

ಹೊಸಹೊಸ ತಂತ್ರಜ್ಞಾನ ಆವಿಶ್ಕಾರದಿಂದ ನಮ್ಮ ಸಂಸ್ಕøತಿ ನಶಿಸುತ್ತಿರುವ ಇಂದಿನ ದಿನಗಳಲ್ಲಿ ಕಣಹಬ್ಬದಂತಹ ಆಚರಣೆ ಮಾಡುತ್ತಿರುವುದು ಶ್ಲಾಘನೀಯ. ಕಣಹಬ್ಬದ ಆಚರಣೆಯಲ್ಲಿ ವಿಶೇಷತೆ ಅನ್ನುವುದಕ್ಕಿಂತಲೂ ಎಲೆಮರೆಯ ಕಾಯಿಯಂತಿದ್ದು ತಮಗರಿವಿಲ್ಲದಂತೆ ಪ್ರಾಮಾಣಿಕವಾಗಿ ಸಮಾಜಕ್ಕೆ ಸೇವೆ ಸಲ್ಲಿಸುತ್ತಿರುವ ವ್ಯಕ್ತಿಗಳನ್ನು ಇಂದು ಸನ್ಮಾನಿಸಿರುವುದರಿಂದ ಹಬ್ಬಕ್ಕೆ ವಿಶೇಷ ಅರ್ಥ ಬಂದಿದೆ ಎಂದು ಕೃಷಿ ಅಧಿಕಾರಿ ಪ್ರಶಾಂತ ಜಿ.ಎಸ್. ಹೇಳಿದರು.
ಅವರು ತಾಲೂಕಿನ ಕಾನಳ್ಳಿಮಠದ ಪರಮೇಶ್ವರಯ್ಯ ಕಾನಳ್ಳಿಮಠರ ಪರಿವಾರದವರು ಆಯೋಜಿಸಿದ್ದ ಕಣಹಬ್ಬ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಮ್ಮಲ್ಲಿ ಈಗ ಸಂಪ್ರದಾಯದಲ್ಲಿ ಆಸಕ್ತಿ ಕಡಿಮೆಯಾಗುತ್ತಿದೆ. ಸಂಘ ಸಂಸ್ಥೆಗಳು ಗುರುತಿಸಿ ಮಾಡಬೇಕಾದ ಕಾರ್ಯಗಳನ್ನು ಪರಮೇಶ್ವರರಯ್ಯ ವೈಯಕ್ತಿಕವಾಗಿ ಮಾಡುತ್ತಿದ್ದಾರೆ. ಗಿಡಮೂಲಿಕೆ ಔಷಧಿ ಕೊಡುತ್ತಿರುವವರ ಸಂಖ್ಯೆ ಕ್ಷೀಣಿಸುತ್ತಿದೆ. ಅವರು ಮುಂದಿನ ಜನಾಂಗಕ್ಕೆ ಗಿಡಮೂಲಿಕೆಯನ್ನು ಪರಿಚಯಿಸಬೇಕು. ಕೃಷಿ ಸಂಸ್ಕøತಿಯ ಅಂಗವಾಗಿ ಈ ಕಾರ್ಯ ವಿಶಿಷ್ಠ ಪೂರ್ಣವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ನಾಟಿ ವೈದ್ಯ ಅವರಗುಪ್ಪಾದ ಹಾಲಾ ಹಾಲಾ ನಾಯ್ಕ, ಸೂಲಗಿತ್ತಿಯಾಗಿ ಅನೇಕ ವರ್ಷ ಸೇವೆ ಸಲ್ಲಿಸಿದ ಕಾಳಮ್ಮ ಜಟ್ಯ ಮಡಿವಾಳ, (ಅವರ ಪರವಾಗಿ ಅವರ ಮಗ ಬಸವರಾಜ ಸನ್ಮಾನ ಸ್ವಿಕರಿಸಿದರು),
ಭತ್ತ ಸೆಳೆಯುವ ಕಾರ್ಯದಲ್ಲಿ ಅವಿರತ ಸೇವೆ ಸಲ್ಲಿಸಿದ ಹೊನ್ನಮ್ಮ ಲಕ್ಷ್ಮಣ ನಾಯಕ, ಪತ್ರಿಕಾ ವಿತರಕ ಸುರೇಶ ಗಣಪತಿ ಹೆಗಡೆ, ಪೋಸ್ಟ್‍ಮೆನ್ ವೀರಪ್ಪಯ್ಯ ಚನ್ನಬಸಪ್ಪ ಗೌಡ ರ ಪ್ರಾಮಾಣಿಕ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ತೋಟಗಾರಿಕಾ ಸಹಾಯಕ ನಿರ್ದೇಶಕ ಮಹಾಬಲೇಶ್ವರ ಹೆಗಡೆ, ರಾಜಶೇಖರ ತುದಿಕೊಪ್ಪ, ಲಿಂಗರಾಜ ಚಿತ್ರಟ್ಟೆಮಠ, ಪರಮೇಶ್ವರಯ್ಯ ಶಿಕಾರಿಪುರ, ಅನಂತ ಹೆಗಡೆ ಮಘೇಗಾರು ಉಪಸ್ಥಿತರಿದ್ದರು.
ಪರಮೇಶ್ವರಯ್ಯ ಕಾನಳ್ಳಿಮಠ ಪ್ರಾಸ್ತಾವಿಕವಾಗಿ ಕಣಹಬ್ಬದ ವಿಶೇಷತೆಯ ಕುರಿತು ಮಾತನಾಡಿ, ನಿರೂಪಿಸಿದರು. ಶ್ರೀಪಾದ ಹೆಗಡೆ ಸನ್ಮಾನ ಪತ್ರ ವಾಚಿಸಿದರು. ವಿನೋದಾ ಗೌಡರ್ ಪ್ರಾರ್ಥಿಸಿದರು. ಕಲ್ಯಾಣಿಪರಮೇಶ್ವರಯ್ಯ ಸ್ವಾಗತಿಸಿದರು. ಪ್ರೇಮಲತಾಪರಮೇಶ್ವರಯ್ಯ ವಂದಿಸಿದರು. ಕುಮಾರ ಸರ್ವೇಶಪರಮೇಶ್ವರಯ್ಯ ಸಹಕರಿಸಿದರು.

