ಸಿದ್ಧಾಪುರ ತಾಲೂಕಿನ ಮೊದಲ ಮತ್ತು ಏಕೈಕ ಪದವಿಪೂರ್ವ ಕಾಲೇಜು ಎಂ.ಜಿ.ಸಿ. ಪಿ.ಯು.ಕಾಲೇಜಿಗೆ 50 ವರ್ಷಗಳು ತುಂಬಿದ ಸಂಭ್ರಮ. 1969 ರಲ್ಲಿ ಗಣೇಶ್ ಹೆಗಡೆಯವರ ದೂರದರ್ಶಿತ್ವ, ಶಿಕ್ಷಣ ಪ್ರೀತಿಯ ಭಾಗವಾಗಿ ಪ್ರಾರಂಭವಾದ ಈ ಕಾಲೇಜಿಗೆ 50 ವರ್ಷ ತುಂಬಿರುವುದರಿಂದ ಈ ವರ್ಷ ಪೂರ್ತಿ ಸುವರ್ಣ ಮಹೋತ್ಸವದ ಅಂಗವಾಗಿ ವಿವಿಧ ಕಾರ್ಯಕ್ರಮಗಳು ನಡೆಯಲಿವ
ಕಳೆದ ವರ್ಷ ಸುವರ್ಣ ಮಹೋತ್ಸವದ ಅಂಗವಾಗಿ ವಿದ್ಯಾರ್ಥಿಗಳಿಗೆ ನಾನಾ ಸ್ಫರ್ಧೆಗಳನ್ನು ಏರ್ಪಡಿಸಿದ್ದ ಎಂ.ಜಿ.ಸಿ. ಮಹಾವಿದ್ಯಾಲಯ ಜ.5 ರ ರವಿವಾರ ಮಹಾವಿದ್ಯಾಲಯದ ನವೀಕೃತ ಕಟ್ಟಡದ ಉದ್ಘಾಟನೆ ನೆರವೇರಿಸಲಿದೆ. ಈ ಬಗ್ಗೆ ಇಂದು ಕಾಲೇಜಿನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಿಕ್ಷಣ ಪ್ರಸಾರಕ ಸಮೀತಿಯ ಅಧ್ಯಕ್ಷ ವಿನಾಯಕ ರಾವ್ ಹೆಗಡೆ ಈ ಬಗ್ಗೆ ವಿವರಣೆ ನೀಡಿ ಜಿಲ್ಲೆಯ ಮೊದಲ ಪದವಿಧರ ನಮ್ಮ ಕುಟುಂಬದವರೇ ಆಗಿದ್ದರೂ ತಮಗೆ ವಿದ್ಯೆ ಕಲಿಯುವ ಅನುಕೂಲದಿಂದ ವಂಚಿತರಾಗಿದ್ದ ದೊಡ್ಮನೆ ಗಣೇಶ್ ಹೆಗಡೆಯವರು 1969 ರಲ್ಲಿ ಎಂ.ಜಿ.ಸಿ. ಪದವಿಪೂರ್ವ ಕಾಲೇಜು ಪ್ರಾರಂಭಿಸುವ ಮೂಲಕ ಸಾಮಾಜಿಕ ನ್ಯಾಯದ ಪರಿಕಲ್ಪನೆಗೆ ಜೀವಕೊಟ್ಟರು ಎಂದರು.
2001 ರಲ್ಲಿ ಪದವಿ ಕಾಲೇಜುಗಳಿಂದ ಬೇರ್ಪಟ್ಟ ಪದವಿಪೂರ್ವ ಕಾಲೇಜುಗಳು ಸಂಕಷ್ಟ ಎದುರಿಸತೊಡಗಿದವು.ಇಂಥ ಸಂಕಷ್ಟದಲ್ಲಿ ಈ ಕಾಲೇಜನ್ನೂ ಸೇವಾ ಮನೋಭಾವದಿಂದ ನಡೆಸುತ್ತಿರುವುದಾಗಿ ವಿವರಿಸಿದರು.
- ಕಡಿಮೆ ವೆಚ್ಚದಲ್ಲಿ ಉತ್ಕøಷ್ಟ ಶಿಕ್ಷಣ ನೀಡುವುದೇ ಈ ಕಾಲೇಜಿನ ವೈಶಿಷ್ಟ್ಯ
- ಡಾ.ಶಶಿಭೂಷಣ ಹೆಗಡೆ.
- ತಾಲೂಕಿನ ವಿದ್ಯಾರ್ಥಿಗಳು ಹೊರ ಜಿಲ್ಲೆಗಳಿಗೆ ಹೋಗಿ ಅಲ್ಲಿ ರ್ಯಾಂಕ್‍ಗಳಿಸಿ ಪರ ಜಿಲ್ಲೆಗೆ ಹೆಸರು ತರುತ್ತಾರೆ.ನಮ್ಮ ವಿದ್ಯಾರ್ಥಿಗಳು ಇಲ್ಲಿಯ ಅನುಕೂಲ, ಅವಕಾಶ ಪಡೆದು ತಾಲೂಕು, ಜಿಲ್ಲೆಗೆ ಹೆಸರು ತರುವ ಪ್ರಯತ್ನ ಮಾಡಬೇಕು
- ಸುರೇಶ್ ನೀರಲಗಿ ಪ್ರಾಚಾರ್ಯರು.
ನಿಲ್ಕುಂದದ ಭೀಮನಗುಡ್ಡ ಈಗ ನೋಡಬಹುದಾದಪ್ರೇಕ್ಷಣೀಯ ಸ್ಥಳ
ಉತ್ತರ ಕನ್ನಡ ಜಿಲ್ಲೆ ಮತ್ತು ಸಿದ್ದಾಪುರ ತಾಲೂಕಿನಲ್ಲಿ ನೋಡಿಮುಗಿಸದ ಪ್ರವಾಸಿ ಆಕರ್ಷಣೆಗಳಿವೆ.
ಅಂಥ ಪ್ರವಾಸಿ ಆಕರ್ಷಣೆಯ ಪ್ರೇಕ್ಷಣೀಯ ಸ್ಥಳಗಳಲ್ಲಿ ಹೆಗ್ಗರಣೆ, ನಿಲ್ಕುಂದದ ನಡುವಿನ ಭೀಮನಗುಡ್ಡ ಒಂದು.
ಮಳೆಗಾಲದಲ್ಲಿ ಮಂಜುಹೊದ್ದು ಮಲಗುವ ಅಘನಾಶಿನಿಯ ತುತ್ತ ತುದಿಯ ಈ ಭೀಮನಗುಡ್ಡದ ಎತ್ತರ ಕರಾವಳಿಯಿಂದ ಬರೋಬ್ಬರಿ 636 ಮೀಟರ್! ಸಿದ್ಧಾಪುರ ತಾಲೂಕು ಕೇಂದ್ರದಿಂದ 40 ಕಿ.ಮೀ, ಶಿರಸಿಯಿಂದ 30 ಕಿ.ಮೀ ದೂರದ ಈ ಪ್ರದೇಶದ ಇನ್ನೊಂದು ಮಗ್ಗುಲಿಗೆ ವಿಶ್ವವಿಖ್ಯಾತ ಉಂಚಳ್ಳಿ ಜಲಪಾತ ಸೇರಿದಂತೆ 3-4 ಜಲಪಾತಗಳಿವೆ.