
ಸರ್ವಾನುಮತದಿಂದ ಬಿಲ್‍ಪಾಸ್ ಮಾಡಿಲ್ಲ ಎಂದ ಸದಸ್ಯರು
ಸಿದ್ದಾಪುರ ತಂಡಾಗುಂಡಿ ಗ್ರಾಪಂನಲ್ಲಿ ಕಾಮಗಾರಿಗಳನ್ನು ನಡೆಸುವ ಪೂರ್ವದಲ್ಲಿಯೇ ಬಿಲ್ ಪಾಸ್ ಮಾಡಿರುವ ಕುರಿತು ಗ್ರಾಪಂನ ಸಾಮಾನ್ಯ ಸಭೆಯಲ್ಲಿ ಸರ್ವಾನುಮತದಿಂದ ಒಪ್ಪಿಗೆ ಪಡೆದುಕೊಳ್ಳಲಾಗಿದೆ ಎಂದು ಅಂದಿನ ಪಿಡಿಒ ಲತಾ ಶೇಟ್ ಹೇಳಿಕೆ ನೀಡಿರುವುದರಲ್ಲಿ ಸತ್ಯಾಂಶ ಇಲ್ಲ ಎಂದು ಗ್ರಾಪಂನ ಮೂರು ಜನ ಸದಸ್ಯರು ಹೇಳಿಕೆ ನೀಡಿದ್ದಾರೆ.
https://www.youtube.com/watch?v=2-9LXILPatQ&t=331s
ಈ ಕುರಿತು ಗುರುವಾರ ಹೇಳಿಕೆ ನೀಡಿರುವ ಗ್ರಾಪಂ ಸದಸ್ಯರಾದ ಚಂದ್ರಕಾಂತ ಹನುಮಂತ ಗೌಡ,ಶಕುಂತಲಾ ತಿಮ್ಮ ಚನ್ನಯ್ಯ ಹಾಗೂ ತಾರಾ ರಾಮಚಂದ್ರ ಚನ್ನಯ್ಯ ಗ್ರಾಪಂ ಪಿಡಿಒ ಯಾವುದೇ ಕಾಮಗಾರಿಗಳನ್ನು ಮಾಡುವಾಗಲೂ ನಮ್ಮ ಗಮನಕ್ಕೆ ತರದೇ ಕಾರ್ಯನಿರ್ವಹಿಸಿದ್ದರು. ಈ ಕುರಿತು ಗ್ರಾಪಂ ಸದಸ್ಯರಾದ ನಾವು ವಿಚಾರಿಸಿದಾಗ ಹಾಗೂ ಸಾರ್ವಜನಿಕರು ಪ್ರಶ್ನಿಸಿದಾಗಲೂ ಸಮರ್ಪಕ ಉತ್ತರ ಕೊಡಲಿಲ್ಲ. ಆಗ ಸಾರ್ವಜನಿಕರು ಮಾಹಿತಿ ಹಕ್ಕಿನಲ್ಲಿ ಕಾಮಗಾರಿಗಳ ಮಾಹಿತಿ ಪಡೆದುಕೊಂಡ ನಂತರ ಎಚ್ಚೆತ್ತುಕೊಂಡು ಕೆಲವು ಕಾಮಗಾರಿ ನಡೆಸಿದ್ದು ಅದು ಸಹ ಸರಿಯಾಗಿಲ್ಲ. ಗುತ್ತಿಗೆದಾರಿರಗೆ ಕಾಮಗಾರಿ ನಡೆಸದೇ ಬಿಲ್ ಹೇಗೆ ಪಾಸ್ ಮಾಡಿದ್ದೀರಿ ಎಂದು ಸುದ್ದಿಗಾರರು ಕೇಳಿದಾಗ ಸಾಮಾನ್ಯ ಸಭೆಯಲ್ಲಿ ಸರ್ವಾನುಮತದ ಒಪ್ಪಿಗೆ ಪಡೆದು ಹಣ ಪಾವತಿಸಲಾಗಿದೆ ಎಂದು ಪಿಡಿಒ ಹೇಳಿಕೆ ನೀಡಿರುವುದು ತಮ್ಮ ರಕ್ಷಣೆಗಾಗಿಯೇ ಆಗಿದೆ. ಯಾವುದೇ ಸಾಮಾನ್ಯ ಸಭೆಯಲ್ಲಿ ಗುತ್ತಿಗೆದಾರರಿಗೆ ಕಾಮಗಾರಿ ನಡೆಸುವ ಪೂರ್ವದಲ್ಲಿಯೇ ಹಣ ನೀಡುವ ಕುರಿತು ಚರ್ಚೆ ನಡೆದಿಲ್ಲ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಕುರಿತು ತಾಪಂ ಇಒ ಅವರ ಗಮನಕ್ಕೂ ತಂದಿದ್ದೇವೆ.
ಈಗಾಗಲೇ ತ್ವರಿತ ಗತಿಯಲ್ಲಿ ನಡೆದಿರುವ ಕಾಮಗಾರಿಯನ್ನು ಸಂಬಂಧ ಪಟ್ಟ ಇಂಜಿನಿಯರ್ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸಚಿವರ ಎದುರು ಬೆತ್ತಲಾದ ಸಣ್ಣನೀರಾವರಿ ಇಲಾಖೆ ಅಧಿಕಾರಿಗಳು
ಉತ್ತರಕನ್ನಡ ಜಿಲ್ಲೆಗೆ ಪ್ರಗತಿಪರಿಶೀಲನೆಗೆ ಬಂದಿದ್ದ ನೀರಾವರಿ ಸಚಿವ ಕೆ.ಮಾಧುಸ್ವಾಮಿ ಎದುರೇ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಲು ತಡವರಿಸಿ,ಉಗಿಸಿಕೊಂಡ ಘಟನೆ ಇಂದು ಕಾರವಾರದಲ್ಲಿ ನಡೆದಿದೆ.
ಉತ್ತರಕನ್ನಡ ಜಿಲ್ಲೆಯ ಭೇಟಿ,ಪ್ರಗತಿಪರಿಶೀಲನೆಗೆ ಬಂದ ಸಚಿವ ಮಾಧುಸ್ವಾಮಿ ಸಣ್ಣ ನೀರಾವರಿ ಇಲಾಖೆಯ ಮಾಹಿತಿ ಕೇಳುವ ಪ್ರಗತಿಪರಿಶೀಲನೆಯ ಸಂದರ್ಭದಲ್ಲಿ ಮುಂಡಗೋಡಿನ ಒಬ್ಬ ಇಂಜಿನಿಯರ್ ಸೇರಿದಂತೆ ಜಿಲ್ಲೆಯ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಸಮರ್ಪಕ ಮಾಹಿತಿ ನೀಡಲು ವಿಫಲರಾದರು.
ಈ ದುರ್ನಡತೆ,ಬೇಜವಾಬ್ಧಾರಿಗೆ ತರಾಟೆಗೆ ತೆಗೆದುಕೊಂಡ ನೀರಾವರಿ ಸಚಿವ ಮಾಧುಸ್ವಾಮಿ ಬೇಜವಾಬ್ದಾರಿ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲಿ ಇಬ್ಬರು ಅಧಿಕಾರಿಗಳನ್ನು ಮನೆಗೆ ಕಳುಹಿಸಿದ್ದೇನೆ ನಿಮಗೂ ಅದೇ ಗತಿಯಾಗಲಿದೆ ಎಂದು ಎಚ್ಚರಿಸಿದರು.
ಸಚಿವ ಮಾಧುಸ್ವಾಮಿ ಬ್ರಷ್ಟರನ್ನು ಮನೆಗೆ ಕಳುಹಿಸುವರೆ?
