
ಎರಡು ವಿಶೇಶ ಘಟನೆಗಳು ಇಂದು ಉತ್ತರ ಕನ್ನಡ ಜಿಲ್ಲೆಯಲ್ಲಿ ಸುದ್ದಿಯಾಗಿವೆ.
ಕುಮಟಾ ತಾಲೂಕಿನ ತಾರಮಕ್ಕಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಂತೆ ಶಾಲೆಗೆ ಬಂದಿದ್ದ ಹಸು ಒಂದನ್ನು ಕೂಡಿಹಾಕಿ ಒಂದು ದಿವಸದ ನಂತರ ಬಂಧಮುಕ್ತಗೊಳಿಸಿದ ಅಮಾನವೀಯ ಘಟನೆ ಒಂದಾದರೆ, ಮಂಗವೊಂದು ಇಂದು ಹಳಿಯಾಳ ಆಸ್ಫತ್ರೆಗೆ ಬಂದು ಅಲ್ಲಿ ದಾಖಲಾತಿ ಮಾಡುವವರು, ವೈದ್ಯರನ್ನು ಭೇಟಿಯಾಗುವವರಂತೆ ಅವರ ಜೊತೆ ನಿಂತು ಮನರಂಜನೆ ನೀಡಿದೆ.
ಕುಮಟಾ ತಾರಮಕ್ಕಿಯಲ್ಲಿ ಶನಿವಾರ ಶಾಲೆ ಪ್ರವೇಶಿಸಿದ್ದ ಆಕಳನ್ನು ಆ ಶಾಲೆಯ ಶಿಕ್ಷಕರು, ಅಡುಗೆ ಸಿಬ್ಬಂದಿ ಗಮನಿಸದೆ ಹೊರಗಿನಿಂದ ಕೀಲಿ ಹಾಕಿ ತೆರಳಿದ್ದಾರೆ. ನಂತರ ಒಂದು ದಿವಸದ ವರೆಗೆ ಹಗಲು ರಾತ್ರಿ ಎನ್ನದೆ ಕೂಗಿದ ಆಕಳ ಆಕ್ರಂದನ ಕೇಳಿ ಗ್ರಾಮಸ್ಥರು ಶಿಕ್ಷಕರನ್ನು ಕರೆಸಿ ಆಕಳನ್ನು ಬಂಧಮುಕ್ತಗೊಳಿಸಿದ್ದಾರೆ.
ಹಳಿಯಾಳದಲ್ಲಿ ರೋಗಿಗಳಂತೆ ಸರತಿ ಸಾಲಲ್ಲಿ ನಿಂತು, ನಂತರ
ವೈದ್ಯರ ಭೇಟಿಗೆ ಪ್ರಯತ್ನಿಸುವಂತೆ ವರ್ತಿಸಿ ನಂತರ ಅಲ್ಲಿಂದ ಕಾಲ್ಕಿತ್ತ ಮಂಗ ಆಸ್ಫತ್ರೆ ಸಿಬ್ಬಂದಿ ಮತ್ತು ರೋಗಿಗಳಿಗೆ ಉಚಿತ ಮನರಂಜನೆ ನೀಡಿದೆ. ಈ ಘಟನೆಗಳಲ್ಲಿ ಆಕಳನ್ನು ಮನುಷ್ಯರ ಆಸ್ಫತ್ರೆಗೆ ಮಂಗವನ್ನು ಜಾನುವಾರು ಆಸ್ಫತ್ರೆಗೆ ಸೂಕ್ತ ಚಿಕಿತ್ಸೆಗಾಗಿ ದಾಖಲಿಸಿರುವುದು ಖಚಿತವಾಗಿಲ್ಲ!
ಕೆ.ಡಿ.ಪಿ. ಸಭೆಯಲ್ಲಿ ಜನಪ್ರತಿನಿಧಿಗಳ ವಾಗ್ವಾದ
ಕೆಲವು ಇಲಾಖೆಗಳು ತಮ್ಮ ಕಾರ್ಯಕ್ರಮಗಳಿಗೆ ಚುನಾಯಿತ ಪ್ರತಿನಿಧಿಗಳನ್ನು ಆಹ್ವಾನಿಸದ ಪ್ರಮಾದದಿಂದಾಗಿ ಇದೇ ವಿಷಯ ಜನಪ್ರತಿನಿಧಿಗಳ ನಡುವಿನ ಚರ್ಚೆ,ವಾಗ್ವಾದಕ್ಕೆ ಕಾರಣವಾದ ಪ್ರಸಂಗಕ್ಕೆ ಇಂದಿನ ಮಾಸಿಕ ಕೆ.ಡಿ.ಪಿ. ಸಭೆ ಸಾಕ್ಷಿಯಾಯಿತು.
ತಾ.ಪಂ. ಸಭಾಭವನದಲ್ಲಿ ನಡೆದ ಮಾಸಿಕ ಕೆ.ಡಿ.ಪಿ.ಸಭೆಯಲ್ಲಿ ತೋಟಗಾರಿಕೆ, ಕೃಷಿ ಇಲಾಖೆಗಳು ಸೇರಿದಂತೆ ಕೆಲವು ಇಲಾಖೆಗಳು ಜನಪ್ರತಿನಿಧಿಗಳಿಗೆ ಆಹ್ವಾನಿಸುವುದಿಲ್ಲ ಎಂದು ತಾ.ಪಂ. ಸದಸ್ಯ ನಾಶಿರ್‍ಖಾನ್ ಆಕ್ಷೇಪ ಎತ್ತಿದರು.


