

ಸಿದ್ಧಾಪುರ ನಗರದ ವಿನಾಯಕ ಸೌಹಾರ್ದ ಸಹಕಾರಿ ಇಲ್ಲಿಯ ಮುಗದೂರಿನ ಪ್ರಚಲಿತ ಆಶ್ರಮದಲ್ಲಿ ವಿಶಿಷ್ಟವಾಗಿ ವಾರ್ಷಿಕ ಸೌಹಾರ್ದ ಸಹಕಾರಿ ದಿನ ಆಚರಿಸಿತು.
ಪ್ರತಿವರ್ಷ ವಿಭಿನ್ನವಾಗಿ ಸೌಹಾರ್ದ ಸಹಕಾರಿ ದಿನ ಆಚರಿಸುವ ವಿನಾಯಕ ಸೌಹಾರ್ದ ಸಹಕಾರಿ ಪ್ರಚಲಿತ ಆಶ್ರಮದ ವೃದ್ಧರಿಗೆ ಬಟ್ಟೆ,ಹಣ್ಣು,ಪೇಸ್ಟು, ಪಲಾವುಗಳನ್ನು ನೀಡಿ ಅವರೊಂದಿಗೆ ಬೆರೆತು ವಾರ್ಷಿಕ ಸೌಹಾರ್ದ ದಿನ ಆಚರಿಸಿತು.
ಹಳೆಯ ವಿದ್ಯಾರ್ಥಿಗಳು,
ಗುರುಗಳ ಪುನರ್‍ಮಿಲನ
ಸಿದ್ಧಾಪುರ ತಾಲೂಕಿನ ಬೇಡ್ಕಣಿ ಜನತಾವಿದ್ಯಾಲಯದ 1973-74 ನೇ ಸಾಲಿನ ವಿದ್ಯಾರ್ಥಿಗಳು ಹಾಗೂ ಗುರುವೃಂದದ ಪುನರ್ ಮಿಲನ & ಗುರುನಮನ ಕಾರ್ಯಕ್ರಮ ಜ.4 ರ ಶನಿವಾರ ನಡೆಯಲಿದೆ. ಈ ವಿನೂತನ ಕಾರ್ಯಕ್ರಮವನ್ನು ನಿವೃತ್ತ ಪ್ರಾಂಶುಪಾಲ ಕೆ.ಎನ್. ಹೊಸ್ಮನಿ ಉದ್ಘಾಟಿಸಲಿದ್ದಾರೆ. ಜನತಾವಿದ್ಯಾಲಯದ ಸ್ಥಳಿಯ ಆಡಳಿತ ಸಮೀತಿ ಅಧ್ಯಕ್ಷ ವಿ.ಎನ್.ನಾಯ್ಕ ಅಧ್ಯಕ್ಷತೆ ವಹಿಸಲಿರುವ ಈ ಕಾರ್ಯಕ್ರಮದ ಅತಿಥಿಯಾಗಿ ಪ್ರತಿಮಾ ಎಚ್. ಪಾಲೇಕರ್ ಪಾಲ್ಗೊಳ್ಳಲಿದ್ದು ಅನೇಕರಿಗೆ ಸನ್ಮಾನಿಸಲಾಗುತ್ತಿದೆ. ಈ ಕಾರ್ಯಕ್ರಮಕ್ಕೆ ಆಸಕ್ತರನ್ನು ಸಂಘಟಕರು ಆಮಂತ್ರಿಸಿದ್ದಾರೆ.
ಶನಿವಾರ ಮಧ್ಯಾಹ್ನದ ವರೆಗೆ ವಿದ್ಯುತ್ ನಿಲುಗಡೆ
ಇಲ್ಲಿಯ ಹೆಸ್ಕಾಂ ಉಪವಿಭಾಗದ ತುರ್ತು ದುರಸ್ತಿ ನಿರ್ವಹಣೆ ಹಿನ್ನೆಲೆಯಲ್ಲಿ ಜ.4 ರ ಶನಿವಾರ ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ರ ವೆರೆಗೆ ತಾಲೂಕಿನಾದ್ಯಂತ ವಿದ್ಯುತ್ ನಿಲುಗಡೆ ಮಾಡುವುದಾಗಿ ಹೆಸ್ಕಾಂ ಕಛೇರಿಯ ಪ್ರಕಟಣೆ ತಿಳಿಸಿದೆ.
ಎಂ.ಜಿ.ಸಿ. ಪ.ಪೂ. ಕಾಲೇಜಿಗೆ 50
ಸಾಮಾಜಿಕ ನ್ಯಾಯ ಹಂಚಿದ ಹೆಗ್ಗಳಿಕೆ
ಸಿದ್ಧಾಪುರ ತಾಲೂಕಿನ ಮೊದಲ ಮತ್ತು ಏಕೈಕ ಪದವಿಪೂರ್ವ ಕಾಲೇಜು ಎಂ.ಜಿ.ಸಿ. ಪಿ.ಯು.ಕಾಲೇಜಿಗೆ 50 ವರ್ಷಗಳು ತುಂಬಿದ ಸಂಭ್ರಮ. 1969 ರಲ್ಲಿ ಗಣೇಶ್ ಹೆಗಡೆಯವರ ದೂರದರ್ಶಿತ್ವ, ಶಿಕ್ಷಣ ಪ್ರೀತಿಯ ಭಾಗವಾಗಿ ಪ್ರಾರಂಭವಾದ ಈ ಕಾಲೇಜಿಗೆ 50 ವರ್ಷ ತುಂಬಿರುವುದರಿಂದ ಈ ವರ್ಷ ಪೂರ್ತಿ ಸುವರ್ಣ ಮಹೋತ್ಸವದ ಅಂಗವಾಗಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.

