಾಸಿಕ ಸಾಮಾನ್ಯ ಸಭೆಯಲ್ಲಿ ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ಉಪವಿಭಾಗದ ಅಧಿಕಾರಿಗಳು ವಿವರಣೆ ನೀಡುತಿದ್ದಂತೆ ತಂಡಾಗುಂಡಿ ಗಂಡಾಗುಂಡಿ ವ್ಯವಹಾರ ಚರ್ಚೆಗೆ ಬಂದು ತಪ್ಪಿತಸ್ಥರ ಮೇಲೆ ಕ್ರಮಜರುಗಿಸಿರುವ ಬಗ್ಗೆ ತಾ.ಪಂ. ಕಾ.ನಿ.ಅ. ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಪ್ರತಿಕ್ರೀಯಿಸಿದ ತಾ.ಪಂ.ಸ್ಥಾಯಿ ಸಮೀತಿ ಅಧ್ಯಕ್ಷ ಮಹಾಬಲೇಶ್ವರ ಹೆಗಡೆ ತಂಡಾಗುಂಡಿ ವಿಷಯವಿರಲಿ, ಜಿ.ಪಂ.ಕಾಮಗಾರಿಗಳ ವಿಷಯವಿರಲಿ ಗುತ್ತಿಗೆದಾರರನ್ನು ರಕ್ಷಿಸುವ ಕೆಲಸಕ್ಕೆ ಅಧಿಕಾರಿಗಳು ಕೈಜೋಡಿಸಬಾರದು ಎಂದು ಎಚ್ಚರಿಸಿದರು.
ತಂಡಾಗುಂಡಿ ಗಂಡಾಗುಂಡಿ ಸ್ಟೋರಿ- ಭಾಗ-02
ಕಳಪೆ ಗುತ್ತಿಗೆದಾರರ ರಕ್ಷಣೆ,ಕೆಲಸಮಾಡದೆ ಹಣ ನೀಡಿದ ಆರೋಪ ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಅಮಾನತ್‍ಸಿದ್ದಾಪುರ,ಡಿ.20-ತಾಲೂಕಿನ ತಂಡಾಗುಂಡಿ ಗ್ರಾ.ಪಂ. ನಲ್ಲಿ ಸರ್ಕಾರಿ ಕಾಮಗಾರಿ ನಿರ್ವಹಿಸದೆ ಗುತ್ತಿಗೆದಾರರಿಗೆ ಹಣ ಪಾವತಿಸಿರುವುದು,ತರಾತುರಿಯಲ್ಲಿ ಹಳೆ ಕಾಮಗಾರಿಗಳನ್ನು ನಿರ್ವಹಿಸಿರುವುದು ಸೇರಿದಂತೆ ರಾಜಕೀಯ ಮುಖಂಡರ ಸ್ನೇಹ,ಅಧಿಕಾರ,ಸರ್ಕಾರದ ಅಧಿಕಾರ ದುರುಪಯೋಗಪಡಿಸಿಕೊಂಡ ಗುತ್ತಿಗೆದಾರನ ಸ್ವಾರ್ಥಕ್ಕೆ ಸಹಕರಿಸಿದ ಮೇಲ್ನೋಟದ ಆರೋಪದ ಮೇಲೆ ತಂಡಾಗುಂಡಿ ಗ್ರಾ.ಪಂ. ಅಧಿಕಾರಿ ಲತಾ ಶೇಟ್ ಅಮಾನತ್ತಾಗಿದ್ದಾರೆ.
ಈ ಅಮಾನತ್ ಆದೇಶದ ಹಿಂದೆ ಕೆಲಸ ಮಾಡಿದ್ದು ಮಾಹಿತಿಹಕ್ಕು ಅರ್ಜಿ ಎನ್ನುವುದು ಕುತೂಹಲದ ವಿಷಯ.
ನೂತನ ಗ್ರಾ.ಪಂ.ಆದ ತಂಡಾಗುಂಡಿಯಲ್ಲಿ ಈ ಅವಧಿಗೆ 6 ಜನ ಸದಸ್ಯರನ್ನು ಅಲ್ಲಿಯ ಮತದಾರರು ಅವಿರೋಧವಾಗಿ ಆಯ್ಕೆಮಾಡಿದ್ದರು. ಬಹುತೇಕ ಗ್ರಾ.ಪಂ. ಗಳಲ್ಲಿ ನಡೆಯುವಂತೆ ಸದಸ್ಯರು ತಮ್ಮ ಲಾಭದ ಕೆಲಸ, ಅನುಕೂಲಗಳಿಗೆ ಸರ್ಕಾರಿ ವ್ಯವಸ್ಥೆಯನ್ನು ಬಳಸಿಕೊಂಡಿರುವುದು ಮೇಲ್ನೋಟಕ್ಕೆ ಸ್ಫಷ್ಟ. ಆದರೆ ತಂಡಾಗುಂಡಿಯಲ್ಲಿ ಗಂಡಾಗುಂಡಿ ವ್ಯವಹಾರ ಮಾಡಿದ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಮತ್ತು ಗ್ರಾ.ಪಂ. ಸದಸ್ಯರು ಈ ವ್ಯವಹಾರಗಳಿಗೆ ಒಂದೆರಡು ಗುತ್ತಿಗೆದಾರರನ್ನು ಬಳಸಿಕೊಂಡಿದ್ದರೂ ತಂಡಾಗುಂಡಿ,ಹೆಗ್ಗರಣಿ ಸೇರಿದಂತೆ ಈ ಭಾಗದ ನಾಲ್ಕೈದು ಗ್ರಾಮ ಪಂಚಾಯತ್ ಗಳಲ್ಲಿ ನಾಮಕಾವಸ್ಥೆಗೆ ನಾಲ್ಕೈದು ಗುತ್ತಿಗೆದಾರರ ಹೆಸರನ್ನು ಬಳಸಿಕೊಂಡು ಪ್ರಮುಖವಾಗಿ ಶಾಸಕರ ಆಪ್ತ ಎಂದು ತಿರುಗಾಡುವ ಒಬ್ಬನೇ ಗುತ್ತಿಗೆದಾರನಿಗೆ ಈ ಭಾಗದಲ್ಲಿ ಗುತ್ತಿಗೆ ನೀಡಿರುವ ಬಗ್ಗೆ ಸಾರ್ವಜನಿಕರು ಆಕ್ಷೇಪಿಸಿದ್ದಾರೆ.
ತಂಡಾಗುಂಡಿಯಲ್ಲಿ ಅನುದಾನದ ಮೊತ್ತದ ಚೆಕ್ ಪಾವತಿಸಿದ ಸರಿಸುಮಾರು ನಾಲ್ಕೈದು ತಿಂಗಳ ನಂತರ ಡಿಸೆಂಬರ್ 15 ರ ಅವಧಿಯಲ್ಲಿ ನಿರ್ಮಿಸಲಾದ ಕಾಲುಸಂಕಕ್ಕೆ ಅಡಿಪಾಯದ ಪಿಲ್ಲರ್ ಆಗಲಿ ಮೇಲಿನ ಸಿಮೆಂಟ್ ಮುಚ್ಚಿಗೆಯನ್ನುಹಿಡಿದಿಡುವ ಅಡಿಪಾಯಕ್ಕೆ ಕಲ್ಲಿನ ತಳಪಾಯ ಹಾಕುವ ಬದಲು ಹಸಿಮಣ್ಣಿನ ಮೇಲೆ ಸಿಮೆಂಟ್ ಒರೆಸಲಾಗಿದೆ.

