
ಬ್ಲೇಜ್ ಜಾನ್ ಫರ್ನಾಂಡಿಸ್ ಬಂಧನ
ಸಿದ್ದಾಪುರ:ಡಿ.26- ಬಾಲಕಿಯೋರ್ವಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಪಟ್ಟಣದ ಹೊಸೂರಿನ ಬ್ಲೇಜ್ ತಂದೆ ಜಾನ್ ಫರ್ನಾಂಡಿಸ್ (19)ನನ್ನು ಪೊಲೀಸರು ಪೊಕ್ಸೋ ಕಾಯಿದೆ ಅಡಿಯಲ್ಲಿ ಬಂಧಿಸಿ ಬುಧವಾರ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.
ಆರೋಪಿ ಸಿದ್ದಾಪುರ ಎಂಜಿಸಿ ಕಾಲೇಜಿನ ಬಿಕಾಂ ವಿದ್ಯಾರ್ಥಿ ಆಗಿದ್ದಾನೆ. ಶಿರಸಿ ಡಿವೈಎಸ್‍ಪಿ ಜಿ.ಟಿ.ನಾಯ್ಕ ಮಾರ್ಗದರ್ಶನದಲ್ಲಿ ಪಿಎಸ್‍ಐ ಮಂಜುನಾಥ ಬಾರ್ಕಿ ಪ್ರಕರಣದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಆತ್ಮಹತ್ಯೆ
ಸಿದ್ದಾಪುರ,ಡಿ.26-
ತಾಲೂಕಿನ ಹಾರ್ಸಿಕಟ್ಟಾದಲ್ಲಿ ಗ್ಯಾರೇಜ್ ನಡೆಸುತ್ತಿದ್ದ ನಯಿಂ ಮೈದಿನ್ ಸಾಬ್(28) ಕಂಚಿಮನೆ ಅರಣ್ಯದಲ್ಲಿ ಮರಕ್ಕೆ ನೇಣು ಹಾಕಿಕೊಂಡು ಮಂಗಳವಾರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ ಎಂದು
ಪೊಲೀಸರು ತಿಳಿಸಿದ್ದಾರೆ. ಪಿ.ಐ. ಪ್ರಕಾಶ್ ಅವರ ಮಾರ್ಗದರ್ಶನದಲ್ಲಿ ಹವಲ್ದಾರ ಸಂಗೀತಾ ಕಾನಡೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
—
ಸಾಮೂಹಿಕ ಸೂರ್ಯಗ್ರಹಣ ವೀಕ್ಷಣೆ
ಇಂದು ದೇಶದಲ್ಲಿ ಸಂಭವಿಸಿದ ಅಪರೂಪದ ಕಂಕಣ ಸೂರ್ಯಗ್ರಹಣವನ್ನು ಸುರಕ್ಷಿತವಾಗಿ ನೋಡುವ ಕಾರ್ಯಕ್ರಮವನ್ನು ಇಲ್ಲಿನ ಎಂ.ಜಿ.ಸಿ. ಮಹಾವಿದ್ಯಾಲಯದ ವಿಜ್ಞಾನ ವಿಭಾಗ ಮತ್ತು ಎನ್. ಎಸ್. ಎಸ್ ಘಟಕ ಜಂಟಿಯಾಗಿ ನಡೆಸಿತು.
