ರೈತರ ಮಕ್ಕಳೇಕೆ ಡಿ.ಸಿ.ಯಾಗಬಾರದು?

ಕೆ.ಎ.ಎಸ್. ಪಾಸಾದ ಕೃಷಿ ಅಧಿಕಾರಿ ‘ದೇವರಾಜ್ ಆರ್’ರ ಯಶೋಗಾಥೆ
ಕಾಗೋಡು ಸತ್ಯಾಗ್ರಹದ ಕಹಳೆ ಇಡೀ ದೇಶದ ದುಡಿಯುವ ಕೈಗಳಿಗೆ ಭೂಮಿಯ ಮಾಲಿಕತ್ವ ನೀಡಿದ ಮನ್ವಂತರದ ನೆಲಗಟ್ಟು. ಶಿವಮೊಗ್ಗ ಜಿಲ್ಲೆ ಇತಿಹಾಸ, ಸ್ವಾತಂತ್ರ್ಯ ಹೋರಾಟ ಹಾಗೂ ನಂತರದ ರೈತ ಸತ್ಯಾಗ್ರಹಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸಮಾಜವಾದಿ ಚಿಂತಕರು, ಹಲವಾರು ಮೇರು ಸಾಧಕರ ತವರು ನೆಲ. ಸೊರಬ ತಾಲೂಕಿನ ಚಿಮಣೂರು (ಹಾಲಗಳಲೆ) ಪುಟ್ಟ ಗ್ರಾಮ. ಇಲ್ಲಿಯ ಕೃಷಿ ಕಾಯಕಯೋಗಿ ದಂಪತಿಗಳಾದ ಕುಸುಮಾ ಹಾಗೂ ರೇವಣ್ಣಪ್ಪ ಡಿ.ಸಿ. ಇವರ ಪ್ರತಿಭಾನ್ವಿತ ಸುಪುತ್ರ. ದೇವರಾಜ್ ಆರ್ ಇವರೇ ಮೊನ್ನೆ ಬಿಡುಗಡೆಯಾದ ಕರ್ನಾಟಕ ಆಡಳಿತ ಸೇವೆ (ಕೆ.ಎ.ಎಸ್.) ಪರೀಕ್ಷೆಯ ಅಂತಿಮ ಪಟ್ಟಿಯಲ್ಲಿ ಉಪ-ವಿಭಾಗಾಧಿಕಾರಿ (ಕಂದಾಯ) ಹುದ್ದೆಗೆ ಆಯ್ಕೆಯಾದ ರೈತಪುತ್ರ.
ಬಾಲಕರಾಗಿದ್ದಾಗ ತಂದೆ ರೇವಣ್ಣಪ್ಪ ಡಿ.ಸಿ. ಯವರ ಹೆಸರಿನೊಂದಿಗೆ ‘ಡಿ.ಸಿ.’ ಇನ್ಶಿಯಲ್ ಇರುವುದನ್ನು ಸ್ನೇಹಿತರು ಆಗಾಗ ತಮಾಷೆ ಮಾಡುತ್ತಿದ್ದಾಗ “ಯಾಕ್ರೀ ರೈತರ ಮಕ್ಕಳು ಡಿ.ಸಿ. ಆಗಬಾರದಾ?” ಎಂದು ಪ್ರಶ್ನಿಸುತ್ತಿದ್ದರಂತೆ.
ಅಲ್ಲದೆ ಇವರು ಪದವಿ ವ್ಯಾಸಂಗದಲ್ಲಿರುವಾಗ ತಂದೆಗೆ ಆದ ಚಿಕ್ಕ ನೋವಿನ ಸಂದರ್ಭದಲ್ಲಿ “ಮಗನೇ ನೀನೆಂದೂ ಸೋಲದ ದಾರಿ ತುಳಿಯಬೇಕು’ ಜಿಲ್ಲಾಧಿಕಾರಿ ಹುದ್ದೆ ಪಡೆಯಲು ಪ್ರಯತ್ನಿಸಬೇಕು” ಎಂದು ಹೇಳಿದ ಮಾತು ಪದೇ ಪದೇ ಯುವಕ ದೇವರಾಜ್ ಅವರನ್ನು ಕಾಡುತ್ತಿತ್ತು.
ಇವರು ಆರಂಭಿಕ ಶಿಕ್ಷಣವನ್ನು ಸ್ಥಳೀಯ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ, ನಂತರ ಸಮೀಪದ ಉಳವಿ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿಯೇ ಅಭ್ಯಸಿಸಿ ಉನ್ನತ ಶ್ರೇಣಿಯಲ್ಲಿ ಪಾಸಾದರು.
ಮಗನ ಉತ್ಕಟವಾದ ವಿದ್ಯಾಸಕ್ತಿಯನ್ನು ಗಮನಿಸಿದ ತಂದೆ-ತಾಯಿ ಶಿವಮೊಗ್ಗ ನಗರದ ಪ್ರತಿಷ್ಠಿತ ದೇಶೀಯ ವಿದ್ಯಾಕೇಂದ್ರ (ಡಿ.ವಿ.ಎಸ್.) ಕಾಲೇಜ್‍ನಲ್ಲಿ ಪಿ.ಯು.ಸಿ. ಪ್ರವೇಶ ಕೊಡಿಸಿದರು. ನಂತರ ವಿದ್ಯಾಕಾಶಿ ಧಾರವಾಡದತ್ತ ಮುಖ ಮಾಡಿದ ದೇವರಾಜ್ ಬಿ.ಎಸ್‍ಸ್ಸಿ. ಅಗ್ರಿ ಪದವಿ ಗಳಿಸಿ 2015 ರಲ್ಲಿ ಅಲ್ಲಿಯೇ ಕ.ವಿ.ವಿ. ಯಿಂದ ಎಂ.ಎಸ್ಸಿ. ಪದವಿಯನ್ನು ಉನ್ನತ ಸ್ಥಾನದೊಂದಿಗೆ ತೇರ್ಗಡೆ ಹೊಂದಿ ಹೊರ ಬಂದವರಿಗೆ ನೌಕರಿಗಿಂತ ತಮ್ಮ ತಂದೆಯ ಹೆಬ್ಬಯಕೆಯತ್ತ ಚಿತ್ತ ಹೊರಳಿಸಿ ಆಯ್.ಎ.ಎಸ್. ಕನಸು ಹೊತ್ತು ಹಳ್ಳಿಯಿಂದ ದಿಲ್ಲಿಯವರೆಗೆ ಪ್ರಯಾಣ ಬೆಳೆಸಿದರು.
ಅಲ್ಲಿ ಹಿಂದುಳಿದ ವರ್ಗಗಳ (obc) ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡುವ ಐ.ಎ.ಎಸ್. ಕೋಚಿಂಗ್ ಪಡೆದರು. ಈ ಮಧ್ಯೆ 2016 ರಲ್ಲಿ ಈ.k.a.s. 2017 ರಲ್ಲಿ ಅಬಕಾರಿ ನಿರೀಕ್ಷಕ ಹುದ್ದೆಯ ಪರೀಕ್ಷೆಯಲ್ಲಿ ಅತ್ಯುನ್ನತ ಅಂಕದೊಂದಿಗೆ ಆಯ್ಕೆಯಾಗಿದ್ದರೂ ನಿರಾಕರಿಸಿ ತಂದೆಯ ಮಾತನ್ನೇ ಮೆಲುಕು ಹಾಕುತ್ತಾ, 2018 ರಲ್ಲಿ UPSಅ ಪೂರ್ವ ಪರೀಕ್ಷೆ ಬರೆದು ಪಾಸಾಗಿ ಮುಖ್ಯ ಪರೀಕ್ಷೆಯಲ್ಲಿ ಕೇವಲ 21 ಅಂಕಗಳಿಂದ ವಂಚಿತರಾಗಿದ್ದರೂ ಇನ್ನೂ ಛಲ ಬಿಟ್ಟಿಲ್ಲ.
ಈ ಮಧ್ಯೆ 2017 ರಲ್ಲಿ ತಮಗಿಷ್ಟವಾದ ‘ಅಗ್ರಿಕಲ್ಚರ್’ ಇಲಾಖೆ ಪರೀಕ್ಷೆಯಲ್ಲಿ ಆಯ್ಕೆಯಾಗಿ ಸಧ್ಯ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ‘ಸಹಾಯಕ ಕೃಷಿ ನಿರ್ದೇಶಕ’ರಾಗಿ, ರೈತರ ಸ್ನೇಹಿಯಾಗಿ ಉತ್ಸಾಹದಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಅದೇ 2017 ರಲ್ಲಿ ಬರೆದ ‘ಕರ್ನಾಟಕ ಆಡಳಿತ ಸೇವೆ’ (ಕೆ.ಎ.ಎಸ್.) ಪರೀಕ್ಷೆಯಲ್ಲಿ ಗ್ರಾಮೀಣಾಭಿವೃದ್ಧಿ ವಿಷಯವನ್ನು ಆಯ್ಕೆ ಮಾಡಿಕೊಂಡು ಅತ್ಯುನ್ನತ ಅಂಕ ಗಳಿಸಿ ಮೊದಲ ಸುತ್ತಿಯಲ್ಲಿಯೇ ‘ಉಪ-ವಿಭಾಗಾಧಿಕಾರಿ’ ಹುದ್ದೆಗೆ ಆಯ್ಕೆಯಾಗಿ ತಂದೆಯ ಕನಸನ್ನು ಬಹುತೇಕ ನನಸು ಮಾಡಿದ್ದಾರೆ.
-2- ಆಶಯ :
‘ದೇಶ ನನಗೇನು ಕೊಟ್ಟಿದೆ ಎನ್ನುವುದಕ್ಕಿಂತ ದೇಶಕ್ಕಾಗಿ ನಾನೇನು ಕೊಡಬಲ್ಲೆ’ ಎಂಬ ಮಾತಿನಂತೆ ಉನ್ನತ ಬದುಕಿನ ಅಸ್ತಿತ್ವ ನೀಡಿದ ಈ ನಾಡಿಗೆ ತನ್ನಿಂದ ಕಿಂಚಿತ್ ಕೊಡುಗೆ ನೀಡಬೇಕೆಂಬ ಆಶಾಭಾವನೆಯೊಂದಿಗೆ ಸಮಾಜದ ನಿರ್ಗತಿಕರು, ಬಡವರು, ರೈತರು, ವಯೋವೃದ್ಧರಿಗೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಬೇಕೆಂಬ ಮಹತ್ವಾಕಾಂಕ್ಷೆಯನ್ನು ಹೊಂದಿದ್ದಾರೆ.
ಸ್ಪೂರ್ತಿ :
ಯುವಕರಿಗೆ ಇಂದಿನ ಚಿತ್ರನಟರು, ಕ್ರೀಡಾಪಟುಗಳು ಫ್ಯಾನ್ ಆಗುವುದು ಸಹಜ. ಹಾಗೆಯೇ ಕನ್ನಡದ ಪವರ್‍ಸ್ಟಾರ್ ಪುನೀತ್ ರಾಜ್‍ಕುಮಾರ ರ ‘ಪೃಥ್ವಿ’ ಚಿತ್ರದ ನಾಯಕನಂತೆ ಜನಮೆಚ್ಚುವ ಜಿಲ್ಲಾಧಿಕಾರಿಯಾಗಬೇಕೆಂಬ ಕನಸನ್ನು ಇನ್ನೂ ಹಸಿರಾಗಿಯೇ ಉಳಿಸಿಕೊಂಡು ನಿರಂತರ ಅಧ್ಯಯನ ಶೀಲರಾಗಿದ್ದಾರೆ. ಅಪ್ಪಾಜಿ, ಅವ್ವ, ಕುಟುಂಬಸ್ಥರು, ಬಂಧುಗಳು, ಸ್ನೇಹಿತರು, ಹಿತೈಷಿಗಳ ಬೆಂಬಲ ಆಶೀರ್ವಾದವೇ ಸ್ಪೂರ್ತಿ ಎನ್ನುವ ದೇವರಾಜ್ ತನಗೆ ನಕಾರಾತ್ಮಕವಾಗಿ ಮಾತನಾಡಿದ ಸ್ನೇಹಿತರಿಗೂ ಕೃತಜ್ಞತೆ ಹೇಳಬಯಸುತ್ತಾರೆ.

ಯುವಕರಿಗೆ ಕಿವಿಮಾತು :
‘ತಮಗೆ ಸಿಕ್ಕ ಅವಕಾಶಗಳ ಸದ್ಬಳಕೆ, ನಿರಂತರ ಪರಿಶ್ರಮ, ದೃಢ ನಿರ್ಧಾರ, ಏಕಾಗ್ರತೆ, ಜೊತೆಗೆ ಸವಾಲುಗಳನ್ನು ಸಮಾಧಾನದಿಂದ ಸ್ವೀಕರಿಸುವ ಮನೋಭಾವ ಯಾರಲ್ಲಿರುತ್ತದೆಯೋ ಅವರಿಗೆ ಗೆಲುವು ಶತಸಿದ್ಧ’ ಎಂದು ವಿದ್ಯಾರ್ಥಿಗಳಿಗೆ, ಯುವಕರಿಗೆ ಕಿವಿ ಮಾತು ಹೇಳಬಯಸುತ್ತಾರೆ ರೈತ ರೇವಣಪ್ಪ ಡಿ.ಸಿ. ಯವರ ಪುತ್ರ ದೇವರಾಜ್ .

– ಗೋಪಾಲ ಕೆ. ನಾಯ್ಕ ಶಿಕ್ಷಕರು, ಹಾಗೂ ಅಧ್ಯಕ್ಷರು ಕರ್ನಾಟಕ ರಾಜ್ಯ ಸರಕಾರಿ ನೌಕರರ
ಕಲಾ ಸಾಂಸ್ಕøತಿಕ ಸಂಘ (ಉ.ಕ.)
ಮೊ: 7975247057

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಶನಿವಾರ…ಶಾಸಕರು,ಸಂಸದರ ಕಾರ್ಯಕ್ರಮಗಳು

ಇಟಗಿ ರಾಮೇಶ್ವರ ಮತ್ತು ಪರಿವಾರ ದೇವಾಲಯಗಳ ಅಷ್ಟಬಂಧ ಕಾರ್ಯಕ್ರಮದಲ್ಲಿ ಏ.೫ ರ ಶನಿವಾರ ಸಾಯಂಕಾಲ ಸಂಜೆ ನಾಲ್ಕರಿಂದ ಭರತನಾಟ್ಯ ರಕ್ಷಾ & ದೀಕ್ಷಾ ರಾವ್‌...

ಸಿದ್ಧಾಪುರದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಜಾತ್ರೆ! ನಮ್ಮೂರು ಇಂದು ನಾಳೆ…..

* ಸಿದ್ಧಾಪುರ ಇಟಗಿಯ ರಾಮೇಶ್ವರ ದೇವರ ದಿವ್ಯಾಷ್ಟಬಂಧ ಕಾರ್ಯಕ್ರಮ ಪ್ರಾರಂಭವಾಗಿದೆ. ಈ ಕಾರ್ಯಕ್ರಮದ ಅಂಗವಾಗಿ ಪ್ರತಿದಿನ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ.

senaa sevaa-ಸೈನಿಕನಿಗೆ ಹುಟ್ಟೂರಿನ ಗೌರವ

ಸಿದ್ದಾಪುರ: ಭಾರತೀಯ ಸೈನ್ಯದಲ್ಲಿ ಹದಿನೇಳು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಪಡೆದು ತಾಯ್ನಾಡಿಗೆ ಮರಳಿದ ಸಿದ್ದಾಪುರ ತಾಲೂಕಿನ ಸಂಪೇಕೇರಿಯ(ಮುಗದೂರ) ವಿನಯಕುಮಾರ ನಾಯ್ಕ ರಿಗೆ...

ಕದಂಬಜಿಲ್ಲೆಗಾಗಿ ಸಹಿಸಂಗ್ರಹಣೆ, ಕಾನಳ್ಳಿಯಲ್ಲಿ ಹಸ್ಲರ್‌ ಸಂಘಕ್ಕೆ ಚಾಲನೆ,ಸೋಮುವಾರ ಮಹಿಳಾ ಸಂವೇದನೆ ಕವಿಗೋಷ್ಠಿ‌

ನಿರಂತರ ಹೋರಾಟದಲ್ಲಿರುವ ಶಿರಸಿ ಕೇಂದ್ರಿತ ಪ್ರತ್ಯೇಕ ಕದಂಬ ಜಿಲ್ಲೆ ಹೋರಾಟ ಸಮೀತಿ ಈ ತಿಂಗಳಿಂದ ಸಿದ್ಧಾಪುರದ ಗ್ರಾಮೀಣ ಪ್ರದೇಶಗಳಲ್ಲಿ ಪ್ರತ್ಯೇಕ ಜಿಲ್ಲೆಗಾಗಿ ಸಹಿ ಸಂಗ್ರಹಣೆ...

ಧಾರ್ಮಿಕ, ಆರ್ಥಿಕ, ಶೈಕ್ಷಣಿಕ ಕೆಲಸಗಳಿಂದ ಸುಸ್ಥಿರ ಅಭಿವೃದ್ಧಿ… ಅರಶಿನಗೋಡು ಅಷ್ಟಬಂಧ ಹಾಗೂ ಬ್ರಹ್ಮಕಲಶೋತ್ಸವ ಸಂಪನ್ನ

ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶಿಕ್ಷಣ ಮತ್ತು ಉದ್ಯೋಗ ಗಳಿಗೆ ಹೆಚ್ಚಿನ ಮಹತ್ವ ನೀಡಿದರೆ ಹೊಸ ಪೀಳಿಗೆ ಮಹತ್ವದ್ದನ್ನು ಸಾಧಿಸಲು ಸಾಧ್ಯ ಎಂದಿರುವ ಶಾಸಕ ಭೀಮಣ್ಣ ನಾಯ್ಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *