

ಸಿದ್ದಾಪುರ ತಾಲೂಕಿನಲ್ಲಿಸಹಾಯಕ ಕೃಷಿ ನಿರ್ದೇಶಕರಾಗಿ,ರೈತರ ಸ್ನೇಹಿಯಾಗಿ, ಪ್ರಾಮಾಣಿಕಅಧಿಕಾರಿಯಾಗಿಕಾರ್ಯ ನಿರ್ವಹಿಸುತ್ತಿರುವ, ರೈತರ, ಸಾರ್ವಜನಿಕರೊಂದಿಗೆ ಸಹಕಾರಯುತವಾಗಿಸೇವೆ ಸಲ್ಲಿಸಿ ರೈತರ ಮನಗೆದ್ದಉತ್ಸಾಹಿ ಯುವಅಧಿಕಾರಿದೇವರಾಜ್‍ಆರ್. ಎ.ಸಿ.ಹುದ್ದೆಗೆಆಯ್ಕೆಯಾಗಿದ್ದು, ಈ ಹಿನ್ನಲೆಯಲ್ಲಿಕಡಕೇರಿಯ ಶ್ರೀ ಈಶ್ವರ ಕಲಾ ಸಂಘದ ಸದಸ್ಯರುಅವರನ್ನುಅವರಕಛೇರಿಯಲ್ಲಿಸನ್ಮಾನಿಸಿ ಶುಭ ಹಾರೈಸಿದ್ದಾರೆ.
ಈ ಸಂದರ್ಭದಲ್ಲಿಶ್ರೀ ಈಶ್ವರ ಕಲಾ ಸಂಘದಅಧ್ಯಕ್ಷ ಸುರೇಶ ಮಡಿವಾಳ ದೇವರಾಜ್ ರ ಸಾಧನೆ ಇಂದಿನ ಯುವಕರಿಗೆ ಮಾದರಿಯಾಗಲಿ.ನಿರಂತರ ಪರಿಶ್ರಮ, ದೃಢ ನಿರ್ಧಾರ, ಏಕಾಗ್ರತೆ, ಜೊತೆಗೆ ಸವಾಲುಗಳನ್ನು ಸಮಾಧಾನದಿಂದ ಸ್ವೀಕರಿಸುವ ಮನೋಭಾವಯಾರಲ್ಲಿರುತ್ತದೆಯೋ ಅವರಿಗೆಯಶಸ್ಸುಕಟ್ಟಿಟ್ಟ ಬುತ್ತಿ..ಅದಕ್ಕೆದೇವರಾಜ್ ಸಾಕ್ಷಿಎಂದರು.
ಸದಸ್ಯರಾದಗಂಗಾಧರ ಮಡಿವಾಳ, ಎಚ್ ಟಿ ವಾಸು, ಸಂತೋಷ ನಾಯ್ಕ, ಶ್ರೀಕಾಂತ ನಾಯ್ಕ, ಮಾದೇವ ಮಡಿವಾಳ ಹಾಗೂ ಇಲಾಖೆಯ ಸಿಬ್ಬಂದಿಗಳು ಇದ್ದರು.
ಗೋಪಾಲ ಕಾನಳ್ಳಿ ಜಾನಪದ ರತ್ನ
ಸಿದ್ದಾಪುರ ತಾಲೂಕಿನ ಹೆಮ್ಮೆಯ ಉದಯೋನ್ಮುಖ ಕಲಾವಿದ, ಗಾಯಕ ಗೋಪಾಲ ಆರ್ ಕಾನಳ್ಳಿಯವರಿಗೆ “ಜಾನಪದ ರತ್ನ” ಪುರಸ್ಕಾರ ನೀಡಿ ಗೌರವಿಸಲಾಗಿದೆ.
ಕಲ್ಬುರ್ಗಿಯಲ್ಲಿ ಡಿಸೆಂಬರ್ 22 ರಂದು ನಡೆದ ಶಿಕ್ಷಣ ಜ್ಞಾನ ಮಾಸ ಪತ್ರಿಕೆಯ 17ನೇ ವಾರ್ಷಿಕೋತ್ಸವ ಮತ್ತು ರಾಜ್ಯ ಮಟ್ಟದ ಶೈಕ್ಷಣಿಕ ಸಮಾವೇಶ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಇತ್ತೀಚೆಗೆ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಸುರ್ವೆ ಕಲ್ಚರಲ್ ಅಕಾಡೆಮಿ(ರಿ), ಭಾರತರತ್ನ ಸರ್ ಎಂ ವಿಶ್ವೇಶ್ವರಯ್ಯ(ರಿ) ಡಿಸೆಂಬರ್ 12 ರಂದು ಆಯೋಜಿಸಿದ್ದ 64 ನೇ ಕನ್ನಡ ರಾಜ್ಯೋತ್ಸವ ಸಂಭ್ರಮದ ಸಾಂಸ್ಕøತಿಕ ಪ್ರತಿಭೋತ್ಸವ ಕಾರ್ಯಕ್ರಮದಲ್ಲಿ ಗೋಪಾಲ್ ರಿಗೆ”ಕರುನಾಡ ಕಣ್ಮಣಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ” ನೀಡಿ ಪುರಸ್ಕರಿಸಲಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

ಜ.10 ರಿಂದ 15 ರ ವರೆಗೆ ಸಿದ್ಧಾಪುರ ಐಯ್ಯಪ್ಪಸ್ವಾಮಿ ಜಾತ್ರೆ
ದೇವಸ್ಥಾನದಲ್ಲಿ ನೂತನವಾಗಿ ನಿರ್ಮಾಣವಾದ 18 ಮೆಟ್ಟಿಲುಗಳ ನಿರ್ಮಾಣಕ್ಕೆ ಸಾರ್ವಜನಿಕರಿಂದ 900 ಕಿಲೋ ಕಂಚು,ಹಿತ್ತಾಳೆ,ತಾಮ್ರ ಸಂಗ್ರಹವಾಗಿದೆ. 5 ಲಕ್ಷ ವೆಚ್ಚದ ಧ್ವಜಸ್ಥಂಬ,6.5 ಲಕ್ಷಗಳ 18 ಮೆಟ್ಟಿಲುಗಳು ಈ ಜಾತ್ರೆಯ ಕಾರ್ಯಕ್ರಮದಲ್ಲಿ ಉದ್ಘಾಟನೆಯಾಗಲಿವೆ.sಸಕಲ ತಯಾರಿಗಳು ನಡೆದಿದ್ದು ಸ್ಥಳಿಯರು,ಸ್ಥಳಿಯ ಪ.ಪಂ. ಆಡಳಿತದ ನೆರವಿನಿಂದ ಶಿಸ್ತು,ಸ್ವಚ್ಛತೆ,ಸಂಬ್ರಮವನ್ನು ಹೆಚ್ಚಿಸಲಾಗಿದೆ.
-ಕೆ.ಜಿ.ನಾಗರಾಜ,ಜಾತ್ರಾ ಸಮೀತಿ ಅಧ್ಯಕ್ಷರು

_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________

ಎಲ್ಲರಿಗೂ ಹೊಸ ವರ್ಷದ ಹಾರ್ಧಿಕ ಶುಭಾಶಯಗಳು. ರತ್ನಾಕರ ನರಮುಂಡಿಗೆ