ವಿಧಾನಸಭಾ ಅಧ್ಯಕ್ಷ ಕಾಗೇರಿ & ಸಂಸದ ಅನಂತ ಹೆಗಡೆ ವಿರುದ್ಧ ವಾಗ್ದಾಳಿ ಹೊಸವರ್ಷದ ಮೊದಲವಾರ ಸರ್ಕಾರದ ವಿರುದ್ಧ ಪ್ರತಿಭಟನೆಯ ಎಚ್ಚರಿಕೆ

ರೈತರು,ಬಡವರು, ಹಿಂದುಳಿದವರು,ಹಿರಿಯನಾಗರಿಕರ ತೊಂದರೆ,ಬೇಡಿಕೆಗಳಿಗೆ ಸ್ಫಂದಿಸದ ಸ್ಥಳಿಯ ಶಾಸಕರು,ಸಂಸದರು ಹಾಗೂ ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ (ಸಿದ್ಧಾಪುರ) ಬಿ.ಬಣ ಸಿಡಿದೆದ್ದಿದೆ.
ಇಂದು ಇಲ್ಲಿಯ ಖಾಸಗಿ ಪ್ರದೇಶದಲ್ಲಿ ಸುದ್ದಿಗೋಷ್ಠಿ ನಡೆಸಿದ ಕಾಂಗ್ರೆಸ್ ಬಿ ಬಣದ ಸದಸ್ಯರಾದ ವಿ.ಎನ್. ನಾಯ್ಕ ಬೇಡ್ಕಣಿ, ವಸಂತ ನಾಯ್ಕ ಮಳವಳ್ಳಿ,ಹನುಮಂತ ನಾಯ್ಕ ಹೊಸೂರು ವಿವೇಕ ಭಟ್ ಮತ್ತು ನಾಶಿರ್‍ಖಾನ್ ಹಾಗೂ ಸಾವೇರ್ ಡಿ ಸಿಲ್ವಾ ಸೇರಿದ ಕಾಂಗ್ರೆಸ್ ಬಿ.ಬಣದ ಸದಸ್ಯರು ರಾಜ್ಯದಲ್ಲಿ ಸರ್ಕಾರ ಅಸ್ಥಿತ್ವದಲ್ಲಿ ಇದೆ ಇಂದು ತಿಳಿಯುವುದೇ ಓ.ಸಿ.,ಇಸ್ಫೀಟ್,ಮಟಕಾ,ಜುಗಾರಿಯಂಥ ಕಾನೂನುಬಾಹೀರ ಚಟುವಟಿಕೆಗಳಿಗೆ ಬೆಂಬಲಿಸುತ್ತಿರುವ ಜನಪ್ರತಿನಿಧಿಗಳು,ಅಧಿಕಾರಿಗಳಿಂದ. ಶಾಸಕರು,ಸಂಸದರ ಆಪ್ತರು,ಕೆಲವು ಉದ್ಯಮಿಗಳು, ಆಡಳಿತ ಪಕ್ಷದ ಪ್ರಮುಖರು ಸಾಮೂಹಿಕವಾಗಿ ಅಕ್ರಮ ದಂಧೆಗಳಿಗೆ ಬೆಂಬಲಿಸುತ್ತಿರುವ ಗುರುತರವಾದ ಆರೋಪಗಳಿವೆ.
ಕಳೆದ 6 ತಿಂಗಳುಗಳಿಂದ ಸಾಮಾಜಿಕ ಪಿಂಚಣಿಯೋಜನೆಯ ಫಲಾನುಭವಿಗಳು ಮಾಸಿಕ ಪಿಂಚಣಿಯಿಲ್ಲದೆ ಪರದಾಡುತಿದ್ದಾರೆ. ಮಳೆ,ಪ್ರವಾಹ ಪೀಡಿತ ಜನರು ಪರಿಹಾರ ಸಿಗದೆ,ಪುನರ್ವಸತಿ ದೊರೆಯದೆ ಪರಿತಪಿಸುತಿದ್ದಾರೆ. ಆಡಳಿತ ಯಂತ್ರ ಚುರುಕುಪಡಿಸಿ ಸಾರ್ವಜನಿಕರ ಹಿತ ಕಾಯಬೇಕಾದ ಶಾಸಕ ಕಾಗೇರಿ ಮತ್ತು ಸಂಸದ ಅನಂತಕುಮಾರ ಹೆಗಡೆ ನಿಷ್ಕ್ರೀಯರಾಗಿ ಜನಹಿತ ಕಡೆಗಣಿಸಿದ್ದಾರೆ.
ಈ ತೊಂದರೆಗಳಿಗೆ ಶೀಘ್ರ ಸ್ಫಂದಿಸದಿದ್ದರೆ ಜನೇವರಿ ಮೊದಲ ವಾರದಲ್ಲಿ ಧರಣಿ ಸತ್ಯಾಗ್ರಹ ನಡೆಸಿ ಪ್ರತಿಭಟಿಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಮಾಧ್ಯಮಗೋಷ್ಠಿಯ ಪ್ರಮುಖ ಅಂಶಗಳು ಹೀಗಿವೆ-
ನೆರೆ ಮತ್ತು ಮಳೆ ಪೀಡಿತ ಜನರಿಗೆ ಒಂದು ತಿಂಗಳೊಳಗಾಗಿ ಪುನರ್ವಸತಿ ಕಲ್ಫಿಸುತ್ತೇವೆಂದು ಭರವಸೆ ನೀಡಿದ ವಿಧಾನಸಭಾಧ್ಯಕ್ಷರು,
ಮುಖ್ಯಮಂತ್ರಿಗಳ ಭರವಸೆ ಈವರೆಗೆ ಈಡೇರಿಲ್ಲ. ಜನಪ್ರತಿನಿಧಿಗಳ ಬೆಂಬಲದಿಂದಲೇ ಜಿಲ್ಲೆಯಾದ್ಯಂತ ಇಸ್ಫೀಟ್ ಕ್ಲಬ್, ಮಟಕಾ, ಜೂಜು,ಜುಗಾರಿಯಂಥ ಅಕ್ರಮ ವ್ಯವಹಾರಗಳು ನಡೆಯುತ್ತಿವೆ. ಹಿಂದಿನ ಸರ್ಕಾರಗಳು ಸಾರ್ವಜನಿಕ ಬೇಡಿಕೆ, ಜನಸಾಮಾನ್ಯರ ಅವಶ್ಯಕತೆಗಳಿಗೆ ಸ್ಫಂದಿಸುತಿದ್ದವು ಆದರೆ ಈ ಸರ್ಕಾರ ಜನಸಾಮಾನ್ಯರ ಹಿತ ಮರೆತು ಅಕ್ರಮ ವ್ಯವಹಾರಿಗಳು,ಅವರ ಬೆಂಬಲಿಗರ ನೆರವಿಗೆ ನಿಂತಿದೆ.
ಅಧಿಕಾರಿಗಳ ಬೇಜವಾಬ್ಧಾರಿ ಸರ್ಕಾರದ ನಿರ್ಲಕ್ಷದಿಂದಾಗಿ ಜನಸಾಮಾನ್ಯರ ಬವಣೆ ಹೆಚ್ಚಿದೆ. ಈ ತೊಂದರೆಗಳ ವಿರುದ್ಧ ಜನೇವರಿ ಮೊದಲವಾರದಲ್ಲಿ ಪ್ರತಿಭಟನೆ ನಡೆಸುತ್ತೇವೆ.
-ವಿ.ಎನ್. ನಾಯ್ಕ ಜಿ.ಪಂ. ಮಾಜಿ ಸದಸ್ಯ.
ನೆರೆಯ ಶಿವಮೊಗ್ಗ ಜಿಲ್ಲೆಯಲ್ಲಿ ಸಂಸದರು ಅಭಿವೃದ್ಧಿ ಕೆಲಸ ಮಾಡುತಿದ್ದಾರೆ.ನಮ್ಮ ಜಿಲ್ಲೆಯಲ್ಲಿ ರಾಜ್ಯ ವಿಧಾನಸಭಾ ಅಧ್ಯಕ್ಷರು, ಸಂಸದರು ನಿಷ್ಕ್ರೀಯರಾಗಿದ್ದಾರೆ. ಹಿಂದಿನ ವಿಧಾನಸಭೆ,ಲೋಕಸಭೆ ಚುನಾವಣೆಗಳ ವೇಳೆ ಕಾಂಗ್ರೆಸ್ ಅಭ್ಯರ್ಥಿ ಗೆದ್ದರೆ ಅಕ್ರಮಮದ್ಯದ ಹಾವಳಿ ಹೆಚ್ಚುತ್ತದೆ ಎಂದು ಬಿ.ಜೆ.ಪಿ. ಪ್ರಚಾರ ಮಾಡಿತ್ತು. ಈಗ ಬಿ.ಜೆ.ಪಿ. ಆಡಳಿತದಲ್ಲಿ ಹಳ್ಳಿ ಹಳ್ಳಿ ಗಳಲ್ಲಿ ಕೈಚೀಲದಲ್ಲಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿದೆ.ಸಂಸದರು,ಶಾಸಕರ ಆಪ್ತರು,ಉದ್ಯಮಿಗಳು ಇಸ್ಫೀಟ್ ಕ್ಲಬ್, ಓಸಿ. ವ್ಯವಹಾರ, ಮಟಕಾ ದಂಧೆ ನಡೆಸುತಿದ್ದಾರೆ ಇದಕ್ಕೆಲ್ಲಾ ವಿಧಾನಸಭಾ ಅಧ್ಯಕ್ಷರ ಬೇಜವಾಬ್ದಾರಿ ಕಾರಣ.ಇಂಥ ಜನಪ್ರತಿನಿಧಿಗಳು ನಮಗೆ ಬೇಕೆ? ಸಾಮಾಜಿಕ ಪಿಂಚಣಿ ಯೋಜನೆಗಳ ಸ್ಥಗಿತ, ಪ್ರವಾಹ ಸಂತೃಸ್ತರ ಕಡೆಗಣನೆ ವಿರೋಧಿಸಿ ಬೃಹತ್ ಪ್ರತಿಭಟನೆ ನಡೆಸುತ್ತೇವೆ.

  • ವಸಂತ ನಾಯ್ಕ,ಮಳಲವಳ್ಳಿ. ತಾ.ಪಂ. ಮಾಜಿ ಸದಸ್ಯ.
    ಕಲ್ಯಾಣಪುರದಲ್ಲಿ ಪ್ರವಾಹ ಪೀಡಿತ 26 ಕುಟುಂಬಗಳಲ್ಲಿ 2 ಕುಟುಂಬಗಳಿಗೆ ತಲಾ 50 ಸಾವಿರ ಮತ್ತು 24 ಕುಟುಂಬಗಳಿಗೆ 10 ಸಾವಿರತಾತ್ಕಾಲಿಕ ಪರಿಹಾರ ನೀಡಲಾಗಿದೆ.
    ಪ್ರವಾಹ ಪೀಡಿತರಿಗೆ ಪುನರ್ವಸತಿ ಕಲ್ಫಿಸುತ್ತೇವೆಂದವರು ಎಲ್ಲಿದ್ದಾರೆ?
    -ನಾಶಿರ್ ಖಾನ್, ತಾ.ಪಂ. ಸದಸ್ಯ.
    ನೆರೆ ಪರಿಹಾರ,
    ಸಾಲಾಮನ್ನಾ, ಬೆಳೆವಿಮೆ ಎಲ್ಲದರಲ್ಲೂ ತಾರತಮ್ಯ ನಡೆದಿದೆ.
    ಜನಪ್ರತಿನಿಧಿಗಳು ಇಲ್ಲೂ ಇಲ್ಲದಂತಾಗಿದ್ದಾರೆ.
  • ಸಿ.ಆರ್.ನಾಯ್ಕ, ತಾ.ಪಂ.ಮಾಜಿ ಅಧ್ಯಕ್ಷ

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

ಜನಜಾತ್ರೆಯಂತಾದ ಜನಸ್ಪಂದನ, ಪಟ್ಟಣ ಪಂಚಾಯತ್‌ ಬಗ್ಗೆ ತಕರಾರು

ಸಿದ್ದಾಪುರ: ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಾರ್ವಜನಿಕರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಅಂತಹವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *