ಸರ್ಕಾರದ ಯಂತ್ರ ಸಮರ್ಪಕವಾಗಿ ನಡೆಯುತ್ತಿಲ್ಲ. ಮುಖ್ಯಮಂತ್ರಿ ಮಳೆ,ಪ್ರವಾಹ ಪರಿಹಾರಕ್ಕಾಗಿ ನಾಲ್ಕೈದು ಬಾರಿ ಮನವಿ ಮಾಡಿದ್ದೇನೆ ಎಂದು ಪ್ರಧಾನಮಂತ್ರಿಯ ಎದುರು ಹೇಳಿದರೆ ಪ್ರಧಾನಮಂತ್ರಿ ಮಾತನಾಡುವುದಿಲ್ಲ. ವಿಧವಾ ವೇತನ,ಸಂಧ್ಯಾಸುರಕ್ಷಾ,ಅಂಗವಿಕಲರ ವೇತನ ಕೂಡಾ ಸ್ಥಗಿತಗೊಂಡಿವೆ. ಇಂಥವರು ಗೂಂಡಾಗಿರಿ, ದಬ್ಬಾಳಿಕೆ ಮೂಲಕ ಆಡಳಿತ ನಡೆಸಿದರೆ ಜನತೆ ಸೂಕ್ತ ಉತ್ತರ ನೀಡುತ್ತಾ
-ನಿವೇದಿತ್ ಆಳ್ವ-ಕಾಂಗ್ರೆಸ್ ಮುಖಂಡ
ಸಿದ್ಧಾಪುರ ತಾಲೂಕಿನ ಹೆಮ್ಮನಬೈಲು,ಕಲ್ಯಾಣಪುರಗಳ ಮಳೆ,ಪ್ರವಾಹ ಸಂತೃಸ್ತರಿಗೆ ಸೂಕ್ತ ಪರಿಹಾರ ನೀಡಿ ಪುನರ್ವಸತಿ ಕಲ್ಪಿಸಲು ಕಾಂಗ್ರೆಸ್ ಆಗ್ರಹಿಸಿದೆ. ಇಂದು ಇಲ್ಲಿಯ ತಹಸಿಲ್ಧಾರರಿಗೆ ಈ ಬಗ್ಗೆ ಮನವಿ ನೀಡಿ ಆಗ್ರಹಿಸಿರುವ ನಿವೇದಿತ್ ಆಳ್ವ ನೇತೃತ್ವದ ಕಾಂಗ್ರೆಸ್ ತಂಡ ಕೆಲವರಿಗೆ ಒಂದು ಲಕ್ಷ, ಕೆಲವರಿಗೆ 50 ಸಾವಿರ ಅನೇಕರಿಗೆ ಬರೀ ಹತ್ತು ಸಾವಿರ ರೂಪಾಯಿಗಳ ಪರಿಹಾರ ನೀಡುವ ಮೂಲಕ ಸರ್ಕಾರ ಲೋಪಎಸಗಿದೆ. ಈಗ ಪುನರ್ ಸಮೀಕ್ಷೆ ಮಾಡಿ ಪರಿಹಾರ ನೀಡುವುದು ಮತ್ತು ಸೂಕ್ತ ಪುನರ್ವಸತಿ ಮಾಡಬೇಕಾಗಿದೆ ಎಂದು ಒತ್ತಾಯಿಸಿದೆ.
ಮನವಿ ನೀಡಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ನಿವೇದಿತ್ ಆಳ್ವ ಕಲ್ಯಾಣಪುರದಲ್ಲಿ ಭೂಕುಸಿತ ಆಗಿ ಮಕ್ಕಳು ಮಹಿಳೆಯರು ಜಾನಿವಾರುಗಳಿಗೆ ಹಾನಿಯಾದರೆ ಯಾರು ಜವಾಬ್ಧಾರಿ, ಹೆಮ್ಮನಬೈಲ್ ನಲ್ಲಿ ವಸತಿ ನಿವೇಶನ, ಮನೆ ನಿರ್ಮಾಣ ಮಾಡಿಕೊಳ್ಳಲು ಸಾಧ್ಯವಿಲ್ಲದಿದ್ದರೆ ಈಗಿರುವ ಶಾಲೆಯ ಕಟ್ಟಡವನ್ನೇ ಅವರಿಗೆ ಬರೆದು ಕೊಡಿ ಎಂದು ಆಗ್ರಹಿಸಿ, ರಾಜ್ಯ ವಿಧಾನಸಭಾ ಅಧ್ಯಕ್ಷರ ಕ್ಷೇತ್ರದ ಕತೆಯೇ ಹೀಗಾದರೆ ಉಳಿದ ಶಾಸಕರ ಕ್ಷೇತ್ರಗಳ ಪರಿಸ್ಥಿತಿ ಹೇಗೆ ಎಂದು ಪ್ರಶ್ನಿಸಿದರು.