ಉತ್ತರ ಕನ್ನಡ ಜಿಲ್ಲೆ ಮತ್ತು ಸಿದ್ದಾಪುರ ತಾಲೂಕಿನಲ್ಲಿ ನೋಡಿಮುಗಿಸದ ಪ್ರವಾಸಿ ಆಕರ್ಷಣೆಗಳಿವೆ.
ಅಂಥ ಪ್ರವಾಸಿ ಆಕರ್ಷಣೆಯ ಪ್ರೇಕ್ಷಣೀಯ ಸ್ಥಳಗಳಲ್ಲಿ ಹೆಗ್ಗರಣೆ, ನಿಲ್ಕುಂದದ ನಡುವಿನ ಭೀಮನಗುಡ್ಡ ಒಂದು.
ಮಳೆಗಾಲದಲ್ಲಿ ಮಂಜುಹೊದ್ದು ಮಲಗುವ ಅಘನಾಶಿನಿಯ ತುತ್ತ ತುದಿಯ ಈ ಭೀಮನಗುಡ್ಡದ ಎತ್ತರ ಕರಾವಳಿಯಿಂದ ಬರೋಬ್ಬರಿ 636 ಮೀಟರ್! ಸಿದ್ಧಾಪುರ ತಾಲೂಕು ಕೇಂದ್ರದಿಂದ 40 ಕಿ.ಮೀ, ಶಿರಸಿಯಿಂದ 30 ಕಿ.ಮೀ ದೂರದ ಈ ಪ್ರದೇಶದ ಇನ್ನೊಂದು ಮಗ್ಗುಲಿಗೆ ವಿಶ್ವವಿಖ್ಯಾತ ಉಂಚಳ್ಳಿ ಜಲಪಾತ ಸೇರಿದಂತೆ 3-4 ಜಲಪಾತಗಳಿವೆ.
ಈ ಜಲಪಾತಗಳೆಲ್ಲಾ ಮಳೆಯಲ್ಲಿ ಉಕ್ಕಿ ಹರಿದು, ಬೇಸಿಗೆಯಲ್ಲಿ ಸೊರಗಿ ಕುಮಟಾದ ಸಮುದ್ರ ಸೇರುವ ಅಘನಾಶಿನಿ ಕಣಿವೆ ಪ್ರದೇಶ ಇದೆ ನೋಡಿ, ಆ ರುದ್ರರಮಣೀಯ ಕಣಿವೆಯ ಚಂದ ಕಾಣಬೇಕೆಂದರೆ ನೀವು ನಿಲ್ಕುಂದದಿಂದ 2 ಕಿ.ಮೀ ದೂರದ ಭೀಮಣಗುಡ್ಡ ಏರಬೇಕು. ಪರಿಸರ, ವನ್ಯಜೀವಿ ಸಂರಕ್ಷಿತ ಪ್ರದೇಶವಿರುವುದರಿಂದ ಮುಂಚಿತ ಪರವಾನಗಿ ಪಡೆದು ಹೋದರೆ ಉತ್ತಮ. ಅರಣ್ಯ ಇಲಾಖೆ, ಸ್ಥಳಿಯ ಆಡಳಿತಗಳ ಪರವಾನಗಿ ಇಲ್ಲದೆಯೂ ತೆರಳಬಹುದಾದ ಈ ಭೀಮನಗುಡ್ಡದ ತುತ್ತ ತುದಿ ತಲುಪಲು ಕನಿಷ್ಟ ಅರ್ಧ ಕೀ.ಮೀ. ಬೆಟ್ಟ ಹತ್ತಬೇಕು. ಬೆಟ್ಟದ ತುದಿಯಿಂದ ಬಹುದೂರ ಕಾಣುವ ಸೂರ್ಯಾಸ್ಥ ಇಲ್ಲಿಯ ವಿಶೇಷ. ಆದರೆ ದಿನವಿಡೀ ನಯನಾಜೂಕಿನಿಂದ ಬಳಕುತ್ತಾ ಸಾಗುವ ಅಘನಾಶಿನಿ ದಿನವಿಡೀ ಕಾಣುವ ಪ್ರಕೃತಿ. ಈ ಬೆಟ್ಟ ನೋಡಲು ಬರುವ ಪ್ರವಾಸಿಗರು ಮುಂಜಾನೆ, ಸಾಯಂಕಾಲದ ಸಮಯ ಇಲ್ಲಿ ಕಳೆಯಲು ಇಷ್ಟ ಪಡುತ್ತಾರೆ. ವಿಚಿತ್ರವೆಂದರೆ ದೇಶ, ವಿದೇಶ ಪರಊರುಗಳ ಜನರನ್ನು ಆಕರ್ಷಿಸುವ ಈ ಭೀಮನೆರೆ ಬೆಟ್ಟ ಸ್ಥಳಿಯರಿಗೆ ದೀಪದ ಬುಡದ ಕತ್ತಲೆ.
ಶಿರಸಿ, ಜಾನ್ಮನೆ ವಲಯದ ಸಿದ್ಧಾಪುರ ತಾಲೂಕಿನ ಈ ಭೀಮನಗುಡ್ಡ ಚಾರಣಿಗರು, ಪ್ರಕೃತಿಪ್ರೀಯರು,ಪ್ರವಾಸಿಗರಿಗೆ ಅಚ್ಚುಮೆಚ್ಚಿನ ತಾಣ. ಅನುಚಿತ ವರ್ತನೆ ಮಾಡುವ ಪ್ರವಾಸಿಗರನ್ನು ಹಿಡಿಯುವ ಅರಣ್ಯ ಇಲಾಖೆಯ ರಹಸ್ಯ ಕಾರ್ಯಚರಣೆ ಈ ಪ್ರೇಕ್ಷಣೀಯ ಸ್ಥಳದ ಸೌಂದರ್ಯ, ಶಾಂತಿ ಕಾಪಾಡಿದೆ. ಅತಿವಿರಳವಾಗಿ ಈ ಭಾಗದಲ್ಲಿ ಕಂಡು ಬರುವ ಚಿರತೆ, ಕಾಡೆಮ್ಮೆ, ಜಿಂಕೆಗಳೂ ಅವುಗಳಿಗೆ ತೊಂದರೆಯಾಗದಿದ್ದರೆ ನಿಮ್ಮನ್ನೇನೂ ಮಾಡಲಾರವು. ಕೊರೆಯುವ ಚಳಿಯಲ್ಲಿ ಮುಸ್ಸಂಜೆಯ ಸೂರ್ಯಾಸ್ಥ ತಪ್ಪಿಸಿಕೊಂಡರೆ ಅವರಿಗೇ ಹಾನಿ.
ಮನೆಮನೆಯಲ್ಲಿ ರವಿ ಚೆನ್ನಣ್ಣನವರ್ ಅಭಿಮಾನಿ ಬಳಗ ಪ್ರಾರಂಭಿಸಿ ಹೊಸವರ್ಷ ಸ್ವಾಗತಿಸಿದ ಯುವಕರು
ಸಿದ್ಧಾಪುರ,ತಾಲೂಕಿನ ಮನ್ಮನೆಯ ಯುವಕರು ಎಲ್ಲಾ ಯುವಕರು,ಯುವ ಸಂಘಟನೆಗಳಂತೆ ವರ್ಷದ ಕೊನೆಯ ದಿನ ಮೋಜು ಮಜಾ ಮಾಡುವ ಬದಲು ಶಿಸ್ತು, ಪ್ರಾಮಾಣಿಕತೆ, ಕ್ರೀಯಾಶೀಲತೆಗೆ ಹೆಸರಾದ ಪೊಲೀಸ್ ವರಿಷ್ಠ ರವಿ ಡಿ ಚೆನ್ನಣ್ಣನವರ್ ರ ಅಭಿಮಾನಿ ಬಳಗ ಸ್ಥಾಪಿಸುವ ಮೂಲಕ ಮಾದರಿ ಕೆಲಸದ ಮೂಲಕ 2020 ರ ಹೊಸವರ್ಷ ಪ್ರಾರಂಭಿಸಿದ್ದಾರೆ.