
ನಾಳೆಡಿ.26 ರ ಗ್ರಹಣದ ಬಗ್ಗೆ ಎಲ್ಲೆಲ್ಲೂ ಚರ್ಚೆ ನಡೆಯುತ್ತಿದೆ.
ಶಿರಸಿಯಲ್ಲಿ ಬಸ್ ನಿಲ್ಧಾಣದ ಬಳಿ ಚಿಂತನ ಉತ್ತರಕನ್ನಡ ಸೂರ್ಯಗ್ರಹಣ ವೀಕ್ಷಣೆಗೆ ಸುರಕ್ಷಿತ ಸಾಧನಗಳ ವ್ಯವಸ್ಥೆ ಮಾಡಿದ್ದು ಆಸಕ್ತರು 8.45 ರ ನಂತರ ಈ ಅನುಕೂಲ ಬಳಸಿಕೊಳ್ಳಬಹುದಾಗಿದೆ.
ಶಾಲೆಗಳಲ್ಲೂ ವ್ಯವಸ್ಥೆ-
ಸೂರ್ಯಗ್ರಹಣದ ಹಿನ್ನೆಲೆಯಲ್ಲಿ ಗುರುವಾರ ಶಾಲಾ ಕಾಲೇಜುಗಳಿಗೆ ರಜೆ ಘೋಶಿಸಲಾಗಿಲ್ಲ. ಆಯಾ ಶಾಲೆ-ಕಾಲೇಜುಗಳಲ್ಲಿ ಸುರಕ್ಷಿತ ಸಾಧನಗಳನ್ನು ಬಳಸಿ ಸೂರ್ಯಗ್ರಹಣ ವೀಕ್ಷಣೆಗೆ ಅನುಕೂಲಮಾಡಿಕೊಡಲು ಹಿರಿಯ ಅಧಿಕಾರಿಗಳು ಆದೇಶಿಸಿದ್ದಾರೆ.
ಕೇಂದ್ರಕ್ಕೆ ಹೊರಟಿದ್ದ ರಾಜ ರಾಜ್ಯದ ರಾಜನಾದ ಕತೆ
ಇದು ರೈತನಮಗ ದೇವರಾಜ್‍ಸಾಹಸಗಾಥೆ
ಕಳೆದ ಒಂದು ವರ್ಷದಿಂದೀಚೆಗೆ ತಾಲೂಕಾ ಕೃಷಿ ಸಹಾಯಕ ನಿರ್ಧೇಶಕರಾಗಿ ಸೇವೆ ಸಲ್ಲಿಸುತಿದ್ದ ದೇವರಾಜ್ ಈಗ ಕೆ.ಪಿ.ಎಸ್.ಸಿ. ಸ್ಫರ್ಧಾತ್ಮಕ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸುವ ಮೂಲಕ ಸಹಾಯಕ ಕಮೀಷನರ್ ಹುದ್ದೆಗೆ ಆಯ್ಕೆಯಾಗಿದ್ದಾರೆ.
ದೇವರಾಜ್ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಚಿಮನೂರು ಹಾಲಗಳಲೆ ರೈತ ಕುಟುಂಬದ ಕುಡಿ. ಭಾರತೀಯ ಆಡಳಿತ ಸೇವೆ ಪರೀಕ್ಷೆ ತೇರ್ಗಡೆಯಾಗಿದ್ದ ದೇವರಾಜ್ 2 ವರ್ಷಗಳ ಕೆಳಗೆ ಅಂತಿಮ ಆಯ್ಕೆಯಲ್ಲಿ ಸ್ಫಲ್ಪ ಅಂಕಗಳ ಅಂತರದಿಂದ ಆಯ್.ಎ.ಎಸ್. ನಿಂದ ವಂಚಿತರಾಗಿದ್ದರು. ನಂತರ ಕೃಷಿ ಸಹಾಯಕ ನಿರ್ಧೇಶಕರಾಗಿ ಸೇವೆಗೆ ಸೇರಿದ್ದ ಅವರು ಭಾರತೀಯ ಆಡಳಿತ ಸೇವೆ ಮತ್ತು ಕರ್ನಾಟಕ ಆಡಳಿತ ಸೇವೆಯ ಪರೀಕ್ಷೆಗಳನ್ನು ಎದುರಿಸುತಿದ್ದರು.
