
ಭಾರತದ ಆರ್ಥಿಕತೆ ವೇಗವಾಗಿ ಕುಸಿಯುತ್ತಿರುವ ಬಗ್ಗೆ ಪ್ರಧಾನಿಯವರಿಗೇ ಮಾಹಿತಿ ಇಲ್ಲ ಎಂದು ಟೀಕಿಸಿರುವ ಬಿ.ಜೆ.ಪಿ. ಮುಖಂಡ ಸುಬ್ರಮಣ್ಯ ಸ್ವಾಮಿ ಪ್ರಧಾನಿಯವರ ಆರ್ಥಿಕ ಸಲಹೆಗಾರರು ಅವರನ್ನು ಮಾಹಿತಿ ನೀಡದೆ ಕತ್ತಲಲ್ಲಿಟ್ಟಿದ್ದಾರೆ ಎಂದಿದ್ದಾರೆ.
ಇಂದು ನವದೆಹಲಿಯಲ್ಲಿ ಬಿ.ಜೆ.ಪಿ.ಸಭೆಯ ನಂತರ ಮಾತನಾಡಿದ ಅವರು ದೇಶದ ಆರ್ಥಿಕತೆಯೂ ಕುಸಿಯುತ್ತಿದೆ,ಬಿ.ಜೆ.ಪಿ. ಜನಪ್ರೀಯತೆಯೂ ಕುಸಿಯುತ್ತಿದೆ. ದೇಶದ ಆರ್ಥಿಕತೆಯನ್ನು ಸರಿಪಡಿಸದಿದ್ದರೆ ಬಿ.ಜೆ.ಪಿ. ಮುಕ್ತ ಭಾರತ ಆಗುವುದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಕಾಂಗ್ರೆಸ್ ಮುಕ್ತ ಭಾರತ ಮಾಡುವ ಮೋದಿ,ಶಾ ಕನಸಿಗೆ ಅವರ ಪಕ್ಷದವರೇ ತಿರುಗೇಟು ನೀಡಿರುವುದು ರಾಜಕೀಯ ವಲಯದ ಕುತೂಹಲಕ್ಕೂ ಕಾರಣವಾಗಿದೆ.
ಸೈದೂರಿನ ವಿದ್ಯಾ
ಸಾರ್ಥಕ್ಯದ
ಕತೆ ಸ್ಮರಿಸಿ…..
ಸುಳ್ಳೂರು,ಸೈದೂರು,ತಡಗಳಲೆ,
ಪಡವಗೋಡು,ಕಣಸೆ, ಕಾಗೋಡುಗಳೆಂದರೆ….
ಅಧಿಕಾರಿಗಳು ಬೆವರುತಿದ್ದರು.
ಈ ಧೀರ ಬಂಡುಕೋರ ಸೇನಾಪಡೆಯಂತಿದ್ದ ಈ ಗ್ರಾಮಗಳ ಮುಗ್ಧಜನರ ಎದೆಯಲ್ಲಿ
ಅಕ್ಷರ ಬಿತ್ತಲು ಹೋದವರು ಎಚ್.ಗಣಪತಿಯಪ್ಪ.
ಹೊಸೂರು ಗಣಪತಿಯಪ್ಪ ಗಾಂವಟಿಶಾಲೆ ಮಾಸ್ತರಿಕೆ ಮಾಡುತ್ತಾ ಬಿತ್ತಿದ ಅಕ್ಷರಗಳು ಫಲಕೊಡತೊಡಗಿದ್ದು ಕಾಗೋಡು ರೈತ ಹೋರಾಟದಿಂದ.
ಈ ಸಮಯದಲ್ಲಿ ಸಮಾಜವಾದವನ್ನು ಉಸಿರಾಡುತ್ತಾ ಅದಕ್ಕೆ ಹೋರಾಟದ ಹುರುಪು ಕೊಟ್ಟವರು ಶಾಂತವೇರಿ ಗೋಪಾಲಗೌಡ. ಗಣಪತಿಯಪ್ಪ,ಗೋಪಾಲಗೌಡ, ಲೋಹಿಯಾ ಇವರೊಂದಿಗೆ ಒಂದು ದೊಡ್ಡಸಮೂಹ ಈ ಭಾಗದ ಜನರಲ್ಲಿ ಆತ್ಮವಿಶ್ವಾಸ,ವಿವೇಕ,ಜಾಗೃತಿಗೆ ಕಾರಣರಾದದ್ದು ಒಂದು ರೋಚಕ ಇತಿಹಾಸ.
ಈ ಹೋರಾಟದ ಮೂಸೆಯಲ್ಲಿ ಒಡಮೂಡಿದ ನಾಯಕರು ಈ ಭಾಗದ ಸಾರ್ವಜನಿಕ ನೇತೃತ್ವ ವಹಿಸಿ ಶಿಕ್ಷಣ,ಆರೋಗ್ಯ, ಆಡಳಿತ ಸುಧಾರಿಸುವ ಹೋರಾಟದಲ್ಲಿ ಗೆದ್ದದ್ದು ಇನ್ನೊಂದು ವಿಶಿಷ್ಟ ಚರಿತ್ರೆ.
ಈ ಎರಡು ಹೋರಾಟಗಳ ಜ್ವಾಲೆ ಉರಿಯುತಿದ್ದಾಗಲೇ ಶಿಕ್ಷಣದ ತಂಗಾಳಿ ಪಸರಿಸುವ ಕೆಲಸವೂ ಸದ್ದಿಲ್ಲದೆ ನಡೆಯಿತು.
